ಬಾಳೆಹಣ್ಣಿನ ಸಿಪ್ಪೆಯ ಪವರ್‌ಗೆ 'ತಲೆನೋವು' ಮಂಗಮಾಯ!

ಪ್ರತೀ ಸಲ ತಲೆನೋವು ಕಾಣಿಸಿಕೊಂಡಾಗ ಮಾತ್ರೆ ತೆಗೆದುಕೊಳ್ಳುವುದು ದೇಹಕ್ಕೆ ಒಳ್ಳೆಯದಲ್ಲ. ತಲೆನೋವು ಬಂದಾಗ ಮನೆಮದ್ದನ್ನು ಬಳಸಿದರೆ ಯಾವುದೇ ಅಡ್ಡಪರಿಣಾಮಗಳಿಲ್ಲ. ತಲೆನೋವನ್ನು ನಿವಾರಣೆಗೆ ಬಾಳೆಹಣ್ಣಿನ ಸಿಪ್ಪೆಯ ಔಷಧಿಯನ್ನು ಬಳಸಬಹುದು.

By: manu
Subscribe to Boldsky

ದೈನಂದಿನ ಚಟುವಟಿಕೆಗಳು ಸರಾಗವಾಗಿ ಸಾಗಬೇಕಾದರೆ ದೇಹದ ಪ್ರತಿಯೊಂದು ಅಂಗಗಳು ಸರಿಯಾಗಿ ಕಾರ್ಯ ನಿರ್ವಹಿಸಬೇಕಾಗಿದೆ. ದೇಹದ ಯಾವುದೇ ಅಂಗದಲ್ಲಿ ನೋವು ಕಾಣಿಸಿಕೊಂಡರೆ ಕೆಲಸ ಮಾಡಲು ಆಸಕ್ತಿಯೇ ಇರುವುದಿಲ್ಲ. ಅದರಲ್ಲೂ ತಲೆನೋವು ಕಾಣಿಸಿಕೊಂಡರೆ ಊಟತಿಂಡಿ ಏನೂ ಬೇಡ ಎನ್ನುವಂತೆ ಆಗುತ್ತದೆ. ತಲೆನೋವು ಕಾಣಿಸಿಕೊಂಡಾಗ ತಕ್ಷಣಗೆ ಹೋಗಿ ಮೆಡಿಕಲ್ ನಿಂದ ಮಾತ್ರೆ ತಂದು ನುಂಗುತ್ತೇವೆ.  ಬಾಳೆಹಣ್ಣಿನ ಸಿಪ್ಪೆಯ ಚಮತ್ಕಾರಿಕ ಪ್ರಯೋಜನ ಅರಿಯಿರಿ!

ಆದರೆ ಪ್ರತೀ ಸಲ ತಲೆನೋವು ಕಾಣಿಸಿಕೊಂಡಾಗ ಮಾತ್ರೆ ತೆಗೆದುಕೊಳ್ಳುವುದು ದೇಹಕ್ಕೆ ಒಳ್ಳೆಯದಲ್ಲ. ಇದಕ್ಕಾಗಿ ತಲೆನೋವು ಬಂದಾಗ ಮನೆಮದ್ದನ್ನು ಬಳಸಿದರೆ ಅದರಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳು ಉಂಟಾಗಲ್ಲ. ತಲೆನೋವನ್ನು ನಿವಾರಣೆ ಮಾಡಬೇಕಾದರೆ ಬಾಳೆಹಣ್ಣಿನ ಸಿಪ್ಪೆಯ ಔಷಧಿಯನ್ನು ಬಳಸಬಹುದು. ಇದನ್ನು ಯಾವ ರೀತಿ ಬಳಸಿದರೆ ತಲೆನೋವು ನಿವಾರಣೆ ಆಗಬಹುದು ಎಂದು ಈ ಲೇಖನದ ಮೂಲಕ ತಿಳಿಯಿರಿ.    ತಲೆನೋವು ಓಡಿಸುವ ಮನೆ ಮದ್ದು: ಪ್ರಯತ್ನಿಸಿ ನೋಡಿ       

ಬೇಕಾಗುವ ಸಾಮಗ್ರಿಗಳು

*ಒಂದು ಬಾಳೆಹಣ್ಣಿನ ಸಿಪ್ಪೆ
*ನೀಲಗಿರಿ ಎಣ್ಣೆ- ಕೆಲವು ಹನಿ

ಬೇಕಾಗುವ ಸಾಮಗ್ರಿಗಳು

ತಲೆನೋವನ್ನು ನಿವಾರಣೆ ಮಾಡಲು ಈ ಮನೆಮದ್ದು ಹೇಳಿಮಾಡಿಸಿದಂತಿದೆ. ಒತ್ತಡ, ನಿಶ್ಯಕ್ತಿ ಮತ್ತು ಸೈನಸ್ ನಿಂದ ಬರುವಂತಹ ತಲೆನೋವಿಗೆ ಇದು ರಾಮಬಾಣ. ಈ ಮದ್ದಿನಿಂದ ತಲೆನೋವು ನಿವಾರಣೆ ಆಗದೆ ಇದ್ದಾಗ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯಿರಿ. ಯಾಕೆಂದರೆ ಇದು ಬೇರೆ ಯಾವುದೋ ಆರೋಗ್ಯ ಸಮಸ್ಯೆಯ ಲಕ್ಷಣವಾಗಿರಬಹುದು.

ಬಾಳೆಹಣ್ಣಿನ ಸಿಪ್ಪೆ

ಬಾಳೆಹಣ್ಣಿನ ಸಿಪ್ಪೆಯಲ್ಲಿ ನೈಸರ್ಗಿಕವಾಗಿ ತಂಪು ಪ್ರಭಾವ ಬೀರುವಂತಹ ಗುಣಗಳು ಇವೆ. ಇದರಲ್ಲಿ ಪೊಟಾಶಿಯಂ ಅಂಶವು ಅಡಗಿರುವುದರಿಂದ ತಲೆಯ ಭಾಗದಲ್ಲಿ ಉಂಟಾಗಿರುವಂತಹ ಉರಿಯೂತವನ್ನು ಶಮನ ಮಾಡುತ್ತದೆ. ಇದರಿಂದ ತಲೆನೋವು ಕಡಿಮೆಯಾಗುವುದು.

ನೀಲಗಿರಿ ಎಣ್ಣೆ

ನೀಲಗಿರಿ ಎಣ್ಣೆಯಲ್ಲಿ ಕೂಡ ಉರಿಯೂತ ಶಮನಕಾರಿ ಗುಣಗಳು ಇರುವುದರಿಂದ ಇದು ನೋವನ್ನು ನಿವಾರಿಸಿ ನರಗಳನ್ನು ಶಮನಗೊಳಿಸುತ್ತದೆ.

ಈ ಮನೆಮದ್ದನ್ನು ಬಳಸುವ ವಿಧಾನ

ಹಣೆಯ ಭಾಗಕ್ಕೆ ಕೆಲವು ಹನಿ ನೀಲಗಿರಿ ಎಣ್ಣೆಯನ್ನು ಹಚ್ಚಿಕೊಳ್ಳಿ. ಈ ಭಾಗಕ್ಕೆ ಬಾಳೆಹಣ್ಣಿನ ಸಿಪ್ಪೆಯನ್ನು ಇಡಿ.

ಈ ಮನೆಮದ್ದನ್ನು ಬಳಸುವ ವಿಧಾನ

ಬಾಳೆಹಣ್ಣಿನ ಸಿಪ್ಪೆಯ ಒಳಭಾಗವು ಹಣೆಗೆ ತಾಗುತ್ತಿರಬೇಕು. 20-30 ನಿಮಿಷ ಕಾಲ ಹಾಗೆ ಬಿಡಿ.

ಈ ಮನೆಮದ್ದನ್ನು ಬಳಸುವ ವಿಧಾನ

ಮಲಗಿಕೊಂಡು ನಿಧಾನವಾಗಿ 30 ನಿಮಿಷ ಕಾಲ ಉಸಿರಾಡಿ. ಈ ಮನೆಮದ್ದನ್ನು ಪ್ರಯತ್ನಿಸಿ ನೋಡಿ ಅದರ ಫಲಿತಾಂಶ ಹೇಗಿತ್ತು ಎಂದು ನಮಗೆ ತಿಳಿಸಿ.

 

ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

Story first published: Wednesday, November 16, 2016, 12:02 [IST]
English summary

simple banana peel trick to reduce headaches

Headaches can be one of the worst type of body aches and can make a person feel drained out instantly! In extreme cases, people experiencing a severe form of headache will not even be able to keep their eyes open and will not be able to function normally, thus hampering their daily activities. So, if you want to reduce headaches instantly, try this banana peel trick. Learn how to use it, here.
Please Wait while comments are loading...
Subscribe Newsletter