For Quick Alerts
ALLOW NOTIFICATIONS  
For Daily Alerts

ಬೆಳಿಗ್ಗೆದ್ದ ಬಳಿಕ ನಿಮ್ಮ ದಿನನಿತ್ಯದ ದಿನಚರಿ ಹೀಗಿರಲಿ.....

ಹಿಂದಿನ ದಿನ ತಡರಾತ್ರಿ ಮನೆಸೇರಿ ತಡವಾಗಿ ಮಲಗುವುದು, ಮರುದಿನ ಅನಿವಾರ್ಯವಾಗಿ ಬಲುಬೇಗನೇ ಏಳುವುದು, ಇಡಿಯ ದಿನ ಮಾನಸಿಕವಾಗಿ ವ್ಯಸ್ತರಾಗಿರುವ ಕಾರಣ ಸ್ವಾಭಾವಿಕವಾಗಿಯೇ ಬೆಳಗ್ಗಿನ ಹೊತ್ತಿನಲ್ಲಿ ತಾಜಾತನವಿರುವುದಿಲ್ಲ.

By Arshad
|

ನಮ್ಮ ದಿನದ ಅತ್ಯಂತ ಸುಖಕರ ಕ್ಷಣಗಳೆಂದರೆ ಮುಂಜಾನೆಯ ಸವಿನಿದ್ದೆಯ ಕ್ಷಣಗಳು. ಬೆಳಿಗ್ಗೆದ್ದ ಬಳಿಕ ನಿತ್ಯದ ಕೆಲಸಗಳನ್ನು ಪ್ರಾರಂಭಿಸಿ ಇಡಿಯ ದಿನ ಚಟುವಟಿಕೆಯಿಂದಿರಲು ಒಂದು ಕಪ್ ಕಾಫಿ ಒದಗಿಸುವ ತಾಜಾತನಕ್ಕೆ ಸಾಟಿಯೇ ಇಲ್ಲ. ಅದರಲ್ಲೂ ದಿನದ ಪ್ರಾರಂಭವನ್ನು ದುಗುಡ ಮತ್ತು ಒತ್ತಡದಿಂದ ಸಮಯದ ಮಿತಿಯಲ್ಲಿ ನಿರ್ವಹಿಸಬೇಕಾದ ಗೃಣಿಯರು ಮತ್ತು ಉದ್ಯೋಗಸ್ಥರಿಗಂತೂ ಕಾಫಿ ಇಲ್ಲದೇ ಇದನ್ನು ಸಾಧಿಸಲು ಸಾಧ್ಯವೇ ಇಲ್ಲ. ಬೆಳಗಿನ ಸಮಯದಲ್ಲಿ ಅಪ್ಪಿತಪ್ಪಿಯೂ ಇಂತಹ ಕೆಲಸ ಮಾಡಬೇಡಿ!

ಆದರೆ ಕಾಫಿ ಕುಡಿಯದೇ ಈ ತಾಜಾತನವಿರಿಸಲು ಸಾಧ್ಯ. ಅಚ್ಚರಿಗೊಂಡಿರಾ! ಕಾಫಿ ಬದಲಿಗೆ ಟೀ ಕುಡಿದು ಸಹಾ ಅಲ್ಲ. ಇಂದಿನ ದಿನಗಳಲ್ಲಿ ದೈಹಿಕ ಶ್ರಮಕ್ಕಿಂತಲೂ ಮಾನಸಿಕವಾಗಿಯೇ ನಾವೆಲ್ಲರೂ ಹೆಚ್ಚು ಬಳಲುತ್ತೇವೆ. ಹಿಂದಿನ ದಿನ ತಡರಾತ್ರಿ ಮನೆಸೇರಿ ತಡವಾಗಿ ಮಲಗುವುದು, ಮರುದಿನ ಅನಿವಾರ್ಯವಾಗಿ ಬಲುಬೇಗನೇ ಏಳುವುದು, ಇಡಿಯ ದಿನ ಮಾನಸಿಕವಾಗಿ ವ್ಯಸ್ತರಾಗಿರುವ ಕಾರಣ ಸ್ವಾಭಾವಿಕವಾಗಿಯೇ ಬೆಳಗ್ಗಿನ ಹೊತ್ತಿನಲ್ಲಿ ತಾಜಾತನವಿರುವುದಿಲ್ಲ. ಬೆಳಗಿನ ಬ್ರೇಕ್​ಫಾಸ್ಟ್ ಅಪ್ಪಿತಪ್ಪಿಯೂ ಬ್ರೇಕ್ ಮಾಡಬೇಡಿ

ಇದರ ಕೊರತೆಯಿಂದ ದಿನದಲ್ಲಿ ಏಕಾಗ್ರತೆಯ ಕೊರತೆಯುಂಟಾಗುತ್ತದೆ. ಪರಿಣಾಮವಾಗಿ ಓದು, ಕೆಲಸಗಳೆಲ್ಲವೂ ಕಷ್ಟಕರವಾಗಿ ಪರಿಣಮಿಸುತ್ತವೆ. ಇದೇ ಕಾರಣಕ್ಕೆ ಬೆಳಗ್ಗಿನ ಒಂದು ಕಪ್ ಕಾಫಿ ಅಪ್ಯಾಯಮಾನವೆನಿಸುತ್ತದೆ. ಇದರಲ್ಲಿರುವ ಕೆಫೀನ್ ರಕ್ತಕ್ಕೆ ಸೇರಿದ ಬಳಿಕ ರಕ್ತಪರಿಚಲನೆಯನ್ನು ಚುರುಕುಗೊಳಿಸುವುದು ಇದಕ್ಕೆ ಕಾರಣ. ಆದರೆ ಕೆಫೀನ್ ನ ಸತತ ಸೇವನೆ ಆರೋಗ್ಯಕ್ಕೆ ಅಷ್ಟೊಂದು ಒಳ್ಳೆಯದಲ್ಲ.

ಆದರೆ ಕಾಫಿಯ ಬದಲಿಗೆ ಇತರ ಪೇಯಗಳನ್ನು ಕುಡಿಯುವ ಅಥವಾ ಇತರ ವಿಧಾನಗಳನ್ನು ಅನುಸರಿಸುವ ಮೂಲಕ ಕಾಫಿಗೆ ಗುಲಾಮರಾಗದೇ ತಾಜಾತನವನ್ನೂ ಉಳಿಸಿಕೊಳ್ಳಬಹುದು. ಬನ್ನಿ, ಈ ಪರ್ಯಾಯ ವಿಧಾನಗಳು ಯಾವುವು ಎಂಬುದನ್ನು ಮುಂದೆ ಓದಿ...

ತಣ್ಣನೆಯ ನೀರು

ತಣ್ಣನೆಯ ನೀರು

'ತಣ್ಣೀರಿನ ಸ್ನಾನ' ನಿಜಕ್ಕೂ ಇದು ಆರೋಗ್ಯಕ್ಕೆ ಸೋಪಾನ....

ಸೆಳೆತದ ವ್ಯಾಯಮಗಳು

ಸೆಳೆತದ ವ್ಯಾಯಮಗಳು

ಬೆಳಿಗ್ಗೆದ್ದು ತಣ್ಣೀರು ಕುಡಿದ ನಂತರ ಪ್ರಾತಃವಿಧಿಗಳನ್ನು ಮುಗಿಸಿ ಕೊಂಚ ಹೊತ್ತಿನವರೆಗೆ ಸುಲಭ ಸೆಳೆತದ ವ್ಯಾಯಾಮಗಳನ್ನು ಮಾಡುವ ಮೂಲಕ ರಕ್ತಪರಿಚಲನೆ ಚುರುಕುಗೊಳ್ಳುತ್ತದೆ. ವಿಶೇಷವಾಗಿ ಬಗ್ಗುವ ಮತ್ತು ಪಕ್ಕಕ್ಕೆ ವಾಲುವ ವ್ಯಾಯಾಮಗಳಿಂದ ಮೆದುಳಿಗೆ ಹೆಚ್ಚಿನ ರಕ್ತಪರಿಚಲನೆ ದೊರಕುತ್ತದೆ. ಇದು ಇಡಿಯ ದಿನ ತಾಜಾತನ ಉಳಿಸಿಕೊಳ್ಳಲು ನೆರವಾಗುತ್ತದೆ. ಮುಂಜಾನೆ ವ್ಯಾಯಾಮದ ಪ್ರಯೋಜನಗಳು

ಪ್ರೋಟೀನ್ ಯುಕ್ತ ಆಹಾರ ಸೇವಿಸಿ

ಪ್ರೋಟೀನ್ ಯುಕ್ತ ಆಹಾರ ಸೇವಿಸಿ

ನಿಮ್ಮ ದಿನದ ಪ್ರಥಮ ಆಹಾರದಲ್ಲಿ ಪ್ರೋಟೀನ್ ಯುಕ್ತ ಆಹಾರಗಳಿರಲಿ. ಆದರೆ ಹೆಚ್ಚಿನ ಪ್ರಮಾಣದಲ್ಲಲ್ಲ, ಸೂಕ್ತ ಪ್ರಮಾಣದಲ್ಲಿ ಮಾತ್ರ. ಮೊಟ್ಟೆ, ಹಾಲು, ಜೇನು, ನೆನೆಸಿಟ್ಟ ಕಾಳುಗಳು ಮೊದಲಾದವುಗಳನ್ನು ಉಪಾಹಾರದ ರೂಪದಲ್ಲಿ ಸೇವಿಸಿ ದಿನವನ್ನು ಪ್ರಾರಂಭಿಸಿ. ಇದರಿಂದ ಬೆಳಗ್ಗಿನ ಸುಸ್ತು ಇಲ್ಲವಾಗುತ್ತದೆ. ಲವಲವಿಕೆಯ ಜೀವನ ಶೈಲಿಗೆ ಪ್ರೋಟೀನ್‌ಯುಕ್ತ ಆಹಾರಗಳು...

ಕಾರ್ಬೋಹೈಡ್ರೇಟುಗಳೂ ಇರಲಿ

ಕಾರ್ಬೋಹೈಡ್ರೇಟುಗಳೂ ಇರಲಿ

ನಿಮ್ಮ ಬೆಳಗ್ಗಿನ ಉಪಾಹಾರದಲ್ಲಿ ಸಾಕಷ್ಟು ಕಾರ್ಬೋಹೈಡ್ರೇಟುಗಳೂ ಇರುವುದು ಅವಶ್ಯಕ. ಇದರೊಂದಿಗೆ ನಾರು ಸಹಾ ಇರಲಿ. ಇದರಿಂದ ಇಡಿನ ದಿನ ಈ ಅಹಾರ ನಿಧಾನವಾಗಿ ಜೀರ್ಣಗೊಳ್ಳುತ್ತಾ ಹೆಚ್ಚಿನ ಹೊತ್ತಿನವರೆಗೆ ದೇಹದಲ್ಲಿ ಶಕ್ತಿಯನ್ನು ಪೂರೈಸಲು ನೆರವಾಗುತ್ತದೆ.

ಬೆಳಗ್ಗಿನ ವ್ಯಾಯಾಮ

ಬೆಳಗ್ಗಿನ ವ್ಯಾಯಾಮ

ದಿನದ ಬೆಳಗ್ಗಿನ ಹೊತ್ತಿನಲ್ಲಿ ಕೊಂಚ ಹೊತ್ತಾದರೂ ನಿಯಮಿತವಾಗಿ ಕೆಲವು ವ್ಯಾಯಾಮಗಳನ್ನು ಮಾಡಬೇಕು. ಕೆಲವರು ವ್ಯಾಯಾಮವನ್ನು ಸಂಜೆ ಅಥವಾ ರಾತ್ರಿಯ ಹೊತ್ತು ನಿರ್ವಹಿಸುತ್ತಾರೆ. ಇದನ್ನು ಬದಲಿಸಿ ಬೆಳಗ್ಗಿನ ಹೊತ್ತಿಗೆ ಬದಲಿಸಲು ಮಾನಸಿಕರಾಗಿ ಸಿದ್ಧರಾಗಿ. ಅಂದರೆ ಪ್ರತಿದಿನ ರಾತ್ರಿ ಸಾಧ್ಯವಾದಷ್ಟು ಬೇಗನೇ ಮಲಗಿ ಮರುದಿನ ಬೆಳಿಗ್ಗೆ ನಿಮ್ಮ ನಿತ್ಯದ ವ್ಯಾಯಾಮಗಳನ್ನು ನಡೆಸಿ. ಇದರಿಂದ ದಿನವಿಡೀ ತಾಜಾತನ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ.

ತಣ್ಣೀರಿನ ಸ್ನಾನ

ತಣ್ಣೀರಿನ ಸ್ನಾನ

ಬೆಳಿಗ್ಗೆ ತಣ್ಣೀರಿನಿಂದ ಸ್ನಾನ ಮಾಡುವುದು ಎಂದರೆ ಹೆಚ್ಚಿನವರಿಗೆ ಇಷ್ಟವಾಗದ ಮಾತು. ಆದರೆ ಬೆಳಗ್ಗಿನ ಉಪಾಹಾರಕ್ಕೂ ಮುನ್ನ ತಣ್ಣೀರಿನ ಸ್ನಾನ ಮಾಡುವ ಮೂಲಕ ಮನಸ್ಸು ಪ್ರಫುಲ್ಲವಾಗುತ್ತದೆ ಹಾಗೂ ಇಡಿಯ ದಿನ ತಾಜಾತನ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ತಣ್ಣೀರಿನ ಸ್ನಾನದಲ್ಲಿಯೂ ಒಂದು ವಿಧಾನವಿದೆ. ಎಂದಿಗೂ ತಣ್ಣೀರನ್ನು ಮೊದಲಿಗೆ ತಲೆಗೆ ಹಾಕಬಾರದು. ಇದರಿಂದ ತಲೆ ಮೊದಲು ತಣ್ಣಗಾಗಿ ವಿಪರೀತ ರಕ್ತ ತಲೆಗೆ ನುಗ್ಗುತ್ತದೆ. ಇದರಿಂದ ಶೀತ ನೆಗಡಿ ತಲೆನೋವು ಮೊದಲಾದವು ಎದುರಾಗುತ್ತವೆ. ಆದ್ದರಿಂದ ಮೊದಲು ಭುಜಗಳಿಗೆ, ಬಳಿಕ ನಿಧಾನವಾಗಿ ದೇಹದ ಇತರ ಭಾಗಗಳನ್ನು ತಣ್ಣೀರಿನಿಂದ ತೋಯಿಸಿ ಚಳಿ ದೂರಾದ ಬಳಿಕವೇ ತಲೆಗೆ ತಣ್ಣೀರು ಹಾಕಬೇಕು.

ಹಸಿರು ಟೀ

ಹಸಿರು ಟೀ

ಕಡೆಯದಾಗಿ ಇವೆಲ್ಲಕ್ಕೂ ಸಮಯ ಆಥವಾ ವ್ಯವಧಾನವಿಲ್ಲವೆಂದಾದರೆ ಕಾಫಿಯ ಬದಲು ಹಸಿರು ಟೀ ಕುಡಿಯಿರಿ. ಇದರಿಂದಲೂ ಕಾಫಿಯಷ್ಟೇ ತಾಜಾತನ ಸಿಗುತ್ತದೆ ಹಾಗೂ ಹಸಿರು ಟೀ ಸೇವನೆಯ ಇತರ ಪ್ರಯೋಜನಗಳೂ ದೊರಕುತ್ತವೆ.

English summary

Simple Ways To Feel Active In The Morning, Without Coffee!

If you are not a morning person, then you would be well aware of the difficulties of staying active in the mornings, especially without coffee, right? Well, what if we told you there are simple ways that could help you stay active in the morning! Yes, that is right and that too, without your morning cuppa! Many of us find it extremely difficult to stay alert and active in the morning, especially if you are someone with a hectic job!
Story first published: Saturday, October 22, 2016, 10:35 [IST]
X
Desktop Bottom Promotion