For Quick Alerts
ALLOW NOTIFICATIONS  
For Daily Alerts

ಅಚ್ಚರಿ, ಕುತೂಹಲ ಕೆರಳಿಸುವ ಮುಟ್ಟಿನ ರಹಸ್ಯ!

By Arshad
|

ಮಹಿಳೆಯರ ಮಾಸಿಕ ದಿನಗಳ ಬಗ್ಗೆ ಸಾಮಾನ್ಯವಾಗಿ ಯಾರೂ ಚರ್ಚೆ ಮಾಡುವುದಿಲ್ಲ. ಅತ್ಯಂತ ಖಾಸಗಿಯಾದ ವಿಷಯವನ್ನು ಅತಿ ಆಪ್ತರ ಮತ್ತು ವೈದ್ಯರ ಬಳಿ ಮಾತ್ರ ಹೇಳಲು ಸಾಧ್ಯ. ಕೆಲವರಿಗೆ ಇದು ಸಂತಸದ ವಿಷಯವಾದರೂ ಹೆಚ್ಚಿನವರಿಗೆ ಇದು ನೋವಿನ ವಿಷಯವೇ ಸರಿ. ಪುರುಷರಿಗಂತೂ ಇದರ ಬಗ್ಗೆ ಮಾಹಿತಿ ಇದ್ದರೂ ಬೇರೇನಿದೆ? ಎಂಬ ಕುತೂಹಲ. ಪತ್ನಿಯನ್ನು ಪ್ರೀತಿಸುವವರು ಈ ದಿನಗಳಲ್ಲಿ ತಾವಾಗಿಯೇ ಅಂತರವನ್ನು ಕಾಯ್ದುಕೊಂಡು ಪ್ರೀತಿಯನ್ನು ಇನ್ನಷ್ಟು ಹೆಚ್ಚಿಸುತ್ತಾರೆ.

ವಾಸ್ತವವಾಗಿ ಈ ದಿನಗಳ ಮುನ್ನಾದಿನಗಳಲ್ಲಿ ಪಕ್ವವಾದ ಅಂಡಾಣು ಇನಿಯನ ಆಗಮನಕ್ಕೆ ಕಾದು ಸಮಯಕ್ಕೆ ಸರಿಯಾಗಿ ಬರದೇ ಇದ್ದರೆ ಮುಂದಿನ ಅಂಡಾಣುವಿಗೆ ದಾರಿ ಮಾಡಿ ಕೊಟ್ಟು ನಿರ್ಗಮಿಸುವ ದಿನಗಳೇ ಈ ದಿನಗಳು. ಈ ದಿನಗಳಲ್ಲಿ ಪ್ರಣಯದ ಇಚ್ಛೆ ಮಹಿಳೆಯರಲ್ಲಿ ಇಲ್ಲವಾಗುತ್ತದೆ, ಇಲ್ಲವಾಗಲೇಬೇಕು. ಏಕೆಂದರೆ ಈ ದಿನಗಳಲ್ಲಿ ಗರ್ಭಕೋಶ ಮತ್ತು ಇತರ ಸಂಬಂಧಿತ ಅಂಗಗಳು ಮುಂದಿನ ಅಂಡಾಣಿವಿಗಾಗಿ ಎಲ್ಲಾ ಸಿದ್ಧತೆಗಳನ್ನು ನಡೆಸಬೇಕು. ಅನಿಯಮಿತ ಮುಟ್ಟಿನ ಸಮಸ್ಯೆಗೆ ಪರಿಹಾರ ಇಲ್ಲಿದೆ

ಈ ದಿನಗಳಲ್ಲಿ ಮಹಿಳೆಯರ ಸ್ವಭಾವವನ್ನು ಕೊಂಚ ಗಮನಿಸಿದರೆ ಪುರುಷರಿಗೆ ಸೀಮಿತವಾದ ಕೆಲವು ಲಕ್ಷಣಗಳನ್ನು ಕಾಣಬಹುದು. ಏಕೆಂದರೆ ಪುರುಷರಿಗೆ ಮೀಸಲಾದ ಟೆಸ್ಟೋಸ್ಟೆರೋನ್ ರಸದೂತದದ ಪ್ರಭಾವ ಮಹಿಳೆಯರ ದೇಹದಲ್ಲಿ ಈ ದಿನಗಳಲ್ಲಿ ಹೆಚ್ಚಿರುತ್ತದೆ. ಇದರ ಅರ್ಥ ಈ ದಿನಗಳಲ್ಲಿ ಮಹಿಳೆಯರು ಪೂರ್ಣವಾಗಿ ಪುರುಷರಂತೆಯೇ ವರ್ತಿಸುತ್ತಾರೆ ಎಂದು ಅರ್ಥವಲ್ಲ. ಆದರೆ ಅವರ ವರ್ತನೆಯಲ್ಲಿ ಕೆಲವಾರು ಬದಲಾವಣೆಗಳನ್ನು ನೋಡಬಹುದು. ವಿಶೇಷವಾಗಿ ಮನೋಭಾವದಲ್ಲಿ ಆಗುವ ಬದಲಾವಣೆಗಳು.

ಕೆಲವೊಮ್ಮೆ ಶಾಂತವಾಗಿದ್ದರೆ ಕೆಲವೊಮ್ಮೆ ಚಡಪಡಿಸುವ, ಕೆಲವೊಮ್ಮೆ ಕಿರಿಕಿರಿ ಎನಿಸುವ ಸ್ವಭಾವ. ಇವೆಲ್ಲವೂ ಸ್ವಾಭಾವಿಕವಾಗಿದ್ದು ಆತಂಕ ಪಡಬೇಕಾದ ಅಗತ್ಯವಿಲ್ಲ. ಈ ಬಗ್ಗೆ ತಿಳಿದುಕೊಂಡಿರುವ ಮಹಿಳೆಯರು ಸಾಮಾನ್ಯವಾಗಿ ಶಾಂತರಾಗಿದ್ದರೆ ಅರಿವಿಲ್ಲದವರು ದುಗುಡ ಅನುಭವಿಸುತ್ತಾರೆ. ಈ ಬಗ್ಗೆ ಚರ್ಚೆ ನಡೆಯದ ಕಾರಣ ಇದೊಂದು ಗುಟ್ಟಿನ ಅಥವಾ ರಹಸ್ಯ ಕಾರ್ಯಾಚರಣೆಯಂತೆಯೇ ಕಂಡುಬರುತ್ತದೆ. ಆದರೆ ಈ ಬಗ್ಗೆ ಇನ್ನೂ ಹಲವಾರು ಕುತೂಹಲಕಾರಿ ಸಂಗತಿಗಳಿದ್ದು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿರುವ ಮಾಹಿತಿಗಳು ನಿಮ್ಮನ್ನು ಅಚ್ಚರಿಯ ಕೂಪಕ್ಕೆ ತಳ್ಳಲಿವೆ..

ರಕ್ತದ ಪ್ರಮಾಣ, ಅತಿ ಹೆಚ್ಚೂ ಇರಬಾರದು, ಕಡಿಮೆಯೂ ಇರಬಾರದು

ರಕ್ತದ ಪ್ರಮಾಣ, ಅತಿ ಹೆಚ್ಚೂ ಇರಬಾರದು, ಕಡಿಮೆಯೂ ಇರಬಾರದು

ಸಾಮಾನ್ಯವಾಗಿ ಈ ದಿನಗಳಲ್ಲಿ ಬಹಳಷ್ಟು ಪ್ರಮಾಣದ ರಕ್ತವನ್ನು ಕಳೆದುಕೊಳ್ಳುತ್ತೇವೆ ಎಂದು ಹೆಚ್ಚಿನವರು ಹೆದರುತ್ತಾರೆ. ವಾಸ್ತವವಾಗಿ ಇದು ಎರಡು ದೊಡ್ಡ ಚಮಚಕ್ಕಿಂತ ಹೆಚ್ಚೇನೂ ಇರುವುದಿಲ್ಲ. ರಕ್ತ ಹೊರಬರುವಾಗ ಹೆಪ್ಪುಗಟ್ಟುವ ಕಾರಣ ಹೆಚ್ಚಿನವರು ಹೆದರುತ್ತಾರೆ. ಇದು ಕೆಟ್ಟ ರಕ್ತ ಎಂಬ ಭಾವನೆಯೂ ಇರುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ರಕ್ತದ ಪ್ರಮಾಣ, ಅತಿ ಹೆಚ್ಚೂ ಇರಬಾರದು, ಕಡಿಮೆಯೂ ಇರಬಾರದು

ರಕ್ತದ ಪ್ರಮಾಣ, ಅತಿ ಹೆಚ್ಚೂ ಇರಬಾರದು, ಕಡಿಮೆಯೂ ಇರಬಾರದು

ಆದರೆ ಇದು ನೈಸರ್ಗಿಕವಾಗಿದ್ದು ಯಾವುದೇ ಆತಂಕಕ್ಕೆ ಕಾರಣವಿಲ್ಲ. ಆದರೆ ತುಂಬಾ ಕಡಿಮೆ ಇದ್ದರೆ ಮಾತ್ರ ಆತಂಕ ಪಡಲೇಬೇಕು.

 ಕನ್ಯೆಯಾಗಿಯೇ ಇರಲು ಟಾಂಪೋನ್ ಬಳಕೆ

ಕನ್ಯೆಯಾಗಿಯೇ ಇರಲು ಟಾಂಪೋನ್ ಬಳಕೆ

ವಿವಾಹದವರೆಗೂ ಕನ್ಯೆಯಾಗಿಯೇ ಇರಬಯಸುವ ಯುವತಿಯರಿಗೆ ಟಾಂಪೋನ್ ಗಳು ವರದಾನವಾಗಿವೆ. ಇವು ಮಾಸಿಕ ದಿನಗಳಲ್ಲಿ ಅತ್ಯಂತ ಹೆಚ್ಚಿನ ಸುರಕ್ಷತೆ, ನೈರ್ಮಲ್ಯ ಹಾಗೂ ಗೋಪ್ಯತೆಯನ್ನು ನೀಡುತ್ತವೆ. ಮಾಸಿಕ ದಿನಗಳ ಸ್ರಾವದ ಮೂಲಕ ಕನ್ಯತ್ವ ಕಳೆದುಕೊಳ್ಳುತ್ತೇವೆ ಎಂದು ಆತಂಕಪಡಬೇಕಾದ ಅಗತ್ಯವೇ ಇಲ್ಲ.. ಮುಂದಿನ ಸ್ಲೈಡ್ ಕ್ಕಿಕ್ ಮಾಡಿ

ಕನ್ಯೆಯಾಗಿಯೇ ಇರಲು ಟಾಂಪೋನ್ ಬಳಕೆ

ಕನ್ಯೆಯಾಗಿಯೇ ಇರಲು ಟಾಂಪೋನ್ ಬಳಕೆ

ಏಕೆಂದರೆ ಇದು ಕೇವಲ ಸಮಾಗಮದ ಮೂಲಕ ಮಾತ್ರವೇ ಅಥವಾ ಸೈಕಲ್ ಸವಾರಿ, ಭಾರ ಎತ್ತುವಿಕೆ ಮೊದಲಾದ ಕೆಲವೇ ಚಟುವಟಿಕೆಯಿಂದ ಮಾತ್ರ ಸಾಧ್ಯವಾಗುತ್ತದೆ.

ಹನ್ನೆರಡಕ್ಕೆಲ್ಲಾ ಋತುಮತಿ

ಹನ್ನೆರಡಕ್ಕೆಲ್ಲಾ ಋತುಮತಿ

ಹಿಂದೆಲ್ಲಾ ಹದಿಹರೆಯ ದಾಟುವವರೆಗೂ ಋತುಮತಿಯಾಗುತ್ತಿರಲಿಲ್ಲ. ಆದರೆ ಇಂದಿನ ದಿನಗಳಲ್ಲಿ ಹನ್ನೆರಡು ವರ್ಷಕ್ಕೇ ಯುವತಿಯರು ಋತುಮತಿಗಳಾಗುತ್ತಿದ್ದಾರೆ. ಆಹಾರ, ವಿವಿಧ ರಸದೂತಗಳ ಪ್ರಭಾವದಿಂದ ಇದು ಸಾಧ್ಯವಾಗುತ್ತಿದ್ದಿರಬಹುದು. ಆದರೆ ಸುಮಾರು ಐವತ್ತು ವರ್ಷದವರೆಗೂ ಈ ವಿಧಿ ಮುಂದುವರೆಯುತ್ತದೆ.

ಋತುಚಕ್ರ ಧ್ವನಿಯನ್ನು ಬದಲಿಸಬಲ್ಲುದು

ಋತುಚಕ್ರ ಧ್ವನಿಯನ್ನು ಬದಲಿಸಬಲ್ಲುದು

ಒಂದು ಸಂಶೋಧನೆಯ ಪ್ರಕಾರ ಪುರುಷರು ಮಹಿಳೆಯರ ಧ್ವನಿಯಲ್ಲಿ ಬದಲಾವಣೆಯನ್ನು ಈ ದಿನಗಳಲ್ಲಿ ಅರಿಯಬಲ್ಲರು. ಈ ಅವಧಿಯಲ್ಲಿ ಮಹಿಳೆಯರ ಧ್ವನಿ ಕೊಂಚ ಭಯಪಟ್ಟಂತಿರುತ್ತದೆ.

ಈ ದಿನಗಳಲ್ಲೂ ಗರ್ಭ ಧರಿಸುವ ಸಾಧ್ಯತೆ ಇದೆ

ಈ ದಿನಗಳಲ್ಲೂ ಗರ್ಭ ಧರಿಸುವ ಸಾಧ್ಯತೆ ಇದೆ

ಸಾಮಾನ್ಯವಾಗಿ ಈ ದಿನಗಳ ಅಕ್ಕಪಕ್ಕದ ದಿನಗಳನ್ನು ಸುರಕ್ಷಿತ ಎಂದು ತಿಳಿಸಲಾಗುತ್ತದೆ. ಆದರೆ ಇದು ಸಂಪೂರ್ಣವಾಗಿ ಸತ್ಯವಲ್ಲ.

ಈ ದಿನಗಳಲ್ಲೂ ಗರ್ಭ ಧರಿಸುವ ಸಾಧ್ಯತೆ ಇದೆ

ಈ ದಿನಗಳಲ್ಲೂ ಗರ್ಭ ಧರಿಸುವ ಸಾಧ್ಯತೆ ಇದೆ

ಏಕೆಂದರೆ ಈ ಅವಧಿಯಲ್ಲಾದ ಸಮಾಗಮದಿಂದ ಒಳಭಾಗದಲ್ಲಿ ಉಳಿದುಕೊಂಡಿದ್ದ ವೀರ್ಯಾಣುಗಳು ಸುಮಾರು ಒಂದು ವಾರದವರೆಗೆ ಜೀವಂತವಾಗಿದ್ದು ಮುಂದಿನ ದಿನಗಳಲ್ಲಿ ಆಗಮಿಸುವ ಅಂಡಾಣುವಿನೊಡನೆ ಸಮಾಗಮಗೊಳ್ಳಬಹುದು.

ಈ ಬಗ್ಗೆ ನಿಮ್ಮಲ್ಲಿ ಮಾಹಿತಿ ಇದೆಯೇ..?

ಈ ಬಗ್ಗೆ ನಿಮ್ಮಲ್ಲಿ ಮಾಹಿತಿ ಇದೆಯೇ..?

ಈ ಬಗ್ಗೆ ನಿಮ್ಮಲ್ಲಿ ಇನ್ನೂ ಉತ್ತಮ ಮಾಹಿತಿ ಇದ್ದರೆ ಖಂಡಿತಾ ನಮ್ಮೊಂದಿಗೆ ಹಂಚಿಕೊಳ್ಳಿ. ಇದಕ್ಕಾಗಿ ಕೆಳಗಿನ ಕಮೆಂಟ್ಸ್ ಭಾಗವನ್ನು ಬಳಸಿಕೊಳ್ಳಿ.

English summary

Shhh! Do You Know These Period Facts?

When you hear the word "period/menses", the first reaction would be quite not so pleasing one. For few of the ladies, it is a happy time but generally most of them crib and suffer a lot from it. Men tend to be curious to know about what happens during periods. At the same time, they maintain a safe distance from their lady.
X
Desktop Bottom Promotion