For Quick Alerts
ALLOW NOTIFICATIONS  
For Daily Alerts

ಗಂಟಲು ನೋವಿನ ಕಿರಿಕಿರಿಯೇ? ಹಾಗಾದರೆ ಇನ್ನು ಚಿಂತೆ ಬಿಡಿ!

By manu
|

ಕಿರಿಕಿರಿ ತರಿಸುವ ತೊಂದರೆಗಳು ಎಂದರೆ ಸೋರುವ ಮೂಗು, ಗಂಟಲಲ್ಲಿ ತುರಿಕೆ ಇತ್ಯಾದಿ. ನಾಲ್ಕು ಜನರ ನಡುವೆ ಇರುವಾಗ ಗಂಟಲಲ್ಲಿ ತುರಿಕೆಯಾದರೆ ಕೆಮ್ಮಲೂ ಆಗದೇ ಕೆಮ್ಮದಿರಲೂ ಆಗದೇ ಇಬ್ಬಂದಿ ಅನುಭವಿಸುವಂತಾಗುತ್ತದೆ. ತಕ್ಷಣ ಇದನ್ನು ಕಡಿಮೆ ಮಾಡಬೇಕೆಂದರೆ ಹೇಗೆ ಎಂದು ಆ ಕ್ಷಣ ಎಲ್ಲರೂ ಯೋಚಿಸುತ್ತಾರೆ.

ಆದರೆ ಹೊರಬಂದ ಬಳಿಕ ಮರೆತೇ ಬಿಡುತ್ತಾರೆ. ಜಾಣರು ಮಾತ್ರ ಮರೆಯದೇ ಇದಕ್ಕೆ ಸೂಕ್ತ ವಿಧಾನವನ್ನು ಅನುಸರಿಸುತ್ತಾರೆ. ನೀವು ಜಾಣರಾಗಬೇಕಾದರೆ ಹಲವಾರು ವರ್ಷಗಳಿಂದ ನಮ್ಮ ಹಿರಿಯರು ಈ ತೊಂದರೆಯನ್ನು ಹೇಗೆ ಸಮರ್ಥವಾಗಿ ನಿಭಾಯಿಸಿದ್ದರು ಎಂಬುದನ್ನು ಕಂಡುಕೊಂಡರೆ ಸಾಕು. ನಿಮಗೆ ಸೂಕ್ತವಾದ ವಿಧಾನ ಅನುಸರಿಸಿದರೆ ಈ ಗಂಟಲ ಕೆರೆತ ಸುಲಭವಾಗಿ ಇಲ್ಲವಾಗುತ್ತದೆ. ಇನ್ನು ಗಂಟಲು ನೋವಿಗೆ ವೈದ್ಯರ ಬಳಿ ಓಡಬೇಡಿ...!

ಆದರೆ ಗಂಟಲ ಕೆರೆತ ತಕ್ಷಣ ನಿವಾರಣೆಯಾಗಬೇಕೆಂದರೆ ಕೊಂಚ ಕಹಿಯನ್ನು ಅನುಭವಿಸುವುದು ಅನಿವಾರ್ಯ. ಅಂದರೆ ಕಹಿಬೇವಿನ ಬಳಕೆಯಿಂದ ಗಂಟಲ ಕೆರೆತ ಶೀಘ್ರವಾಗಿ ಇಲ್ಲವಾಗುತ್ತದೆ. ಬನ್ನಿ, ಇದನ್ನು ಹೇಗೆ ಬಳಸಬಹುದು ಎಂಬುದನ್ನು ನೋಡೋಣ...

ಬೇವಿನ ನೀರಿನಿಂದ ಗಳಗಳ ಮಾಡುವುದು

ಬೇವಿನ ನೀರಿನಿಂದ ಗಳಗಳ ಮಾಡುವುದು

ಬೇವಿನ ನೀರಿನಿಂದ ಗಳಗಳ ಅಥವಾ ಗಲಬರಿಕೆ ಮಾಡಿಕೊಳ್ಳುವ ಮೂಲಕ ಗಂಟಲ ಕೆರೆತ ಶೀಘ್ರವಾಗಿ ಗುಣವಾಗುತ್ತದೆ. ಸುಮಾರು ಇಪ್ಪತ್ತರಿಂದ ಮೂವತ್ತು ಎಲೆಗಳನ್ನು ಕೊಂಚ ನೀರಿನಲ್ಲಿ ಚೆನ್ನಾಗಿ ಹಾಕಿ ಐದು ನಿಮಿಷ ಕುದಿಯುತ್ತಿರುವಂತೆ ಮಾಡಿ. ಬಳಿಕ ಉರಿ ಆರಿಸಿ ತಣಿಯಲು ಬಿಡಿ.

ಬೇವಿನ ನೀರಿನಿಂದ ಗಳಗಳ ಮಾಡುವುದು

ಬೇವಿನ ನೀರಿನಿಂದ ಗಳಗಳ ಮಾಡುವುದು

ನೀರು ಸುಮಾರು ಉಗುರುಬೆಚ್ಚಾಗಾಗುವಷ್ಟು ತಣಿದ ಬಳಿಕ ಈ ನೀರನ್ನು ಸೋಸಿ ಬಾಟಲಿಯಲ್ಲಿ ಸಂಗ್ರಹಿಸಿ. ಈ ನೀರಿನಿಂದ ಗಂಟಲ ಕೆರೆತವಿದ್ದಾಗ ಮುಕ್ಕಳಿಸಿ, ವಿಶೇಷವಾಗಿ ಬಾಯಿ ಮೇಲೆತ್ತಿ ಗಂಟಲಿನಲ್ಲಿ ಗಳಗಳ ಮಾಡಿ. ಇದರ ಅದ್ಭುತ ಪರಿಣಾಮವನ್ನು ತಕ್ಷಣವೇ ಅರಿಯಿರಿ.

ಜೇನಿನೊಂದಿಗೆ ಬರೆಸಿ ಕುಡಿಯಿರಿ

ಜೇನಿನೊಂದಿಗೆ ಬರೆಸಿ ಕುಡಿಯಿರಿ

ಬೇವು ಮತ್ತು ಜೇನಿನಲ್ಲಿರುವ ಆಂಟಿ ಆಕ್ಸಿಡೆಂಟುಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಗಂಟಲ ಕೆರೆತವಾಗದಂತೆ ನೋಡಿಕೊಳ್ಳುತ್ತದೆ.

ಜೇನಿನೊಂದಿಗೆ ಬರೆಸಿ ಕುಡಿಯಿರಿ

ಜೇನಿನೊಂದಿಗೆ ಬರೆಸಿ ಕುಡಿಯಿರಿ

ಹಿಂದಿನ ವಿಧಾನದಂತೆ ಬೇವು ಬೇಯಿಸಿ ತಣಿಸಿ ಸೋಸಿದ ನೀರಿಗೆ ಕೊಂಚ ಜೇನು ಬೆರೆಸಿ ಒಂದು ಚಿಕ್ಕ ಲೋಟದಷ್ಟು ಕುಡಿಯಿರಿ. ಈ ವಿಧಾನದಿಂದಲೂ ಗಂಟಲ ಕೆರೆತ ತಕ್ಷಣ ಗುಣವಾಗುತ್ತದೆ.

ಕಹಿಬೇವನ್ನು ಅಗಿಯಿರಿ!

ಕಹಿಬೇವನ್ನು ಅಗಿಯಿರಿ!

ಈ ವಿಧಾನ ಕೊಂಚ ಕಹಿಯಾದರೂ ಇದರ ಪರಿಣಾಮ ಮಾತ್ರ ಸಿಹಿ. ಹಸಿ ಅಥವಾ ಒಣಗಿರುವ ಕೆಲವು ಎಲೆಗಳನ್ನು ಬಾಯಿಯಲ್ಲಿ ಹಾಕಿ ಅಗಿದು ರಸವನ್ನು ನುಂಗಿರಿ, ನಾರನ್ನು ಉಗಿಯಿರಿ.

ಕಹಿಬೇವನ್ನು ಅಗಿಯಿರಿ!

ಕಹಿಬೇವನ್ನು ಅಗಿಯಿರಿ!

ಈ ವಿಧಾನದಿಂದ ಭಾರಿಯಾದ ಗಂಟಲ ಕೆರೆತವೂ ತಕ್ಷಣವೇ ಮಾಯವಾಗುತ್ತದೆ. ಉತ್ತಮ ಪರಿಣಾಮಕ್ಕಾಗಿ ದಿನಕ್ಕೆ ಮೂರು ಹೊತ್ತು ಈ ವಿಧಾನ ಅನುಸರಿಸಿ.

English summary

One Herb That Gives Instant Relief From Throat Pain

Itchy soar throat and pain is one of the worst health problem that makes you feel irritated. The only thing that keeps revolving around your mind when you have this health condition is how to get rid of this immediately. Of all the tried and tested methods, herbal remedies using herbs which are easily availabe in your kitchen garden are found to provide instant relief from throat pain.
X
Desktop Bottom Promotion