ಈರುಳ್ಳಿ ಕತ್ತರಿಸುವಾಗ ಕಣ್ಣಿನಲ್ಲಿ ನೀರು ಬರುತ್ತಿದೆಯೇ? ಚಿಂತೆ ಬಿಡಿ!

ಈರುಳ್ಳಿಯನ್ನು ಹೆಚ್ಚುವಾಗ ಕಣ್ಣುಗಳಿ೦ದ ನೀರೂರುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕನ್ನಡಕಗಳನ್ನು ಧರಿಸಿಕೊಳ್ಳುವರಾದರೂ ಕೂಡಾ, ಈ ಉಪಾಯವು ಅಷ್ಟೇನೂ ಪರಿಣಾಮಕಾರಿಯಲ್ಲ... ಹಾಗಾದರೆ ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್.....

By: manu
Subscribe to Boldsky

ಕಣ್ಣೀರು ಬರಬೇಕಿದ್ದರೆ ತುಂಬಾ ಬೇಸರವಾಗಿಬೇಕೆಂದೇನಿಲ್ಲ. ಈರುಳ್ಳಿ ಕತ್ತರಿಸಿದರೂ ಕಣ್ಣೀರು ಬರುತ್ತದೆ. ಎಷ್ಟೇ ಕಠೋರ ವ್ಯಕ್ತಿಯಾಗಿದ್ದರೂ ಸಹಿತ ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬರಲೇಬೇಕು. ಆದರೆ ಕಣ್ಣೀರು ಬರದಂತೆ ಈರುಳ್ಳಿ ಕತ್ತರಿಸಲು ಏನು ಮಾಡಬಹುದು ಎಂದು ಹಲವಾರು ಸಲ ನೀವು ಪ್ರಯತ್ನ ಮಾಡಿರಬಹುದು.   ಕಣ್ಣಲ್ಲಿ ನೀರು ತರಿಸಿದರೂ ಆರೋಗ್ಯ ಕಾಪಾಡುವ ಈರುಳ್ಳಿ

ಆದರೆ ಇದರಿಂದ ಯಾವುದೇ ಪ್ರಯೋಜನವಾಗಿರಲಿಕ್ಕಿಲ್ಲ. ಕಣ್ಣೀರು ಬರದಂತೆ ಈರುಳ್ಳಿ ಕತ್ತರಿಸುವುದು ಹೇಗೆ ಎನ್ನುವ ಬಗ್ಗೆ ನಾವು ನಿಮಗೆ ಹೇಳಿಕೊಡಲಿದ್ದೇವೆ. ಅದು ಹೇಗೆಂದು ತಿಳಿದುಕೊಳ್ಳಿ.....  


ಈರುಳ್ಳಿಗಳನ್ನು ಹೆಚ್ಚುವಾಗ ಕಣ್ಣೀರು ಬರುವುದಾದರೂ ಏತಕ್ಕೆ?

ಈರುಳ್ಳಿಯನ್ನು ಕತ್ತರಿಸಿದಾಗ, ಅದರ ಜೀವಕೋಶಗಳ ಗೋಡೆಗಳು ಕತ್ತರಿಸಲ್ಪಟ್ಟು ಆ ಜೀವಕೋಶಗಳು ಒ೦ದು ಬಗೆಯ ಕಿಣ್ವಗಳನ್ನು ಬಿಡುಗಡೆಗೊಳಿಸುತ್ತವೆ. ಈ ಕಿಣ್ವಗಳು ಗ೦ಧಕಯುಕ್ತ ಅನಿಲವನ್ನು೦ಟು ಮಾಡುತ್ತವೆ. ಈ ಗ೦ಧಯುಕ್ತ ಅನಿಲವು ಕಣ್ಣುಗಳಿಗೆ ಉರಿಯನ್ನು೦ಟು ಮಾಡುತ್ತದೆ....

ಫ್ರಿಡ್ಜ್‌ನಲ್ಲಿಟ್ಟು ಬಳಿಕ ತೆಗೆದು ಕತ್ತರಿಸಿ....

ಈರುಳ್ಳಿಯನ್ನು ತಂಪಾಗಿಸಿದರೆ ಅದರಲ್ಲಿರುವ ಕಿಣ್ವಗಳು ದೂರವಾಗುತ್ತದೆ. ಸುಮಾರು 20 ನಿಮಿಷಗಳ ಕಾಲ ಈರುಳ್ಳಿಯನ್ನು ಫ್ರಿಡ್ಜ್ ನಲ್ಲಿಟ್ಟು ಬಳಿಕ ತೆಗೆದು ಕತ್ತರಿಸಿ.

ನೀರಿನಲ್ಲಿ ನೆನೆಸಿ

ಈ ವಿಧಾನವು ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ. ಈರುಳ್ಳಿಯ ಸಿಪ್ಪೆ ತೆಗೆಯಿರಿ ಮತ್ತು ಅದನ್ನು ಅರ್ಧ ಕತ್ತರಿಸಿ ನೀರಿನಲ್ಲಿ ಹಾಕಿಡಿ. ಅದರಲ್ಲಿರುವ ಗ್ಯಾಸ್ ನೀರಿನಲ್ಲಿ ಹೋಗಿಬಿಡುತ್ತದೆ. ಇದರಿಂದ ಈರುಳ್ಳಿ ಕತ್ತರಿಸುವಾಗ ನಿಮಗೆ ಕಣ್ಣೀರು ಬರುವುದಿಲ್ಲ. ನೀರಿನಲ್ಲಿ ನೆನೆಸಿದ ಈರುಳ್ಳಿಯು ತುಂಬಾ ಜಾರುವ ಕಾರಣದಿಂದ ಅದನ್ನು ಕತ್ತರಿಸುವಾಗ ಎಚ್ಚರಿಕೆ ವಹಿಸಿ.

ಫ್ಯಾನ್ ಬಳಸಿ

ಈರುಳ್ಳಿಯನ್ನು ಕತ್ತರಿಸುವಾಗ ಅದರ ಘಾಟು ನಿಮ್ಮ ವಿರುದ್ಧ ದಿಕ್ಕಿಗೆ ಹೋಗುವಂತೆ ಫ್ಯಾನ್ ನ ಗಾಳಿಯನ್ನು ಬಳಸಿ. ಇದರಿಂದ ಕಣ್ಣೀರು ಬರದಂತೆ ತಡೆಯಬಹುದು. ಫ್ಯಾನ್ ಗಾಳಿ ಗ್ಯಾಸ್ ನ್ನು ನಾಶಗೊಳಿಸಿ ಕಣ್ಣೀರು ಬರದಂತೆ ತಡೆಯುವುದು.

ನೀರಿರುವ ಬಟ್ಟಲೊ೦ದಕ್ಕೆ ಹಾಕಿ......

ಈರುಳ್ಳಿಗಳನ್ನು ನೀವು ಬಟ್ಟಲೊ೦ದರಲ್ಲಿ ತೆಗೆದುಕೊ೦ಡಿರುವ ನೀರಿನೊಳಗೆ ಕತ್ತರಿಸಬಹುದು. ಹೀಗೆ ಮಾಡಿದಲ್ಲಿ ಗ೦ಧಕಯುಕ್ತ ಅನಿಲವು ಗಾಳಿಯಲ್ಲಿ ಹರಡಿಕೊಳ್ಳಲು ಸಾಧ್ಯವಾಗುವುದಿಲ್ಲ.

ಈರುಳ್ಳಿಯ ತಳವನ್ನು ಕತ್ತರಿಸಿ

ಇದು ಎಲ್ಲಕ್ಕಿಂತ ತುಂಬಾ ಪರಿಣಾಮಕಾರಿ ವಿಧಾನವಾಗಿದೆ. ಮೊದಲು ಈರುಳ್ಳಿಯ ಸಿಪ್ಪೆ ತೆಗೆದುಕೊಳ್ಳಿ. ಅದನ್ನು ಎರಡು ತುಂಡು ಮಾಡಿಕೊಳ್ಳಿ. ಈರುಳ್ಳಿಯ ತಳ ಭಾಗದಲ್ಲಿ ಹೆಚ್ಚಿನ ಕಿಣ್ವಗಳು ಇರುತ್ತದೆ. ಈಗ ಈರುಳ್ಳಿಯನ್ನು ಉದ್ದಗೆ ಕತ್ತರಿಸಿಕೊಳ್ಳಿ. ಇನ್ನೊಂದು ಬದಿಯಲ್ಲಿ ಕೂಡ ಹೀಗೆ ಮಾಡಿ.

ಈರುಳ್ಳಿಯ ತಳವನ್ನು ಕತ್ತರಿಸಿ

ಇದರಿಂದ ತ್ರಿಕೋನ ಆಕೃತಿಯು ನಿಮಗೆ ಕಾಣಸಿಗುವುದು. ಈಗ ಈರುಳ್ಳಿಯ ಭಾಗವನ್ನು ತೆಗೆದುಕೊಂಡು ಕತ್ತರಿಸಿಕೊಳ್ಳಿ. ಹೀಗೆ ಮಾಡಿದರೆ ಕಣ್ಣೀರು ಬರುವುದಿಲ್ಲ.

ಹರಿತವಾದ ಚೂರಿಯನ್ನೇ ಬಳಸಿ

ಈರುಳ್ಳಿಗಳನ್ನು ಕತ್ತರಿಸುವಾಗ ಯಾವಾಗಲೂ ಹರಿತವಾದ ಚೂರಿಯನ್ನೇ ಬಳಸಿರಿ. ಹರಿತವಾದ ಚೂರಿಯು ಈರುಳ್ಳಿಯ ಜೀವಕೋಶಗಳನ್ನು ಕತ್ತರಿಸಲಾರವಾದ್ದರಿ೦ದ ಕಿಣ್ವಗಳ ಬಿಡುಗಡೆಯ ಪ್ರಮಾಣವು ತಗ್ಗುತ್ತದೆ.

ಹರಿತವಾದ ಚೂರಿಯನ್ನೇ ಬಳಸಿ

ಕ೦ಬನಿಗರೆಯದೇ ಈರುಳ್ಳಿಗಳನ್ನು ಕತ್ತರಿಸುವ೦ತಾಗಲು ಈ ಅಡುಗೆ ಸ೦ಬ೦ಧೀ ಸಲಹೆಗಳನ್ನು ಪಾಲಿಸಲು ಪ್ರಯತ್ನಿಸಿರಿ.

 

ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

Story first published: Saturday, December 10, 2016, 12:11 [IST]
English summary

Simple ways to cut onions without tears

If you love cooking and onions are your arch nemesis when it comes to chopping, then this article is exactly what you need. Here’s how you can stop tears from streaming down your face every time you cut an onion.
Please Wait while comments are loading...
Subscribe Newsletter