For Quick Alerts
ALLOW NOTIFICATIONS  
For Daily Alerts

ಬೆಳ್ಳುಳ್ಳಿಯ ಕಮಟು ವಾಸನೆಗೆ ಮುಖ ಸಿಂಡರಿಸಬೇಡಿ!

By Super
|

ಭಾರತೀಯ ಅಡುಗೆಗಳಲ್ಲಿ ಪ್ರಮುಖವಾದ ಸಾಂಬಾರು ಪ್ರದಾರ್ಥವೆಂದರೆ ಬೆಳ್ಳುಳ್ಳಿ. ಮಾನವರಿಗೆ ಅತಿ ಹಿಂದಿನ ಕಾಲದಿಂದಲೂ ಗೊತ್ತಿದ್ದ ಕೆಲವೇ ಸಾಂಬಾರ ಪದಾರ್ಥಗಳಲ್ಲಿ ಬೆಳ್ಳುಳ್ಳಿ ಸಹಾ ಒಂದು. ಇದು ಅಡುಗೆಯಲ್ಲಿ ರುಚಿಯನ್ನು ಹೆಚ್ಚಿಸುವ ಜೊತೆಗೇ ಆರೋಗ್ಯವನ್ನೂ ವೃದ್ಧಿಸುತ್ತದೆ. ಇದರಲ್ಲಿರುವ ಆರೋಗ್ಯವೃದ್ದಿ ಗುಣಗಳು ವಿಶೇಷವಾಗಿ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ.

ಇದರಲ್ಲಿ ಉತ್ತಮ ಪ್ರಮಾಣದಲ್ಲಿರುವ ಐಯೋಡಿನ್, ಗಂಧಕ, ಕ್ಯಾಲ್ಸಿಯಂ ಹಾಗೂ ಕಬ್ಬಿಣದ ಅಂಶಗಳು ದೇಹದ ಹಲವು ತೊಂದರೆಗಳನ್ನು ನಿವಾರಿಸಲು ಸಮರ್ಥವಾಗಿವೆ. ಅಲ್ಲದೇ ಇದರಲ್ಲಿರುವ ಗಂಧಕ ಹಲವು ಚಿಕ್ಕಪುಟ್ಟ ಸೋಂಕುಕಾರಕ ಕ್ರಿಮಿಗಳನ್ನು ಕೊಲ್ಲುವ ಶಕ್ತಿ ಹೊಂದಿದೆ. ಇದರ ಬ್ಯಾಕ್ಟೀರಿಯಾ ನಿವಾರಕ ಗುಣ, ವೈರಸ್ ನಿವಾರಕ ಗುಣ ಮತ್ತು ಅಂಟಿ ಆಕ್ಸಿಡೆಂಟುಗಳು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಉಪಹಾರಕ್ಕಿಂತ ಮುಂಚೆಯೇ ಬೆಳ್ಳುಳ್ಳಿ ಸೇವಿಸಿ, ಆರೋಗ್ಯವೃದ್ಧಿಸಿ!

ಈ ಗುಣಗಳು ದೇಹವನ್ನು ಹಲವು ರೀತಿಯಲ್ಲಿ ರಕ್ಷಿಸುತ್ತದೆ. ವಿಶೇಷವಾಗಿ ಇದರಲ್ಲಿರುವ ಆಲಿಸಿನ್ (allicin) ಎಂಬ ಪೋಷಕಾಂಶದ ಕಾರಣ ಇದು ಕೊಂಚ ಕಮಟು ವಾಸನೆಯನ್ನು ಹೊಂದಿದ್ದರೂ ಅಪಾರವಾದ ಆರೋಗ್ಯಕಾರಿ ಗುಣಗಳನ್ನು ಹೊಂದಿದೆ. ಮಧುಮೇಹವನ್ನು ಕಡಿಮೆಗೊಳಿಸುವುದು, ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ತಗ್ಗಿಸುವುದು, ಕಿವಿನೋವು ತಗ್ಗಿಸುವುದು, ಕರುಳಿನ ತೊಂದರೆಗಳನ್ನು ನಿವಾರಿಸುವುದು, ಶೀತ ಮೊದಲಾದ ವೈರಸ್ ಆಕ್ರಮಣದ ಪರಿಣಾಮದ ತೊಂದರೆಗಳನ್ನು ಕಡಿಮೆಗೊಳಿಸುವುದು ಮೊದಲಾದ ಪ್ರಯೋಜನಗಳಿವೆ.

ಆದ್ದರಿಂದ ಬೆಳ್ಳುಳ್ಳಿಯನ್ನು ನಿಮ್ಮ ನಿತ್ಯದ ಆಹಾರದಲ್ಲಿ ಹಸಿಯಾಗಿ ಅಥವಾ ಮಸಾಲೆಯ ರೂಪದಲ್ಲಿ ಸೇವಿಸುವುದು ಅಗತ್ಯವಾಗಿದೆ. ಬೆಳ್ಳುಳ್ಳಿ ಯಾವ ರೀತಿಯಲ್ಲಿ ನಮ್ಮ ಆರೋಗ್ಯವನ್ನು ವೃದ್ಧಿಸುತ್ತದೆ ಎಂಬುದನ್ನು ಕೆಳಗಿನ ಸ್ಲೈಡ್ ಶೋ ಮೂಲಕ ವಿವರಿಸಲಾಗಿದೆ:

ಅಸ್ತಮಾ ಕಡಿಮೆಗೊಳಿಸುತ್ತದೆ

ಅಸ್ತಮಾ ಕಡಿಮೆಗೊಳಿಸುತ್ತದೆ

ಅಸ್ತಮಾ ರೋಗಿಗಳಿಗೆ ಬೆಳ್ಳುಳ್ಳಿ ಒಂದು ಅತ್ಯುತ್ತಮ ಔಷಧಿಯಾಗಿದೆ. ಇದರ ಉತ್ತಮ ಪರಿಣಾಮ ಪಡೆಯಲು ಬೆಳ್ಳುಳ್ಳಿಯ ಕೆಲವು ಎಸಳುಗಳನ್ನು ಸಿಪ್ಪೆ ಸುಲಿದು ಹಸಿಯಾಗಿ ಪ್ರತಿದಿನ ಸೇವಿಸಬೇಕು. ಇದರಲ್ಲಿರುವ ವಿಟಮಿನ್ ಸಿ ಅಸ್ತಮಾ ರೋಗಕ್ಕೆ ಕಾರಣವಾದ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ಪ್ರಭಾವನ್ನು ನಿಃಶೇಷಗೊಳಿಸುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಅಸ್ತಮಾ ಕಡಿಮೆಗೊಳಿಸುತ್ತದೆ

ಅಸ್ತಮಾ ಕಡಿಮೆಗೊಳಿಸುತ್ತದೆ

ಈ ಕಣಗಳು ಶ್ವಾಸನಾಳಗಳನ್ನು ಕಿರಿದಾಗಿಸಿ ಶ್ವಾಸ ತೆಗೆದುಕೊಳ್ಳಲು ಕಷ್ಟಕರವಾಗುತ್ತದೆ.ಅಲ್ಲದೇ ದೇಹದಲ್ಲಿ histamine ಎಂಬ ರಸದೂತವನ್ನು ಹೆಚ್ಚು ಸ್ರವಿಸಿ ಅಸ್ತಮಾ ಪ್ರಭಾವವನ್ನು ಕಡಿಮೆಗೊಳಿಸುತ್ತದೆ.

ಮೂಳೆಗಳ ದೃಢತೆಯನ್ನು ಹೆಚ್ಚಿಸುತ್ತದೆ

ಮೂಳೆಗಳ ದೃಢತೆಯನ್ನು ಹೆಚ್ಚಿಸುತ್ತದೆ

ನಿತ್ಯವೂ ಬೆಳ್ಳುಳ್ಳಿಯನ್ನು ಸೇವಿಸುವ ಮೂಲಕ ಮಹಿಳೆಯರಲ್ಲಿ ಈಸ್ಟ್ರೋಜೆನ್ ರಸದೂತದ ಪ್ರಮಾಣವನ್ನು ಹೆಚ್ಚಿಸಿ ಮೂಳೆಗಳ ಸವೆತವನ್ನು ಕಡಿಮೆಗೊಳಿಸುತ್ತದೆ. ಒಂದು ಸಂಶೋಧನೆಯ ಪ್ರಕಾರ ಚೆನ್ನಾಗಿ ಬಲಿತ ಬೆಳ್ಳುಳ್ಳಿಯನ್ನು ಸೇವಿಸುವ ಮೂಲಕ ಮೂಳೆಗಳ ಸಾಂದ್ರತೆ ಹೆಚ್ಚುತ್ತದೆ. ಸಂಧಿವಾತ ಅಥವಾ atherosclerosis ಎಂಬ ತೊಂದರೆಯಿಂದ ಬಳಲುತ್ತಿರುವವರಿಗೆ ಬೆಳ್ಳುಳ್ಳಿ ಒಂದು ವರದಾನವಾಗಿದೆ.

ಹೃದಯವನ್ನು ರಕ್ಷಿಸುತ್ತದೆ

ಹೃದಯವನ್ನು ರಕ್ಷಿಸುತ್ತದೆ

ರಕ್ತದ ಸುಗಮ ಪರಿಚಲನೆಗೆ ರಕ್ತನಾಳಗಳ ಗೋಡೆಗಳು ಸಡಿಲವಾಗಿರುವುದು ಅವಶ್ಯ. ಹೃದಯದ ಒತ್ತಡದಿಂದ ಮುನ್ನುಗ್ಗುವ ರಕ್ತ ನರಗಳ ಒಳಗೆ ಧಾವಿಸುವಾಗ ಇವು ಕೊಂಚ ಹಿಗ್ಗಬೇಕು (ಈ ಹಿಗ್ಗುವಿಕೆ ಹೆಚ್ಚಿರುವ ಸ್ಥಳವನ್ನು ಮುಟ್ಟಿ ವೈದ್ಯರು ನಾಡಿಬಡಿತವನ್ನು ಪರೀಕ್ಷಿಸುತ್ತಾರೆ) ಆದರೆ ದೇಹದಲ್ಲಿರುವ ಫ್ರೀ ರ್‍ಯಾಡಿಕಲ್ ಎಂಬ ಕ್ಯಾನ್ಸರ್ ಕಾರಕ ಕಣಗಳು ನರಗಳ ಗೋಡೆಗಳನ್ನು ಪೆಡಸುಗೊಳಿಸುತ್ತದೆ. ಬೆಳ್ಳುಳ್ಳಿಯಲ್ಲಿರುವ ಗಂಧಕ ರಕ್ತನಾಳಗಳನ್ನು ಪೆಡಸಾಗದಂತೆ ತಡೆದು ಹೃದಯ ಕಡಿಮೆ ಒತ್ತಡದಲ್ಲಿ ರಕ್ತವನ್ನು ಪೂರೈಸಲು ನೆರವಾಗುತ್ತದೆ. ಇದು ಹೃದಯವನ್ನು ರಕ್ಷಿಸಲು ಸಾಧ್ಯವಾಗುತ್ತದೆ.

 ಶೀತ ಮತ್ತು ಗಂಟಲಬೇನೆಯಿಂದ ರಕ್ಷಿಸುತ್ತದೆ

ಶೀತ ಮತ್ತು ಗಂಟಲಬೇನೆಯಿಂದ ರಕ್ಷಿಸುತ್ತದೆ

ನಿತ್ಯವೂ ಬೆಳ್ಳುಳ್ಳಿಯನ್ನು ಹಸಿಯಾಗಿ ಸೇವಿಸುವ ಮೂಲಕ ಶೀತ ಮತ್ತಿತರ ವೈರಸ್ ಗಳ ಪರಿಣಾಮದ ತೊಂದರೆಗಳನ್ನು ಎದುರಿಸಲು ಸಾಧ್ಯವಾಗುತ್ತದೆ. ಇದರಲ್ಲಿರುವ ಬ್ಯಾಕ್ಟೀರಿಯಾನಿವಾರಕ ಗುಣ ಗಂಟಲ ಸೋಂಕನ್ನೂ ರಕ್ಷಿಸುತ್ತದೆ. ಅಲ್ಲದೇ ಮೂಗು ಮತ್ತು ಶ್ವಾಸನಾಳಗಳನ್ನು ಸೋಂಕಿನಿಂದ ರಕ್ಷಿಸುತ್ತದೆ. ಅಲ್ಲದೇ ಅಸ್ತಮಾದ ಉಗ್ರರೂಪವಾದ ಬ್ರಾಂಕೈಟಿಸ್ ನಿಂದಲೂ ರಕ್ಷಿಸುತ್ತದೆ.

ವಿವಿಧ ಅಲರ್ಜಿಗಳಿಂದ ರಕ್ಷಿಸುತ್ತದೆ

ವಿವಿಧ ಅಲರ್ಜಿಗಳಿಂದ ರಕ್ಷಿಸುತ್ತದೆ

ಇದರಲ್ಲಿರುವ ಸಂಧಿವಾತ ನಿವಾರಕ ಗುಣ ವಿವಿಧ ರೀತಿಯ ಅಲರ್ಜಿ ಮತ್ತು ಉರಿಯೂತಗಳಿಂದ ರಕ್ಷಿಸುತ್ತದೆ. ಸಾಮಾನ್ಯವಾಗಿ ಕೆಲವು ಕೀಟಗಳು ಕಚ್ಚಿದಾಗ ಅಥವಾ ಕೆಲವು ಆಹಾರಗಳನ್ನು ಸೇವಿಸಿದಾಗ ಅಲರ್ಜಿಯ ಕಾರಣ ಚರ್ಮ ಕೆಂಪಗಾಗಿ ಅನವರತ ತುರಿಕೆ ಉಂಟಾದರೆ ತಕ್ಷಣ ಬೆಳ್ಳುಳ್ಳಿಯನ್ನು ಅರೆದು ಹಿಂಡಿದ ರಸವನ್ನು ಹಸಿಯಾಗಿಯೇ ಕುಡಿಯುವ ಮೂಲಕ ತಕ್ಷಣ ತುರಿಕೆ ಪರಿಹಾರವಾಗುತ್ತದೆ.

English summary

Reasons To Include Garlic In your Diet

Garlic is a common ingredient that is used in many Indian cuisines. It is one of the oldest spices known to mankind. It adds flavour to the dishes. It also has immense medicinal properties associated with it. In this article, we at Boldsky will be listing out some of the reasons to include garlic in your diet. Read on to know more about it.
Story first published: Tuesday, January 19, 2016, 10:58 [IST]
X
Desktop Bottom Promotion