ಶ್ವಾಸಕೋಶದ 8 ಲಕ್ಷಣಗಳು-ಯಾವುದಕ್ಕೂ ಎಚ್ಚರಿಕೆಯಿಂದಿರಿ!

ಶ್ವಾಸಕೋಶವು ಆರೋಗ್ಯವಾಗಿಲ್ಲವೆಂದಾದರೆ ಏನಾಗಬಹುದು ಮತ್ತು ಶ್ವಾಸಕೋಶವು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎನ್ನುವುದರ ಲಕ್ಷಣಗಳು ಏನೇನು ಎಂದು ಈ ಲೇಖನದಲ್ಲಿ ತಿಳಿದುಕೊಳ್ಳುವ ಮುಂದೆ ಓದಿ

By: Hemanth
Subscribe to Boldsky

ದೇಹದ ಪ್ರತಿಯೊಂದು ಭಾಗಗಳಿಗೂ ಅದರದ್ದೇ ಆದಂತಹ ಕಾರ್ಯಗಳಿವೆ. ಒಂದು ಅಂಗ ಸರಿಯಿಲ್ಲದೆ ಇದ್ದರೂ ಅದರಿಂದ ದೇಹದ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತದೆ. ಹೃದಯ, ಕಿಡ್ನಿಯಂತೆ ಶ್ವಾಸಕೋಶ ಕೂಡ ದೇಹವನ್ನು ಉಲ್ಲಾಸ ಹಾಗೂ ಆರೋಗ್ಯದಿಂದ ಇಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.  ಶ್ವಾಸಕೋಶದ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳು

ಶ್ವಾಸಕೋಶವು ರಕ್ತನಾಳಗಳಿಗೆ ಆಮ್ಲಜನಕವನ್ನು ಒದಗಿಸುತ್ತದೆ ಮತ್ತು ಉಸಿರಾಟಕ್ಕೂ ನೆರವಾಗುತ್ತದೆ. ಇದರಿಂದ ಶ್ವಾಸಕೋಶವು ಆರೋಗ್ಯವಾಗಿರುವುದು ತುಂಬಾ ಮುಖ್ಯ. ಶ್ವಾಸಕೋಶವು ಆರೋಗ್ಯವಾಗಿಲ್ಲವೆಂದಾದರೆ ಏನಾಗಬಹುದು ಮತ್ತು ಶ್ವಾಸಕೋಶವು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎನ್ನುವುದರ ಲಕ್ಷಣಗಳು ಏನೇನು ಎಂದು ಈ ಲೇಖನದಲ್ಲಿ ತಿಳಿದುಕೊಳ್ಳುವ. ಆರೋಗ್ಯಕರ ಶ್ವಾಸಕೋಶ ಕಾಪಾಡಿಕೊಳ್ಳಲು 9 ಸಲಹೆಗಳು

ಶ್ವಾಸಕೋಶವು ದುರ್ಬಲವಾಗುತ್ತಿದೆ ಎನ್ನುವುದಕ್ಕೆ ಇಲ್ಲಿ ಕೊಟ್ಟಿರುವ ಕೆಲವೊಂದು ಲಕ್ಷಣಗಳನ್ನು ತಿಳಿದುಕೊಂಡು ನಿಮ್ಮ ಶ್ವಾಸಕೋಶವು ಆರೋಗ್ಯವಾಗಿದೆಯಾ ಎಂದು ತಿಳಿಯಿರಿ...

ನಿಶ್ಯಕ್ತಿ

ದೈನಂದಿನ ಚಟುವಟಿಕೆಗಳನ್ನು ಮಾಡುವಾಗಲೂ ನಮಗೆ ಆಗಾಗ ತೀವ್ರ ಆಯಾಸವಾಗುವುದು ಮತ್ತು ನಿಶ್ಯಕ್ತಿ ಕಾಡುವುದು ಶ್ವಾಸಕೋಶವು ದುರ್ಬಲವಾಗುತ್ತಿದೆ ಎನ್ನುವುದರ ಪ್ರಮುಖ ಲಕ್ಷಣವಾಗಿದೆ.

ಉಸಿರಾಡಲು ಕಷ್ಟವಾಗುವುದು

ಸ್ವಲ್ಪ ನಡೆದಾಗ ಅಥವಾ ಕೆಲವೇ ಮೆಟ್ಟಿಲುಗಳನ್ನು ಹತ್ತಿದಾಗ ಉಸಿರಾಡಲು ಕಷ್ಟವಾಗುವುದು ಶ್ವಾಸಕೋಶದ ಮೇಲೆ ದುಷ್ಪರಿಣಾಮ ಬೀರಿದೆ ಎನ್ನುವುದರ ಕಾರಣವಾಗಿದೆ.

ಉಬ್ಬಸ

ಶ್ವಾಸಕೋಶದ ಮೇಲೆ ಪರಿಣಾಮ ಬೀರಿದಾಗ ಗಾಳಿ ಸಾಗುವ ನಾಳಗಳು ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಉಸಿರಾಡುವಾಗ ಶಬ್ದ ಬರುವುದು.

ತೂಕ ಕಳಕೊಳ್ಳುವುದು

ಯಾವುದೇ ಕಾರಣವಿಲ್ಲದೆ ದೇಹದ ತೂಕ ಕಡಿಮೆಯಾಗುತ್ತಾ ಇದ್ದರೆ ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳಿ. ಇದು ಶ್ವಾಸಕೋಶ ದುರ್ಬಲವಾಗುವ ಪ್ರಮುಖ ಲಕ್ಷಣವಾಗಿದೆ.

ಅತಿಯಾದ ಸಿಂಬಳ

ಸಾಮಾನ್ಯ ದಿನಗಳಿಗಿಂತ ಹೆಚ್ಚಾಗಿ ಸಿಂಬಳ ಬರುತ್ತಾ ಇದ್ದರೆ ಆಗ ನೀವು ಗಂಭೀರವಾಗಿ ಚಿಂತಿಸಬೇಕು. ಯಾಕೆಂದರೆ ಇದು ಶ್ವಾಸಕೋಶ ದುರ್ಬಲವಾಗಿರುವಂತಹ ಲಕ್ಷಣವಾಗಿರಬಹುದು.

ಎದೆನೋವು

ಶ್ವಾಸಕೋಶವು ಸರಿಯಾದ ರೀತಿಯಲ್ಲಿ ಕೆಲಸ ನಿರ್ವಹಿಸಲು ವಿಫಲವಾದಾಗ ಸಣ್ಣಮಟ್ಟದ ಕೆಮ್ಮಿನೊಂದಿಗೆ ಎದೆನೋವು ಕಾಣಿಸಿಕೊಳ್ಳಬಹುದು. ಇದನ್ನು ನಿರ್ಲಕ್ಷ್ಯ ಮಾಡಬೇಡಿ.

ಬಿಡದೆ ಬರುವ ಕೆಮ್ಮು

ಕೆಮ್ಮು ಬಿಡದೆ ಬರುತ್ತಾ ಇದ್ದರೆ ಆಗ ನಿಮ್ಮ ಶ್ವಾಸಕೋಶಕ್ಕೆ ಹಾನಿಯಾಗಿದೆ ಎಂದು ತಿಳಿದುಕೊಳ್ಳಬೇಕು. ಬಿಡದೆ ಕೆಮ್ಮು ಬರುತ್ತಾ ಇದ್ದರೆ ತಕ್ಷಣ ವೈದ್ಯರನ್ನು ಭೇಟಿಯಾಗಿ.

ಕಫದಲ್ಲಿ ರಕ್ತ ಬರುವುದು

ಕಫದಲ್ಲಿ ರಕ್ತ ಕಂಡುಬಂದರೆ ನೀವು ನಿರ್ಲಕ್ಷ್ಯ ಮಾಡದೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ. ಕಫದಲ್ಲಿ ರಕ್ತ ಕಂಡುಬರುವುದು ಶ್ವಾಸಕೋಶ ದುರ್ಬಲವಾಗುತ್ತಿರುವ ಪ್ರಮುಖ ಲಕ್ಷಣವಾಗಿದೆ.

 

ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

Story first published: Monday, November 21, 2016, 11:51 [IST]
English summary

Signs Which Show That Your Lungs Are Getting Weak

Beware! These Are The Signs Which Show That Your Lungs Are Getting Weak Like any other organ, having healthy lungs is very important. It is this organ which is responsible for supplying oxygen to the blood cells and it aids in breathing. Hence, one should ensure that the lungs are in good condition. Here is a list of a few signs that show that the lungs are getting weak. Take a look.
Please Wait while comments are loading...
Subscribe Newsletter