For Quick Alerts
ALLOW NOTIFICATIONS  
For Daily Alerts

ಮಲೇರಿಯಾ ರೋಗ ಗುಣಪಡಿಸುವ ಪವರ್‌ಫುಲ್ ಮನೆಮದ್ದು

By Staff
|

ತಪ್ಪು ಮಾಡಿದವರನ್ನು ಕೊಪ್ಪಕ್ಕೆ ಹಾಕು ಎಂಬ ಮಾತಿಗೆ ನೂರು ವರ್ಷದ ಇತಿಹಾಸವಿದ್ದರೂ ಇದಕ್ಕೆ ಮುಖ್ಯ ಕಾರಣ ಅಂದು ಕೊಪ್ಪದಲ್ಲಿ ಬಾಧಿಸುತ್ತಿದ್ದ ಮಲೇರಿಯಾ ರೋಗವೇ ಕಾರಣ. ಇಂದು ಈ ರೋಗ ಎಲ್ಲೆಡೆ ಸಾಮಾನ್ಯವಾಗಿದ್ದು ಅನಾಫಿಲಿಸ್ ಸೊಳ್ಳೆಯ ಕಡಿತವೇ ಇದಕ್ಕೆ ಕಾರಣ ಎಂದು ಗೊತ್ತಾಗಿದೆ.

ಈ ಜ್ವರ ಬಂದ ಕೂಡಲೇ ಗುರುತಿಸಲ್ಪಟ್ಟರೆ ತಕ್ಷಣವೇ ಚಿಕಿತ್ಸೆ ಪ್ರಾರಂಭಿಸುವ ಮೂಲಕ ಉಲ್ಬಣಗೊಳ್ಳದಂತೆ ತಡೆದು ಶೀಘ್ರವೇ ಗುಣಮುಖರಾಗಬಹುದು. ವೈದ್ಯರು ನೀಡುವ ಚಿಕಿತ್ಸೆಯೊಂದಿಗೇ ಕೆಲವು ನೈಸರ್ಗಿಕ ಆಹಾರಗಳನ್ನೂ ವೈದ್ಯರ ಅನುಮತಿಯ ಮೇರೆಗೆ ಸೇವಿಸುವ ಮೂಲಕ ಗುಣಮುಖರಾಗುವ ಗತಿಯನ್ನು ಇನ್ನಷ್ಟು ತೀವ್ರವಾಗಿಸಬಹುದು.

ಸೊಳ್ಳೆಯ ಕಡಿತದಿಂದ ನಮ್ಮ ರಕ್ತಕ್ಕೆ ಆಗಮಿಸುವ ಪ್ಲಾಸ್ಮೋಡಿಯಂ ಎಂಬ ಅತಿಸೂಕ್ಷ್ಮ ವೈರಾಣುಗಳು ರಕ್ತದ ಕೆಂಪುಕಣಗಳು ಗುಂಪುಗೂಡುವಂತೆ ಮಾಡುತ್ತವೆ. ಪ್ರಥಮವಾಗಿ ಇದು ನಮ್ಮ ಯಕೃತ್ತನ್ನು ಬಾಧಿಸುತ್ತದೆ. ಕ್ರಮೇಣ ದೇಹದ ಇತರ ಭಾಗಗಳನ್ನೂ ಬಾಧಿಸುತ್ತಾ ಹೋಗುತ್ತದೆ. ಈ ವೈರಾಣುಗಳನ್ನು ನಿಗ್ರಹಿಸಲು ದೇಹ ತಾಪಮಾನವನ್ನು ವಿಪರೀತವಾಗಿ ಏರಿಸುತ್ತದೆ. ಈ ಹಂತಕ್ಕೇರುವ ಮುನ್ನ ಸೂಕ್ತ ವಿಧಾನಗಳನ್ನು ಅಳವಡಿಸಿಕೊಂಡರೆ ವೈರಾಣುಗಳ ವಿರುದ್ಧ ಹೋರಾಡಲು ಸಾಧ್ಯವಾಗುತ್ತದೆ. ಅತ್ಯಂತ ಅಪಾಯಕರ ಮಳೆಗಾಲದ 10 ಕಾಯಿಲೆಗಳು

ತುಳಸಿ ಎಲೆಗಳು

ತುಳಸಿ ಎಲೆಗಳು

ಮಲೇರಿಯಾ ಜ್ವರದ ಲಕ್ಷಣಗಳು ಕಂಡು ಬಂದ ತಕ್ಷಣ ತುಳಸಿ ಎಲೆಗಳ ಮೊರೆ ಹೋಗುವ ಮೂಲಕ ನಿಸರ್ಗವೇ ಈ ವೈರಾಣುವಿನ ವಿರುದ್ಧ ಹೋರಾಡಲು ಶಕ್ತಿ ನೀಡುತ್ತದೆ. ಇದಕ್ಕಾಗಿ ಕೊಂಚ ತುಳಸಿ ಎಲೆಗಳನ್ನು ಕೊಂಚ ಕಾಳುಮೆಣಸಿನೊಂದಿಗೆ ಅರೆದು ಈ ಲೇಪನವನ್ನು ಹಾಗೇ ನುಂಗಿಬಿಡಬೇಕು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ತುಳಸಿ ಎಲೆಗಳು

ತುಳಸಿ ಎಲೆಗಳು

ಇದರಿಂದ ದೇಹ ಬಿಸಿಯೇರುವುದರಿಂದ ತಪ್ಪುತ್ತದೆ ಹಾಗೂ ಮಲೇರಿಯಾ ವೈರಾಣುಗಳ ವಿರುದ್ದ ದೇಹ ಹೋರಾಡಲು ಹೆಚ್ಚಿನ ಶಕ್ತಿ ಲಭಿಸುತ್ತದೆ.

ಲಿಂಬೆ ಬೆರೆಸಿದ ನೀರು

ಲಿಂಬೆ ಬೆರೆಸಿದ ನೀರು

ಅತಿ ಹೆಚ್ಚು ಜ್ವರ ಮಲೇರಿಯಾದ ಲಕ್ಷಣ. ಜ್ವರ ಸತತವಾಗಿ ಏರುತ್ತಾ ಹೋಗುತ್ತಿದ್ದರೆ ತಕ್ಷಣ ಕೊಂಚ ಉಗುರುಬೆಚ್ಚನೆಯ ನೀರಿಗೆ ಒಂದು ತಾಜಾ ಲಿಂಬೆಹಣ್ಣನ್ನು ಹಿಂಡಿ ರಸ ಬೆರೆಸಿ ರೋಗಿಗೆ ಕುಡಿಸಬೇಕು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಲಿಂಬೆ ಬೆರೆಸಿದ ನೀರು

ಲಿಂಬೆ ಬೆರೆಸಿದ ನೀರು

ಒಮ್ಮೆಲೇ ಸಾಧ್ಯವಾಗದಿದ್ದರೆ ಕೊಂಚ ಕೊಂಚವಾಗಿ ಕುಡಿಸುತ್ತಲೇ ಇದ್ದರೆ ಜ್ವರ ಶೀಘ್ರವಾಗಿ ಇಳಿಯುತ್ತದೆ.

ಮೆಂತೆ ಕಾಳುಗಳು

ಮೆಂತೆ ಕಾಳುಗಳು

ಮಲೇರಿಯಾ ನಿಗ್ರಹಕ್ಕೆ ಇನ್ನೊಂದು ನೈಸರ್ಗಿಕ ಆಹಾರವೆಂದರೆ ಮೆಂತೆ. ಒಂದು ವೇಳೆ ಮಲೇರಿಯಾ ರೋಗ ಉಲ್ಬಣಗೊಂಡಿದ್ದು ರೋಗಿ ಸುಸ್ತಾಗಿದ್ದರೆ ಮೆಂತೆ ಕಾಳುಗಳು ಅತ್ಯುತ್ತಮವಾಗಿವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮೆಂತೆ ಕಾಳುಗಳು

ಮೆಂತೆ ಕಾಳುಗಳು

ಕೊಂಚ ಮೆಂತೆ ಕಾಳುಗಳನ್ನು ನೆನೆಸಿ ಹಾಗೇ ಅಥವಾ ಅರೆದು ಲೇಪನದ ರೂಪದಲ್ಲಿ ತಿನ್ನಿಸುವ ಮೂಲಕ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ವೈರಾಣುಗಳ ವಿರುದ್ಧ ಹೋರಾಡಲು ಮತ್ತು ನಿಗ್ರಹಿಸಲು ಸಾಧ್ಯವಾಗುತ್ತದೆ.

ಚೆಕ್ಕೆ (ದಾಲ್ಚಿನ್ನಿ)

ಚೆಕ್ಕೆ (ದಾಲ್ಚಿನ್ನಿ)

ಮಲೇರಿಯಾ ಉಲ್ಬಣಗೊಂಡು ವಾಕರಿಕೆ, ಸ್ನಾಯು ಸೆಳೆತ, ಅಜೀರ್ಣ, ಹಸಿವಿಲ್ಲದಿರುವುದು, ಸೆಡೆತ ಮೊದಲಾದ ತೊಂದರೆಗಳು ಎದುರಾದರೆ ತಕ್ಷಣ ದಾಲ್ಚಿನ್ನಿ ಅಥವಾ ಚೆಕ್ಕೆಯ ಪುಡಿಯನ್ನು ಬೆರೆಸಿದ ಹಾಲಿಲ್ಲದ ಟೀ ಸತತವಾಗಿ ರೋಗಿಗೆ ಕುಡಿಸುತ್ತಾ ಹೋಗಬೇಕು.

ಚೆಕ್ಕೆ (ದಾಲ್ಚಿನ್ನಿ)

ಚೆಕ್ಕೆ (ದಾಲ್ಚಿನ್ನಿ)

ಇದರ ಉರಿಯೂತ ನಿವಾರಕ ಮತ್ತು ಸೆಳೆತ ನಿವಾರಕ ಗುಣ ಮಲೇರಿಯಾವನ್ನು ಶೀಘ್ರವೇ ಗುಣಪಡಿಸಲು ನೆರವಾಗುತ್ತವೆ.

English summary

Natural Remedies To Cure Malaria

Malaria is one of the deadly mosquito-borne diseases which are common in tropical and sub-tropical countries. But, malaria is curable if it is diagnosed earlier and proper medication is started. With medicines and proper health care, you can try few natural remedies for malaria, only after asking the doctor.
X
Desktop Bottom Promotion