ನೆನಪಿರಲಿ, ಸಕ್ಕರೆ ಬಾಯಿಗೆ ಸಿಹಿಯಾದರೆ ಆರೋಗ್ಯಕ್ಕೆ ಕಹಿ!

ನಮ್ಮ ಮೆದುಳಿಗೆ ಸಿಹಿಯ ಅನುಭವವನ್ನು ನೀಡುವುದೇ ಬಿಳಿ ಸಕ್ಕರೆಯ ಕೆಲಸವಾಗಿದೆಯೇ ವಿನಃ ಆರೋಗ್ಯಕ್ಕೆ ಅಗತ್ಯವಿರುವಷ್ಟು ಸಕ್ಕರೆ ಹಣ್ಣು ಹಂಪಲುಗಳಿಂದಲೇ ಲಭಿಸುತ್ತದೆ. ಹಾಗಾಗಿ ಬಿಳಿಯ ಸಕ್ಕರೆಯ ಪ್ರಮಾಣ ಹೆಚ್ಚಿದಷ್ಟೂ ಆರೋಗ್ಯಕ್ಕೆ ಮಾರಕ...

By: manu
Subscribe to Boldsky

ಇತ್ತೀಚೆಗೆ ನಡೆದಿರುವ ಸಂಶೋಧನೆಗಳ ಪ್ರಕಾರ ನಮ್ಮ ಆಹಾರದಲ್ಲಿ ನಮಗರಿಯದಂತೆಯೇ ನಾಲ್ಕು ವಿಷವಸ್ತುಗಳು ಸೇರಿವೆ. ಅವೆಂದರೆ ಸಕ್ಕರೆ, ಉಪ್ಪು, ಮೈದಾ ಮತ್ತು ಆಶ್ಚರ್ಯಗೊಳಿಸುವಂತೆ ಹಾಲು. ಈ ಮಾತನ್ನು ಸುಖಾಸುಮ್ಮನೇ ಹೇಳಿಲ್ಲ, ಬದಲಿಗೆ ಅಪಾರ ಸಂಶೋಧನೆ, ಅಂಕಿ ಅಂಶಗಳು, ಕಂಪ್ಯೂಟರ್ ವಿಶ್ಲೇಷಣೆ ಮೊದಲಾದವುಗಳ ಮೂಲಕ ತಜ್ಞರ ತಂಡವೇ ನಡೆಸಿದ ಸಂಶೋಧನೆಯಾಗಿದೆ.

ಇಂದಿನ ಲೇಖನದಲ್ಲಿ ಸಕ್ಕರೆಯ ಪ್ರಮಾಣ ಎಷ್ಟು ಮೀರಿದರೆ ವಿಷ ಎಂಬುದನ್ನು ನೋಡೋಣ. ನಮ್ಮ ನಿತ್ಯದ ಚಟುವಟಿಕೆಗಳಿಗೆ ಸಕ್ಕರೆ ಬೇಕು. ಆದರೆ ಇವು ನಮ್ಮ ಆಹಾರದಲ್ಲಿಯೇ ಸಿಕ್ಕಿಬಿಡುತ್ತವೆ. ಹಾಗಾಗಿ ಸಂಸ್ಕರಿಸಿದ ಮತ್ತು ಸಾಂದ್ರೀಕರಿಸಿದ ಸಕ್ಕರೆಯ ಅಗತ್ಯವೇ ಇಲ್ಲ. ಸಕ್ಕರೆ ಹಿಂದಿರುವ ಕರಾಳ ಸತ್ಯ: ಇಲ್ಲಿದೆ 10 ಪುರಾವೆಗಳು

ವಾಸ್ತವವಾಗಿ ನಮ್ಮ ಮೆದುಳಿಗೆ ಸಿಹಿಯ ಅನುಭವವನ್ನು ನೀಡುವುದೇ ಬಿಳಿ ಸಕ್ಕರೆಯ ಕೆಲಸವಾಗಿದೆಯೇ ವಿನಃ ಆರೋಗ್ಯಕ್ಕೆ ಅಗತ್ಯವಿರುವಷ್ಟು ಸಕ್ಕರೆ ಹಣ್ಣು ಹಂಪಲುಗಳಿಂದಲೇ ಲಭಿಸುತ್ತದೆ. ಹಾಗಾಗಿ ಬಿಳಿಯ ಸಕ್ಕರೆಯ ಪ್ರಮಾಣ ಹೆಚ್ಚಿದಷ್ಟೂ ಆರೋಗ್ಯಕ್ಕೆ ಮಾರಕವಗುತ್ತಾ ಹೋಗುತ್ತದೆ. ಮುಖದ ಅಂದಕ್ಕೆ ಸಕ್ಕರೆ-ಜೇನುತುಪ್ಪದ ಫೇಸ್ ಪ್ಯಾಕ್

ಹೆಚ್ಚಿನ ಪ್ರಮಾಣದ ಸಕ್ಕರೆ ದೇಹಕ್ಕೆ ಲಭ್ಯವಾಗುವ ಮೂಲಕ ದೇಹವೂ ಹಲವು ಮಾರ್ಪಾಡುಗಳನ್ನು ಮಾಡಿಕೊಳ್ಳುತ್ತದೆ. ವಿಶೇಷವಾಗಿ ಕೊಬ್ಬಿನ ಉತ್ಪಾದನೆ. ಇದರಿಂದ ಸ್ಥೂಲಕಾಯ ಹೆಚ್ಚುವುದು. ಅಲ್ಲದೇ ಸಕ್ಕರೆ ಹೆಚ್ಚಿರುವ ಕಾರಣದಿಂದ ಆರೋಗ್ಯದ ಮೇಲೆ ಹಲವಾರು ಪರಿಣಾಮಗಳೂ ಬೀರುತ್ತವೆ. ಬನ್ನಿ, ಈ ಪರಿಣಾಮಗಳು ಯಾವುವು, ಎಷ್ಟು ಸಕ್ಕರೆ ನಮಗೆ ಅಗತ್ಯವಿದೆ ಎಂಬುದನ್ನು ನೋಡೋಣ...

 

ದಿನದ ಅಗತ್ಯಕ್ಕೆ ಎಷ್ಟು ಸಕ್ಕರೆ ಅಗತ್ಯ?

ಅಮೇರಿಕನ್ ಹಾರ್ಟ್ ಅಸೋಸಿಯೇಷನ್ (AHA) ಪ್ರಕಾರ ಪುರುಷರಿಗೆ 150 ಕ್ಯಾಲೋರಿ ಅಥವಾ 37.5 ಗ್ರಾಂ (ಸ್ಥೂಲವಾಗಿ ಒಂಬತ್ತು ಚಿಕ್ಕಚಮಚ) ದಷ್ಟು ಹಾಗೂ ಮಹಿಳೆಯರಿಗೆ 100 ಕ್ಯಾಲೋರಿ ಅಥವಾ 25 ಗ್ರಾಂ (ಸ್ಥೂಲವಾಗಿ ಆರು ಚಿಕ್ಕಚಮಚ) ಸಕ್ಕರೆ ಸಾಕು.

ಬಿಳಿ ಸಕ್ಕರೆಯಲ್ಲಿ ಪೋಷಕಾಂಶಗಳಿಲ್ಲ, ಬರೆಯ ಕ್ಯಾಲೋರಿಗಳು ಮಾತ್ರ

ಸಕ್ಕರೆಯ ಪರಿಣಾಮವನ್ನು ಅರಿಯಲು ಪೋಷಕಾಂಶಗಳು ಮತ್ತು ಕ್ಯಾಲೋರಿಗಳ ಬಗ್ಗೆ ಅರಿತಿರಬೇಕು. ಪೋಷಕಾಂಶಗಳು ಆರೋಗ್ಯಕ್ಕೆ ಅಗತ್ಯವಾದರೆ ಕ್ಯಾಲೋರಿಗಳು ಚಟುವಟಿಕೆಗೆ ಅಗತ್ಯವಾಗಿವೆ. ಸಂಸ್ಕರಿಸಿದ ಸಕ್ಕರೆಯಲ್ಲಿ ಪೋಷಕಾಂಶಗಳಿಲ್ಲ, ಬರೆಯ ಕ್ಯಾಲೋರಿಗಳು ಮಾತ್ರ ಇವೆ.

ಬಿಳಿ ಸಕ್ಕರೆಯಲ್ಲಿ ಪೋಷಕಾಂಶಗಳಿಲ್ಲ, ಬರೆಯ ಕ್ಯಾಲೋರಿಗಳು ಮಾತ್ರ

ಹಾಗಾಗಿ ಹೆಚ್ಚು ಸಕ್ಕರೆ ಸೇವಿಸಿದಷ್ಟೂ ನಾವು ದೈಹಿಕ ಚಟುವಟಿಕೆಗಳನ್ನೂ ಹೆಚ್ಚಿಸಬೇಕು. ಸ್ಥೂಲವಾಗಿ ಹೇಳಬೇಕೆಂದರೆ ಪ್ರತಿ ಒಂದು ಚಮಚ ಸಕ್ಕರೆಯಿಂದ ಲಭ್ಯವಾಗುವ ಕ್ಯಾಲೋರಿಗಳನ್ನು ಬಳಸಲು ಸುಮಾರು ಮುಕ್ಕಾಲು ಕಿ.ಮೀ ನಡೆಯಬೇಕು. ನಾವು ನಡೆಯುತ್ತೇವೆಯೇ? ಆಗ ಈ ಕ್ಯಾಲೋರಿಗಳು ಬಳಸಲ್ಪಡದೇ ದೇಹದಲ್ಲಿಯೇ ಉಳಿದು ಹಲವು ತೊಂದರೆಗಳಿಗೆ ಕಾರಣವಾಗುತ್ತವೆ.

ಸಕ್ಕರೆ ಅತಿ ವ್ಯಸನಕಾರಿ ವಸ್ತುವಾಗಿದೆ

ನಮಗೆ ಅರಿವೇ ಇಲ್ಲದಂತೆ ನಾವೆಲ್ಲಾ ಸಕ್ಕರೆಗೆ ವ್ಯಸನರಾಗಿ ಬಿಟ್ಟಿದ್ದೇವೆ. ಏಕೆಂದರೆ ಸಕ್ಕರೆಯನ್ನು ಜೀರ್ಣಿಸಿಕೊಂಡ ಬಳಿಕ ರಕ್ತದಲ್ಲಿ ಡೋಪಮೈನ್ ಎಂಬ ರಾಸಾಯನಿಕ ಉತ್ಪತ್ತಿಯಾಗುತ್ತದೆ. ಇದು ಒಂದು ಮೆದುಳಿಗೆ ಮುದ ನೀಡುವ ರಾಸಾಯನಿಕವಾಗಿದ್ದು ಮೆದುಳು ಹೆಚ್ಚು ಹೆಚ್ಚು ಇಷ್ಟಪಡತೊಡಗುತ್ತದೆ. ಚಿಕ್ಕಂದಿನ ಚಾಕಲೇಟಿನಿಂದ ಪ್ರಾರಂಭವಾದ ಸಕ್ಕರೆಯ ವ್ಯಸನ ನಮ್ಮನ್ನು ಜೀವಮಾನವಿಡೀ ಕಾಡುತ್ತದೆ.

ಯಕೃತ್‌ನ ಕೊಬ್ಬಿಗೆ ಪ್ರಮುಖ ಕಾರಣವಾಗಿದೆ

ಸಕ್ಕರೆ ಎಂದರೆ ಗ್ಲೂಕೋಸ್ ಎಂದು ತಿಳಿದುಕೊಂಡಿದ್ದೇವೆ. ವಾಸ್ತವವಾಗಿ ಬಿಳಿ ಸಕ್ಕರೆಯಲ್ಲಿ ಗ್ಲೂಕೋಸ್ ಗಿಂತ ಫ್ರುಕ್ಟೋಸ್ ಎಂಬ ಸಕ್ಕರೆಯೇ ಹೆಚ್ಚಾಗಿದೆ. ಈ ಸಕ್ಕರೆ ಬಳಸಲ್ಪಡದೇ ಇದ್ದಲ್ಲಿ ಯಕೃತ್ ನಲ್ಲಿ ಕೊಬ್ಬಾಗಿ ಮಾರ್ಪಟ್ಟು ಹೆಚ್ಚುವರಿ ಪ್ರಮಾಣ ಯಕೃತ್ ನಿಂದ ಹೊರದಬ್ಬಲ್ಪಡುತ್ತದೆ. ಆದರೆ ಯಕೃತ್ ನೊಳಗೆ ಸಂಗ್ರಹವಾದ ಕೊಬ್ಬು non-alcoholic fatty liver disease ಎಂಬ ಕಾಯಿಲೆಗೆ ನೇರವಾಗಿ ಕಾರಣವಾಗುತ್ತದೆ. ಇಂದು ಸಿದ್ದ ಆಹಾರಗಳಿಗೆ ಗುಲಾಮರಾಗಿರುವ ಪಾಶ್ಚಾತ್ಯ ದೇಶಗಳಲ್ಲಿ ಈ ತೊಂದರೆ ಅತಿ ಹೆಚ್ಚಾಗಿ ಕಂಡುಬಂದಿದೆ.

ಕ್ಯಾನ್ಸರ್‌ಗೂ ಕಾರಣವಾಗಬಹುದು

ಸಕ್ಕರೆಯ ಪ್ರಮಾಣ ಹೆಚ್ಚಾದರೆ ಇದನ್ನು ಬಳಸಲ್ಪಡಲು ದೇಹ ಅತಿ ಹೆಚ್ಚಾದ ಪ್ರಮಾಣದ ಇನ್ಸುಲಿನ್ ಅನ್ನು ಉತ್ಪಾದಿಸಬೇಕಾಗುತ್ತದೆ. ಇದು ಕ್ಯಾನ್ಸರ್ ಗೆ ಕಾರಣವಾಗಬಹುದು. ಇನ್ಸುಲಿನ್ ಸಂಬಂಧಿತ ಕೆಲವು ಅಂಗಾಂಶಗಳ ಜೀವಕೋಶಗಳು ಅನಿಯಂತ್ರಿತವಾಗಿ ಬೆಳೆಯಲು ಈ ಹೆಚ್ಚುವರಿ ಇನ್ಸುಲಿನ್ ಮೂಲವಾಗಿದ್ದು ಇದರಿಂದ ಉರಿಯೂತ ಉಂಟಾಗುತ್ತದೆ. ತಕ್ಷಣವೇ ಚಿಕಿತ್ಸೆ ಪಡೆಯದಿದ್ದರೆ ಕ್ಯಾನ್ಸರ್ ಗೆ ತಿರುಗಬಹುದು.

ಹಲ್ಲು ಹುಳುಕಿಗೆ ಕಾರಣವಾಗಬಹುದು

ಮಕ್ಕಳ ಹಲ್ಲು ಹುಳುಕಿಗೆ ಸಕ್ಕರೆ ಕಾರಣವಾಗಿದೆ. ಇದು ಹಿರಿಯರಿಗೂ ಹೊರತಲ್ಲ. ಮಕ್ಕಳ ಹಲ್ಲುಗಳು ಬೇಗನೇ ಏಕೆ ಕರಗುತ್ತವೆ ಎಂದರೆ ಮಕ್ಕಳು ಸಿಹಿಯನ್ನು ಹೆಚ್ಚು ಹೊತ್ತು ಬಾಯಿಯಲ್ಲಿಯೇ ಇಟ್ಟುಕೊಂಡಿರುತ್ತಾರೆ. ಹಿರಿಯರು ಚಾಕಲೇಟನ್ನು ಬಾಯಿಯಲ್ಲಿ ಇಟ್ಟುಕೊಳ್ಳದೇ ಇದ್ದರೂ ಸಿಹಿ ತಿನಿಸುಗಳನ್ನು ತಿಂದ ಬಳಿಕ ಮುಕ್ಕಳಿಸದೇ ಇರುವ ಕಾರಣ ಹಲ್ಲಿನ ಮೇಲೆ ತೆಳುವಾದ ಸಕ್ಕರೆಯ ಪದರ ಉಳಿದು ಹಲ್ಲುಗಳ ಸವೆತಕ್ಕೆ ಕ್ರಮೇಣ ಹುಳುಕಿಗೆ ಕಾರಣವಾಗಬಹುದು.

ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

Story first published: Saturday, November 12, 2016, 15:48 [IST]
English summary

reasons why sugar is bad for health

Sugar, as we all know, is a food that kills us in the long term. It can hurt our metabolism and lead to all sorts of diseases. Increased intake can make you develop certain lifestyle-related disorders, which has been seen to be at an all time rise. It is always better to avoid the intake of sugar and keep it to a minimum to help combat certain health ailments. Here we list harmful reasons on why you must cut down on your sugar intake, take a look.
Please Wait while comments are loading...
Subscribe Newsletter