For Quick Alerts
ALLOW NOTIFICATIONS  
For Daily Alerts

ಧೂಮಪಾನಿಗಳ ಶ್ವಾಸಕೋಶದ ಆರೋಗ್ಯಕ್ಕೆ ಪವರ್‌ಫುಲ್ ರೆಸಿಪಿ

By Hemanth
|

ಹೊಗೆ ಎನ್ನುವ ರಾಕ್ಷಸನನ್ನು ತನ್ನೊಳಗೆ ಬಿಟ್ಟುಕೊಳ್ಳುವುದೇ ಧೂಮಪಾನ ಎನ್ನಬಹುದೇನೋ. ರಾಕ್ಷಸ ಹೊಗೆ ದೇಹದೊಳಗೆ ಹೋಗಿ ಹಲವಾರು ರೀತಿಯ ಸಮಸ್ಯೆಗಳನ್ನು ಉಂಟುಮಾಡುವುದು. ಸಿಗರೇಟ್‌ನ ಬಾಕ್ಸ್ ಮತ್ತು ಬೀಡಿಯ ಪ್ಯಾಕೆಟ್ ನಲ್ಲಿ ಧೂಮಪಾನದಿಂದ ಯಾವ ರೀತಿ ಹಾನಿಯುಂಟಾಗುತ್ತದೆ ಎಂದು ಚಿತ್ರ ಸಹಿತ ಅಚ್ಚು ಹಾಕಿದ್ದರೂ ಅದನ್ನು ಬಿಡಲು ಯಾರೂ ತಯಾರಿಲ್ಲ.

One Homemade Recipe That Cures A Smoker's Lungs

ಧೂಮಪಾನವು ನಮ್ಮ ಜೀವವನ್ನೇ ಬಲಿ ತೆಗೆದುಕೊಳ್ಳುತ್ತದೆ ಎಂದು ತಿಳಿಯುವ ಹೊತ್ತಿಗೆ ತುಂಬಾ ವಿಳಂಬವಾಗಿರುತ್ತದೆ. ಧೂಮಪಾನವು ಕೆಲವೊಂದು ವ್ಯಕ್ತಿಗಳಲ್ಲಿ ಎಷ್ಟರ ಮಟ್ಟಿಗೆ ವ್ಯಾಪಿಸಿದೆಯೆಂದರೆ ಅದನ್ನು ಬಿಟ್ಟಿರಲು ಅವರಿಂದ ಸಾಧ್ಯವೇ ಆಗುವುದಿಲ್ಲ. ನಿತ್ರಾಣ, ಕ್ಷಯ, ಕಫ ಮತ್ತು ಶ್ವಾಸಕೋಶದ ಕ್ಯಾನ್ಸರ್ ಧೂಮಪಾನದಿಂದ ಆಗುವಂತಹ ಅಡ್ಡಪರಿಣಾಮಗಳು. ಆರೋಗ್ಯದ ಮೇಲೆ ಅಡ್ಡಪರಿಣಾಮ ಬೀರುವುದು ಮಾತ್ರವಲ್ಲದೆ ಮಾನಸಿಕವಾಗಿಯೂ ಸಿಗರೇಟ್ ವ್ಯಕ್ತಿಯ ಮೇಲೆ ಹಿಡಿತವನ್ನು ಸಾಧಿಸಬಹುದು. ನಿಮ್ಮಿಂದ ಧೂಮಪಾನ ಬಿಡಿಸುವ ಪವರ್ ಈ ಆಹಾರಗಳಲ್ಲಿದೆ!

ಧೂಮಪಾನದಿಂದಾಗಿ ವ್ಯಕ್ತಿಯು ದೈನಂದಿನ ದಿನಚರಿಗಳಾದ ಜಾಗಿಂಗ್ ಮತ್ತು ವ್ಯಾಯಾಮವನ್ನು ಮರೆತು ಬಿಡಬಹುದು. ಇದರಿಂದಾಗಿ ಶ್ವಾಸಕೋಶದ ಸಮಸ್ಯೆ ಗಾಢವಾಗಿ ಕಾಣಿಸಿಕೊಳ್ಳಬಹುದು. ಧೂಮಪಾನ ಮಾಡುವ ವ್ಯಕ್ತಿಯ ಶ್ವಾಸಕೋಶದಲ್ಲಿ ಹೊಗೆ ಮತ್ತು ಧೂಳು ತುಂಬಿಕೊಳ್ಳುತ್ತದೆ. ಇದರಿಂದ ಉಸಿರಾಟದ ಸಮಸ್ಯೆ ಕಾಣಿಸಿಕೊಂಡು ಬಳಿಕ ಇದು ಶ್ವಾಸಕೋಶದ ಕ್ಯಾನ್ಸರ್ ಗೆ ಕಾರಣವಾಗಬಹುದು.
ಧೂಮಪಾನವನ್ನು ತ್ಯಜಿಸಿ ಶ್ವಾಸಕೋಶದ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳುವುದು ಪ್ರತಿಯೊಬ್ಬ ಧೂಮಪಾನಿ ಮತ್ತು ವ್ಯಕ್ತಿಯ ಕರ್ತವ್ಯವಾಗಿದೆ.

ಶ್ವಾಸಕೋಶದಲ್ಲಿ ತುಂಬಿರುವ ವಿಷವನ್ನು ಹೊರಗೆ ತೆಗೆಯಲು ಶ್ವಾಸಕೋಶದ ವ್ಯಾಯಾಮ, ಯೋಗ ಇತ್ಯಾದಿ ಮಾಡುತ್ತಿರಬೇಕು. ಅಡುಗೆ ಮನೆಯಲ್ಲಿ ಸಿಗುವ ಕೆಲವೊಂದು ಸಾಮಗ್ರಿಗಳನ್ನು ಬಳಸಿಕೊಂಡು ಶ್ವಾಸಕೋಶದ ವಿಷವನ್ನು ತೆಗೆದುಹಾಕಬಹುದು ಎನ್ನುವುದು ನಿಮಗೆ ತಿಳಿದಿದೆಯಾ? ಇದರ ಬಗ್ಗೆ ನೀವು ತಿಳಿದುಕೊಳ್ಳಿ. ಧೂಮಪಾನ ತ್ಯಜಿಸುವಂತೆ ಮಾಡುವ ಗಿಡಮೂಲಿಕೆಗಳು

ಶ್ವಾಸಕೋಶದ ವಿಷವನ್ನು ತೆಗೆದುಹಾಕಲು ಬೇಕಾಗುವ ಸಾಮಗ್ರಿಗಳು
*ತಾಜಾ ಶುಂಠಿಯ ಕೆಲವೊಂದು ತುಂಡುಗಳು
*2 ಚಮಚ ಅರಿಶಿನ, ಬೆಳ್ಳುಳ್ಳಿಯ ಕೆಲವು ಎಸಲು
*2 ಚಮಚ ಸಕ್ಕರೆ ಇವುಗಳನ್ನು ಮಿಶ್ರಣ ಮಾಡಿಕೊಂಡು ಕುಡಿದರೆ ನಿಮ್ಮ ಶ್ವಾಸಕೋಶದಲ್ಲಿ ಹೊಗೆಯಿಂದಾಗಿ ನಿರ್ಮಾಣವಾಗಿರುವ ಗ್ರೀಸ್ ನಂತಹ ವಸ್ತುವನ್ನು ತೆಗೆದುಹಾಕುತ್ತದೆ.

ಅಲ್ಲದೆ, ಈ ಮಿಶ್ರಣವು ಶ್ವಾಸಕೋಶದಲ್ಲಿ ಇರುವ ವಿಷವನ್ನು ಹೊರಹಾಕಿ ಶ್ವಾಸಕೋಶದ ಆರೋಗ್ಯವು ಚೆನ್ನಾಗಿರುವಂತೆ ನೋಡಿಕೊಳ್ಳುತ್ತದೆ. ಇದರಲ್ಲಿರುವ ಉರಿಯೂತ ಶಮನಕಾರಿ ಗುಣಗಳು ಸೋಂಕಿನಿಂದಾಗಿ ಉಂಟಾಗಬಹುದಾದ ಕಫ ಮತ್ತು ಇತರ ಉಸಿರಾಟದ ಸಮಸ್ಯೆಯನ್ನು ಕಡಿಮೆ ಮಾಡುವುದು. ಸಕ್ಕರೆಯು ಈ ಮಿಶ್ರಣಕ್ಕೆ ಸಿಹಿಯನ್ನು ತರುವುದು.

ತಯಾರಿಸುವ ವಿಧಾನ
*ಸ್ವಲ್ಪ ನೀರನ್ನು ತೆಗೆದುಕೊಂಡು ಅದನ್ನು ಕುದಿಸಿ. ಕುದಿಯುತ್ತಿರುವ ನೀರಿಗೆ ಹೇಳಿದಷ್ಟು ಪ್ರಮಾಣದ ಸಾಮಗ್ರಿಗಳನ್ನು ಹಾಕಿಕೊಳ್ಳಿ.
*ಎಲ್ಲಾ ಸಾಮಗ್ರಿಗಳೂ 15 ನಿಮಿಷ ಕುದಿಯಲು ಬಿಡಿ. ಕುದಿಯುವ ನೀರನ್ನು ಒಂದು ಲೋಟಕ್ಕೆ ಹಾಕಿಕೊಳ್ಳಿ.
*ಸ್ವಲ್ಪ ತಣ್ಣಗಾದ ಬಳಿಕ ಅದನ್ನು ಕುಡಿಯಿರಿ. ಬೆಳಿಗ್ಗೆ ಹಾಗೂ ಸಾಯಂಕಾಲ ಖಾಲಿ ಹೊಟ್ಟೆಯಲ್ಲಿ ಎರಡು ಚಮಚ ನೀರನ್ನು ಕುಡಿಯಿರಿ.
*ಉತ್ತಮ ಫಲಿತಾಂಶಕ್ಕಾಗಿ ಎರಡು ತಿಂಗಳು ಹೀಗೆ ಮಾಡಿ.

English summary

One Homemade Recipe That Cures A Smoker's Lungs

A popular quote that showcases the harmful effects of smoking goes like this, "Only a fool would put his lips at the other end of a burning fire". All of us, smokers and non-smokers alike, can agree that it is one of the most harmful vices known to mankind. The negative effects smoking has on human life has been publicised so much that it is not even necessary to go through them again. Smoking is nothing short of an addiction that controls an individual while slowly damaging their health.
X
Desktop Bottom Promotion