For Quick Alerts
ALLOW NOTIFICATIONS  
For Daily Alerts

ಎಚ್ಚರ: ನಿಮ್ಮ ಕಿಡ್ನಿ ಕೂಡ ಅಪಾಯದಲ್ಲಿ ಸಿಲುಕಿರಬಹುದು!

By Jaya Subramanya
|

ರೋಗವೆಂದಾಗ ನಮಗೆ ನೆನಪಾಗುವುದು ಶೀತ, ಜ್ವರ ನೆಗಡಿಯೊಂದಿಗೆ ಇನ್ನಷ್ಟು ಮೇಲ್ಮಟ್ಟದ್ದು ಎಂದೇ ಕರೆಯಿಸಿಕೊಳ್ಳುವ ಬಿಪಿ, ಸಕ್ಕರೆ ಕಾಯಿಲೆ, ಹೈಪರ್ ಟೆನ್ಶನ್ ಇತ್ಯಾದಿಗಳು. ಈ ಕಾಯಿಲೆಗಳು ದೇಹದ ಹೊರಭಾಗದಲ್ಲಿ ಮಾತ್ರವೇ ಕಾಣಿಸಿಕೊಳ್ಳುತ್ತವೆ ಆದರೆ ನಮ್ಮ ದೇಹದ ಒಳಭಾಗದಲ್ಲಿರುವ ಅಂಗಾಂಗಳೂ ಕೂಡ ಯಾವುದೇ ಕಾರ್ಯವನ್ನು ನಿರ್ವಹಿಸದೇ ತಟಸ್ಥಗೊಂಡರೆ ಅಲ್ಲೂ ಕಾಯಿಲೆಗಳು ಉಂಟಾಗುತ್ತವೆ ಎಂಬುದನ್ನು ನೀವು ಕಂಡುಕೊಂಡಿದ್ದೀರಾ?

ನಮ್ಮ ದೇಹವೆಂಬ ಯಂತ್ರದಲ್ಲಿ ಒಂದು ಭಾಗ ಕೂಡ ತನ್ನ ಕಾರ್ಯವನ್ನು ನಿಲ್ಲಿಸಿದಾಗ ನಾವು ಸಾಮರ್ಥ್ಯವನ್ನೇ ಕಳೆದುಕೊಳ್ಳುತ್ತೇವೆ. ದೇಹದ ಹೊರಭಾಗಕ್ಕೆ ಕಾಣುವ ಕಾಯಿಲೆಗಳನ್ನು ಗುಣಪಡಿಸಿಕೊಳ್ಳಬಹುದು ಅದಕ್ಕೆ ಔಷಧಗಳನ್ನು ತೆಗೆದುಕೊಳ್ಳಬಹುದು ಆದರೆ ದೇಹದ ಒಳಭಾಗದಲ್ಲಿ ಉಂಟಾಗುವ ಕಾಯಿಲೆಗಳು ಒಮ್ಮೊಮ್ಮೆ ನಮ್ಮ ಗಮನಕ್ಕೆ ಬರುವಾಗ ತೀರಾ ತಡವಾಗುವ ಸಾಧ್ಯತೆಯೇ ಹೆಚ್ಚು. ಅಂತಹ ನಿಧಾನಗತಿಯಲ್ಲಿ ತನ್ನ ಪರಿಣಾಮವನ್ನು ತೋರ್ಪಡಿಸಿಕೊಳ್ಳುವ ಕಾಯಿಲೆಯಾಗಿದೆ ಕಿಡ್ನಿ ವೈಫಲ್ಯ.

ಇದೊಂದು ಸ್ಲೋ ಪಾಯಿಸನ್‌ನಂತೆ ಕಾರ್ಯನಿರ್ವಹಿಸುತ್ತಾ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದೇ ಇರುವ ಮಟ್ಟವನ್ನು ತಲುಪಿ ನಮ್ಮ ಪ್ರಾಣಕ್ಕೆ ವಿಪತ್ತು ತರುತ್ತದೆ. ಇದರ ರೋಗ ಲಕ್ಷಣಗಳು ಆಗಾಗ್ಗೆ ಕಾಣಿಸಿಕೊಂಡು ತನ್ನ ಇರುವಿಕೆಯನ್ನು ನಿಮ್ಮ ಗಮನಕ್ಕೆ ತರುತ್ತಿದ್ದು ನೀವು ನಿರ್ಲಕ್ಷಿಸಿದಿರಿ ಎಂದಾದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿಯಂತೂ ನಿಜ. ಹಾಗಿದ್ದರೆ ಇಂದಿನ ಲೇಖನದಲ್ಲಿ ಕಿಡ್ನಿ ವೈಫಲ್ಯದ ರೋಗ ಲಕ್ಷಣಗಳೇನು ಎಂಬುದನ್ನು ನಾವು ತಿಳಿಸಿಕೊಡಲಿದ್ದೇವೆ. ಬನ್ನಿ ಹಾಗಿದ್ದರೆ ಆ ಲಕ್ಷಣಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ಅರಿಯೋಣ....

 ಮೂತ್ರದಲ್ಲಿ ವ್ಯತ್ಯಾಸ

ಮೂತ್ರದಲ್ಲಿ ವ್ಯತ್ಯಾಸ

ಕಿಡ್ನಿ ವೈಫಲ್ಯ ತನ್ನ ಪ್ರಭಾವ ಬೀರುವುದೇ ಮೊದಲಿಗೆ ಮೂತ್ರದಲ್ಲಿ ವ್ಯತ್ಯಾಸ ಉಂಟುಮಾಡುವ ರೀತಿಯಲ್ಲಾಗಿದೆ. ರಾತ್ರಿ ವೇಳೆಯಲ್ಲಿ ಅತಿಯಾದ ಮೂತ್ರಶಂಕೆ, ಮೂತ್ರಹೊರಹೋಗುವಿಕೆಯಲ್ಲಿ ಹೆಚ್ಚಳ ಮತ್ತು ಕಡಿಮೆಯಾಗುವಿಕೆ, ಮೂತ್ರಶಂಕೆ ಉಂಟಾಗುತ್ತಿದ್ದರೂ ವಿಸರ್ಜಿಸುವಲ್ಲಿ ಸಮಸ್ಯೆಯಾಗುವುದು, ಮೂತ್ರಶಂಕೆ ಮಾಡುವಾಗ ನೋಯುವುದು, ಮೂತ್ರದಲ್ಲಿ ಉಂಟಾಗುವ ಸೋಂಕು, ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವುದು. ಹೀಗೆ ಇಂತಹ ಲಕ್ಷಣಗಳು ನಿಮಗೆ ಕಂಡುಬಂದಲ್ಲಿ ನಿಮ್ಮ ಕಿಡ್ನಿಗೆ ಅಪಾಯವಿದೆ ಎಂಬುದನ್ನು ಕಂಡುಕೊಳ್ಳಿ.

ಬಾವು ಅಥವಾ ಊತ

ಬಾವು ಅಥವಾ ಊತ

ಕಿಡ್ನಿಯು ದೇಹದಲ್ಲಿರುವ ವಿಷಕಾರಿ ಅಂಶಗಳು ಮತ್ತು ಕಲ್ಮಶಗಳನ್ನು ಹೊರಹಾಕಿ ದೇಹ ವ್ಯವಸ್ಥೆಯನ್ನು ಸುಸ್ಥಿತಿಯಲ್ಲಿಡುತ್ತದೆ. ಅದಾಗ್ಯೂ ನಿಮ್ಮ ಕಿಡ್ನಿಗಳ ಅಪಧಮನಿಗಳು ಮತ್ತು ಲೋಮನಾಳಗಳಿಗೆ ಹಾನಿಯುಂಟಾದಾಗ ತ್ಯಾಜ್ಯಗಳ ವಿಸರ್ಜನಾ ಕ್ರಿಯೆಯಲ್ಲಿ ಅಡಚಣೆಯುಂಟಾಗುತ್ತದೆ. ಆಗ ಹೆಚ್ಚುವರಿ ನೀರು ಮತ್ತು ಉಪ್ಪಿನ ನಿರ್ಮಾಣ ದೇಹದಲ್ಲಿ ರಚನೆಯಾಗಿ ಇದು ವಿವಿಧ ಭಾಗಗಳಲ್ಲಿ ಸಂಗ್ರಹವಾಗುತ್ತದೆ. ಇದು ಕಾಲು, ಕೈಗಳು ಮತ್ತು ಕಣ್ಣಿನ ಅಡಿಯಲ್ಲಿ ಉಂಟಾಗುವ ಬಾವಿಗೆ ಕಾರಣವಾಗುತ್ತದೆ.

 ತುರಿಕೆ ಮತ್ತು ಒಣ ಚರ್ಮ

ತುರಿಕೆ ಮತ್ತು ಒಣ ಚರ್ಮ

ದೇಹದಲ್ಲಿ ವಿಷಕಾರಿ ಅಂಶಗಳನ್ನು ಹೊರಹಾಕುವಲ್ಲಿ ಕಿಡ್ನಿ ಸಹಾಯ ಮಾಡುತ್ತದೆ. ಕೆಂಪು ರಕ್ತ ಕಣಗಳನ್ನು ಆರೋಗ್ಯಕರವಾಗಿಸುವ ಕಿಡ್ನಿ ಸರಿಯಾದ ಪೋಷಕಾಂಶಗಳನ್ನು ದೇಹದಲ್ಲಿ ಕಾಪಾಡುತ್ತದೆ ಖನಿಜಗಳನ್ನು ಸಮತೋಲನ ಮಾಡುತ್ತದೆ. ಖನಿಜಗಳ, ಪೋಷಕಾಂಶಗಳ ಅಸಮತೋಲನ ಮತ್ತು ರಕ್ತದಲ್ಲಿ ಹೆಚ್ಚು ತ್ಯಾಜ್ಯ ಸಂಗ್ರಹವಾದಾಗ ಇದು ಒಣ ಮತ್ತು ತುರಿಕೆ ಇರುವ ತ್ವಚೆಗೆ ಕಾರಣವಾಗುತ್ತದೆ. ಇದು ತ್ವಚೆಯ ಸೋಂಕುಗಳು ಮತ್ತು ಅಲರ್ಜಿಗೆ ಕಾರಣವಾಗುತ್ತದೆ. ಅಂತೆಯೇ ಕಿಡ್ನಿ ವೈಫಲ್ಯದ ಇತರ ಲಕ್ಷಣಗಳಾದ ಆಗಾಗ್ಗೆ ಮೂತ್ರ ವಿಸರ್ಜನೆ, ಬಾವು ಇದರ ಜೊತೆಗೆ ಉಂಟಾಗುತ್ತಿದೆ ಎಂದಾದಲ್ಲಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ.

ಹಸಿವಿನ ಕೊರತೆ

ಹಸಿವಿನ ಕೊರತೆ

ಕಿಡ್ನಿ ವೈಫಲ್ಯಕ್ಕೆ ಯಾವುದೇ ಆರಂಭ ರೋಗಲಕ್ಷಣಗಳಿಲ್ಲ. ಕಿಡ್ನಿ ಕ್ಷೀಣಿಸಿದಾಗ ನಿಮ್ಮ ದೇಹದಲ್ಲಿ ಉಂಟಾಗುವ ಸಂಭವವೆಂದರೆ ವಿಷ ಮತ್ತು ತ್ಯಾಜ್ಯಗಳ ಜಮಾವಣೆಯಾಗಿದೆ.ಇದುವೇ ಹಲವಾರು ರೋಗಲಕ್ಷಣಗಳನ್ನು ದೇಹದಲ್ಲಿ ಉಂಟುಮಾಡುತ್ತವೆ. ಈ ಲಕ್ಷಣಗಳಲ್ಲಿ ಹಸಿವಿನ ಕೊರತೆ ಕೂಡ ಒಂದು. ಕಿಡ್ನಿ ವೈಫಲ್ಯಯುಂಟಾದಲ್ಲಿ ಉಂಟಾಗುವ ಪ್ರಮುಖ ರೋಗ ಲಕ್ಷಣವಾಗಿದೆ ಹಸಿವಿನ ಕೊರತೆ.

ವಿಪರೀತ ಆಯಾಸ

ವಿಪರೀತ ಆಯಾಸ

ಕಿಡ್ನಿಯು ತನ್ನ ಕೆಲಸವನ್ನು ನಿಲ್ಲಿಸಿದಾಗ, ಕೆಂಪು ರಕ್ತ ಕೋಶಗಳ ಉತ್ಪಾದನೆಯಲ್ಲಿ ಸಹಕಾರಿಯಾಗಿರುವ ಎರಿತ್ರೊಪೊಯಿಟಿನ್ ಹಾರ್ಮೋನಿನ ಸ್ರವಿಸುವಿಕೆಯನ್ನು ನಿಲ್ಲಿಸುತ್ತದೆ. ಶಕ್ತಿಯ ಮಟ್ಟಗಳನ್ನು ಉಳಿಸಿಕೊಳ್ಳಲು ಮತ್ತು ಪೋಷಣೆ ಒದಗಿಸಲು ಈ ಕೆಂಪು ರಕ್ತ ಕೋಶಗಳು ಅಮ್ಲಜನಕ ಮತ್ತು ಪೋಷಕಾಂಶಗಳನ್ನು ದೇಹದ ಪ್ರತಿಯೊಂದು ಭಾಗಕ್ಕೂ ಪೂರೈಸುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ವಿಪರೀತ ಆಯಾಸ

ವಿಪರೀತ ಆಯಾಸ

ಆದರೆ ಕಿಡ್ನಿ ವೈಫಲ್ಯದಿಂದಾಗಿ ಕೆಂಪು ರಕ್ತ ಕೋಶಗಳ ಉತ್ಪಾದನೆಯಲ್ಲಿ ಇಳಿಕೆ ಕಂಡುಬರುತ್ತದೆ ಇದು ಹಿಮೋಗ್ಲೋಬೀನ್ ಮಟ್ಟದಲ್ಲಿ ಕುಸಿತವನ್ನುಂಟು ಮಾಡಿ ರಕ್ತಹೀನತೆಗೆ ಕಾರಣವಾಗುತ್ತದೆ. ರಕ್ತಹೀನತೆಯಿಂದ ಉಂಟಾಗುವ ಇತರ ಸಮಸ್ಯೆಗಳಲ್ಲಿ ವಿಪರೀತ ಸುಸ್ತೂ ಕೂಡ ಒಂದು. ಆದರೆ ಅತಿಮುಖ್ಯ ರೋಗಲಕ್ಷಣವಾದ ಇದನ್ನು ಕಡೆಗಣಿಸಲಾಗುತ್ತದೆ ಮತ್ತು ಸಾಮಾನ್ಯ ಸುಸ್ತು ಎಂದು ಇದಕ್ಕೆ ನಾವು ವಿಶೇಷ ಕಾಳಜಿಯನ್ನು ನೀಡುವುದಿಲ್ಲ. ನಿಮ್ಮ ಕಿಡ್ನಿ ಕ್ಷಯಿಸಿದಾಗ ಸ್ನಾಯು ಸೆಳೆತ ಮತ್ತು ನೋವು ಕಾಣಿಸಿಕೊಳ್ಳುತ್ತದೆ.

English summary

Signs that your kidney is in danger

While we become more concerned about the most talked about lifestyle induced conditions like hypertension, blood pressure, diabetes, we often forget that our vital organs also need equal care and attention. Some of the signs of organ failure are so subtle that you never know you were suffering from something grave until you reach a point from where there is no turning back.
Story first published: Thursday, March 24, 2016, 20:02 [IST]
X
Desktop Bottom Promotion