For Quick Alerts
ALLOW NOTIFICATIONS  
For Daily Alerts

ಪ್ರೋಟೀನ್‌ಯುಕ್ತ ಆಹಾರಗಳ ಹಿಂದಿರುವ ಸತ್ಯ–ಮಿಥ್ಯ

By Vani Naik
|

ದಿನ ನಿತ್ಯದ ಆಹಾರ ಸೇವನೆಯ ಪದ್ಧತಿಯಲ್ಲಿ ಪ್ರೋಟೀನ್ ಬಳಕೆ ಬಹಳ ಅವಶ್ಯಕ. ಏಕೆಂದರೆ, ಇದು ಸ್ನಾಯುಗಳ ಆರೋಗ್ಯವನ್ನು ಕಾಪಾಡುತ್ತದೆ. ಸ್ನಾಯುಗಳ ಬೆಳವಣಿಗೆ, ಮರಳಿಪಡೆಯುವಿಕೆಗೆ ಇದು ಬಹಳ ಸಹಾಯಕಾರಿ. ಪ್ರೋಟೀನ್ ಸೇವಿಸಿದರೆ ಬಹಳ ಸಮಯದವರೆಗೆ ಹೊಟ್ಟೆಯು ತುಂಬಿದಂತಿರುತ್ತದೆ. ಆದರೆ ಕೇವಲ ಪ್ರೋಟೀನ್‌ನ ಬಳಕೆಯಷ್ಟನ್ನೇ ಶಿಫಾರಸ್ಸು ಮಾಡಲಾಗುವುದಿಲ್ಲ.

ಸಾಮಾನ್ಯವಾಗಿ ಜನರು, ಸದೃಢವಾದ ಸ್ನಾಯುಗಳನ್ನು ಪಡೆಯಲು ಕೇವಲ ಪ್ರೋಟೀನ್ ನ ಸೇವನೆಯಷ್ಟೇ ಸಾಕು ಎಂದು ತಿಳಿದಿರುತ್ತಾರೆ. ಆದರೆ, ಇದು ನಿಜವಲ್ಲ. ಸದೃಢವಾದ ಸ್ನಾಯುಗಳನ್ನು ಪಡೆಯಲು ದಿನನಿತ್ಯದ ವ್ಯಾಯಾಮವೂ ಅಷ್ಟೇ ಮುಖ್ಯ. ನಾವು ಬಳಸುವ ಪ್ರೋಟೀನ್ಗಳಲ್ಲಿ ಅಮೀನೊ ಆಸಿಡ್ ಇರಲೇಬೇಕಾಗುತ್ತದೆ. ಇದು ಸ್ನಾಯುಗಳ ಬೆಳವಣಿಗೆಗೆ ಮತ್ತು ಅವುಗಳ ರಿಪೇರಿಗೆ ಹೆಚ್ಚು ಅವಶ್ಯಕವಾಗಿರುತ್ತದೆ. ಲವಲವಿಕೆಯ ಜೀವನ ಶೈಲಿಗೆ ಪ್ರೋಟೀನ್‌ಯುಕ್ತ ಆಹಾರಗಳು...

ಪ್ರೋಟೀನ್ ದೊರೆಯುವ ಎಲ್ಲಾ ಆಹಾರ ಮೂಲಗಳಲ್ಲಿಯೂ ಅಮೀನೊ ಆಸಿಡ್‌ಗಳು ಇರುವುದಿಲ್ಲ. ಪ್ರಾಣಿ ಹಾಗು ಸಸ್ಯ ಆಹಾರಗಳ ಮೂಲಕ ದೊರೆಯುವ ಪ್ರೋಟೀನ್‌ಗಳಲ್ಲಿ ಸಾಕಷ್ಟು ವ್ಯೆತ್ಯಾಸವಿರುತ್ತದೆ. ಮಾಂಸ, ಮೀನು, ಮೊಟ್ಟೆ ಹಾಗು ಹಾಲು ಉತ್ಪನ್ನಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅಮೀನೊ ಆಸಿಡ್ ಇರುತ್ತದೆ.

ಆದರೆ ಸಸ್ಯಗಳ ಮೂಲದಿಂದ ದೊರೆಯುವ ಆಹಾರದಲ್ಲಿ ಅಮೀನೊ ಆಸಿಡ್ ಇರುವುದಿಲ್ಲ. ಕೆಲವು ಸಸ್ಯಾಹಾರದ ಮೂಲದಿಂದ ದೊರೆಯುವ ಪ್ರೋಟೀನ್ ಗಳಲ್ಲಿರುವ ನಾರಿನಂಶವು ಪಚನ ಕಾರ್ಯಕ್ಕೆ ಮತ್ತು ಅಮೀನೊ ಆಸಿಡ್ ನ ಹೀರಿಕೊಳ್ಳುವಿಕೆಗೆ ಅಡ್ಡಿಯನ್ನುಂಟು ಮಾಡಬಹುದು.

Protein Myths That Are Messing With Your Diet

ಕೆಲವರು, ಹೆಚ್ಚು ಪ್ರಮಾಣದ ಪ್ರೋಟೀನ್ ಸೇವನೆ ಆರೋಗ್ಯಕ್ಕೆ ಒಳ್ಳೆಯದು ಎಂದು ತಿಳಿದಿರುತ್ತಾರೆ. ಆದರೆ , ಇದು ನಿಜವಲ್ಲ. ದೇಹಕ್ಕೆ ಪ್ರೋಟೀನ್‌ನ ಪಚನ ಶಕ್ತಿಗೆ ಒಂದು ನಿರ್ದಿಷ್ಟ ಪ್ರಮಾಣವಿದೆ. ಹಾಗಾಗಿ ಎಲ್ಲಾ ಸಮಯದಲ್ಲೂ ಪ್ರೋಟೀನ್ ಸೇವಿಸುವುದಕ್ಕಿಂತ ಒಂದು ದಿನದ ಆಹಾರ ಸೇವನೆಯಲ್ಲಿ ಸಮಾನವಾಗಿ ವಿಂಗಡಿಸಿಕೊಂಡರೆ ಆಯಿತು. ಶಿಶುವಿನ ಆರೋಗ್ಯಕ್ಕಾಗಿ ಪ್ರೋಟೀನ್ ಭರಿತ ಆಹಾರಗಳ ವೈಶಿಷ್ಟ್ಯವೇನು?

ಸಾಮಾನ್ಯವಾಗಿ ಜನರು, ಹೆಚ್ಚು ಚಟುವಟಿಕೆಯಿಂದ ಕೂಡಿದ ವ್ಯಾಯಾಮವಾದ ನಂತರ ಪ್ರೋಟೀನ್ ಸೇವನೆ ಮುಖ್ಯವೆಂದು ನಂಬಿರುತ್ತಾರೆ. ಆದರೆ ಇದರ ಅವಶ್ಯಕತೆ ಇರುವುದಿಲ್ಲ. ಹೆಚ್ಚಿನ ವ್ಯಾಯಾಮ ಮಾಡುವಾಗ ಕೂಡ, ನಾವು ಆಹಾರದಲ್ಲಿ ಸೇವಿಸುವ ಪ್ರೋಟೀನ್ ಪ್ರಮಾಣವೇ ಸ್ನಾಯುಗಳ ಬೆಳವಣಿಗೆಗೆ ಪೂರೈಕೆಯಾಗುತ್ತದೆ.

ಹಲವರು, ಹೆಚ್ಚು ಪ್ರೋಟೀನ್ ಸೇವನೆ ಮಾಡಿದರೆ, ದೇಹದ ತೂಕವು ಹೆಚ್ಚಾಗುತ್ತದೆ ಎಂದು ನಂಬಿರುತ್ತಾರೆ. ಆದರೆ, ಇದು ನಿಜವಲ್ಲ. ಪ್ರೋಟೀನ್ ಸೇವನೆಯಿಂದ ಬಹಳ ಹೊತ್ತಿನವರೆಗೆ ಹೊಟ್ಟೆಯು ತುಂಬಿರುತ್ತದೆ. ಆದರೆ ನಿಯಮಿತವಾಗಿ ಸೇವಿಸದೇ, ವಿಪರೀತವಾಗಿ ತಿಂದರೆ ತೂಕ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಇದರ ಬದಲು, ಪ್ರೋಟೀನ್ ಸೇವನೆಯ ಜೊತೆಗೆ ಕಾರ್ಬೋಹೈಡ್ರೇಟ್ ಅನ್ನೂ ಸಹ ಸೇರಿಸಿಕೊಳ್ಳಬಹುದು.

English summary

Protein Myths That Are Messing With Your Diet

It is true that protein should form an integral part of your daily diet as it is essential to maintain muscle health, help in muscle growth and to aid in muscle recovery. Protein also keeps you full for a long period of time. However, just including protein in your diet is not recommended.
Story first published: Thursday, August 18, 2016, 20:07 [IST]
X
Desktop Bottom Promotion