For Quick Alerts
ALLOW NOTIFICATIONS  
For Daily Alerts

ಸೈಲೆಂಟಾಗಿ ಕಾಡಲಿದೆ 'ಸೆಲ್ಫಿ ಎಲ್ಬೋ' ಸಮಸ್ಯೆ- ಎಚ್ಚರ!

By manu
|

ಕ್ರಿಕೆಟಿಗ ಸಚಿನ್ ತೆಂಡೂಲ್ಕರ್‌ಗೆ ಟೆನಿಸ್ ಎಲ್ಬೋ ಆಗಿದೆ. ಇನ್ನು ಕೆಲವು ಸಮಯ ಆಡಲು ಸಾಧ್ಯವಿಲ್ಲ ಎನ್ನುವಂತಹ ವರದಿಗಳನ್ನು ನಾವು ಸಚಿನ್ ಆಡುವ ಸಮಯದಲ್ಲಿ ಕೇಳಿದುಂಟು. ಏನಪ್ಪಾ ಈ ಟೆನಿಸ್ ಎಲ್ಬೋ ಎಂದು ನಮಗೆಲ್ಲರಿಗೂ ಅನಿಸಿದೆ. ಆದರೆ ಇದೊಂದು ಮೊಣಕೈ ನೋವಿನ ವೈದ್ಯಕೀಯ ಹೆಸರು. ಆದರೆ ವೈದ್ಯಕೀಯ ಲೋಕವು ಈಗ ಸೆಲ್ಫಿ ಎಲ್ಬೋ ಎಂದು ಮೊಣಕೈ ನೋವಿಗೆ ಹೆಸರಿಟ್ಟಿದೆ. ಇದನ್ನು ಹೇಳಿ ನಮಗೆ ಅಚ್ಚರಿಯಾಗಬಹುದು.

'Selfie Elbow' condition waiting to afflict Indians: Experts

ಆದರೆ ಸೆಲ್ಫಿ ಹುಚ್ಚಿಗೆ ಬಿದ್ದಿರುವ ಭಾರತೀಯರಲ್ಲೂ ಇದು ವ್ಯಾಪಕವಾಗಿ ಕಾಣಿಸಿಕೊಳ್ಳಲು ಆರಂಭಿಸಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಭಾರತದಲ್ಲಿ ಸೆಲ್ಫಿ ಎಲ್ಬೋದ ರೋಗಿಗಳು ಇದುವರೆಗೆ ಪತ್ತೆಯಾಗಿಲ್ಲ. ಆದರೆ ಸೆಲ್ಫಿಯನ್ನು ಅತಿಯಾಗಿ ತೆಗೆದುಕೊಳ್ಳುವವರು ಇದರ ಬಗ್ಗೆ ಎಚ್ಚರಿಕೆ ವಹಿಸಿಕೊಳ್ಳಬೇಕು.

ಇತ್ತೀಚೆಗಷ್ಟೇ ಪ್ರಶಸ್ತಿ ಗೆದ್ದುಕೊಂಡಿದ್ದ ಅಮೆರಿಕಾದ ಪತ್ರಕರ್ತ ಮತ್ತು ಎನ್ ಬಿಸಿ ಟುಡೇಯ ಕಾರ್ಯಕ್ರಮ ನಿರೂಪಕ ಹೊಡಾ ಕೊಟ್ಬ ಹೊಸ ಜೀವನ ಶೈಲಿಯ ಸೆಲ್ಫಿ ಎಲ್ಬೋಗೆ ತುತ್ತಾಗಿದ್ದಾರೆ.

ಟೆನಿಸ್ ಎಲ್ಬೋ ಮತ್ತು ಗಾಲ್ಫರ್ ಎಲ್ಬೋದಂತೆ ಸೆಲ್ಫಿ ಎಲ್ಬೋ ಕೂಡ ನಿಮ್ಮ ಮೊಣಕೈಯಲ್ಲಿ ನೋವುಂಟು ಮಾಡಬಹುದು. ಭಾರತದ ಯುವಜನರಲ್ಲಿ ಯಾರಾದರೊಬ್ಬರು ಇಂತಹ ಸಮಸ್ಯೆಯಿಂದ ಬಳಲುವ ಬಗ್ಗೆ ನೀವು ವರದಿಯನ್ನು ಓದುವ ದಿನ ಹೆಚ್ಚು ದೂರವಿಲ್ಲ ಎಂದು ತಜ್ಞರು ಹೇಳುತ್ತಾರೆ.

ಸೆಲ್ಫಿ ತೆಗೆಯುವುದು ಇತ್ತೀಚಿನ ದಿನಗಳಲ್ಲಿ ಒಂದು ಕ್ರೀಡೆಯಂತೆ ಬೆಳೆಯುತ್ತಾ ಇದೆ. ಪ್ರತಿಯೊಬ್ಬರು ಇದರಲ್ಲಿ ಭಾಗಿಯಾಗುತ್ತಾರೆ ಮತ್ತು ಸೆಲ್ಫಿಯನ್ನು ವಿಶ್ವದೊಂದಿಗೆ ಹಂಚಿಕೊಳ್ಳುತ್ತಾ ಇದ್ದಾರೆ. ಪ್ರತಿಯೊಂದು ಕ್ರೀಡೆಯಲ್ಲಿ ಇರುವಂತೆ ಇದರಲ್ಲೂ ಗಾಯಾಳುವಾಗುವ ಸಮಸ್ಯೆಯಿದೆ ಎಂದು ಫೋರ್ಟಿಸ್ ಆಸ್ಪತ್ರೆಯ ಗಂಟು ಮತ್ತು ಕೀಳು ತಜ್ಞ ಡಾ. ಧನಂಜಯ್ ತಿಳಿಸಿದ್ದಾರೆ.

ಅತಿಯಾಗಿ ಸೆಲ್ಫಿ ತೆಗೆಯುವುದರಿಂದ ಮೊಣಕೈ ಮತ್ತು ಭುಜದ ಸ್ನಾಯುಗಳ ಮೇಲೆ ಪರಿಣಾಮ ಉಂಟು ಮಾಡುತ್ತದೆ. ಇದರಿಂದ ಅವುಗಳ ಕಾರ್ಯಚಟುವಟಿಕೆಯು ಕುಗ್ಗುವುದು. ಸೆಲ್ಫಿ ಎಲ್ಬೋ ಕಾಣಿಸಿಕೊಂಡರೆ ಯಾವುದೇ ವ್ಯಕ್ತಿ ಕೆಲವು ವಾರಗಳ ತನಕ ವಿಶ್ರಾಂತಿಯನ್ನು ಪಡೆಯಬೇಕಾಗುತ್ತದೆ ಎಂದು ಸರೋಜ್ ಸೂಪರ್ ಸ್ಪೆಷಲಿಸ್ಟ್ ಆಸ್ಪತ್ರೆಯ ಮಂಡಿ ಜೋಡಣಾ ತಜ್ಞ ಡಾ. ನಿಶ್ಚಲ್ ಚೌಗ್ ತಿಳಿಸಿದ್ದಾರೆ.

ಪತ್ರಕರ್ತ ಕೊಟ್ಬ ಈ ಸಮಸ್ಯೆಗೆ ಕಾಣಿಸಿಕೊಂಡಾಗ ಅವರ ಮೊಣಕೈಗೆ ಮಂಜುಗಡ್ಡೆಯನ್ನು ಇಡಲು ಮತ್ತು ಕೆಲವೊಂದು ವ್ಯಾಯಾಮಗಳನ್ನು ಸೂಚಿಸಲಾಯಿತು. ಇದರಿಂದ ನೋವು ಮತ್ತು ಊತ ಕಡಿಮೆಯಾಗುವುದು.

ಮಣಿಗಂಟು ಮತ್ತು ಹೆಬ್ಬೆರಳನ್ನು ಬಳಸಿಕೊಂಡು ಸೆಲ್ಫಿ ತೆಗೆಯುವುದರಿಂದ ಆಗುವ ತೊಂದರೆ ಬಗ್ಗೆ ಈಗಲೇ ಪ್ರತಿಕ್ರಿಯೆ ನೀಡುವಂತಿಲ್ಲ. ಆದರೆ ಕೆಲವೊಂದು ಮೊಣಕೈಗೆ ಒತ್ತಡ ಬೀಳುವ ಕಾರಣದಿಂದಾಗಿ ನೋವು ಕಾಣಿಸಿಕೊಳ್ಳಬಹುದು ಎಂದು ಫೋಟ್ರಿಸ್ ಆಸ್ಪತ್ರೆಯ ಮಂಡಿ ಮತ್ತು ಮೂಳೆ ಆಸ್ಪತ್ರೆಯ ನಿರ್ದೇಶಕ ಡಾ. ರಮನ ಕಾಂತ್ ತಿಳಿಸಿದ್ದಾರೆ.

ಸೆಲ್ಫಿ ಎಲ್ಬೋ ಮೊಣಕೈ ಸುತ್ತ ಅಸಹಜ ಮತ್ತು ಪುನರಾವರ್ತಿತ ಸ್ನಾಯುಗಳು ಸೇರ್ಪಡೆಯಾಗುವ ಕಾರಣ ಸೂಕ್ಷ್ಮವಾಗಿ ಛಿದ್ರಗೊಂಡು ಉರಿಯೂತ ಮತ್ತು ನೋವು ಉಂಟಾಗುವುದು. ಅಂತಿಮವಾಗಿ ಗಾಯದ ಗುರುತು ಮತ್ತು ನೋವು ಮರುಕಳಿಸುವುದು.

ಸಣ್ಣ ಮಟ್ಟದ ಒತ್ತಡವು ನಿಮ್ಮ ಮೊಣಕೈಯಲ್ಲಿ ಅಸಾಧಾರಣ ನೋವನ್ನು ಉಂಟುಮಾಡಬಹುದು. ಇದರಿಂದಾಗಿ ನೋವಿರುವ ಸ್ನಾಯುಗಳು ಮತ್ತಷ್ಟು ನಿಶ್ಯಕ್ತಿಯಾಗಬಹುದು. ಇದು ಒಂದು ಆವೃತ್ತಿಯಲ್ಲಿ ನಡೆಯುತ್ತಿರುತ್ತದೆ ಮತ್ತು ಕಾರ್ಯಚಟುವಟಿಕೆಗೆ ತೊಂದರೆಯಾಗುತ್ತದೆ ಎಂದು ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ. ಗೇಮ್ ಆಡುವುದು, ಚಾಟ್ ಮಾಡುವುದು, ಸೆಲ್ಫಿ ತೆಗೆದುಕೊಳ್ಳುವುದು, ಮೆಸೇಜ್ ಕಳುಹಿಸುವುದು ಮತ್ತು ಟ್ವೀಟ್ ಮಾಡುವುದರಿಂದ ಯುವಜನರಲ್ಲಿ ಗಾಯಾಳು ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಇದು ಸೆಲ್ಫಿ ಕ್ರೇಜಿನಿಂದಾದ, ಆವಾಂತರ ನೀವು ನಂಬಲೇಬೇಕು!

ಇಂತಹ ಸಮಸ್ಯೆಯಿಂದ ದೂರವಿರಬೇಕಾದರೆ ಸೆಲ್ಫಿ ತೆಗೆದುಕೊಳ್ಳುವುದು ಒಂದು ಮಿತಿಯಲ್ಲಿ ಇರಬೇಕು. ತುರ್ತು ಸಮಯದಲ್ಲಿ ಮಂಜುಗಡ್ಡೆಯನ್ನು ಇಡಬೇಕು ಮತ್ತು ಉರಿಯೂತ ಶಮನಕಾರಿ ಔಷಧಿಯನ್ನು ತೆಗೆದುಕೊಳ್ಳಬೇಕು. ಸಮಸ್ಯೆ ಹೆಚ್ಚಾದರೆ ಆಗ ಫಿಸಿಯೋಥೆರಪಿ ಬಳಿಗೆ ಹೋಗಿ ಸಲಹೆ ಪಡೆಯಬೇಕು. ಅವರು ಸ್ನಾಯುಗಳು ಬಲಗೊಳ್ಳಲು ಹಲವಾರು ರೀತಿಯ ವ್ಯಾಯಾಮ ಸೂಚಿಸುತ್ತಾರೆ ಎಂದು ಗುಪ್ತಾ ಹೇಳಿದರು.

ಸ್ನಾಯುಗಳ ಮೇಲೆ ಒತ್ತಡ ಬೀಳುವುದನ್ನು ತಡೆಯಲು ಸೆಲ್ಫಿ ಸ್ಟಿಕ್ ಬಳಸಬೇಕೆಂದು ತಜ್ಞರು ಸಲಹೆ ಮಾಡಿದ್ದಾರೆ. ಎರಡು ಕೈಗಳನ್ನು ಬಳಸಿಕೊಂಡು ಸೆಲ್ಫಿ ತೆಗೆಯುವುದರಿಂದ ಕೇವಲ ಒಂದು ಕೈಯ ಮೇಲೆ ಬೀಳುವ ಒತ್ತಡವನ್ನು ಕಡಿಮೆ ಮಾಡಬಹುದು ಎಂದು ಗುಪ್ತಾ ಸಲಹೆ ನೀಡಿದ್ದಾರೆ.

English summary

'Selfie Elbow' condition waiting to afflict Indians: Experts

If you were left in shock after reading recent reports that 'Selfie Elbow' is a new medical condition, be warned, as the condition can catch up fast with those Indian youth who are obsessed with clicking self-portraits to impress their friends on social media, experts say. Although India is yet to know about many "Selfie Elbow" patients, the selfie obsession is here to stay.
X
Desktop Bottom Promotion