For Quick Alerts
ALLOW NOTIFICATIONS  
For Daily Alerts

ಬೆನ್ನೇರಿ ಕಾಡುವ ಕುತ್ತಿಗೆ ನೋವಿಗೆ ಸರಳ ಟಿಪ್ಸ್

By CM Prasad
|

ಇತ್ತೀಚೆಗೆ ಅಗಾಧವಾಗಿ ಬೆಳೆಯುತ್ತಿರುವ ತಂತ್ರಜ್ಞಾನ ಯುಗದಲ್ಲಿ ತಂತ್ರಜ್ಞಾನ ಸಂಬಂಧಿತ ಉತ್ಪನ್ನಗಳನ್ನು ಹೆಚ್ಚೆಚ್ಚು ಜನ ಬಳಸಲು ಪ್ರಾರಂಭಿಸಿದ್ದಾರೆ. ಇದಕ್ಕೆ ಸರ್ಕಾರಗಳೂ ಸಹ ಬೆಂಬಲ ನೀಡುತ್ತಿವೆ. ಹೌದು! ಲ್ಯಾಪ್ ಟಾಪ್ ಮತ್ತು ಮೊಬೈಲ್ ಫೋನ್ ಗಳ ಬಳಕೆ ಗಣನೀಯವಾಗಿ ಏರಿಕೆ ಕಂಡಿದೆ. ಹೀಗಾಗಿ ಈ ರೀತಿಯ ಉತ್ಪನ್ನಗಳನ್ನು ಹೆಚ್ಚು ಗಂಟೆಗಳ ಕಾಲ ಉಪಯೋಗಿಸಿದಲ್ಲಿ ದೈಹಿಕ ತೊಂದರೆಗಳು ಬರುವುದು ಸಾಮಾನ್ಯ ಸಂಗತಿ. ಅದರಲ್ಲೂ ಕತ್ತು ನೋವು ಸಾಮಾನ್ಯವಾಗಿ ಎಲ್ಲರನ್ನೂ ಕಾಡುತ್ತಿದೆ. ಹೀಗಾಗಿ ಕತ್ತು ನೋವನ್ನು ನಿವಾರಿಸಲು ತಜ್ಞರು ಸೂಚಿಸಿರುವ ಮಾರ್ಗದರ್ಶನಗಳ ಕೆಲ ಸರಳ ದೈಹಿಕ ಅಭ್ಯಾಸಗಳನ್ನು ನಿಮಗಾಗಿ ನಾವು ನೀಡುತ್ತಿದ್ದೇವೆ. ಮುಂದೆ ಓದಿ...

Quick office stretches to soothe neck pain

ಕತ್ತನ್ನು ಎಡ ಅಥವಾ ಬಲ ಭಾಗಕ್ಕೆ ಚಾಚಿ
ಕುರ್ಚಿಯ ಮೇಲೆ ಆರಾಮವಾಗಿ ಕುಳಿತು ನಿಮ್ಮ ಎಡಗೈಯನ್ನು ತೊಡೆಯ ಮೇಲೆ ಇಟ್ಟುಕೊಳ್ಳಿ. ಈಗ ನಿಮ್ಮ ಬಲಗೈಯನ್ನು ನಿಮ್ಮ ಎಡ ಭಾಗದ ತಲೆಗೆ ಚಾಚಿ. ನಿಮ್ಮ ತಲೆಯನ್ನು ಬಲಭುಜಕ್ಕೆ ವಾಲಿಸಿ. ಈ ಪ್ರಕ್ರಿಯೆಯನ್ನು ಹಾಗೆಯೇ ಇನ್ನೊಂದು ಕಡೆ ಮಾಡುವಂತೆ ಪ್ರಯತ್ನಿಸಿ. ಈ ಪ್ರಕ್ರಿಯೆಯಿಂದ ನಿಮ್ಮ ಕತ್ತಿನ ಭಾಗದ ಮತ್ತು ಭುಜಗಳ ನೋವಿನ ಒತ್ತಡ ದೂರವಾಗಿ ಹಿತವನ್ನು ನೀಡುತ್ತದೆ. ಇನ್ನೊಂದು ವಿಧಾನವೆಂದರೆ, ನಿಮ್ಮ ಎರಡೂ ಕೈಗಳನ್ನು ಗಟ್ಟಿಯಾಗಿ ಮುಷ್ಠಿಗೊಳಿಸಿ ಚಾಚಿಕೊಂಡು ನಿಂತುಕೊಳ್ಳಿ ಅಥವಾ ಕುರ್ಚಿಯ ಮೇಲೆ ಕುಳಿತುಕೊಳ್ಳಿ. ಈ ಮುಷ್ಠಿಯನ್ನು ತಲೆಯ ಹಿಂಭಾಗಕ್ಕೆ ಚಾಚಿ ಮತ್ತು ಮುಂಗಾಲಿನವರೆಗೆ ಚಾಚಿಕೊಳ್ಳಿ. ಇನ್ನು ಮುಖವನ್ನು ಎದೆಯ ಭಾಗಕ್ಕೆ ಚಾಚಿ ಸ್ವಲ್ಪ ಉಸಿರಾಡಿ. ಈ ಪ್ರಕ್ರಿಯೆಯು ನಿಮ್ಮ ಕತ್ತಿನ ನೋವನ್ನು ಶಮನಗೊಳಿಸಲು ನೆರವಾಗುತ್ತದೆ. ಕುತ್ತಿಗೆ ನೋವಿಂದ ಮುಕ್ತಿ ಪಡೆಯಲು ಹೀಗೆ ಮಾಡಿ

ಮುಖವನ್ನು ಮೇಲ್ಭಾಗಕ್ಕೆ ಚಾಚಿ
ನಿಮ್ಮ ಎರಡೂ ಕೈಗಳನ್ನು ಮುಷ್ಟಿಗೊಳಿಸಿ ಎಡ ಮೊಣಕೈ ಭಾಗಕ್ಕೆ ಚಾಚಿಕೊಳ್ಳಿ. ನಿಮ್ಮ ಎಡಗೈ ಮೇಲಿರುವಂತೆ ನೋಡಿಕೊಳ್ಳಿ. ಕೆಲಹೊತ್ತು ನಿಮ್ಮ ಉಸಿರನ್ನು ಬಿಗಿಹಿಡಿಯಿರಿ. ನಂತರ ಈ ಪ್ರಕ್ರಿಯೆಯನ್ನು ಎಡ ಭಾಗಕ್ಕೆ ಮುಂದುವರೆಸಿ. ಈ ರೀತಿಯ ಚಾಚುವಿಕೆಯಿಂದ ನಿಮ್ಮ ಎರಡೂ ಕಡೆಯ ಕತ್ತಿನ ಭಾಗಕ್ಕೆ ಹಿತವಾದ ಅನುಭವ ನೀಡಿ ನಿಮ್ಮ ಕತ್ತಿನ, ಬೆನ್ನಿನ ಮೇಲ್ಭಾಗ, ಭುಜಗಳು ಮತ್ತು ಎದೆಯ ಭಾಗದ ನೋವಿನ ಒತ್ತಡವನ್ನು ಶಮನಗೊಳಿಸಿಕೊಳ್ಳಿ.

ಇನ್ನು ಹಸುವಿನ ರೀತಿಯ ವ್ಯಾಯಾಮದ ಅಭ್ಯಾಸಕ್ಕಾಗಿ, ಮೊಣಕಾಲೂರಿ ಕುಳಿತುಕೊಳ್ಳಿ ನಿಮ್ಮ ಬಲಗೈಯನ್ನು ನೆಲದ ಮೇಲೆ ತಾಕುವಂತೆ ನಿಮ್ಮ ಮೊಣಕೈಯನ್ನು ಚಾಚಿಕೊಳ್ಳಿ. ನಿಮ್ಮ ಬಲಗೈ ನಿಮ್ಮ ಭುಜ ಮತ್ತು ಬೆನ್ನಿನ ಭಾಗದಲ್ಲಿ ಇರುವಂತೆ ನೋಡಿಕೊಳ್ಳಬಹುದು. ಈಗ ನಿಮ್ಮ ಎಡಗೈಯನ್ನು ಬೆನ್ನಿನ ಹಿಂಭಾಗಕ್ಕೆ ಚಾಚಿ ಎರಡೂ ಕೈಗಳಿಂದ ಮುಷ್ಟಿ ಮಾಡಿಕೊಳ್ಳಿ.

ಇನ್ನು ಕೆಲಹೊತ್ತು ನಿಮ್ಮ ಉಸಿರನ್ನು ಬಿಗಿಹಿಡಿಯಿರಿ. ಈ ಪ್ರಕ್ರಿಯೆಯನ್ನು ಇನ್ನೊಂದು ಕಡೆಯಲ್ಲಿಯೂ ಅನುಸರಿಸಿ. ಈ ಪ್ರಕ್ರಿಯೆಯಿಂದ ನಿಮ್ಮ ಕತ್ತಿನ ಮೇಲ್ಭಾಗ ಮತ್ತು ಹಿಂಭಾಗದ ನೋವು ತಕ್ಷಣವೇ ನಿವಾರಣೆಯಾಗುತ್ತದೆ. ಮುಂಭಾಗ ಭುಜಗಳನ್ನು ತೋರಿಸಿಕೊಂಡು ವಾಲಿಸಿಕೊಳ್ಳಲು, ಮೊದಲು ದೃಢವಾಗಿ ನೇರವಾಗಿ ನಿಂತುಕೊಳ್ಳಿ ನಂತರ ನಿಮ್ಮ ಎರಡೂ ಕೈಗಳಿಂದ ಮುಷ್ಟಿಗೊಳಿಸಿಕೊಂಡು ನಿಮ್ಮ ಹಿಂಭಾಗಕ್ಕೆ ಚಾಚಿಕೊಳ್ಳಿ. ಈಗ ಮುಂಭಾಗಕ್ಕೆ ವಾಲಿಕೊಂಡು ನಿಮ್ಮ ಮುಖವು ಮೊಣಕಾಲನ್ನು ತಾಗುವಂತೆ ಮಾಡಿ. ತದನಂತರ ನಿಮ್ಮ ಮುಷ್ಟಿಯನ್ನು ಮೇಲಕ್ಕೆತ್ತಿ. ಈ ರೀತಿಯ ಮುಂಭಾಗದ ದೈಹಿಕ ಅಭ್ಯಾಸದಿಂದ ನಿಮ್ಮ ಕೈಗಳು, ಕತ್ತಿನ ಭಾಗ ಮತ್ತು ಭುಜಗಳ ನೋವು ನಿವಾರಣೆಯಾಗುತ್ತದೆ.

English summary

Quick office stretches to soothe neck pain

Staring at laptop screens and phones and slumping into poor posture at your desks can all contribute to tension in the neck. Fortunately, a few stretches can go a long way in soothing your neck pain. Hold each of these stretches, recommended by expert five breaths and make sure to observe your breath.
Story first published: Friday, January 8, 2016, 17:22 [IST]
X
Desktop Bottom Promotion