For Quick Alerts
ALLOW NOTIFICATIONS  
For Daily Alerts

ಉಗುರಿನ ಬಣ್ಣದಲ್ಲಿ ಏರುಪೇರು-ಇದು ಹಲವು ರೋಗಗಳ ಲಕ್ಷಣ!

By Manu
|

ಯಾವುದೇ ವೈದ್ಯರಲ್ಲಿ ಅನಾರೋಗ್ಯವೆಂದು ಹೋದಾಗ ಅವರು ನಿಮ್ಮ ಕೈಯ ಉಗುರನ್ನು ನೋಡುತ್ತಾರೆ. ಅದರಲ್ಲೂ ಕೆಲವು ಆಯುರ್ವೇದ ವೈದ್ಯರಗಳು ಉಗುರುಗಳನ್ನು ಗಮನಿಸಿಯೇ ಔಷಧಿಯನ್ನು ನೀಡುತ್ತಾರೆ. ಉಗುರುಗಳ ಬಣ್ಣ ಹಳದಿಯಾದರೆ ಆರೈಕೆ ಹೀಗಿರಲಿ....

ತೆಳು ಗುಲಾಬಿ ಹಾಗೂ ಸ್ವಲ್ಪ ಬಿಳಿ ಬಣ್ಣವು ಸಾಮಾನ್ಯವಾಗಿ ನಮ್ಮ ಉಗುರಿನ ಬಣ್ಣಗಳು. ಆದರೆ ಉಗುರಿನ ಬಣ್ಣ ಅಥವಾ ಅದರ ವಿನ್ಯಾಸದಲ್ಲಿ ಯಾವುದೇ ರೀತಿಯ ಬದಲಾವಣೆಗಳು ಕಂಡು ಬಂದರೂ ನೀವು ತಕ್ಷಣ ಎಚ್ಚೆತ್ತುಕೊಂಡು ವೈದ್ಯರಲ್ಲಿಗೆ ಹೋಗಬೇಕು. ಯಾಕೆಂದರೆ ಇದು ಯಾವುದೇ ರೋಗದ ಲಕ್ಷಣವಾಗಿರಬಹುದು. ಹೆಚ್ಚಿನವರಿಗೆ ಉಗುರುಗಳ ಬಗ್ಗೆ ನಿರ್ಲಕ್ಷ್ಯ. ಬೆರಳಿನ ಉಗುರಿಗೂ-ಆರೋಗ್ಯಕ್ಕೂ, ಎತ್ತಿಂದೆತ್ತ ಸಂಬಂಧ?

ಆದರೆ ಕೆಲವೊಂದು ರೋಗ ಲಕ್ಷಣಗಳು ಕಾಣಿಸಿಕೊಳ್ಳುವುದೇ ಉಗುರುಗಳಲ್ಲಿ. ಇದರಿಂದ ಉಗುರಗಳ ಕಡೆ ಕೂಡ ಗಮನಹರಿಸುವುದು ಅತೀ ಅಗತ್ಯ. ಉಗುರುಗಳು ಬಣ್ಣವಿಲ್ಲದಂತೆ, ಬಿಳಿ ಹಾಗೂ ಆಕಾರವಿಲ್ಲದಂತೆ ಆಗಬಹುದು. ಜ್ವರ ಅಥವಾ ಕೆಲವೊಂದು ಫಂಗಲ್ ಸೋಂಕಿನಿಂದಾಗಿ ಉಗುರಿನ ವಿನ್ಯಾಸದಲ್ಲಿ ವ್ಯತ್ಯಯವಾಗಬಹುದು. ಇದು ಉಗುರಿನ ಸೀಕ್ರೆಟ್‌ ವಿಷಯ, ಕೊಂಚ ಇಂಟರೆಸ್ಟಿಂಗ್!

ಇನ್ನು ಹೃದಯ, ಥೈರಾಯ್ಡ್, ಯಕೃತ್, ಶ್ವಾಸಕೋಶ, ಪ್ರತಿರೋಧಕ ವ್ಯವಸ್ಥೆ ಮತ್ತು ರಕ್ತಹೀನತೆಯಿಂದಾಗಿ ಉಗುರುಗಳ ಬಣ್ಣ ಹಾಗೂ ವಿನ್ಯಾಸದಲ್ಲಿ ವ್ಯತ್ಯಾಸವಾಗಬಹುದು. ಇಂತಹ ಸಮಯದಲ್ಲಿ ನಾವು ನಿರ್ಲಕ್ಷ್ಯ ಮಾಡಿದರೆ ಜೀವಕ್ಕೆ ಅಪಾಯ. ವಿಳಂಬ ಮಾಡದೆ ನೇರವಾಗಿ ವೈದ್ಯರಲ್ಲಿಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳಬೇಕು.

ಪೇಲವವಾದ ಹಳದಿ ಉಗುರುಗಳು

ಪೇಲವವಾದ ಹಳದಿ ಉಗುರುಗಳು

ಉಗುರುಗಳು ಪೇಲವವಾಗಿ ಹಳದಿ ಬಣ್ಣಕ್ಕೆ ತಿರುಗಿದ್ದರೆ ಆಗ ತಕ್ಷಣ ಎಚ್ಚೆತ್ತುಕೊಳ್ಳಿ. ಇದು ಫಂಗಲ್ ಸೋಂಕಿನ ಸೂಚನೆಯಾಗಿರಬಹುದು ಅಥವಾ ಥೈರಾಯ್ಡ್ ಸಮಸ್ಯೆ, ಶ್ವಾಸಕೋಶ ಮತ್ತು ಮಧುಮೇಹದ ಸಮಸ್ಯೆಯ ಲಕ್ಷಣವಾಗಿರಬಹುದು.

ಬಿಳಿ ಉಗುರುಗಳು

ಬಿಳಿ ಉಗುರುಗಳು

ಉಗುರು ಹಾಗೂ ಅದರ ಸುತ್ತಲು ಬಿಳಿಯಾಗುತ್ತಲಿದ್ದರೆ ಆಗ ಇದನ್ನು ಕಡೆಗಣಿಸಬಾರದು. ಇದು ದೇಹದಲ್ಲಿ ಪ್ರೋಟೀನ್ ಕಡಿಮೆಯಾಗಿರುವ ಲಕ್ಷಣ. ಇದು ಯಕೃತ್(ಲಿವರ್) ನ ರೋಗದ ಲಕ್ಷಣವಾಗಿಬಹುದು.

ಬಿರುಕು ಅಥವಾ ಒಡೆದ ಉಗುರುಗಳು

ಬಿರುಕು ಅಥವಾ ಒಡೆದ ಉಗುರುಗಳು

ಉಗುರುಗಳು ತನ್ನಿಂದ ತಾನೇ ಒಡೆದು ಬಿರುಕು ಬಿಡುತ್ತದೆ. ಹೀಗೆ ಆದಾಗ ಉಗುರು ಮೇಲಕ್ಕೆ ಎದ್ದು ಬರುತ್ತದೆ. ಥೈರಾಯ್ಡ್ ಸಮಸ್ಯೆ, ಮಧುಮೇಹ ಮತ್ತು ರಕ್ತ ಪರಿಚಲನೆಯು ಸಾಮಾನ್ಯವಾಗಿರದ ಸಂದರ್ಭದಲ್ಲಿ ಹೀಗೆ ಆಗುತ್ತದೆ.

ನೀಲಿ ಅಥವಾ ಕಪ್ಪು ಗೆರೆಗಳು

ನೀಲಿ ಅಥವಾ ಕಪ್ಪು ಗೆರೆಗಳು

ಉಗುರುಗಳಿಗೆ ಏನಾದರೂ ಕಠಿಣವಾಗಿರುವ ವಸ್ತುಗಳು ತಾಗಿದಾಗ ಅದರಲ್ಲಿ ನೀಲಿ ಅಥವಾ ಕಪ್ಪು ಗೆರೆಗಳು ಕಾಣಿಸಿಕೊಳ್ಳುತ್ತದೆ.

ನೀಲಿ ಅಥವಾ ಕಪ್ಪು ಗೆರೆಗಳು

ನೀಲಿ ಅಥವಾ ಕಪ್ಪು ಗೆರೆಗಳು

ಆದರೆ ಏನೂ ತಾಗದೆ ಹೀಗಿದ್ದರೆ ಆಗ ಇದು ಶ್ವಾಸಕೋಶದ ಸಮಸ್ಯೆ ಅಥವಾ ಮೆಲನೊಮಾ ಎನ್ನುವ ಒಂದು ರೀತಿಯ ಚರ್ಮದ ಕ್ಯಾನ್ಸರ್‌ನ ಲಕ್ಷಣವಾಗಿರಬಹುದು. ಇದನ್ನು ಹೆಚ್ಚಿನವರು ಕಡೆಗಣಿಸುತ್ತಾರೆ. ಆದರೆ ಹಾಗೆ ಮಾಡುವುದು ಒಳ್ಳೆಯದಲ್ಲ.

ಉಗುರು ಚಮಚದ ಆಕಾರಕ್ಕೆ ತಿರುಗುವುದು

ಉಗುರು ಚಮಚದ ಆಕಾರಕ್ಕೆ ತಿರುಗುವುದು

ಕಬ್ಬಿನಾಂಶದ ಕೊರತೆ ಅಥವಾ ರಕ್ತಹೀನತೆಯಿಂದ ಬಳಲುತ್ತಿದ್ದರೆ ಆಗ ಉಗುರು ಚಮಚದ ಆಕಾರಕ್ಕೆ

ತಿರುಗಬಹುದು. ಉಗುರುಗಳಿಗೆ ರಕ್ತ ಸಂಚಲನವು ಸರಿಯಾಗಿರದ ಕಾರಣ ಇಂತಹ ಸಮಸ್ಯೆಯಾಗುತ್ತದೆ. ಥೈರಾಯ್ಡ್ ಸಮಸ್ಯೆ ಅಥವಾ ಹೃದಯದ ಸಮಸ್ಯೆಯಿಂದಾಗಿ ಉಗುರುಗಳು ಚಮಚದ ಆಕಾರಕ್ಕೆ ತಿರುಗಬಹುದು.

ಉಗುರುಗಳ ವಿಸ್ತರಣೆ

ಉಗುರುಗಳ ವಿಸ್ತರಣೆ

ಕೆಲವೊಮ್ಮೆ ಬೆರಳಿನ ತುದಿ ವಿಸ್ತರಣೆಗೊಂಡು ಬೆರಳ ತುದಿಯಲ್ಲಿ ಅದು ವಕ್ರತೆಯನ್ನು ಪಡೆದುಕೊಳ್ಳುತ್ತದೆ. ಹೀಗೆ ಆಗಿದ್ದರೆ ಖಂಡಿತವಾಗಿಯೂ ಶ್ವಾಸಕೋಶ, ಹೃದಯ, ಯಕೃತ್ ಸಮಸ್ಯೆ ಮತ್ತು ಏಡ್ಸ್ ನ ಲಕ್ಷಣವಾಗಿರಬಹುದು.

ಉಗುರುಗಳಲ್ಲಿ ದಪ್ಪಗಿನ ಗೆರೆಗಳು

ಉಗುರುಗಳಲ್ಲಿ ದಪ್ಪಗಿನ ಗೆರೆಗಳು

ಉಗುರುಗಳಲ್ಲಿ ಕಾಣಿಸಿಕೊಳ್ಳುವಂತಹ ದಪ್ಪಗಿನ ಗೆರೆಯು ಸತುವಿನ ಕೊರತೆಯ ಲಕ್ಷಣವಾಗಿದೆ. ಇದು ಕೂದಲು ಉದುರುವಿಕೆ, ಕಣ್ಣುಗಳ ಸಮಸ್ಯೆ, ತೂಕ ಕಳೆದುಕೊಳ್ಳುವಿಕೆ ಮತ್ತು ಮಾನಸಿಕ ಸಮಸ್ಯೆಯ ಲಕ್ಷಣವಾಗಿರಬಹುದು.

English summary

Nail Colour & Texture: It Can Be A Sign Of These Deadly Diseases!

Slightly pinkish and white is what our normal nail colour looks like. But when you start witnessing even a slight unusual change in your nail colour and texture then you should watch out for it immediately. It can be a sign of several deadly diseases.
X
Desktop Bottom Promotion