ಫುಡ್ ಪಾಯಿಸನ್‌ ಆಗಿ ಹೊಟ್ಟೆ ಕೆಟ್ಟಿದೆಯೇ? ಇನ್ನು ಚಿಂತೆ ಬಿಡಿ

ಫುಡ್ ಪಾಯಿಸನ್‌ನಿಂದಾಗಿ ಹೊಟ್ಟೆ ಕೆಟ್ಟಿದೆಯೇ? ಹೊಟ್ಟೆನೋವು, ವಾಕರಿಕೆ, ವಾಂತಿ ಮೊದಲಾದವು ರಾತ್ರಿಯೆಲ್ಲಾ ಕಾಡಿ ಬೆಳಿಗ್ಗೆ ವಿಪರೀತ ಸುಸ್ತಾಗಿದೆಯೇ? ಹಾಗಾದರೆ ಇಲ್ಲಿದೆ ನೋಡಿ ಮನೆಮದ್ದು

By: manu
Subscribe to Boldsky

ನಿನ್ನೆ ರಾತ್ರಿ ಯಾವುದೋ ರಸ್ತೆ ಬದಿಯ ತಿಂಡಿ ತಿಂದೋ, ಅಥವಾ ಇನ್ಯಾವುದೋ ಪದಾರ್ಥವಿರುವ ಆಹಾರ ತಿಂದ ಕಾರಣ ಇಂದು ನಿಮ್ಮ ಹೊಟ್ಟೆ ಕೆಟ್ಟಿದೆಯೇ? ಹೊಟ್ಟೆನೋವು, ವಾಕರಿಕೆ, ವಾಂತಿ ಮೊದಲಾದವು ರಾತ್ರಿ ಕಾಡಿ ಬೆಳಿಗ್ಗೆ ವಿಪರೀತ ಸುಸ್ತಾಗಿದೆಯೇ?  ಹಾಗಾದರೆ ಮೊದಲು ವೈದ್ಯರ ಬಳಿ ಹೋಗುವುದೇ ಉತ್ತಮ ಮಾರ್ಗ. ಸತಾಯಿಸುವ 'ಹೊಟ್ಟೆ ನೋವಿಗೆ', ಇಲ್ಲಿದೆ ಸಿಂಪಲ್ ಮನೆಮದ್ದು

ಆದರೆ ವೈದ್ಯರ ಬಳಿ ತಲುಪಿ ಅವರ ಸಮಯ ಪಡೆದು ಔಷಧಿ ತೆಗೆದುಕೊಳ್ಳುವವರೆಗೂ ಇಂತಹ ವಿಷಾಹಾರದ (ಹೊಟ್ಟೆ ಹಾಳಾಗುವುದು- food poison) ಅಥವಾ ಆಹಾರ ನಂಜುವಿನ ಪರಿಣಾಮಗಳನ್ನು ಅನುಭವಿಸುತ್ತಲೇ ಇರಬೇಕು. ಹೊಟ್ಟೆ ಉಬ್ಬರಕ್ಕೆ ತಕ್ಷಣದ ಪರಿಹಾರ 

ಇದಕ್ಕೆ ಒಂದು ಸುಲಭ ಪರಿಹಾರವಿದೆ, ಅದೂ ನಿಮ್ಮ ಅಡುಗೆ ಮನೆಯಲ್ಲಿಯೇ, ಸುಲಭ ಸಾಮಾಗ್ರಿಗಳಿಂದಲೇ! ಬನ್ನಿ, ಇವು ಯಾವುವು, ಇವನ್ನು ಹೇಗೆ ಸೇವಿಸಬೇಕು ಎಂಬುದನ್ನು ಮುಂದೆ ಓದಿ.... 

ಹಸಿಶುಂಠಿ

ಒಂದು ಚಿಕ್ಕ ತುಂಡು ಹಸಿಶುಂಠಿಯನ್ನು ನುಣ್ಣಗೆ ಅರೆದು ಒಂದು ಲೋಟ ಕುದಿಯುವ ನೀರಿಗೆ ಹಾಕಿ ಸುಮಾರು ಒಂದೆರಡು ನಿಮಿಷ ಕುದಿಸಿ ಬಳಿಕ ಉರಿ ಆರಿಸಿ. ಇಷ್ಟು ಸಮಯ ಅಥವಾ ವ್ಯವಧಾನವಿಲ್ಲವೆಂದಿದ್ದರೆ ಹಸಿಶುಂಠಿಯ ಸಿದ್ಧರೂಪದ ರಸವನ್ನೂ ಬೆರೆಸಬಹುದು. ಬೆಕ್ಕಸ ಬೆರಗಾಗಿಸುವ ಹಸಿ ಶುಂಠಿಯ ಕಾರುಬಾರು...!

ಹಸಿಶುಂಠಿ

ಈ ನೀರಿಗೆ ಒಂದು ಚಿಕ್ಕ ಚಮಚ ಜೇನು ಸೇರಿಸಿ ಉಗುರುಬೆಚ್ಚಗಿರುವಂತೆಯೇ ಕುಡಿಯಿರಿ. ಇದರಿಂದ ಶೀಘ್ರವಾಗಿ ವಿಷಾಹಾರದ ಪ್ರಭಾವ ಕಡಿಮೆಯಾಗುತ್ತದೆ.

ಲಿಂಬೆ ಹಣ್ಣಿನ ರಸ

ಲಿಂಬೆಹಣ್ಣಿನಲ್ಲಿರುವ ಉರಿಯೂತ ನಿವಾರಕ, ವೈರಸ್ ನಿವಾರಕ ಮತ್ತು ಬ್ಯಾಕ್ಟೀರಿಯಾ ನಿವಾರಕ ಗುಣ ವಿಷಾಹಾರದ ಪ್ರಭಾವವನ್ನೂ ಕಡಿಮೆಗೊಳಿಸಲು ನೆರವಾಗುತ್ತದೆ. ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಎರಡು ಚಿಕ್ಕ ಚಮಚ ಲಿಂಬೆರಸ ಮತ್ತು ಕೊಂಚವೇ ಕಲ್ಲುಸಕ್ಕರೆ ಬೆರೆಸಿ ಕರಗಿದ ತಕ್ಷಣ ಕುಡಿಯಿರಿ. ಉತ್ತಮ ಪರಿಣಾಮಕ್ಕಾಗಿ ದಿನಕ್ಕೆ ಎರಡು ಲೋಟ ಕುಡಿಯಿರಿ.  ಲಿಂಬೆ ಹಣ್ಣು- ಹುಳಿಯಾದರೂ, ಆರೋಗ್ಯಕ್ಕೆ ಸಿಹಿ!

ಜೇನು

ಜೇನು ಒಂದು ಅತ್ಯುತ್ತಮವಾದ ಬ್ಯಾಕ್ಟೀರಿಯಾನಿವಾರಕವಾಗಿದೆ. ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಒಂದು ಚಿಕ್ಕಚಮದ ಜೇನು ಬೆರೆಸಿ ದಿನದಲ್ಲಿ ಮೂರು ಬಾರಿ ಕುಡಿದರೆ ವಿಷಾಹಾರದ ಪ್ರಭಾವ ಕಡಿಮೆಯಾಗುತ್ತದೆ. ವಿಶೇಷವಾಗಿ ಹೊಟ್ಟೆಯಲ್ಲಿ ಉರಿ ಹೆಚ್ಚಾಗಿದ್ದು ಹುಳಿತೇಗು ಆವರಿಸಿದ್ದರೆ ಈ ವಿಧಾನ ಅತ್ಯುತ್ತಮವಾದ ಪರಿಹಾರ ಒದಗಿಸುತ್ತದೆ.  

ಜೀರಿಗೆ

ಒಂದು ಲೋಟ ನೀರನ್ನು ಒಂದು ಪಾತ್ರೆಯಲ್ಲಿ ಬಿಸಿಮಾಡಿ. ನೀರು ಕುದಿಯಲು ಪ್ರಾರಂಭವಾಗುತ್ತಿದ್ದಂತೆಯೇ ಒಂದು ಚಿಕ್ಕ ಚಮಚ ಜೀರಿಗೆ ಬೆರೆಸಿ ಸುಮಾರು ನಾಲ್ಕರಿಂದ ಐದು ನಿಮಿಷ ಕುದಿಸಿ ಬಳಿಕ ಉರಿ ಆರಿಸಿ ತಣಿಯಲು ಬಿಡಿ. ಈ ನೀರು ಉಗುರುಬೆಚ್ಚಗಾದ ಬಳಿಕ ಸೋಸಿ ಒಂದು ಲೋಟದಲ್ಲಿ ಸಂಗ್ರಹಿಸಿ ಕುಡಿಯಿರಿ. ಇದರಿಂದ ವಿಷಾಹಾರದ ಪ್ರಭಾವ ತಕ್ಷಣ ಕಡಿಮೆಯಾಗುತ್ತದೆ.  ಮನೆ ಮದ್ದು ಜೀರಿಗೆಯ ಚಿಕಿತ್ಸಾತ್ಮಕ ಪ್ರಯೋಜನಗಳೇನು?

ಬೆಳ್ಳುಳ್ಳಿ

ಬೆಳ್ಳುಳ್ಳಿಯಲ್ಲಿಯೂ ವೈರಸ್ ನಿವಾರಕ ಹಾಗೂ ಬ್ಯಾಕ್ಟೀರಿಯಾ ನಿವಾರಕ ಗುಣಗಳಿವೆ. ಹೊಟ್ಟೆ ಕೆಟ್ಟಿದ್ದರೆ ಬೆಳ್ಳುಳ್ಳಿಯ ಕೆಲವು ಎಸಳುಗಳನ್ನು ಹಸಿಯಾಗಿ ಜಗಿದು ನುಂಗುವ ಮೂಲಕ ಹೊಟ್ಟೆನೋವು ಮತ್ತು ಅಜೀರ್ಣ ಕಡಿಮೆಯಾಗುತ್ತದೆ. (ಯಾವುದಕ್ಕೂ ಮೊದಲು ವೈದ್ಯರ ಸಲಹೆ ಪಡೆದುಕೊಳ್ಳಿ) ದಿಂಬಿನಡಿ ಬೆಳ್ಳುಳ್ಳಿ ಇಟ್ಟು ಮಲಗಿದರೆ, ಆರೋಗ್ಯಕ್ಕೆ ದುಪ್ಪಟ್ಟು ಲಾಭ!

ಮೆಂತೆ

ಒಂದು ದೊಡ್ಡಚಮಚ ಮೊಸರಿನಲ್ಲಿ ಒಂದು ಚಿಕ್ಕಚಮಚ ಮೆಂತೆ ಬೆರೆಸಿ. ಕೊಂಚ ಮೆತ್ತಗಾದ ಬಳಿಕ ಬಾಯಿಗೆ ಹಾಕಿಕೊಂಡು ಜಗಿದು ನುಂಗಿ. ಮೆಂತೆಯಲ್ಲಿರುವ ಬ್ಯಾಕ್ಟೀರಿಯಾ ನಿವಾರಕ ಮತ್ತು ಸೂಕ್ಷ್ಮಾಣುನಿವಾರಕ ಗುಣ ಹೊಟ್ಟೆಯಲ್ಲಿನ ಆಮ್ಲೀಯತೆಯನ್ನು ಕಡಿಮೆಮಾಡಿ ಹೊಟ್ಟೆನೋವನ್ನು ಕಡಿಮೆ ಮಾಡುತ್ತದೆ. ಅಡುಗೆಮನೆಯ ಮೆಂತೆ- ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು!

ತುಳಸಿ

ತುಳಸಿ ಎಲೆಗಳಲ್ಲಿರುವ ಸೂಕ್ಷ್ಮಾಣುಜೀವಿ ನಿವಾರಕ ಗುಣ ವಿಷಾಹಾರದ ಕಾರಣ ಹೊಟ್ಟೆಯಲ್ಲಿ ಬೀಡುಬಿಟ್ಟಿದ್ದ ಬ್ಯಾಕ್ಟೀರಿಯಾಗಳನ್ನು ಕೊಂದು ವಿಷಾಹಾರದ ಪ್ರಭಾವವನ್ನು ಕಡಿಮೆಮಾಡಲು ನೆರವಾಗುತ್ತದೆ. ಆರೋಗ್ಯ ರಕ್ಷಕ- ತುಳಸಿ ಎಲೆಯ ವೈಶಿಷ್ಟ್ಯ ಒಂದೇ, ಎರಡೇ?

ತುಳಸಿ

ಇದಕ್ಕಾಗಿ ಕೆಲವು ತುಳಸಿ ಎಲೆಗಳನ್ನು ನಯವಾಗಿ ಅರೆದು ಇದರ ರಸವನ್ನು ಹಿಂಡಿ ಸಂಗ್ರಹಿಸಿ. ಒಂದು ಚಿಕ್ಕಚಮಚ ಜೇನಿನಲ್ಲಿ ಕೆಲವು ಹನಿ ತುಳಸಿ ರಸವನ್ನು ಬೆರೆಸಿ ಕುಡಿಯುರಿ. ಪ್ರತಿ ಮೂರರಿಂದ ಆರು ಗಂಟೆಗಳ ಅವಧಿಯಲ್ಲಿ ಒಂದು ಬಾರಿಯಂತೆ ಹೊಟ್ಟೆನೋವಿನ ಪ್ರಭಾವವನ್ನು ಅನುಸರಿಸಿ ಸೇವಿಸಿ.

 

ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

Story first published: Monday, October 24, 2016, 23:14 [IST]
English summary

Quick Kitchen Ingredients To Treat Food Poisoning

There are a few kitchen ingredients which are readily available at your home that help in treating food poisoning. You need not wait for long to get to a hospital or a medical clinic nearby for the treatment. All you need to do is just grab these home remedies and get relief from the symptoms. Here is a list of kitchen ingredients which help to treat food poisoning efficiently. Take a look.
Please Wait while comments are loading...
Subscribe Newsletter