For Quick Alerts
ALLOW NOTIFICATIONS  
For Daily Alerts

ಸುವಾಸನೆ ಸೂಸುವ ಸುಗಂಧ ದ್ರವ್ಯದ ಹಿಂದಿರುವ ಕರಾಳ ಸತ್ಯ

By Manu
|

ನಿಮ್ಮ ದೈಹಿಕ ಮತ್ತು ಶಾರೀರಿಕ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಏನೆಲ್ಲಾ ವಿಧಾನಗಳನ್ನು ಅನುಸರಿಸುತ್ತೀರಿ. ತ್ವಚೆಗೆ ಸೌಂದರ್ಯವರ್ಧಕಗಳು, ನಿಮಗೆ ಹೊಂದುವ ಸಾಬೂನುಗಳು, ಶಾಂಪೂಗಳು, ಅನೇಕ ರಾಸಾಯನಿಕ ಉತ್ಪನ್ನಗಳು ಮತ್ತು ಕ್ರೀಮ್‌ಗಳ ದಿನನಿತ್ಯ ಬಳಸಲಾಗುತ್ತಿದೆ. ಇದರ ಜೊತೆಗೆ ಅಂತಿಮವಾಗಿ ಸುಗಂಧ ದ್ರವ್ಯ (ಡಿಯೋಡರೆಂಟ್) ಅನ್ನು ಸಹ ಅನೇಕರು ಉಪಯೋಗಿಸುತ್ತಾರೆ. ಇದೊಂದು ಜೀವನದ ಭಾಗವಾಗಿಯೇ ಹೋಗಿದೆ. ಇದರಿಂದ ಯಾರೊಬ್ಬರೂ ಹೊರತಲ್ಲ.

ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ ನೀವು ಬಳಸುವ ಉತ್ಪನ್ನಗಳು ಅಥವಾ ಸುಗಂಧ ದ್ರವ್ಯಗಳು ನಿಮಗೆ ಎಷ್ಟು ಸುರಕ್ಷಿತವೆಂದು ಯಾರೊಬ್ಬರೂ ಆಲೋಚಿಸುವುದಿಲ್ಲ. ಕೇವಲ ಜಾಹೀರಾತು ತಂತ್ರಗಳಿಗೆ ಮಾರುಹೋಗಿ ಈ ರೀತಿಯ ದುಷ್ಪರಿಣಾಮ ಉಂಟುಮಾಡುವ ಸುಗಂಧ ದ್ರವ್ಯ ಮತ್ತು ಆಂಟಿಪರ್ಸ್ ಪಿರೆಂಟ್‌ಗಳನ್ನು ಬಳಸಲಾಗುತ್ತಿದೆ. ಈ ರೀತಿಯ ಸುವಾಸನಾವರ್ಧಕಗಳು ನಿಮಗೆ ಹೇಗೆ ಹಾನಿಯನ್ನುಂಟು ಮಾಡುತ್ತವೆ ಎಂಬುದರ ಬಗ್ಗೆ ಕೆಲ ಉಪಯುಕ್ತ ಸಂಗತಿಗಳನ್ನು ನಿಮಗಾಗಿ ಈ ಲೇಖನದಲ್ಲಿ ನೀಡಲಾಗಿದೆ. ವಿವರಗಳಿಗೆ ಮುಂದೆ ಓದಿ. . ಎಷ್ಟೇ ಪರ್ಫ್ಯೂಮ್ ಹಾಕಿದರೂ ಬೆವರಿನ ದುರ್ಗಂಧ ನಿಲ್ಲುವುದಿಲ್ಲವೇ?

Must Read: Side effects of deodorant spray

ಚರ್ಮ ರೋಗಕ್ಕೆ ಎಡೆಮಾಡಿಕೊಡುತ್ತದೆ
ಹೆಚ್ಚಿನ ಸುಗಂಧ ದ್ರವ್ಯಗಳಲ್ಲಿ ಕಾಂಪೌಂಡ್ ಪ್ರೊಪಿಲೀನ್ ಗ್ಲೈಕೊಲ್ ಎಂಬ ಅಂಶವು ಅಡಗಿದ್ದು, ಇದರಿಂದ ನಿಮ್ಮ ಚರ್ಮಕ್ಕೆ ನವೆಯುಂಟಾಗಿ ಚರ್ಮ ರೋಗ ಬರುವ ಸಾಧ್ಯತೆಯಿರುತ್ತದೆ. ಇರಲ್ಲಿರುವ ನ್ಯೂರೊಟಾಕ್ಸಿನ್ ಅಂಶವೂ ಸಹ ನರಮಂಡಲಕ್ಕೆ ತೊಂದರೆಯನ್ನುಂಟುಮಾಡುತ್ತದೆ. ಆದ್ದರಿಂದ ಹೆಚ್ಚು ಕೇಂದ್ರೀಕರಿಸಿದ ಪ್ರೊಪಿಲೀನ್ ಗ್ಲೈಕೊಲ್ ಯುಕ್ತ ಅಂಶವಿರುವ ಸ್ಟಿಕ್ ಡಿಯೋಡ್ರೆಂಟ್ ಗಳನ್ನು ಬಳಸದಿರುವುದು ಸೂಕ್ತ.

ಆಲ್ಸೀಮರ್ ಕಾಯಿಲೆಯೂ ಸಹ ಸಂಭವಿಸಬಹುದು
ಆಂಟಿಪರ್ಸ್ ಪಿರೆಂಟ್‌ಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಅಂಶಗಳಲ್ಲೊಂದಾದ ಅಲ್ಯೂಮಿನಿಯಮ್ ಸತ್ವವು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದರಿಂದ ಬುದ್ಧಿಮಾಂದ್ಯತೆ ಮತ್ತು ಆಲ್ಸೀಮರ್‌ ಕಾಯಿಲೆ ಸಂಭವಿಸುತ್ತದೆ. ಇದನ್ನು ಸೇವಿಸಿದರೆ ಆಸ್ತಮಾ ಸಹ ಉಂಟಾಗಲು ಕಾರಣವಾಗುತ್ತದೆ. ಘಮ ಘಮಿಸುವ ಸುಗಂಧ ದ್ರವ್ಯವನ್ನು ಮನೆಯಲ್ಲೇ ತಯಾರಿಸಿ!

ಹಾರ್ಮೊನ್‌ಗಳಲ್ಲಿ ಅಸಮತೋಲನ ಉಂಟಾಗುತ್ತದೆ
ಹೆಚ್ಚು ದಿನಗಳ ಕಾಲ ಸಂರಕ್ಷಿಸಲು ಅನೇಕ ಡಿಯೋಡ್ರೆಂಟ್‌ಗಳಲ್ಲಿ ಪ್ಯಾರಾಬೆನ್ ಎಂಬ ಅಂಶವು ಅಡಗಿದೆ. ಈ ಅಂಶದಿಂದ ಹಾರ್ಮೊನ್‌ಗಳ ಸಮತೋಲನದಲ್ಲಿ ತೊಂದರೆಯುಂಟಾಗುತ್ತದೆ. ಇದರಿಂದ ಕ್ರಮವಲ್ಲದ ಋತುಬಂಧ ಮತ್ತು ಪ್ರಾರಾಂಭಿಕ ಪ್ರೌಡಾವಸ್ಥೆಯನ್ನು ಪ್ರಚೋದಿಸುತ್ತದೆ. ಪ್ಯಾರಾಬೆನ್ ಇರುವ ಉತ್ಪನ್ನಗಳನ್ನು ಸುಲಭವಾಗಿ ಗುರುತಿಸಬಹುದು. ಅದರ ಮೇಲಿನ ಲೇಬಲ್ ನಲ್ಲಿ ಪ್ರೊಪೈಲ್ ಪ್ಯಾರಾಬೆನ್, ಮಿಥೈಲ್‌ ಪ್ಯಾರಾಬೆನ್, ಈಥೈಲ್ ಪ್ಯಾರಾಬೆನ್ ಅಥವಾ ಬ್ಯೂಟೈಲ್ ಪ್ಯಾರಾಬೆನ್ ಎಂಬ ಅಂಶವು ಕಂಡುಬಂದಲ್ಲಿ ಕೂಡಲೇ ಅದನ್ನು ನಿರಾಕರಿಸಿ.

English summary

Must Read: Side effects of deodorant spray

We don’t think much about using a deodorant every day. But what if this very product is affecting your health? Most deodorants and antiperspirants available in the market are synthetic, full of chemicals and definitely toxic. Our skin absorbs these chemicals, giving rise to a number of health issues. Here are a few common health problems linked to using deodorants and antiperspirants.
Story first published: Tuesday, February 2, 2016, 20:28 [IST]
X
Desktop Bottom Promotion