For Quick Alerts
ALLOW NOTIFICATIONS  
For Daily Alerts

ತೂಕ ಇಳಿಸುವ ಪವರ್ ಈ ಆಹಾರಗಳಲ್ಲಿದೆ! ಒಮ್ಮೆ ಪ್ರಯತ್ನಿಸಿ

By Super Admin
|

ತೂಕ ಹೆಚ್ಚಿಸಿಕೊಳ್ಳುವುದು ಸುಲಭವಾದರೂ ತೂಕ ಇಳಿಸಿಕೊಳ್ಳುವುದು ತುಂಬಾ ಕಷ್ಟ ಎನ್ನುವ ಮಾತಿದೆ. ಇದು ನಿಜವೆನ್ನಬಹುದು. ತೂಕ ಹೆಚ್ಚಿಸಲು ಸಿಕ್ಕಿದೆಲ್ಲವನ್ನು ತಿನ್ನಬಹುದು. ಆದರೆ ತೂಕ ಇಳಿಸಿ ಕೊಳ್ಳಬೇಕೆಂದಾಗ ಮಾತ್ರ ಆಹಾರ ಪಥ್ಯ ಕೂಡ ಅನಿವಾರ್ಯ. ಇದರಿಂದಾಗಿಯೇ ತೂಕ ಇಳಿಸಲು ಕಷ್ಟವಾಗುತ್ತದೆ. ತೂಕ ಇಳಿಸಲು ಪ್ರಮುಖವಾಗಿ ಬೇಕಾಗುವ ಅಂಶವೆಂದರೆ ನಾರಿನಂಶ. ಹಣ್ಣು, ತರಕಾರಿ ಮತ್ತು ಹಸಿರೆಲೆ ತರಕಾರಿಗಳಲ್ಲಿ ನಾರಿನಾಂಶವು ಹೇರಳವಾಗಿರುತ್ತದೆ. ಇದನ್ನು ಸೇವನೆ ಮಾಡಿದರೆ ತೂಕ ಕಳೆದುಕೊಳ್ಳಬಹುದು. ತೂಕ ಇಳಿಕೆಯಲ್ಲಿ ಹಸಿರು ಚಿನ್ನ ವೀಳ್ಯದೆಲೆಯ ಕರಾಮತ್ತೇನು?

ಸರಿಯಾದ ಪ್ರಮಾಣದಲ್ಲಿ ನಾರಿನಾಂಶವು ದೇಹಕ್ಕೆ ಸಿಕ್ಕಿದರೆ ತೂಕ ಕಡಿಮೆ ಮಾಡಿಕೊಳ್ಳುವುದು ಅಷ್ಟು ಕಷ್ಟವೇನಲ್ಲ. ನಾರಿನಾಂಶವು ತೂಕ ಕಳೆದುಕೊಳ್ಳಲು ಮಾತ್ರವಲ್ಲದೆ, ಅದನ್ನು ಸರಿಯಾದ ಪ್ರಮಾಣದಲ್ಲಿ ಕಾಪಾಡಿಕೊಳ್ಳಲು ನೆರವಾಗುವುದು.

ನಾರಿನಂಶವು ದೀರ್ಘ ಕಾಲದ ತನಕ ಹೊಟ್ಟೆ ತುಂಬಿರುವಂತೆ ಮಾಡುತ್ತದೆ ಹಾಗೂ ಇದರಲ್ಲಿ ಕ್ಯಾಲರಿ ಪ್ರಮಾಣವು ಕಡಿಮೆಯಿದೆ. ರಕ್ತದ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿಡುವ ಕಾರಣದಿಂದಾಗಿ ಅತಿಯಾಗಿ ತಿನ್ನುವುದನ್ನು ಕಡಿಮೆ ಮಾಡುವುದು.

ಅತ್ಯುತ್ತಮ ಗಿಡಮೂಲಿಕೆಗಳನ್ನು ಬಳಸಿ ತೂಕ ಇಳಿಸಿ

ನಾರಿನಂಶದಲ್ಲಿ ಎರಡು ವಿಧಗಳಿವೆ. ಒಂದು ಕರಗಬಲ್ಲ ನಾರು ಮತ್ತೊಂದು ಕರಗದೆ ಇರುವ ನಾರು. ಕರಗುವ ನಾರು ನೀರಿನಲ್ಲಿ ಕರಗಿ ಜೆಲ್‌ನಂತಹ ವಸ್ತುವಾಗುತ್ತದೆ. ಕರಗದ ನಾರು ದೇಹದಿಂದ ಹೊರಬೀಳಲು ಹೆಚ್ಚಿನ ನೀರಿನ ಅವಶ್ಯಕತೆಯಿರುತ್ತದೆ. ನಾರಿನಾಂಶವನ್ನು ಸೇವನೆ ಮಾಡುವುದು ಅಷ್ಟೊಂದು ಕಠಿಣವಾದ ಕೆಲಸವೇನಲ್ಲ. ಆದರೆ ಹಣ್ಣುಗಳು ತರಕಾರಿಗಳನ್ನು ಸಲಾಡ್ ರೂಪದಲ್ಲಿ ತಿನ್ನುವಾಗ ಅದಕ್ಕೆ ಬೇರೆ ಯಾವುದೇ ವಸ್ತುಗಳನ್ನು ಸೇರಿಸಿ ತಿನ್ನಬಾರದು. ಹಾಗೆಯೇ ತಿಂದರೆ ಒಳ್ಳೆಯದು. ಇಲ್ಲವೆಂದಾದರೆ ಅದು ನಿಮ್ಮ ತೂಕವನ್ನು ಮತ್ತಷ್ಟು ಹೆಚ್ಚು ಮಾಡುವುದು.

ತೂಕ ಕಳೆದುಕೊಳ್ಳುವ ಸಮಯದಲ್ಲಿ ಲೆಟಿಸ್, ಕ್ಯಾರೆಟ್, ಟೊಮೆಟೊ ಮತ್ತು ಕ್ಯಾಬೆಜ್ ಅನ್ನು ಸಲಾಡ್ ರೂಪದಲ್ಲಿ ತಿಂದರೆ ತುಂಬಾ ಒಳ್ಳೆಯದು. ಸಲಾಡ್‌ಗೆ ಸ್ವಲ್ಪ ಲಿಂಬೆ ರಸವನ್ನು ಹಿಂಡಿದರೆ ಉತ್ತಮ. ಇದು ತೂಕ ಕಳೆದುಕೊಳ್ಳುವ ನಿಮ್ಮ ಪ್ರಯತ್ನಕ್ಕೆ ನೆರವಾಗುವುದು. ಯಾವುದೇ ತರಕಾರಿ ಅಥವಾ ಹಣ್ಣು ನಿಮ್ಮ ಆರೋಗ್ಯಕ್ಕೆ ತೊಂದರೆಯುಂಟು ಮಾಡಲ್ಲ. ತೂಕ ಇಳಿಸಿಕೊಳ್ಳಲು ಇದೋ ಇಲ್ಲಿದೆ ನೈಸರ್ಗಿಕ ಜ್ಯೂಸ್

ಆಲೂಗಡ್ಡೆ ತಿಂದರೆ ತೂಕ ಹೆಚ್ಚಾಗುತ್ತದೆ ಮತ್ತು ಇದು ಸಮಸ್ಯೆಯಾಗುತ್ತದೆ ಎಂದು ಹೆಚ್ಚಿನವರು ಭಾವಿಸಿದ್ದಾರೆ. ಆದರೆ ತೂಕ ಕಳೆದುಕೊಳ್ಳುವ ಸಮಯದಲ್ಲಿ ಆಲೂಗಡ್ಡೆ ಕೂಡ ಒಳ್ಳೆಯ ಆಹಾರ. ಬೇಯಿಸಿದ ಆಲೂಗಡೆಗಳಿಗೆ ಬೆಣ್ಣೆ ಮತ್ತು ಗಿಣ್ಣು ಹಚ್ಚಿಕೊಂಡು ತಿನ್ನುವುದು ಒಳ್ಳೆಯದಲ್ಲ. ಆಹಾರ ಪಥ್ಯ ಮಾಡುವಾಗ ಬೇಯಿಸಿದ ಆಲೂಗಡ್ಡೆಗಳನ್ನು ಹಾಗೆಯೇ ತಿಂದರೆ ತುಂಬಾ ಒಳ್ಳೆಯದು.

ಅಷ್ಟೇ ಅಲ್ಲದೆ, ತೂಕ ಕಳೆದುಕೊಳ್ಳುವಾಗ ಸೇಬು, ದ್ರಾಕ್ಷಿ, ಪೇರಳೆ, ಪೀಚ್, ಬಾಳೆಹಣ್ಣು, ಪಪ್ಪಾಯಿ ಇತ್ಯಾದಿಗಳನ್ನು ತಿನ್ನಬೇಕು. ಇದರಲ್ಲಿ ನಾರಿನಾಂಶವು ಅಧಿಕವಾಗಿದೆ. ವಿವಿಧ ಹಣ್ಣುಗಳ ಮಿಶ್ರಣದ ಸಲಾಡ್ ಮಾಡಿಕೊಂಡು ಬೆಳಿಗ್ಗಿನ ಉಪಾಹಾರದ ವೇಳೆ ಸೇವನೆ ಮಾಡುವುದು ಉತ್ತಮ. ಹಣ್ಣುಗಳಲ್ಲಿ ಖನಿಜಾಂಶ ಮತ್ತು ವಿಟಮಿನ್‌ಗಳಿವೆ. ಚಿಪ್ಸ್, ಪಾಪ್ ಕಾರ್ನ್ ತಿನ್ನುವ ಬದಲಿಗೆ ಕಡಿಮೆ ಕ್ಯಾಲರಿ ಇರುವ ಹಣ್ಣುಗಳನ್ನು ತಿಂದರೆ ಒಳ್ಳೆಯದು.

English summary

Natural High-Fiber Foods for Weight Loss

Fibre is a plant-based roughage that aids in weight loss. Hence, if you want to lose weight, you musteat a considerable amount of fibre the correct way. Fibre not only helps you to shed weight, it also helps you to maintain your weight. Fibre helps in losing weight as it keeps you satisfied for a long period of time and is low in calories. It curbs overeating as it regulates blood sugar levels.
Story first published: Tuesday, August 9, 2016, 18:59 [IST]
X
Desktop Bottom Promotion