For Quick Alerts
ALLOW NOTIFICATIONS  
For Daily Alerts

ಒಣದ್ರಾಕ್ಷಿ ನೆನೆಸಿದ ನೀರು- ದೇಹದ ಲಿವರ್‌‌ನ ಆಯಸ್ಸು ನೂರು!

By Manu
|

ಒಣದ್ರಾಕ್ಷಿ ಎಂದರೆ ನಾವೆಲ್ಲರೂ ಸಿಹಿತಿಂಡಿಯ ಸೊಗಡು ಹೆಚ್ಚಿಸುವ ಪದಾರ್ಥವೆಂದೇ ಪರಿಗಣಿಸಿದ್ದೇವೆ. ಆದರೆ ಒಣದ್ರಾಕ್ಷಿಯನ್ನು ನೆನೆಸಿಟ್ಟ ನೀರು ಮಾತ್ರ ಆರೋಗ್ಯಕ್ಕೆ ತುಂಬಾ ಉತ್ತಮ. ಎಚ್ಚರ: ನಿಮ್ಮ ಲಿವರ್ ಕೂಡ ಅಪಾಯದಲ್ಲಿ ಸಿಲುಕಿರಬಹುದು!

ಅದರಲ್ಲೂ ವಿಶೇಷವಾಗಿ ಯಕೃತ್ತಿನ ಅಥವಾ ಲಿವರ್‌ನ ಆರೋಗ್ಯ ಈ ನೀರಿನ ನಿಯಮಿತ ಸೇವನೆಯಿಂದ ಉತ್ತಮಗೊಳ್ಳುತ್ತದೆ. ಯಕೃತ್‌ನ ಸ್ವಚ್ಛತೆಗೆ ಕೆಲವಾರು ವಿಧಾನಗಳಿವೆ. ಆದರೆ ಒಣದ್ರಾಕ್ಷಿ ನೆನೆಸಿದ ನೀರು ನೀಡುವಂತಹ ಪರಿಣಾಮವನ್ನು ಉಳಿದವು ನೀಡಲಾರವು. ಎಚ್ಚರ: ನಿಮ್ಮ ಲಿವರ್ ಕೂಡ ಅಪಾಯದಲ್ಲಿ ಸಿಲುಕಿರಬಹುದು!

ಈ ನೀರಿಗೆ ಒದಗಿರುವ ಔಷಧೀಯ ಪರಿಣಾಮಕ್ಕೆ ಒಣದ್ರಾಕ್ಷಿಯಲ್ಲಿರುವ ಪೋಷಕಾಂಶಗಳು ಕಾರಣ. ಈ ನೀರನ್ನು ಸೇವಿಸತೊಡಗಿದ ನಾಲ್ಕೇ ದಿನದಲ್ಲಿ ನಿಮ್ಮ ಜೀರ್ಣಕ್ರಿಯೆ ಉತ್ತಮಗೊಂಡಿರುವುದನ್ನು ಗಮನಿಸಬಹುದು. ಅಲ್ಲದೇ ದಿನದ ಚಟುವಟಿಕೆಗಳು ಹೆಚ್ಚು ಉಲ್ಲಾಸದಾಯಕವಾಗಿಯೂ ಇರುತ್ತದೆ. ಬನ್ನಿ, ಈ ಅದ್ಭುತ ಪೇಯವನ್ನು ತಯಾರಿಸುವುದು ಹೇಗೆ ಎಂಬುದನ್ನು ನೋಡೋಣ....

ಅಗತ್ಯವಿರುವ ಸಾಮಾಗ್ರಿಗಳು

ಅಗತ್ಯವಿರುವ ಸಾಮಾಗ್ರಿಗಳು

*ನೀರು ಎರಡು ಕಪ್

*ಒಣದ್ರಾಕ್ಷಿ ಒಂದಿಷ್ಟು (ಸುಮಾರು 8 ರಿಂದ 10ರಷ್ಟು ಸಾಕು)

ಒಣದ್ರಾಕ್ಷಿ ಹೀಗಿರಬೇಕು?

ಒಣದ್ರಾಕ್ಷಿ ಹೀಗಿರಬೇಕು?

ಇವು ತುಂಬಾ ಹೊಳಪುಳ್ಳದ್ದಾಗಿರಬಾರದು. ಅತಿ ಪ್ರಖರ ಬಣ್ಣದ್ದೂ ಆಗಿರಬಾರದು. ಏಕೆಂದರೆ ಈ ಹೊಳಪು ಬರಲಿಕ್ಕೆ ಕೆಲವರು ಕೃತಕ ರಾಸಾಯನಿಕಗಳನ್ನು ಬಳಸಿರಬಹುದು. ಆದರೆ ಗಾಢ ಕಂಡು ಬಣ್ಣಕ್ಕಿದ್ದು ಹೊಳಪು ಇಲ್ಲದೇ ಸಾಕಷ್ಟು ಸಂಕುಚಿತವಾಗಿರುವ ಒಣದ್ರಾಕ್ಷಿ ಉತ್ತಮ. ಇವು ಅತಿ ಗಟ್ಟಿಯಾಗಿಯೂ ಇರಬಾರದು, ತೀರಾ ಮೃದುವಾಗಿಯೂ ಇರಬಾರದು. ಅಷ್ಟೇ ಅಲ್ಲ, ಇದರಲ್ಲಿ ಮಣ್ಣು, ಮರಳು, ಧೂಳು ಮೊದಲಾದವು ಇಲ್ಲವೆಂದೂ ಖಚಿತಪಡಿಸಿಕೊಳ್ಳಿ.

ತಯಾರಿಸುವ ವಿಧಾನ

ತಯಾರಿಸುವ ವಿಧಾನ

ಮೊದಲಿಗೆ ಒಣದ್ರಾಕ್ಷಿಯನ್ನು ಚೆನ್ನಾಗಿ ತೊಳೆದು ನೀರು ಬಸಿದು ಬದಿಯಲ್ಲಿಡಿ

ತಯಾರಿಸುವ ವಿಧಾನ

ತಯಾರಿಸುವ ವಿಧಾನ

ಒಂದು ಚಿಕ್ಕ ಪಾತ್ರೆಯಲ್ಲಿ ನೀರನ್ನು ಹಾಕಿ ಬಿಸಿಮಾಡಿ. ನೀರು ಕುದಿಯಲು ಪ್ರಾರಂಭವಾಗುತ್ತಿದ್ದಂತೆಯೇ ಒಣದ್ರಾಕ್ಷಿಯನ್ನು ಹಾಕಿ ಉರಿ ಚಿಕ್ಕದಾಗಿಸಿ.

ಇಪ್ಪತ್ತು ನಿಮಿಷ ಕುದಿಸಿ....

ಇಪ್ಪತ್ತು ನಿಮಿಷ ಕುದಿಸಿ....

ಈ ನೀರನ್ನು ಸುಮಾರು ಇಪ್ಪತ್ತು ನಿಮಿಷ ಕುದಿಯಲು ಬಿಡಿ. ಬಳಿಕ ಉರಿ ಆರಿಸಿ ಇಡಿಯ ರಾತ್ರಿ ಹಾಗೇ ಬಿಡಿ.

ಮರುದಿನ ಬೆಳಿಗ್ಗೆ...

ಮರುದಿನ ಬೆಳಿಗ್ಗೆ...

ಮರುದಿನ ಬೆಳಿಗ್ಗೆ ಈ ನೀರನ್ನು ಸೋಸಿ ಲೋಟದಲ್ಲಿ ಸಂಗ್ರಹಿಸಿ. ಈ ನೀರನ್ನು ಮತ್ತೊಮ್ಮೆ ಉಗುರುಬೆಚ್ಚಗಾಗುವವರೆಗೆ ಬಿಸಿಮಾಡಿ.

ಖಾಲಿ ಹೊಟ್ಟೆಯಲ್ಲಿ ಸೇವಿಸಿ

ಖಾಲಿ ಹೊಟ್ಟೆಯಲ್ಲಿ ಸೇವಿಸಿ

ಮಗೆ ಇಷ್ಟವಾಗುವಷ್ಟು ಬಿಸಿಯಾಗಿ ಅಥವಾ ಉಗುರುಬೆಚ್ಚನೆ ಇರುವಂತೆಯೇ ಬೆಳಗ್ಗಿನ ಪ್ರಥಮ ಆಹಾರವಾಗಿ ಖಾಲಿ ಹೊಟ್ಟೆಯಲ್ಲಿ ಸೇವಿಸಿ.

ಸ್ವಲ್ಪ ಹೊತ್ತು ಏನೂ ಸೇವಿಸಬೇಡಿ....

ಸ್ವಲ್ಪ ಹೊತ್ತು ಏನೂ ಸೇವಿಸಬೇಡಿ....

ಬಳಿಕ ಸುಮಾರು ಮೂವತ್ತರಿಂದ ಮೂವತ್ತೈದು ನಿಮಿಷಗಳ ಕಾಲ ಏನನ್ನೂ ಸೇವಿಸಬೇಡಿ. ಬಳಿಕ ನಿಮ್ಮ ನಿತ್ಯದ ಉಪಾಹಾರ ಸೇವಿಸಿ.

ಎರಡು ತಿಂಗಳ ಬಳಿಕ....

ಎರಡು ತಿಂಗಳ ಬಳಿಕ....

ಈ ವಿಧಾನವನ್ನು ಕೆಲವಾರು ದಿನಗಳಾದರೂ ಸತತವಾಗಿ ಮಾಡಬೇಕು. ಕನಿಷ್ಠ ನಾಲ್ಕು ದಿನಗಳಾದರೂ ಸರಿ. ಸುಮಾರು ಎರಡು ತಿಂಗಳ ಬಳಿಕ ನಿಮ್ಮ ಆರೋಗ್ಯದಲ್ಲಿ, ವಿಶೇಷವಾಗಿ ಯಕೃತ್‌ಗಳಲ್ಲಿ ಉತ್ತಮ ಪ್ರಗತಿಯಾಗಿರುವುದನ್ನು ಕಾಣಬಹುದು.

ಸೂಚನೆ:

ಸೂಚನೆ:

*ಯಾವುದಕ್ಕೂ ಈ ಮನೆಮದ್ದನ್ನು ಪ್ರಯತ್ನಿಸುವ ಮೊದಲು ನಿಮ್ಮ ಫ್ಯಾಮಿಲಿ ವೈದ್ಯರ ಸಲಹೆ ಪಡೆದುಕೊಳ್ಳಿ

*ಸಾಧ್ಯವಾದಷ್ಟು ನೈಸರ್ಗಿಕ ವಿಧಾನದಲ್ಲಿ ಬೆಳೆದ, ರಾಸಾಯನಿಕಗಳು ಇಲ್ಲದ ದ್ರಾಕ್ಷಿಯನ್ನೇ ಕೊಳ್ಳಿ. ಒಂದು ವೇಳೆ ಸಾವಯವ ವಿಧಾನದಲ್ಲಿ ಬೆಳೆದಿದ್ದರೆ ಇನ್ನೂ ಉತ್ತಮ.

English summary

Raisin Water for a Liver Cleanse

Have you ever heard about the benefits of raisin water? It’s amazing and an excellent addition to your diet, especially for promoting good liver health.
X
Desktop Bottom Promotion