For Quick Alerts
ALLOW NOTIFICATIONS  
For Daily Alerts

ಸೈಕ್ಲಿಂಗ್ ಮಾಡಿ ಪರಿಸರ ಉಳಿಸಿ, ಅನಾರೋಗ್ಯದಿಂದ ಪಾರಾಗಿ

By CM prasad
|

ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ. ಈಗಿನ ಸಂದಿಗ್ಧ ಪರಿಸ್ಥಿಯಲ್ಲಿ ಮಾನವನು ಎಲ್ಲ ರೀತಿಯಲ್ಲೂ ಪರಿಸರಕ್ಕೆ ಹಾನಿಯುಂಟು ಮಾಡುತ್ತಿದ್ದಾನೆ. ದಿನೇ ದಿನೇ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದ್ದು, ನಗರವಾಸಿಗಳಿಗೆ ಮುಂದೊಂದು ದಿನ ಮಾರಣಾಂತಿಕವಾದ ಸಮಸ್ಯೆಗಳು ಎದುರಾಗದೇ ಇರಲಾರವು. ಪರಿಸರ ನಮಗೆ ಸೃಷ್ಟಿಯು ಕಲ್ಪಿಸಿಕೊಟ್ಟ ವರ. ಈ ಪರಿಸರವನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ. ಈ ನಿಟ್ಟಿನಲ್ಲಿ ಈ ಆಧುನಿಕ ಯುಗದಲ್ಲಿ ಪ್ರಯಾಣಕ್ಕೆ ವಾಹನಗಳನ್ನು ಬಳಸುತ್ತಿರುವುದು ಎಲ್ಲರಿಗೂ ತಿಳಿದಿದೆ.

ಆದರೆ ವಾಹನದ ಬದಲು ಪರಿಸರಕ್ಕೆ ಉಪಯುಕ್ತವಾಗುವ ಮತ್ತು ನಿಮ್ಮ ದೇಹಕ್ಕೂ ನೆರವಾಗುವ ಸಾಧನವನ್ನು ಬಳಸಬಹುದಲ್ಲವೇ. ಹೌದು! ಈ ಲೇಖನದಲ್ಲಿ ಸೈಕಲ್ ಬಳಕೆಯ ಬಗ್ಗೆ ಮತ್ತು ಅದರ ಪ್ರಯೋಜನಗಳ ಬಗ್ಗೆ ಕೆಲ ವಿಶೇಷ ಸಂಗತಿಗಳನ್ನು ನಿಮಗಾಗಿ ನೀಡಲಾಗಿದೆ. ಸೈಕಲ್ ಬಳಕೆಯಿಂದ ಮಾಲಿನ್ಯ ಶೂನ್ಯವಾಗಲಿದ್ದು, ನಿಮಗೆ ಹಣವೂ ಉಳಿತಾಯವಾಗಿ ನಿಮ್ಮ ದೇಹವು ಸದೃಢವಾಗಲಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಸೈಕ್ಲಿಂಗ್ ಮಾಡಲು ಮುಗಿಬೀಳುತ್ತಿದ್ದಾರೆ. ದಿನಕ್ಕೆ ಒಮ್ಮೆಯಾದರೂ ಸೈಕ್ಲಿಂಗ್ ಮಾಡಿದರೆ ವ್ಯತ್ಯಾಸ ನಿಮಗೇ ತಿಳಿಯುತ್ತದೆ. ವಿವರಗಳಿಗೆ ಮುಂದೆ ಓದಿ..

ನಿಮ್ಮ ಚರ್ಮವು ಕಾಂತಿಯುತವಾಗುತ್ತದೆ

ನಿಮ್ಮ ಚರ್ಮವು ಕಾಂತಿಯುತವಾಗುತ್ತದೆ

ನೀವು ಪೆಡಲ್ ಮಾಡುವಾಗ ಆಕ್ಸಿಜೆನ್ ಹೆಚ್ಚು ಉತ್ಪತ್ತಿಗೊಂಡು ನಿಮ್ಮ ಚರ್ಮಕ್ಕೆ ತಾಜಾ ಆಕ್ಸಿಜೆನ್ ನೀಡಿ, ನಿಮಗೆ ಹೊಸ ಚೈತನ್ಯವನ್ನು ನೀಡುತ್ತದೆ.

ದೇಹದ ಕ್ಯಾಲೊರಿಯನ್ನು ನಿಯಂತ್ರಿಸುತ್ತದೆ

ದೇಹದ ಕ್ಯಾಲೊರಿಯನ್ನು ನಿಯಂತ್ರಿಸುತ್ತದೆ

ಒಂದು ಅಂದಾಜಿನ ಪ್ರಕಾರ 125 ಪೌಂಡ್ ತೂಕವಿರುವ ಮಹಿಳೆಯು ಒಂದು ಗಂಟೆಗಳ ಕಾಲ 14 ಮೈಲಿ ವೇಗದಲ್ಲಿ ಸೈಕ್ಲಿಂಗ್ ಮಾಡಿದರೆ ಸುಮಾರು 500 ಕ್ಯಾಲೊರಿಗಳ ಅಷ್ಟು ದಹಿಸುತ್ತದೆ. ಇದು ಮಧುಮೇಹ ಬರುವ ಅಪಾಯವನ್ನು ಸಹ ನಿಯಂತ್ರಿಸುತ್ತದೆ.

ಆರ್ಥ್ರೈಟಿಸ್ ಗೆ ನೆರವು ನೀಡುತ್ತದೆ

ಆರ್ಥ್ರೈಟಿಸ್ ಗೆ ನೆರವು ನೀಡುತ್ತದೆ

ಆರ್ಥ್ರೈಟಿಸ್ ನಿಂದ ಬಳಲುತ್ತಿದ್ದೀರೇ? ಸೈಕ್ಲಿಂಗ್ ಮಾಡುವುದರಿಂದ ನಿಮ್ಮ ದೇಹಕ್ಕೆ ದೃಢತೆ ನೀಡಿ ಪಾದಗಳು ಮತ್ತು ಸ್ನಾಯುಗಳಿಗೆ ಸಾಮರ್ಥ್ಯ ನೀಡುತ್ತದೆ. ಆದರೆ ಇದನ್ನು ಪ್ರಯತ್ನಿಸುವ ಮೊದಲು ವೈದ್ಯರ ಸಲಹೆಯನ್ನು ಪಡೆಯಲು ಮರೆಯದಿರಿ.

ಕಾಯಿಲೆ ಬರುವ ಆಪಾಯವನ್ನು ಕಡಿಮೆ ಮಾಡುತ್ತದೆ

ಕಾಯಿಲೆ ಬರುವ ಆಪಾಯವನ್ನು ಕಡಿಮೆ ಮಾಡುತ್ತದೆ

ಕ್ರಮವಾದ ಸೈಕ್ಲಿಂಗ್ ಮಾಡುವುದರಿಂದ ಅಧಿಕ ರಕ್ತದೊತ್ತಡ, ಪಾರ್ಶ್ವವಾಯು ಮತ್ತು ಇತರೆ ಹೃದಯ ಸಂಬಂಧಿ ಕಾಯಿಲೆಗಳು ಬರದಂತೆ ತಡೆಯುತ್ತದೆ. ಅಲ್ಲದೇ ಖಿನ್ನತೆಯನ್ನೂ ನಿವಾರಿಸುತ್ತದೆ.

ಒಳ್ಳೆಯ ನಿದ್ರೆಗೆ ನೆರವಾಗುತ್ತದೆ

ಒಳ್ಳೆಯ ನಿದ್ರೆಗೆ ನೆರವಾಗುತ್ತದೆ

ಅಧ್ಯಯನಗಳು ಹೇಳುವ ಪ್ರಕಾರ ದಿನಕ್ಕೆ 20 ರಿಂದ 30 ನಿಮಿಷ ಸೈಕ್ಲಿಂಗ್ ಮಾಡಿದರೆ ನಿದ್ರಾಹೀನತೆಯನ್ನು ನಿವಾರಿಸುತ್ತದೆ. ಇದರ ತಾತ್ಪರ್ಯವೇನೆಂದರೆ ಹೊರಗೆ ಬಿಸಿಲಿನಲ್ಲಿ ಶಾಖಕ್ಕೆ ನಿಮ್ಮ ದೇಹವನ್ನು ಒಡ್ಡಿದರೆ ಹೃದಯ ಬಡಿತ ಸುಗಮಗೊಂಡು, ನಿದ್ರಾಹೀನತೆಗೆ ಕಾರಣವಾಗುವ ಕಾರ್ಟಿಸಾಲ್ ಎಂಬ ಒತ್ತಡದ ಹಾರ್ಮೊನ್ ಅನ್ನು ಹೊರಹಾಕಲು ನೆರವಾಗುತ್ತದೆ.

English summary

Reasons why cycling must be part of your day

Its something that causes zero pollutions, saves you money and keeps you looking trim and that is just part of the reason why more than half the world chooses to go cycling, for fitness. We all loved Anne Hathaway cycling around her open office in The Intern and even if you can't do so, here's why you should get onto the saddle at least once a day...
X
Desktop Bottom Promotion