For Quick Alerts
ALLOW NOTIFICATIONS  
For Daily Alerts

ಕ್ಯಾಮೊಮೈಲ್ ಚಹಾದ ಸೇವನೆಯಿಂದ ಹತ್ತಾರು ಲಾಭ

By Jaya subramanya
|

ಗಿಡಮೂಲಿಕಾ ಅಂಶಗಳಿಂದ ಹೆಚ್ಚು ಶ್ರೀಮಂತವಾಗಿರುವ ಕ್ಯಾಮೊಮೈಲ್ ಚಹಾ ಅನಾದಿ ಕಾಲದಿಂದಲೂ ಹಲವಾರು ಕಾಯಿಲೆಗಳಿಗೆ ದಿವ್ಯೌಷಧವಾಗಿ ಪರಿಣಾಮಕಾರಿಯಾಗಿದೆ. ಪುರಾತನ ಗಿಡಮೂಲಿಕೆಯಾಗಿರುವ ಈ ಚಹಾವು ಉತ್ಕರ್ಷಣ ನಿರೋಧಿ ಅಂಶಗಳಿದ್ದು ಕೂಡಿದ್ದು ಬ್ಯಾಕ್ಟರಿಯಾ ನಿರೋಧಕ ಕೂಡ ಹೌದು. ದೇಹದ ಆರೋಗ್ಯಕ್ಕೆ ಮಾತ್ರ ಉತ್ತಮವಾಗಿರದೆ ತ್ವಚೆಯನ್ನು ಕಳೆಯಾಗಿಸುವಲ್ಲಿ ಕೂಡ ಕ್ಯಾಮೊಮೈಲ್ ಚಹಾ ಉಪಕಾರಿ. ಕ್ಯಾಮೊಮೈಲ್ ಚಹಾ, ಮುಟ್ಟಿನ ನೋವಿಗೆ ದಿವ್ಯೌಷಧ

ಈ ಚಹಾವನ್ನು ತಯಾರಿಸುವುದೂ ಕೂಡ ಹೆಚ್ಚು ಸುಲಭವಾಗಿದ್ದು ಒಂದು ಕಪ್ ನೀರನ್ನು ಚೆನ್ನಾಗಿ ಕುದಿಸಿಕೊಳ್ಳಿ. ಅದಕ್ಕೆ ಎರಡು-ಮೂರು ಟೀ ಸ್ಪೂನ್ ಕ್ಯಾಮೊಮೈಲ್ ಟೀ ಪುಡಿಯನ್ನು ಅಥವಾ ಇದರ ಒಣಗಿರುವ ಹೂಗಳನ್ನು ಸ್ವಲ್ಪ ಹಾಕಿ ಚೆನ್ನಾಗಿ ಬೆರೆಸಿಕೊಳ್ಳಿ. ಇದು ಮೂರು ನಿಮಿಷ ಬೇಯಲಿ. ತದನಂತರ ಈ ಟೀಯನ್ನು ಶೋಧಿಸಿಕೊಂಡು ಲೋಟಕ್ಕೆ ಸುರಿದುಕೊಳ್ಳಿ. ನಿಮಗೆ ಅಗತ್ಯವಾದಲ್ಲಿ ಜೇನು ತುಪ್ಪ ಅಥವಾ ಸ್ವಲ್ಪ ಲಿಂಬೆರಸವನ್ನು ಬೆರೆಸಿಕೊಂಡು ಸೇವಿಸಿ

ಬನ್ನಿ ಇಂದಿನ ಲೇಖನದಲ್ಲಿ ಈ ಚಹಾದ ಕುರಿತು ಸಾಕಷ್ಟು ಮಾಹಿತಿಗಳನ್ನು ನಾವು ತಿಳಿಸಲಿದ್ದು ನಿಮ್ಮ ಆರೋಗ್ಯಕ್ಕೆ ಇದು ಎಷ್ಟು ಪ್ರಯೋಜನಕಾರಿ ಎಂಬುದನ್ನು ಇದರ ಸೇವನೆಯ ನಂತರ ನಿಮಗೆ ತಿಳಿದುಕೊಳ್ಳಬಹುದಾಗಿದೆ. ಈ ಚಹಾದಿಂದ ಪ್ರತೀಕೂಲ ಪರಿಣಾಮಗಳನ್ನು ನೀವು ಅನುಭವಿಸುತ್ತಿದ್ದೀರಿ ಎಂದಾದಲ್ಲಿ ನಿಮ್ಮ ವೈದ್ಯರನ್ನು ಸಂಪರ್ಕಿಸುವುದು ಉತ್ತಮವಾದುದಾಗಿದೆ. ಹಾಗಿದ್ದರೆ ಕೆಳಗಿನ ಸ್ಲೈಡರ್‌ಗಳಲ್ಲಿ ಈ ಚಹಾವನ್ನು ಸೇವಿಸುವುದರಿಂದ ನಿಮಗುಂಟಾಗುವ ಆರೋಗ್ಯ ಪ್ರಯೋಜನಗಳನ್ನು ಅರಿತುಕೊಳ್ಳಿ...

ಪ್ರತಿರಕ್ಷಣೆ ಹೆಚ್ಚಿಸುತ್ತದೆ

ಪ್ರತಿರಕ್ಷಣೆ ಹೆಚ್ಚಿಸುತ್ತದೆ

ಈ ಹರ್ಬಲ್ ಚಹಾ ಬ್ಯಾಕ್ಟೀರಿಯಾ ವಿರೋಧಿ ಅಂಶಗಳನ್ನು ಒಳಗೊಂಡಿದ್ದು ವ್ಯಕ್ತಿಯ ಪ್ರತಿರಕ್ಷಣಾ ಗುಣವನ್ನು ಹೆಚ್ಚಿಸುತ್ತದೆ. ರೋಗ ಹೋರಾಟ ಕಣಗಳ ಉತ್ಪಾದನೆಯನ್ನು ಇದು ಪ್ರಚೋದಿಸುವುದರೊಂದಿಗೆ ಸೋಂಕಿನೊಂದಿಗೆ ಹೋರಾಡಲು ನಿಮ್ಮ ಆಂತರಿಕ ವ್ಯವಸ್ಥೆಗೆ ಸಹಾಯ ಮಾಡುತ್ತದೆ.

ತಲೆನೋವಿನಿಂದ ಮುಕ್ತಿ

ತಲೆನೋವಿನಿಂದ ಮುಕ್ತಿ

ಕ್ಯಾಮೊಮೈಲ್ ಚಹಾ ತಲೆನೋವಿನಿಂದ ಉಪಶಮನವನ್ನು ನೀಡುವಲ್ಲಿ ಪರಿಣಾಮಕಾರಿಯಾದುದು. ಇದು ಮುಖ್ಯ ನರವ್ಯವಸ್ಥೆಯನ್ನು ವಿಶ್ರಾಂತಿಗೊಳಿಸುವ ಗುಣಗಳನ್ನು ಹೊಂದಿರುವ ಅಂಶಗಳನ್ನು ಒಳಗೊಂಡಿದ್ದು ತಲೆನೋವನಿಂದ ಮುಕ್ತಿಯನ್ನು ಒದಗಿಸುತ್ತದೆ.

ಉತ್ತಮ ನಿದ್ರೆಗಾಗಿ

ಉತ್ತಮ ನಿದ್ರೆಗಾಗಿ

ಕ್ಯಾಮೊಮೈಲ್ ಚಹಾದಲ್ಲಿರುವ ನರಶಮನ ಮಾಡುವ ಅಂಶಗಳು ನಿಮ್ಮ ನಿದ್ದೆಗೆ ಸಹಕಾರಿ ಎಂದೆನಿಸಿದೆ. ನಿದ್ರಾಹೀನತೆಯಿಂದ ಬಳಲುತ್ತಿರುವವರಿಗೆ ಈ ಚಹಾವನ್ನು ನೀಡಲಾಗುತ್ತದೆ. ಒಂದು ಕಪ್‌ನಷ್ಟು ಹರ್ಬಲ್ ಚಹಾ ನಿಮ್ಮನ್ನು ಮಗುವಿನಂತೆ ನಿದ್ರಿಸುವಂತೆ ಮಾಡುತ್ತದೆ.

ರಕ್ತದೊತ್ತಡ ನಿಯಂತ್ರಣದಲ್ಲಿರಿಸುತ್ತದೆ

ರಕ್ತದೊತ್ತಡ ನಿಯಂತ್ರಣದಲ್ಲಿರಿಸುತ್ತದೆ

ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿರಿಸುವ ಶಕ್ತಿಯನ್ನು ಕ್ಯಾಮೊಮೈಲ್ ಚಹಾ ಹೊಂದಿದ್ದು ಮಧುಮೇಹಿಗಳಿಗೆ ಇದನ್ನು ಶಿಫಾರಸು ಮಾಡಲಾಗುತ್ತದೆ. ಮಧುಮೇಹದ ಮುನ್ನಡೆಯನ್ನು ಪರಿಣಾಮಕಾರಿಯಾಗಿ ತಡೆಯುವ ಸಾಮರ್ಥ್ಯವನ್ನು ಕ್ಯಾಮೊಮೈಲ್ ಚಹಾ ಹೊಂದಿದೆ ಎಂಬದಾಗಿ ಅಧ್ಯಯನಗಳು ತಿಳಿಸಿವೆ.

ವೈರಲ್ ಸೋಂಕಿನಿಂದ ರಕ್ಷಣೆ

ವೈರಲ್ ಸೋಂಕಿನಿಂದ ರಕ್ಷಣೆ

ನೀವು ಸಾಮಾನ್ಯ ಶೀತ ಅಥವಾ ವೈರಲ್ ಸೋಂಕಿನಿಂದ ಬಳಲುತ್ತಿದ್ದೀರಿ ಎಂದಾದಲ್ಲಿ, ಈ ಚಹಾವು ನಿಮ್ಮ ಕಾಯಿಲೆಗೆ ಕಾರಣವಾಗಿರುವ ಬ್ಯಾಕ್ಟೀರಿಯಾ ಮತ್ತು ವೈರಸ್‌ನೊಂದಿಗೆ ಹೋರಾಡಿ ಸೋಂಕು ಹರಡದಂತೆ ತಡೆಗಟ್ಟುತ್ತದೆ.

ಉತ್ತಮ ಜೀರ್ಣಕ್ರಿಯೆ

ಉತ್ತಮ ಜೀರ್ಣಕ್ರಿಯೆ

ಜೀರ್ಣಕ್ರಿಯೆ ಸಮಸ್ಯೆಗಳನ್ನು ಮೂಲದಲ್ಲಿಯೇ ನಿವಾರಿಸುವ ಶಕ್ತಿಯನ್ನು ಈ ಚಹಾ ಪಡೆದುಕೊಂಡಿದೆ. ನೀವು ಆಮ್ಲತೆ ಅಥವಾ ಕರುಳಿನ ಸಮಸ್ಯೆಗಳಿಂದ ಬಳಲುತ್ತಿದ್ದೀರಿ ಎಂದಾದಲ್ಲಿ, ಈ ಹರ್ಬಲ್ ಚಹಾವನ್ನು ಸೇವಿಸಬಹುದಾಗಿದೆ.

ಖಿನ್ನತೆಯ ಶಮನಕ್ಕಾಗಿ

ಖಿನ್ನತೆಯ ಶಮನಕ್ಕಾಗಿ

ಈ ಚಹಾದಲ್ಲಿ ನಿಮ್ಮನ್ನು ಶಾಂತಗೊಳಿಸುವ ಗುಣಗಳಿದ್ದು ಮೂಲ ನರವ್ಯವಸ್ಥೆಯನ್ನು ಶಾಂತಗೊಳಿಸಿ ಒತ್ತಡ ಮತ್ತು ಖಿನ್ನತೆಯಿಂದ ನಿಮಗೆ ಪರಿಹಾರವನ್ನು ನೀಡುತ್ತದೆ. ನಿಮ್ಮ ದೇಹ ಮತ್ತು ಮನಸ್ಸನ್ನು ಪ್ರಶಾಂತವಾಗಿರಿಸಲು ಈ ಚಹಾದ ಸೇವನೆಯನ್ನು ಮಾಡಿ.

English summary

Reasons Why You Should Drink Chamomile tea

Today at Boldsky, we're going to let you know about the amazing health benefits of this age-old herbal tea. However, please be mindful that if you're suffering from any kind of a health issue, then do consult your doctor before including this tea in your diet, just to be on a safer side. Have a look at the reasons why you should drink chamomile tea often.
Story first published: Tuesday, June 28, 2016, 20:47 [IST]
X
Desktop Bottom Promotion