ಸದ್ದಿಲ್ಲದೆ ಸದ್ದು ಮಾಡುವ 'ನರವ್ಯವಸ್ಥೆ-ಸಮಸ್ಯೆ'! ಇರಲಿ ಎಚ್ಚರ....

ನರವ್ಯವಸ್ಥೆ ಕುಸಿಯುವ ಮೂಲಕ ಈ ಪ್ರವಹನವೂ ಕುಸಿಯುತ್ತದೆ. ಆದರೆ ಇದು ಥಟ್ಟನೇ ಒಮ್ಮೆಲೇ ಕುಸಿಯುವುದಿಲ್ಲ, ಕೆಲವಾರು ಕಾರಣಗಳಿಂದ ನಿಧಾನವಾಗಿ ಶಿಥಿಲವಾಗುತ್ತಾ ಬರುತ್ತದೆ.

By: manu
Subscribe to Boldsky

ಓರ್ವ ವ್ಯಕ್ತಿಯ ಬುದ್ಧಿಮತ್ತೆ, ಕ್ಷಮತೆ, ಅರ್ಹತೆಗಳೆಲ್ಲಾ ನೇರವಾಗಿ ನರವ್ಯವಸ್ಥೆಯನ್ನೇ ಅವಲಂಬಿಸಿದೆ. ನರವ್ಯವಸ್ಥೆ ಕುಸಿಯುವುದು ಎಂದರೆ ಹೆಚ್ಚೂಕಡಿಮೆ ಜೀವನವೇ ಕೊನೆಗೊಂಡಂತೆ. ನಮ್ಮ ಮೆದುಳಿನ ಜೀವಕೋಶಗಳು ವಿಶೇಷವಾಗಿವೆ. ನಮ್ಮ ಚರ್ಮ, ಮಾಂಸಖಂಡ, ರಕ್ತಗಳಂತೆ ಮೆದುಳಿನ ಜೀವಕೋಶಗಳು ಮತ್ತೆ ಮತ್ತೆ ಹುಟ್ಟುವುದಿಲ್ಲ. ಬದಲಿಗೆ ನಮ್ಮ ಜೀವಮಾನದಾದ್ಯಂತ ಮೆದುಳಿನ ಜೀವಕೋಶಗಳು ಸತತವಾಗಿ ಸತ್ತು ಕಡಿಮೆಯಾಗುತ್ತಾ ಇರುತ್ತವೆ.  ಆರೋಗ್ಯ ಟಿಪ್ಸ್: ನೆನಪಿನ ಶಕ್ತಿ ವೃದ್ಧಿಗೆ ಪವರ್ ಫುಲ್ ಜ್ಯೂಸ್

ಇದೇ ಕಾರಣಕ್ಕೆ ವೃದ್ಧಾಪ್ಯದಲ್ಲಿ ಸ್ಮರಣಶಕ್ತಿ ಉಡುಗುತ್ತಾ ಬರುತ್ತದೆ. ಅಂತೆಯೇ ನರವ್ಯವಸ್ಥೆಯೂ ಸಹಾ. ಮೆದುಳಿನ ಸೂಚನೆಗಳನ್ನು ದೇಹದ ಮೂಲೆಮೂಲೆಗಳಿಗೆ ತಲುಪಿಸುವುದು ಮತ್ತು ಅಲ್ಲಿನ ಸೂಚನೆಗಳನ್ನು ಮೆದುಳಿಗೆ ಕೊಂಡು ಬರುವುದು ಇದರ ಮುಖ್ಯ ಕಾರ್ಯ. ಈ ಸೂಚನೆಗಳು ಹೆಚ್ಚೂ ಕಡಿಮೆ ನಮ್ಮ ವಿದ್ಯುತ್ ಪ್ರವಹನದ ರೀತಿಯಲ್ಲಿಯೇ ಇರುತ್ತದೆ.  ಎಡೆಬಿಡದೆ ಕಾಡುವ ಇಂತಹ ನೋವನ್ನು ಮಾತ್ರ ನಿರ್ಲಕ್ಷಿಸಬೇಡಿ!

ನರವ್ಯವಸ್ಥೆ ಕುಸಿಯುವ ಮೂಲಕ ಈ ಪ್ರವಹನವೂ ಕುಸಿಯುತ್ತದೆ. ಆದರೆ ಇದು ಥಟ್ಟನೇ ಒಮ್ಮೆಲೇ ಕುಸಿಯುವುದಿಲ್ಲ, ಕೆಲವಾರು ಕಾರಣಗಳಿಂದ ನಿಧಾನವಾಗಿ ಶಿಥಿಲವಾಗುತ್ತಾ ಬರುತ್ತದೆ. ನಮ್ಮ ದೇಹ ಈ ಶಿಥಿಲಗೊಳ್ಳುವಿಕೆಯನ್ನು ಕೆಲವು ಸೂಚನೆಗಳ ಮೂಲಕ ನೀಡುತ್ತದೆ. ಬನ್ನಿ, ಈ ಸೂಚನೆಗಳು ಯಾವುವು ಎಂಬುದನ್ನು ನೋಡೋಣ...

ಜೋಮು ಹಿಡಿಯುವುದು

ನಮ್ಮ ದೇಹದ ಯಾವುದಾದರೊಂದು ಭಾಗ ಜೋಮುಗಟ್ಟಿದರೆ ಅಥವಾ ಸಂವೇದನೆಯನ್ನು ಕಳೆದುಕೊಂಡರೆ ಇದು ನರವ್ಯವಸ್ಥೆ ಕುಸಿಯುತ್ತಿರುವ ಸೂಚನೆಯಾಗಿದೆ. ವಿಶೇಷವಾಗಿ ದೇಹದ ತುದಿಭಾಗಗಳಾದ ಕೈಬೆರಳುಗಳು ಮತ್ತು ಕಾಲುಬೆರಳುಗಳು ಪ್ರಥಮವಾಗಿ ಜೋಮು ಹಿಡಿಯುತ್ತವೆ. ದೇಹದ ತುದಿಯವರೆಗೆ ರಕ್ತ ಸಾಗದೇ ಇರುವುದು ಇದಕ್ಕೆ ಕಾರಣ.

ಪೆಡಸಾಗುವುದು

ರಕ್ತ ಪರಿಚಲನೆ ಕಡಿಮೆಯಾದ ಬಳಿಕ ಕೆಲವು ಭಾಗಗಳು ಪೆಡಸಾಗತೊಡಗುತ್ತವೆ. ಇದೂ ಸಹಾ ನರವ್ಯವಸ್ಥೆ ಕುಸಿಯುತ್ತಿರುವ ಸೂಚನೆಯಾಗಿದೆ. ಪೆಡಸಾದ ಈ ಭಾಗಗಳನ್ನು ಚಲಿಸುವುದು ಕಷ್ಟಕರವಾಗುತ್ತದೆ.

ತೀಕ್ಷ್ಣವಾದ ನೋವು

ನರವ್ಯವಸ್ಥೆ ಕುಸಿಯಲು ಪ್ರಾರಂಭವಾದ ಬಳಿಕ ವಿಶೇಷವಾಗಿ ಪಾದಗಳಲ್ಲಿ ಮತ್ತು ಕೆಳಬೆನ್ನಿನಲ್ಲಿ ಸೂಜಿ ಚುಚ್ಚಿದಂತೆ ತೀಕ್ಷ್ಣವಾದ ನೋವು ಕಾಣಿಸಿಕೊಳ್ಳುತ್ತದೆ. ಇದು ನರಗಳ ತುದಿಗಳು ಅಥವಾ ನರಾಗ್ರಗಳು ಘಾಸಿಗೊಂಡಿರುವುದನ್ನು ಸೂಚಿಸುತ್ತವೆ. ನಡೆಯುವಾಗ ಅಥವಾ ಓಡುವಾಗ ಈ ನೋವು ಹೆಚ್ಚುತ್ತದೆ.

ಹಿಡಿತ ಕಡಿಮೆಯಾಗುವುದು

ಒಂದು ವೇಳೆ ನಿಮ್ಮ ಕೈಗಳಿಂದ ವಸ್ತುಗಳು ಹಿಡಿತ ಜಾರಿ ಬೀಳುವುದು ಅಥವಾ ಅಗತ್ಯಕ್ಕೆ ತಕ್ಕಷ್ಟು ಒತ್ತಡ ಹೇರಲು ಸಾಧ್ಯವಾಗದೇ ಇರುವುದು ಮೊದಲಾದವು ನರವ್ಯವಸ್ಥೆ ಕುಸಿಯುತ್ತಿರುವ ಸೂಚನೆಗಳಾಗಿವೆ.

ಮೂತ್ರ ಹಿಡಿದಿಟ್ಟುಕೊಳ್ಳಲು ಅಸಮರ್ಥರಾಗುವುದು

ಮೂತ್ರಕ್ಕೆ ಎಷ್ಟು ಅವಸರವಾದರೂ ಇದನ್ನು ಮೆದುಳಿನ ಆಜ್ಞೆಯಿಲ್ಲದೇ ವಿಸರ್ಜಿಸುವುದು ಸಾಧ್ಯವಿಲ್ಲ. ಆದರೆ ಒಂದು ವೇಳೆ ಅನೈಚ್ಛಿಕವಾಗಿ ಮೂತ್ರ ಹೊರಬರುವುದನ್ನು ತಡೆಯಲು ಅಸಮರ್ಥವಾದರೆ ಅಥವಾ ಹೆಚ್ಚು ಕಾಲ ತಡೆಹಿಡಿಯಲು ಅಸಮರ್ಥವಾಗಿ ಪದೇ ಪದೇ ಶೌಚಾಲಯಕ್ಕೆ ಹೋಗುವಂತಾದರೆ ಇದು ನರವ್ಯವಸ್ಥೆ ಕುಸಿಯುತ್ತಿರುವ ಸಂಕೇತವಾಗಿದೆ.

ತೀಕ್ಷ್ಣ ತಲೆನೋವು

ಒಂದು ವೇಳೆ ನಿಮಗೆ ತೀಕ್ಷ್ಣ ಮತ್ತು ಸೂಜಿ ಚುಚ್ಚುವಂತಹ ನೋವಿನ ಅನುಭವವಾಗುತ್ತಿದ್ದು ಪದೇ ಪದೇ ಪುನರಾವರ್ತನೆಯಾಗುತ್ತಿದ್ದರೆ ತಕ್ಷಣ ವೈದ್ಯರ ಬಳಿ ನರವ್ಯವಸ್ಥೆಯ ಬಗ್ಗೆ ತಪಾಸಣೆಗೆ ಒಳಗಾಗುವುದು ಉತ್ತಮ.  ನೈಸರ್ಗಿಕವಾದ 10 ನೋವು ನಿವಾರಕ ಔಷಧಿಗಳು

ಅತಿ ಹೆಚ್ಚಾಗಿ ಬೆವರುವುದು

ಒಂದು ವೇಳೆ ಅಕಾರಣವಾಗಿ ಅಗತ್ಯಕ್ಕೂ ಹೆಚ್ಚಾಗಿ ಬೆವರುತ್ತಿದ್ದರೆ ಹಾಗೂ ಚಳಿ ಅನ್ನಿಸುತ್ತಿದ್ದರೆ ಇದು ನರವ್ಯವಸ್ಥೆ ಕುಸಿಯುತ್ತಿರುವ ಕಾರಣವಾಗಿರಬಹುದು.  ಅತಿಯಾಗಿ ಬೆವರುವಿಕೆ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು!

 

ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

Story first published: Thursday, November 10, 2016, 14:49 [IST]
English summary

Silent Signs Of Nerve Damage You Must Not Ignore

The human nervous system can be described as a network of nerve cells and fibres that are responsible for transferring impulses from the brain to the rest of the body to enable different organs to perform their functions. So, here is a list of some of the silent symptoms of nerve damage you must not ignore, have a look.
Please Wait while comments are loading...
Subscribe Newsletter