For Quick Alerts
ALLOW NOTIFICATIONS  
For Daily Alerts

ಸುಗಮ ಜೀರ್ಣಕ್ರಿಯೆಗೆ, ಇಂತಹ ಹಣ್ಣುಗಳನ್ನು ಸೇವಿಸಿ

By Manu
|

ನಮ್ಮ ನಿತ್ಯದ ಚಟುವಟಿಕೆಗಳಿಗೆ ವಿವಿಧ ರೀತಿಯ ಆಹಾರಗಳು ಬೇಕು. ಪ್ರೋಟೀನುಗಳು, ವಿಟಮಿನ್‌ಗಳು, ಕಾರ್ಬೋಹೈಡ್ರೇಟುಗಳು ಮೊದಲಾದವೆಲ್ಲವೂ ಒಂದು ಸಂತುಲಿತ ಪ್ರಮಾಣದಲ್ಲಿ ಅಗತ್ಯವಿದೆ. ಆದರೆ ಇವೆಲ್ಲವೂ ಒಂದೇ ಆಹಾರದಲ್ಲಿ ಅಗತ್ಯವಿದ್ದಷ್ಟೇ ಪ್ರಮಾಣದಲ್ಲಿ ದೊರಕುವುದಿಲ್ಲ. ಆದ್ದರಿಂದ ಆಹಾರತಜ್ಞರು ಪ್ರತಿದಿನವೂ ಬೇರೆಬೇರೆ ಆಹಾರಗಳನ್ನು ಸೇವಿಸಲು ಸಲಹೆ ಮಾಡುತ್ತಾರೆ. ಅದರಲ್ಲೂ ಪ್ರತಿದಿನ ಕನಿಷ್ಠ ಮೂರು ವಿಧದ ಹಣ್ಣುಗಳನ್ನು ಸೇವಿಸುವ ಮೂಲಕ ದಿನಕ್ಕೆ ಅಗತ್ಯವಾದ ಶಕ್ತಿ ಲಭ್ಯವಾಗುವ ಜೊತೆಗೇ ಜೀರ್ಣಶಕ್ತಿಯೂ ಹೆಚ್ಚುತ್ತದೆ.

ಉದಾಹರಣೆಗೆ ಬಾಳೆಹಣ್ಣು ಮತ್ತು ಪಪ್ಪಾಯಿಗಳನ್ನು ಖಾಲಿಹೊಟ್ಟೆಯಲ್ಲಿ ಬೆಳಿಗ್ಗೆ ಸೇವಿಸಿ ಇನ್ನೊಂದು ಬಗೆಯ ಹಣ್ಣನ್ನು ದಿನದ ಬೇರಾವುದಾದರೂ ಹೊತ್ತಿನಲ್ಲಿ ಸೇವಿಸುವ ಮೂಲಕ ಉತ್ತಮ ಆರೋಗ್ಯ ದೊರಕುತ್ತದೆ. ಬಾಳೆ ಮತ್ತು ಪಪ್ಪಾಯಿಯಲ್ಲಿ ಕರಗದ ನಾರು ಹೆಚ್ಚಿರುವ ಜೊತೆಗೇ ಸೋಡಿಯಂ ಮತ್ತಿತರ ಲವಣಗಳೂ ಹೆಚ್ಚಿನ ಪ್ರಮಾಣದಲ್ಲಿದ್ದು ಜೀರ್ಣಕ್ರಿಯೆಯನ್ನು ವೃದ್ಧಿಸುತ್ತವೆ. ಇವು ದಿನವಿಡೀ ಚಟುವಟಿಕೆಯಿಂದಿರಲು ನೆರವಾಗುತ್ತವೆ. ಬನ್ನಿ ಇಂದಿನ ಲೇಖನದಲ್ಲಿ ಜೀರ್ಣಕ್ರಿಯೆಯನ್ನು ಸುಸ್ಥಿತಿಯಲ್ಲಿಡಲು ನೆರವಾಗುವ ಕೆಲವೊಂದು ಹಣ್ಣುಗಳ ಬಗ್ಗೆ ವಿವರಿಸಿದ್ದೇವೆ ಮುಂದೆ ಓದಿ...

ಅನಾನಸ್

ಅನಾನಸ್

ಅನಾನಸ್ ಹಣ್ಣನ್ನು ತಿಂದ ಬಳಿಕ ನಾಲಿಗೆಯಲ್ಲಿ ಉಳಿಯುವ ನವಿರಾದ ತುರಿಕೆಯ ಕಾರಣ ಕೆಲವರು ಇದನ್ನು ತಿನ್ನಲು ಇಷ್ಟಪಡುವುದಿಲ್ಲ. ಆದರೆ ಜೀರ್ಣಕ್ರಿಯೆಯನ್ನು ಪರಿಗಣಿಸಿದರೆ ಇದು ಆರೋಗ್ಯಕರ ಆಹಾರವಾಗಿದೆ. ಇದರಲ್ಲಿರುವ ಬ್ರೋಮಿಲೈನ್ ಎಂದ ಕಿಣ್ವ ಆಹಾರವನ್ನು ಒಡೆಯಲು ನೆರವಾಗುತ್ತದೆ.

ಬೆಣ್ಣೆಹಣ್ಣು

ಬೆಣ್ಣೆಹಣ್ಣು

ಪೋಷಕಾಂಶಗಳ ಪಟ್ಟಿಯನ್ನು ಪರಿಗಣಿಸಿದರೆ ಬೆಣ್ಣೆಹಣ್ಣಿನಷ್ಟು ಉತ್ತಮವಾದ ಆರೋಗ್ಯಕರ ಹಣ್ಣು ಇನ್ನೊಂದಿಲ್ಲ. ಊಟದ ಬಳಿಕ ಸುಮಾರು ಅರ್ಧದಷ್ಟು ಬೆಣ್ಣೆ ಹಣ್ಣಿನ ತಿರುಳನ್ನು ಸೇವಿಸುವ ಮೂಲಕ ಜೀರ್ಣಗೊಳ್ಳಲು ಕಷ್ಟಕರವಾದ ಆಹಾರಗಳೂ ಸುಲಭವಾಗಿ ಜೀರ್ಣವಾಗುತ್ತವೆ.

ಬಾಳೆಹಣ್ಣು

ಬಾಳೆಹಣ್ಣು

ಜೀರ್ಣಶಕ್ತಿಯನ್ನು ಹೆಚ್ಚಿಸಲು ಮತ್ತು ಕರುಳುಗಳಲ್ಲಿ ಆಹಾರ ಪ್ರವಹಿಸುವ ಕ್ರಿಯೆಯನ್ನು ಸುಲಭಗೊಳಿಸಲು ಬಾಳೆಹಣ್ಣು ಅತಿ ಉಪಯುಕ್ತವಾಗಿದೆ. ಆದ್ದರಿಂದ ಬೆಳಗ್ಗಿನ ಹೊತ್ತು ಮತ್ತು ಊಟದ ಬಳಿಕ ಸೇವಿಸಲು ಉತ್ತಮವಾಗಿದೆ.

ಸೇಬು

ಸೇಬು

ದಿನಕ್ಕೊಂದು ಸೇಬು ವೈದ್ಯರಿಂದ ದೂರ ಎನ್ನುವುದು ಸುಳ್ಳಲ್ಲ. ಸೇಬು ರುಚಿಯಿರುವಷ್ಟೇ ಅದು ಕರುಳಿನ ಚಲನೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿಭಾಯಿಸಲು ನೆರವಾಗುತ್ತದೆ. ಇದರಲ್ಲಿ ಕರಗುವ ಮತ್ತು ಕರಗದ ನಾರಿನಾಂಶಗಳಿರುವ ಕಾರಣ ಇದನ್ನು ತುಂಬಾ ವಿಶೇಷವೆಂದು ಪರಿಗಣಿಸಲಾಗುತ್ತದೆ. ಸೇಬಿನ ಸಿಪ್ಪೆಯಲ್ಲಿರುವ ಸೆಲ್ಯುಲೋಸ್ ಎನ್ನುವ ಕರಗುವ ನಾರಿನಾಂಶ ಪಡೆಯಬಹುದು. ಇದರಿಂದ ಸೇಬು ತಿನ್ನುವ ಮೊದಲು ಅದರ ಸಿಪ್ಪೆ ತೆಗೆಯಬೇಡಿ ಎನ್ನುವುದನ್ನು ಗಮನಿಸಿ. ಸೆಲ್ಯುಲೋಸ್ ಜೀರ್ಣಕ್ರಿಯೆ ವ್ಯವಸ್ಥೆಯೊಳಗೆ ಬೇಗನೆ ಸೇರಿಕೊಂಡು ಮಲಬದ್ದತೆ ನಿವಾರಿಸುತ್ತದೆ. ಪೆಕ್ಟಿನ್ ಎನ್ನುವ ಕರಗುವ ನಾರಿನಾಂಶವು ಜೆಲ್ ನ್ನು ಉಂಟುಮಾಡಿ ಅದು ನೀರನ್ನು ಆಕರ್ಷಿಸಿ ಸಂಪೂರ್ಣ ಭಾವನೆ ಮೂಡಿಸುತ್ತದೆ. ಸೇಬಿನಲ್ಲಿ ವಿಟಮಿನ್ ಎ ಮತ್ತು ಸಿ, ಪಾಸ್ಪರಸ್ ಮತ್ತು ಪೊಟ್ಯಾಸಿಯಮ್ ನಂತಹ ಮಿನರಲ್ ಗಳಿವೆ. ಇದು ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುತ್ತದೆ.

ಹಸಿ ಪಪ್ಪಾಯಿ ಹಣ್ಣು

ಹಸಿ ಪಪ್ಪಾಯಿ ಹಣ್ಣು

ಹಸಿ ಪಪ್ಪಾಯಿ ಹಣ್ಣಿನಲ್ಲಿ ನಾರಿನ ಅಂಶಗಳು ಮತ್ತು ಪ್ರೋಟೀನ್ ಅಂಶಗಳು ಹೇರಳವಾಗಿದ್ದು, ಇತರೆ ಹಣ್ಣಿನ ಅಂಶಗಳಿಗಿಂತ ಹೆಚ್ಚಾಗಿಯೇ ಇದೆ. ಇದರಲ್ಲಿರುವ ಪಪ್ಪಾಯಿನ್ ಮತ್ತು ಕೈಮೊಪಪಾಯಿನ್ ಅಂಶಗಳು ಇದರಲ್ಲಿರುವ ಬಹುಮುಖ್ಯವಾದ ಪೌಷ್ಠಿಕಾಂಶಗಳು. ಈ ಅಂಶದಿಂದ ಜೀರ್ಣಕ್ರಿಯೆಗೆ ನೆರವಾಗಲಿದ್ದು, ಇದರ ಜೊತೆಗೆ ಫೈಟೋನ್ಯೂಟ್ರಿಯೆಂಟ್ಸ್ ಮತ್ತು ಎನ್ಸೈಮ್‌ಗಳೂ ಸಹ ಇದರಲ್ಲಿ ಅಡಗಿದೆ. ಇದರಿಂದ ದೇಹದಲ್ಲಿನ ಹಾನಿಕಾರಕ ವಿಷಯುಕ್ತ ಅಂಶಗಳನ್ನು ಹೊರಹಾಕಿ ಜೀರ್ಣಕ್ರಿಯೆ ವ್ಯವಸ್ಥೆಯನ್ನು ಸುಗಮಗೊಳಿಸಲು ನೆರವಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಹಸಿ ಪಪ್ಪಾಯಿ ಹಣ್ಣು

ಹಸಿ ಪಪ್ಪಾಯಿ ಹಣ್ಣು

ಹಸಿ ಪಪ್ಪಾಯಿ ಹಣ್ಣನ್ನು ಹೆಚ್ಚು ಸಲಾಡ್ ರೂಪದಲ್ಲಿ ಸೇವಿಸಲಾಗುತ್ತದೆ. ನಾಜೂಕಾದ ಸೀಳುಳ್ಳ ಹೋಳುಗಳನ್ನು ಮತ್ತು ಸಿಹಿಯಾದ ಮತ್ತು ಸಿಪ್ಪೆ ತೆಗೆದ ಹೋಳುಗಳನ್ನು ಬೆರೆಸಿ ರುಚಿಗೆ ಕೊತ್ತಂಬರಿ ಪೌಡರ್ ಅನ್ನು ಮಿಶ್ರಣ ಮಾಡಿದರೆ ಆರೋಗ್ಯಯುಕ್ತ ಹಸಿ ಪರಂಗಿ ಹಣ್ಣಿನ ಸಲಾಡ್ ಸೇವಿಸಲು ಸಿದ್ಧ. ಇದನ್ನು ಸ್ವಲ್ಪ ಎಣ್ಣೆ, ಸಾಸಿವೆ ಮತ್ತು ಅರಿಶಿನದೊಂದಿಗೆ 2 ರಿಂದ 3 ನಿಮಿಷಗಳ ಕಾಲ ಬೇಯಿಸಿದರೆ ಉತ್ತಮ ಆಹಾರವಾಗಲಿದ್ದು, ಇದನ್ನು ನಿಮ್ಮ ಎಂದಿನ ಶೈಲಿಯ ಆಹಾರದೊಂದಿಗೆ ಒಂದು ಭಾಗವಾಗಿ ಸೇವಿಸಬಹುದು. ಹಸಿ ಪಪ್ಪಾಯಿ ಹಣ್ಣು ಹೋಳುಗಳನ್ನು ರೊಟ್ಟಿ ಮತ್ತು ಪರೋಟದಲ್ಲಿ ಸೇರಿಸಿ ಸೇವಿಸಬಹುದಾಗಿದೆ.

English summary

Natural fruits for Better Digestive Health

Your digestive system breaks down the foods you eat into the nutrients your body needs. If you neglect your digestive health, your body could run into problems digesting foods and absorbing those nutrients. So here are the few fruits which Should easy to digestion
X
Desktop Bottom Promotion