For Quick Alerts
ALLOW NOTIFICATIONS  
For Daily Alerts

ಮಂಡಿನೋವನ್ನು ಸಂಪೂರ್ಣವಾಗಿ ಗುಣಪಡಿಸುವ ಸರಳ ಮನೆಮದ್ದು

By Hemanth
|

ದೇಹಕ್ಕೆ ವಯಸ್ಸಾಗುತ್ತಿರುವಂತೆ ಮತ್ತು ಅದು ಸಾಕಷ್ಟು ಶ್ರಮ ವಯಿಸುತ್ತಿರುವಾಗ ಕೆಲವೊಂದು ಅಂಗಾಂಗಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಹೆಚ್ಚಿನ ನೋವು ಬಂದು ಹೋದರೆ ಇನ್ನು ಕೆಲವು ಮತ್ತೆ ಮತ್ತೆ ಕಾಡುತ್ತಲೇ ಇರುತ್ತದೆ. ಅದರಲ್ಲಿ ಮಂಡಿನೋವು ಕೂಡ ಒಂದು. ಮಂಡಿ ನೋವು ಇಂದಿನ ದಿನಗಳಲ್ಲಿ ಸಾಮಾನ್ಯವಾಗಿ ಹೆಚ್ಚಿನವರನ್ನು ಕಾಡುತ್ತಿರುತ್ತದೆ. ಮಂಡಿ ನೋವು ಹೆಚ್ಚಾಗಿ ವಯಸ್ಸಾದವರಲ್ಲಿ ಕಾಣಿಸಿಕೊಳ್ಳುತ್ತದೆ. ಮಂಡಿ ನೋವೇ? ಇಲ್ಲಿದೆ ನೋಡಿ ಸಿಂಪಲ್ ಮನೆಮದ್ದು

ಆದರೆ ಚಿಕ್ಕ ವಯಸ್ಸಿನವರಿಗೆ ಇದು ಬರುವುದಿಲ್ಲ ಎಂದೇನಿಲ್ಲ. ಈ ನೋವು ಕಾಣಿಸಿಕೊಂಡರೆ ದೈನಂದಿನ ಚಟುವಿಟಕೆಗಳನ್ನು ಮಾಡುವುದು ತುಂಬಾ ಕಷ್ಟವಾಗಲಿದೆ. ಗಂಟಿನಲ್ಲಿ ಕಾಣಿಸಿಕೊಳ್ಳುವ ಉರಿಯೂತ, ಗಾಯಾಳು ಸಮಸ್ಯೆ, ಬೊಜ್ಜು, ಅಸ್ಥಿರಂಧ್ರತೆ, ಶಸ್ತ್ರಚಿಕಿತ್ಸೆ ಇತ್ಯಾದಿಗಳು ಮಂಡಿನೋವಿಗೆ ಕಾರಣಗಳು. ವಯಸ್ಸಾಗುತ್ತಾ ಹೋದಂತೆ ಗಂಟುಗಳು ಹಾಗೂ ಸ್ನಾಯುಗಳು ದುರ್ಬಲಗೊಳ್ಳುತ್ತದೆ. ಯಮಯಾತನೆ ನೀಡುವ ಮೊಣಕಾಲು ನೋವಿಗೆ ಪರಿಹಾರವೇನು?

Knee Pain

ಇದರಿಂದ ಉರಿಯೂತ ಮತ್ತು ನೋವು ಕಾಣಿಸಿಕೊಳ್ಳುವುದು. ಅದರಲ್ಲೂ ಬೊಜ್ಜು ಇರುವಂತಹ ವ್ಯಕ್ತಿಗಳಲ್ಲಿ ಮಂಡಿ ನೋವು ಎನ್ನುವುದು ಸಾಮಾನ್ಯವಾಗಿರುತ್ತದೆ. ಯಾಕೆಂದರೆ ಸಂಪೂರ್ಣ ದೇಹದ ಭಾರ ಮಂಡಿ ಮೇಲೆ ಬೀಳುವ ಕಾಣದಿಂದಾಗಿ ಗಂಟು ದುರ್ಬಲವಾಗಿ ನೋವು ಕಾಣಿಸಿಕೊಳ್ಳುತ್ತದೆ. ನೋವು ಕಾಣಿಸಿಕೊಂಡಾಗ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಂಡು ಅದರಿಂದ ಸ್ವಲ್ಪ ಕಾಲ ಮುಕ್ತಿ ಪಡೆಯುವುದು ಸಾಮಾನ್ಯ.

ಆದರೆ ಇದರ ಅಡ್ಡಪರಿಣಾಮಗಳು ದೀರ್ಘಕಾಲದವರೆಗೆ ಕಾಡುತ್ತದೆ. ಮಂಡಿನೋವನ್ನು ನಿವಾರಿಸಲು ಮನೆಮದ್ದನ್ನು ಬಳಸಬಹುದು. ಕೇವಲ ಎರಡು ನೈಸರ್ಗಿಕ ಸಾಮಗ್ರಿಗಳನ್ನು ಬಳಸಿಕೊಂಡು ಮನೆಮದ್ದು ತಯಾರಿಸಿ ಮಂಡಿನೋವು ನಿವಾರಣೆ ಮಾಡಬಹುದು.

ತಯಾರಿಸಲು ಬೇಕಾದ ಸಾಮಾಗ್ರಿಗಳು
*2 ನಿಂಬೆಹಣ್ಣು
*ಎಳ್ಳಿನ ಎಣ್ಣೆ 1 ಚಮಚ ಮಂಡಿ-ಪಾದಗಳನ್ನು ಸದೃಢಗೊಳಿಸಲು ತಾಡಾಸನ ಅನುಸರಿಸಿ

ತಯಾರಿಸುವ ಹಾಗೂ ಬಳಸುವ ವಿಧಾನ
*ಎರಡು ಮೂರು ನಿಂಬೆಯ ತುಂಡುಗಳನ್ನು ಒಂದು ಹತ್ತಿಯ ಬಟ್ಟೆಯಲ್ಲಿ ಹಾಕಿಕೊಳ್ಳಿ.
*ಎಳ್ಳಿನ ಎಣ್ಣೆಯನ್ನು ಬಿಸಿ ಮಾಡಿ, ಅದು ತಣಿದ ನಂತರ ಅದರಲ್ಲಿ ಈ ಬಟ್ಟೆ ಮತ್ತು ನಿಂಬೆ ತುಂಡುಗಳನ್ನು ಮುಳುಗಿಸಿ.


* ಇನ್ನು ನಿಂಬೆ ತುಂಡುಗಳನ್ನು ಹಾಗೆ ಉಳಿಸಿಕೊಂಡು ಬಟ್ಟೆಯನ್ನು ಮಂಡಿಗೆ ಕಟ್ಟಿಕೊಳ್ಳಿ.
*ಹತ್ತು ನಿಮಿಷ ಕಾಲ ಹಾಗೆ ಬಿಡಿ.
*ಇದನ್ನು ದಿನದಲ್ಲಿ ಎರಡು ಸಲ ಮಾಡಿ, ವ್ಯತ್ಯಾಸ ನೀವೇ ನೋಡಿ....
English summary

Natural Ingredients Can Get Rid Of Knee Pain Permanently!

Many people resort to taking painkillers in order to find relief from knee pain, however, painkillers can be extremely harmful for your system in the long run. So, here is a homemade remedy for knee pain, made using 2 natural ingredients, have a look.
X
Desktop Bottom Promotion