ಮುಜುಗರ ತರುವ 'ಮೂತ್ರ ಸಮಸ್ಯೆ'! ಇನ್ನು ಚಿಂತೆ ಬಿಡಿ....

ಕೆಲವೊಮ್ಮೆ ಮೂತ್ರ ಮಾಡಿದ ಬಳಿಕವೂ ಒಂದೆರಡು ಹನಿ ಮತ್ತೆ ಬರುತ್ತಾ ಇರುತ್ತದೆ. ಇಂತಹ ಸಮಸ್ಯೆಯನ್ನು ಮೂತ್ರ ಅಸಂಯಮವೆನ್ನಲಾಗುತ್ತದೆ.

By: manu
Subscribe to Boldsky

ಶೌಚಾಲಯಕ್ಕೆ ಹೋಗಿ ಕುಳಿತು ನೈಸರ್ಗಿಕ ಕ್ರಿಯೆಯನ್ನು ಪೂರೈಸಿದರೂ ಕೆಲವೊಮ್ಮೆ ಇನ್ನು ಬರುತ್ತಾ ಇದೆ ಎನ್ನುವಂತೆ ಆಗುತ್ತಾ ಇರುತ್ತದೆ. ಮೂತ್ರ ಮಾಡಲು ಹೋದರೂ ಇದೇ ಸಮಸ್ಯೆ ಕಾಡುತ್ತಾ ಇರುತ್ತದೆ. ಕೆಲವೊಮ್ಮೆ ಮೂತ್ರ ಮಾಡಿದ ಬಳಿಕವೂ ಒಂದೆರಡು ಹನಿ ಮತ್ತೆ ಬರುತ್ತಾ ಇರುತ್ತದೆ. ಇಂತಹ ಸಮಸ್ಯೆಯನ್ನು ಮೂತ್ರ ಅಸಂಯಮವೆನ್ನಲಾಗುತ್ತದೆ. ಪದೇ-ಪದೇ ಮೂತ್ರ ವಿಸರ್ಜನೆ ಅಪಾಯದ ಸೂಚನೆ

ಇದಕ್ಕೆ ನೀವು ಹಲವಾರು ರೀತಿಯ ಚಿಕಿತ್ಸೆ ಮಾಡಿಕೊಂಡಿರಬಹುದು ಅಥವಾ ಸ್ನೇಹಿತರು ಅಥವಾ ಅಕ್ಕಪಕ್ಕದವರು ಹೇಳಿದಂತೆ ವೈದ್ಯರ ಬಳಿಕ ಹೋಗಿ ಔಷಧಿ ಪಡೆದಿರಬಹುದು. ಆದರೆ ಮನೆಮದ್ದಿನಿಂದ ಉತ್ತಮವಾದ ಪರಿಹಾರ ಬೇರೊಂದಿಲ್ಲ. ಆಗಾಗ್ಗೆ ಮೂತ್ರ ವಿಸರ್ಜನೆ ಮಾಡಬೇಕಾದ ಅನಿವಾರ್ಯತೆಯೇ?

ಇದರಲ್ಲಿ ಯಾವುದೇ ಅಡ್ಡಪರಿಣಾಮವು ಇರುವುದಿಲ್ಲ. ಮೂತ್ರ ಅಸಂಯಮ ಸಮಸ್ಯೆಗೆ ಬೋಲ್ಡ್ ಸ್ಕೈ ನಿಮಗೆ ಹಲವು ರೀತಿಯ ಮನೆಮದ್ದನ್ನು ತಿಳಿಸಿಕೊಡಲಿದೆ. ಇದನ್ನು ನೀವು ತಿಳಿದುಕೊಂಡು ಸಮಸ್ಯೆಯನ್ನು ಪರಿಹರಿಸಿಕೊಳ್ಳಿ.....

ನೆಲ್ಲಿಕಾಯಿ

ಒಂದು ನೆಲ್ಲಿಕಾಯಿಯನ್ನು ತೆಗೆದುಕೊಂಡು ಅದನ್ನು ಸರಿಯಾಗಿ ಜಜ್ಜಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಇದಕ್ಕೆ ಸ್ವಲ್ಪ ಅರಶಿನ ಹಾಗೂ ಒಂದು ಚಮಚ ಜೇನುತುಪ್ಪನ್ನು ಹಾಕಿ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಪ್ರತೀ ದಿನ ಬೆಳಗ್ಗೆ ಈ ಮಿಶ್ರಣವನ್ನು ಒಂದು ಚಮಚ ಸೇವಿಸಿ. ಜನನೇಂದ್ರಿಯ ಮತ್ತು ಶ್ರೋಣಿ ಸ್ನಾಯುಗಳು ಇದರಿಂದ ಬಲಿಷ್ಠವಾಗುತ್ತದೆ. ಇದರಿಂದ ಮೂತ್ರ ಅಸಂಯಮವು ಕಡಿಮೆಯಾಗುತ್ತದೆ.

ಆಪಲ್ ಸೀಡರ್ ವಿನೇಗರ್

ಒಂದು ಚಮಚ ಆಪಲ್ ಸೀಡರ್ ವಿನೇಗರ್ ತೆಗೆದುಕೊಂಡು ಅದಕ್ಕೆ ಒಂದು ಚಮಚ ಜೇನುತುಪ್ಪವನ್ನು ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ದಿನದಲ್ಲಿ 2-3 ಸಲ ಸೇವಿಸಿ. ಇದು ಮೂತ್ರಕೋಶದ ಸೋಂಕನ್ನು ನಿವಾರಿಸಲು ನೆರವಾಗುತ್ತದೆ ಮತ್ತು ಮೂತ್ರದ ಅಸಂಯಮವು ನಿಯಂತ್ರಣದಲ್ಲಿರುತ್ತದೆ.

ಮೊಟ್ಟೆಯ ಲೋಳೆ

ವಿಟಮಿನ್ ಡಿ ಯನ್ನು ಹೊಂದಿರುವ ಮೊಟ್ಟೆಯ ಲೋಳೆಯು ಮೂಳೆಯ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಇದರಿಂದ ಮೂತ್ರದ ಅಸಂಯಮವು ಕಡಿಮೆಯಾಗುತ್ತದೆ.

ಸೋಂಪು ಕಾಳುಗಳು

ಬಿಸಿ ಹಾಲಿಗೆ ಒಂದು ಚಮಚ ಸೋಂಪು ಕಾಳುಗಳನ್ನು ಹಾಕಿ. ಒಂದು ಲೋಟ ನೀರು ತೆಗೆದುಕೊಂಡು ಅದಕ್ಕೆ 2-3 ಚಮಚ ಸಕ್ಕರೆ ಹಾಕಿ ಅದನ್ನು ಬಿಸಿ ಕುದಿಸಿ. ಸಕ್ಕರೆಯ ಪಾಕವನ್ನು ಬಿಸಿ ಹಾಲಿಗೆ ಹಾಕಿ. ದಿನದಲ್ಲಿ ಒಂದು ಸಲ ಇದನ್ನು ಸೇವಿಸಿ ಮತ್ತು ಇದರಿಂದ ಮೂತ್ರ ಅಸಂಯಮವು ಕಡಿಮೆಯಾಗುತ್ತದೆ.

ಬಾಳೆಹಣ್ಣು

ಮೂತ್ರದ ಅಸಂಯಮಕ್ಕೆ ಬಾಳೆಹಣ್ಣು ಅತೀ ಉತ್ತಮ ಮನೆಮದ್ದಾಗಿದೆ. ಮೆಗ್ನಿಶಿಯಂನಿಂದ ಸಮೃದ್ಧವಾಗಿರುವ ಬಾಳೆಹಣ್ಣು ಮೂತ್ರಕೋಶದ ಸ್ನಾಯುಗಳನ್ನು ಬಲಗೊಳಿಸಿ ಮೂತ್ರ ಅಸಂಯಮದ ಸಮಸ್ಯೆಯನ್ನು ನಿವಾರಣೆ ಮಾಡುವುದು.

ಮುಜುಗರ ತರುವ 'ಮೂತ್ರ ಸಮಸ್ಯೆ'! ಇನ್ನು ಚಿಂತೆ ಬಿಡಿ....

ಮೆಗ್ನಿಶಿಯಂನಿಂದ ಸಮೃದ್ಧವಾಗಿರುವ ಮೊಸರು ಮೂತ್ರದ ಅಸಂಯಮವನ್ನು ನಿಯಂತ್ರಿಸುವ ಅತ್ಯುತ್ತಮ ಮನೆಮದ್ದಾಗಿದೆ.

 

ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

Story first published: Tuesday, November 15, 2016, 10:16 [IST]
English summary

Natural Ayurvedic Home Remedies for Urinary Incontinence ...

Are you having that frequent urge to pee or unable to completely empty the bladder? Also if there is a constant dribbing of urine in the form of a few drops then you need to get it checked immediately. These are the major symptoms of urinary incontinence.
Please Wait while comments are loading...
Subscribe Newsletter