For Quick Alerts
ALLOW NOTIFICATIONS  
For Daily Alerts

ಸಡನ್ನಾಗಿ ಕಾಡುವ, ಆರೋಗ್ಯ ಸಮಸ್ಯೆಗೆ ಸಿಂಪಲ್ ಮನೆಮದ್ದು

By Jaya
|

ಋತುಮಾನದ ಬದಲಾವಣೆಯಾಗುತ್ತಿದ್ದಂತೆ ನಮ್ಮ ಜೀವನ ಶೈಲಿಯಲ್ಲೂ ಹಲವಾರು ಬದಲಾವಣೆಗಳು ಉಂಟಾಗಿ ಹಲವಾರು ಆರೋಗ್ಯ ಸಮಸ್ಯೆಗಳನ್ನು ನಾವು ಅನುಭವಿಸುವ ಸಾಧ್ಯತೆ ಇರುತ್ತದೆ. ಹೊಸ ಸ್ಥಳ, ಹೊಸ ಆಹಾರ, ನೀರು ಮತ್ತು ಗಾಳಿ ಕೂಡ ಆರಂಭದಲ್ಲಿ ನಿಮಗೆ ತೊಂದರೆಯನ್ನುಂಟು ಮಾಡುತ್ತದೆ.

ನಿದ್ದೆಯ ಕೊರತೆ, ನಿಮ್ಮ ರೋಗನಿರೋಧಕ ಶಕ್ತಿಯ ಕುಗ್ಗುವಿಕೆಯ ಸಂದರ್ಭದಲ್ಲಿ ನಿಮ್ಮನ್ನು ಹಲವಾರು ರೋಗಗಳು ಕಾಡುವ ಸಾಧ್ಯತೆ ಇರುತ್ತದೆ. ಜ್ವರ, ಶೀತ, ಕೆಮ್ಮು ಮೊದಲಾದ ಸಾಮಾನ್ಯ ರೋಗಗಳು ಕೂಡ ನಿಮ್ಮನ್ನು ಹಿಂಡಿ ಹಿಪ್ಪೆಗೊಳಿಸುತ್ತದೆ. ಆದರೆ ಈ ರೋಗಗಳಿಗೆ ಅಂಜಿಯೋ ಅಥವಾ ಬದಲಾದ ಜೀವನ ಶೈಲಿಯ ಬಗ್ಗೆ ಚಿಂತಿಸುತ್ತಾ ಕುಳಿತುಕೊಳ್ಳದೇ ಅದಕ್ಕೆಂದೇ ಇರುವ ನೈಸರ್ಗಿಕ ಪರಿಣಾಮಕಾರಿ ವಿಧಾನಗಳನ್ನು ನಿಮಗೆ ಅನುಸರಿಸಬಹುದು. ವೈದ್ಯಲೋಕಕ್ಕೇ ಸವಾಲೆಸೆಯುವ ಹಳ್ಳಿಗಾಡಿನ ಮನೆಮದ್ದು

ನಿಮ್ಮೆಲ್ಲಾ ಸಣ್ಣ ಸಣ್ಣ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವ ಶಕ್ತಿಯನ್ನು ಈ ಮನೆಮದ್ದುಗಳು ಹೊಂದಿದ್ದು ಅವುಗಳ ವಿಶೇಷತೆಯನ್ನು ಇಂದಿನ ಲೇಖನದಲ್ಲಿ ಅರಿತುಕೊಳ್ಳಬಹುದಾಗಿದೆ. ಹಾಗಿದ್ದರೆ ಆ ಸರಳ ಮನೆಮದ್ದುಗಳೇನು ಎಂಬುದನ್ನು ಇಂದಿನ ಲೇಖನದಲ್ಲಿ ಅರಿತುಕೊಳ್ಳೋಣ...

ಪರಿಹಾರ#1

ಪರಿಹಾರ#1

ಲವಾರು ಶತಮಾನಗಳಿಂದಲು ನಿದ್ರಾಹೀನತೆಗೆ ಇದೇ ಅತ್ಯುತ್ತಮ ಪರಿಹಾರವಾಗಿ ಕಾರ್ಯನಿರ್ವಹಿಸುತ್ತಿದೆ. ಹಾಲಿನಲ್ಲಿರುವ ಅಮೈನೊ ಆಮ್ಲವು ನಿದ್ದೆಯನ್ನು ಉದ್ದೀಪಿಸಿ, ಅದರ ಅಡ್ಡಪರಿಣಾಮಗಳನ್ನು ತಡೆಯುತ್ತದೆ. ದಿನ ಮಲಗುವ ಮುನ್ನ ಒಂದು ಲೋಟ ಬೆಚ್ಚಗಿನ ಹಾಲನ್ನು ಕುಡಿಯಿರಿ, ಇದರಿಂದಾಗಿ ಮುಂದೆ ನಿಮಗೆ ಬರಬಹುದಾದ ನಿದ್ರಾಹೀನತೆ ಸಮಸ್ಯೆ ದೂರವಾಗುತ್ತದೆ. ಸರಿಯಾಗಿ ನಿದ್ದೆ ಬರುತ್ತಿಲ್ಲವೇ? ಹಾಗಾದರೆ ಇನ್ನು ಚಿಂತೆ ಬಿಡಿ

ಪರಿಹಾರ #2

ಪರಿಹಾರ #2

ನಿಮ್ಮ ಚಯಾಪಚಯ ಕ್ರಿಯೆ ನಿಧಾನವಾಗಿದೆ ಎಂದಾದಲ್ಲಿ ಗ್ರೀನ್ ಟೀಯನ್ನು ನಿತ್ಯವೂ ಸೇವಿಸುವುದರಿಂದ ಚಯಾಪಚಯ ಕ್ರಿಯೆಯು 10% ಹೆಚ್ಚುತ್ತದೆ ಎಂಬುದಾಗಿ ವರದಿ ತಿಳಿಸಿದೆ. ಚಯಾಪಚಯ ಕ್ರಿಯೆ ಹೆಚ್ಚಿಸಲು ಪರಿಣಾಮಕಾರಿ ಸಲಹೆಗಳು

ಪರಿಹಾರ #3

ಪರಿಹಾರ #3

ಗಂಟಲು ನೋವಿನಿಂದ ನೀವು ಬಳಲುತ್ತಿದ್ದೀರಿ ಎಂದಾದಲ್ಲಿ, ಕಚ್ಛಾ ಬೆಳ್ಳುಳ್ಳಿಯನ್ನು ಪ್ರತಿದಿನ ಸೇವಿಸುವುದರಿಂದ ಅಲ್ಲಿಸಿನ್ ಎಂಬ ರಾಸಾಯನಿಕವು ಬಿಡುಗಡೆಯಾಗುತ್ತದೆ. ಇದು ಗಂಟಲಿನಲ್ಲಿ ಬೆಳೆಯುವ ಬ್ಯಾಕ್ಟೀರಿಯಾವನ್ನು ನಿವಾರಿಸಲು ಸಹಾಯ ಮಾಡಿ, ಗಂಟಲು ನೋವು ಬರದಂತೆ ತಡೆಯುತ್ತದೆ.ಬದಲಿಯಾಗಿ, ನೀವು ಬೆಳ್ಳುಳ್ಳಿ ಎಣ್ಣೆಯನ್ನು ಸಹ ಬಳಸಬಹುದು. ಒಂದು ಲೋಟ ನೀರಿಗೆ ನಾಲ್ಕನೇ ಒಂದು ಭಾಗ ಬೆಳ್ಳುಳ್ಳಿ ರಸವನ್ನು ಬೆರೆಸಿಕೊಳ್ಳಿ. ಇದನ್ನು ದಿನಕ್ಕೊಮ್ಮೆ ಬಾಯಿ ಮುಕ್ಕಳಿಸಲು ಬಳಸಿ. ಅಲ್ಲದೆ ಇದರ ಜೊತೆಗೆ ಆಹಾರದಲ್ಲಿ ದೊರೆಯುವ ಬೆಳ್ಳುಳ್ಳಿಯನ್ನು ಸಹ ಸೇವಿಸಿ. ಒಂದು ವೇಳೆ ನಿಮಗೆ ಇದರ ರುಚಿ ಹಿಡಿಸಲಿಲ್ಲವಾದಲ್ಲಿ, ಬೆಳ್ಳುಳ್ಳಿಯ ಮಾತ್ರೆಗಳನ್ನು ಸೇವಿಸಿ. ಇನ್ನು ಗಂಟಲು ನೋವಿಗೆ ವೈದ್ಯರ ಬಳಿ ಓಡಬೇಡಿ...!

ಪರಿಹಾರ #4

ಪರಿಹಾರ #4

ವಾಕರಿಕೆ ಮತ್ತು ಇತರ ಜೀರ್ಣಕ್ರಿಯೆ ಸಮಸ್ಯೆಗಳು ಎದುರಾಗಿದೆ ಎಂದಾದಲ್ಲಿ ಶುಂಠಿ ಚಹಾವನ್ನು ಸೇವಿಸಿ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ಶುಂಠಿ ಚಹಾ- ಸ್ವಾದದ ಜೊತೆಗೆ ಆರೋಗ್ಯದ ಭಾಗ್ಯ!

ಪರಿಹಾರ #5

ಪರಿಹಾರ #5

ಕೆಲಸದ ಒತ್ತಡ ನಿಮ್ಮ ಸಮಸ್ಯೆಯಾಗಿದೆ ಎಂದಾದಲ್ಲಿ, ಲಿಂಬೆ ಚಹಾವನ್ನು ಸೇವಿಸಿ. ಇದು ನಿಮಗೆ ತಾಜಾತನವನ್ನು ನೀಡುತ್ತದೆ.

ಪರಿಹಾರ #6

ಪರಿಹಾರ #6

ತಲೆನೋವು ನಿಮ್ಮನ್ನು ಕಾಡುತ್ತಿದೆ ಎಂದಾದಲ್ಲಿ ದಾಲ್ಚಿನ್ನಿ ಚಹಾ ಉತ್ತಮ ಪರಿಹಾರವನ್ನು ಒದಗಿಸುತ್ತದೆ. ಆಸ್ಪಿರಿನ್ ಸೇವಿಸದೆಯೇ ಈ ಚಹಾದಲ್ಲಿ ತಲೆನೋವಿಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ಕ್ಷಣಾರ್ಧದಲ್ಲಿ ತಲೆನೋವು ನಿವಾರಿಸುವ ಮನೆಮದ್ದುಗಳು

ಪರಿಹಾರ# 7

ಪರಿಹಾರ# 7

ಉಬ್ಬಿದ ಹೊಟ್ಟೆ ನಿಜಕ್ಕೂ ಅನಾನುಕೂಲತೆಯನ್ನು ಉಂಟುಮಾಡುತ್ತದೆ. ಇದಕ್ಕಾಗಿ ಕಾಳುಮೆಣಸು ಮತ್ತು ಪುದೀನಾ ಬೆರೆಸಿದ ಚಹಾವನ್ನು ಸೇವಿಸಿ. ಪುದೀನಾ ಸೊಪ್ಪಿನ ಚಹಾ: ಸ್ವಾದದ ಜೊತೆಗೆ ಆರೋಗ್ಯದ ಭಾಗ್ಯ!

English summary

Simple Remedies For 7 Health Problems

Generally, we tend to pop in a pill to get rid of such minor health issues. But a better way is to use simple home remedies. If you are thinking that home remedies take long and over-the-counter pills are instant solutions, then you are mistaken. Here are the simplest home remedies for minor health issues.
X
Desktop Bottom Promotion