ಇಂತಹ ಲಕ್ಷಣಗಳು ಕಂಡುಬಂದರೆ 'ಓದುವ ಕನ್ನಡಕ' ಅತ್ಯವಶ್ಯಕ...

By: manu
Subscribe to Boldsky

ಸಾಮಾನ್ಯವಾಗಿ ಮೂವತ್ತು ದಾಟಿದವರಿಗೆ ಆಗಾಗ ಕಣ್ಣುಗಳು ಭಾರವಾದಂತೆ ಮತ್ತು ತಲೆನೋವು ಆವರಿಸುತ್ತಾ ಇರುತ್ತದೆ. ಹೆಚ್ಚಿನವರು ಇದು ಕೆಲಸದ ಒತ್ತಡದ ಕಾರಣ ಎದುರಾದ ತೊಂದರೆ ಎಂದು ಅಲಕ್ಷಿಸಿಬಿಡುತ್ತಾರೆ. ಆದರೆ ಇದು ನಿಮ್ಮ ಕಣ್ಣುಗಳಿಗೆ ಈಗ ಓದುವ ಕನ್ನಡಕ ಬೇಕೆಂದು ಸೂಚಿಸುವ ಸಂಜ್ಞೆಯಾಗಿದೆ. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ತಿಳಿದುಕೊಳ್ಳೋಣ...

ಪದೇಪದೇ ಕಾಡುವ ತಲೆನೋವು

ಕಂಪ್ಯೂಟರ್ ಪರದೆಯ ಮುಂದೆ ಗಂಟೆಗಟ್ಟಲೇ ಕುಳಿತ ಬಳಿಕ ಕಣ್ಣುಗಳಿಗೆ ಬಳಲಿಕೆಯುಂಟಾಗುತ್ತದೆ. ಇದರಿಂದ ತಲೆನೋವು ಪ್ರಾರಂಭವಾಗುತ್ತದೆ. ಮೊದಲು ಹಲವಾರು ಘಂಟೆಗಳ ಬಳಿಕವೇ ಬರುತ್ತಿದ್ದುದು ಈಗ ಕೆಲವು ಗಂಟೆಗಳಲ್ಲಿಯೇ ಬರಲು ಪ್ರಾರಂಭವಾದರೆ ಇದು ಕಣ್ಣುಗಳಿಗೆ ಆಗುತ್ತಿರುವ ಪ್ರಯಾಸದ ಕಾರಣ ಎದುರಾಗುತ್ತಿರುವ ತಲೆನೋವು ಎಂಬ ಸ್ಪಷ್ಟ ಸೂಚನೆಯಾಗಿದೆ. ಇದಕ್ಕೆ astigmatism ಅಥವಾ hypermetropia ಎಂದು ಕರೆಯುತ್ತಾರೆ. ಈ ತೊಂದರೆಗೆ ಹತ್ತಿರ ಓದುವ ಕನ್ನಡಕ ಧರಿಸುವುದೇ ಸೂಕ್ತ ಪರಿಹಾರವಾಗಿದೆ.  ಕಣ್ಣಿನ ಆರೋಗ್ಯಕ್ಕೆ ಸ್ಪೆಷಲ್ ಆರೈಕೆ ಹೀಗಿರಲಿ

ಕಡಿಮೆ ಪ್ರಖರತೆಯಲ್ಲಿ ಓದಲು ಕಷ್ಟವಾಗುವುದು

ನಿಮ್ಮ ಅಕ್ಕಪಕ್ಕದವರು ಕಡಿಮೆ ಬೆಳಕಿನಲ್ಲಿ ಸುಲಭವಾಗಿ ಓದುವಂತಹದ್ದನ್ನು ನಿಮಗೆ ಓದಲು ಕೊಂಚ ಮಬ್ಬಾಗಿದ್ದು ಕಷ್ಟವಾಗುತ್ತಿದ್ದರೆ ನಿಮಗೆ ಹೆಚ್ಚುವರಿ ಬೆಳಕಿನ ಅವಶ್ಯಕತೆ ಇದೆ. ಇದಕ್ಕಾಗಿ ಟೇಬಲ್ ಲ್ಯಾಂಪ್ ಅಥವಾ ಇಂದಿನ ಆಧುನಿಕ ಕಂಪ್ಯೂಟರ್ ಯು.ಎಸ್.ಬಿ ಲ್ಯಾಂಪ್ ಬಳಸಬಹುದು. ಆದರೆ ಈ ದೀಪದ ಅವಶ್ಯಕತೆ ನಿಮ್ಮ ಕಣ್ಣುಗಳಿಗೆ ಕನ್ನಡಕ ಬೇಕು ಎಂಬುದನ್ನು ಸೂಚಿಸುತ್ತದೆ. ವಯಸ್ಸಾದಂತೆ ಹೆಚ್ಚು ಹೆಚ್ಚು ಬಳಸುವಂತಾಗುತ್ತದೆ.

ದೃಷ್ಟಿ ಮಂದವಾಗುವುದು

ಒಂದು ವೇಳೆ ಹತ್ತಿರದ ದೃಷ್ಟಿ ಮಂದವಾಗಿದ್ದರೆ ನಿಮಗೆ ತಕ್ಷಣ ಓದುವ ಕನ್ನಡಕ ಬೇಕೇ ಬೇಕು ಎಂಬುದನ್ನು ಈ ಸ್ಥಿತಿ ಸೂಚಿಸುತ್ತದೆ. ಆದರೆ ಕೆಲವೊಮ್ಮೆ ಈ ಸ್ಥಿತಿ ತಾತ್ಕಾಲಿಕವಾಗಿರಬಹುದು. ಇದಕ್ಕಾಗಿ ಒಂದು ಒತ್ತಡವಿಲ್ಲದ ಸಮಯದಲ್ಲಿ ಕೊಂಚದೂರದ ವಸ್ತುವನ್ನು ಮೊದಲು ಎರಡೂ ಕಣ್ಣುಗಳಿಂದ ಬಳಿಕ ಒಂದು ಕಣ್ಣು ಮುಚ್ಚಿ ಬಳಿಕ ಇನ್ನೊಂದು ಕಣ್ಣು ಮುಚ್ಚಿ ಪರೀಕ್ಷಿಸಿ. ಮೂರೂ ಸಂದರ್ಭಗಳಲ್ಲಿ ನೀವು ನೋಡಿದ ವಸ್ತು ಸಮನಾಗಿದ್ದರೆ ತೊಂದರೆ ಇಲ್ಲ. ಒಂದು ವೇಳೆ ಕೊಂಚವೂ ವ್ಯತ್ಯಾಸ ಕಂಡುಬಂದರೆ ನೇತ್ರವೈದ್ಯರ ಬಳಿ ಧಾವಿಸುವುದು ಅನಿವಾರ್ಯ.  ಕಣ್ಣಿಗೆ ಕನ್ನಡಕ ಒಳ್ಳೆಯದಾ? ಲೆನ್ಸ್ ಒಳ್ಳೆಯದಾ?

ಬಳಲಿದ ಕಣ್ಣುಗಳು

ಕೊಂಚ ಹೊತ್ತು ಸತತವಾಗಿ ಓದಿದರೆ ಅಥವಾ ದೂರದ ವಸ್ತುವನ್ನು ದೃಷ್ಟಿಸಿದರೆ ಕಣ್ಣುಗಳಿಗೆ ವಿಪರೀತ ದಣಿವಾಗುತ್ತಿದೆ ಎನ್ನಿಸಿದರೆ ಇದು ನಿಮಗೆ ಕನ್ನಡಕ ಬೇಕೆಂದು ಸೂಚಿಸುತ್ತಿದೆ. ಏಕೆಂದರೆ ನಿಮ್ಮ ಕಣ್ಣುಗಳು ದೃಶ್ಯವನ್ನು ಸಾಕಷ್ಟು ಸ್ಪಷ್ಟವಾಗಿಸಲು ಕಷ್ಟಪಡುತ್ತಿದ್ದು ಇದರ ಪರಿಣಾಮವಾಗಿ ಬಳಲುತ್ತವೆ. ತಕ್ಷಣವೇ ನೇತ್ರವೈದ್ಯರನ್ನು ಕಂಡು ತಪಾಸಣೆಗೊಳಪಡಿ. ಏಕೆಂದರೆ ಆರೋಗ್ಯವಂತ ಕಣ್ಣುಗಳು ದೇಹದ ಇತರ ಭಾಗಗಳಿಗಿಂತ ಬೇಗ ದಣಿಯುವುದಿಲ್ಲ.

ಪುಸ್ತಕ ಅತಿ ಹತ್ತಿರ ಅಥವಾ ಅತಿ ದೂರ ಹಿಡಿಯಬೇಕಾಗಿ ಬರುವುದು

ಕಣ್ಣುಗಳಿಂದ ಪುಸ್ತಕ ಅಥವಾ ಓದುವ ಪರಿಕರ ಎಷ್ಟು ದೂರ ಇರಬೇಕೆಂದರೆ ಸುಮಾರು ಮೂವತ್ತು ಸೆಂಟಿಮೀಟರ್ ಇರಬೇಕು ಎಂದು ತಜ್ಞರು ತಿಳಿಸುತ್ತಾರೆ. ಇವರ ಅನುಭವದ ಮಾತಿಗೆ ಎದುರಾಡದೇ ಸರಿಯಾಗಿ ಮೂವತ್ತು ಸೆ.ಮೀ ದೂರವಿಟ್ಟ ಪುಸ್ತಕವನ್ನು ಓದಲು ಪ್ರಯತ್ನಿಸಿ. ಒಂದು ವೇಳೆ ಈ ದೂರದಲ್ಲಿ ಓದಲು ಕಷ್ಟವಾಗುತ್ತಿದ್ದು ಅಕ್ಷರಗಳು ಸ್ಪಷ್ಟವಾಗಬೇಕಾದರೆ ಪುಸ್ತಕವನ್ನು ಹತ್ತಿರಕ್ಕೋ ಅಥವಾ ದೂರಕ್ಕೋ ಕೊಂಡೊಯ್ಯಬೇಕಾದರೆ ಇದು ನಿಮಗೆ ಕನ್ನಡಕದ ಅಗತ್ಯವಿದೆ ಎಂಬ ಸ್ಪಷ್ಟ ಸೂಚನೆಯಾಗಿದೆ.

ಬೆಳಕಿನ ವರ್ತುಲಗಳು ಕಾಣುವುದು

ಒಂದು ವೇಳೆ ನಮ್ಮ ಕಣ್ಣುಗಳು ಮುಂದಿನ ದೃಶ್ಯವನ್ನು ಸ್ಪಷ್ಟಪಡಿಸಿಕೊಳ್ಳಲು ಸೋತರೆ ಅಲ್ಲಿಂದ ಬೆಳಕು ಹರಡಿದಂತೆ ಕಾಣುತ್ತದೆ. ವಿಶೇಷವಾಗಿ ವಿದ್ಯುತ್ ದೀಪ, ಕಾರಿನ ಹೆಡ್ ಲೈಟ್ ಮೊದಲಾದವುಗಳ ಸುತ್ತ ಬೆಳಕಿನ ವರ್ತುಲವೊಂದು ಕಾಣಿಸಿಕೊಳ್ಳುತ್ತದೆ. ಈಗ ಕನ್ನಡಕ ಧರಿಸಲು ಪ್ರಾರಂಭಿಸುವುದೊಂದೇ ಇದಕ್ಕೆ ಉತ್ತರವಾಗಿದೆ.  ಕನ್ನಡಕ ಧರಿಸಿ ಆಕರ್ಷಕವಾಗಿ ಕಾಣಲು ಕೆಲ ಸಲಹೆಗಳು

 

ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

Story first published: Friday, September 30, 2016, 11:06 [IST]
English summary

signs you need reading glasses or spectacles

Most of us dismiss headaches and eye strain thinking that they are related to the everyday stress. However, these could be signs of an underlying eye condition that may require you to wear reading glasses to correct them. These signs that tell you that you need glasses.
Please Wait while comments are loading...
Subscribe Newsletter