For Quick Alerts
ALLOW NOTIFICATIONS  
For Daily Alerts

ಹಾಲಿಗೆ ಬೆಲ್ಲ ಹಾಕಿ ಕುಡಿಯಿರಿ, ಆರೋಗ್ಯ ಪಡೆಯಿರಿ

|

ಬೇಸಿಗೆಯಲ್ಲಿ ದಣಿವಾದಾಗ ಹಳ್ಳಿಯವರು ಬೆಲ್ಲದ ತುಂಡೊಂದನ್ನು ಕಚ್ಚಿ ಬಳಿಕ ತಣ್ಣೀರನ್ನು ಕುಡಿಯುವುದನ್ನು ನೀವು ಗಮನಿಸಿರಬಹುದು. ಹಿರಿಯರು ಮಧ್ಯಾಹ್ನದ ಊಟ ಅಥವಾ ರಾತ್ರಿಯ ಊಟದ ಬಳಿಕ ಬೆಲ್ಲದ ತುಂಡೊಂದನ್ನು ಕಚ್ಚಿ ತಿನ್ನುತ್ತಿದ್ದುದನ್ನೂ ಗಮನಿಸಿರಬಹುದು. ನಿಮಗೂ ತಿನ್ನಲು ಹೇಳುತ್ತಿದ್ದಿರಬಹುದು. ಆದರೆ ಬೆಲ್ಲ ಎಂದರೆ ಹಳೆಯ ಕಾಲದ, ಕೊಪ್ಪರಿಗೆಯಲ್ಲಿ ಬೇಯಿಸಿದ ಪಾಕ ಎಂಬ ಕಲ್ಪನೆಯ ಕಾರಣ ಬೆಲ್ಲವನ್ನು ಮುಟ್ಟದೇ ಇಂದಿನವರು ಸಕ್ಕರೆಯತ್ತ ಹೆಚ್ಚು ವಾಲುತ್ತಿರುವ ಕಾರಣ ಬೆಲ್ಲದ ಮೂಲಕ ಸಿಗಬಹುದಾಗಿದ್ದ ಹಲವು ಆರೋಗ್ಯಕರ ಪ್ರಯೋಜನಗಳಿಂದ ವಂಚಿತರಾಗುತ್ತಿದ್ದಾರೆ.

ಸಾಮಾನ್ಯವಾಗಿ ಬೆಲ್ಲವನ್ನು ಒಂದು ಸಿಹಿ ಎಂದೇ ಪರಿಗಣಿಸುತ್ತೇವೆ. ಆದರೆ ಬೆಲ್ಲ ಒಂದು ಸಿಹಿಯಾಗಿರುವ ಔಷಧಿಯಾಗಿದೆ. ಇದರ ಪ್ರಯೋಜನಗಳ ಪಟ್ಟಿಯೂ ಬಹಳ ದೊಡ್ಡದಿದೆ. ವಿಶೇಷವಾಗಿ ಮಾಸಿಕ ದಿನಗಳಲ್ಲಿ ಮಹಿಳೆಯರು ಅನುಭವಿಸುವ ನೋವನ್ನು ಬೆಲ್ಲದಷ್ಟು ಸಮರ್ಥವಾಗಿ ಕಡಿಮೆಗೊಳಿಸುವ ಇನ್ನೊಂದು ಔಷಧಿಯಿಲ್ಲ. ಸಂಧಿವಾತ, ಅಸ್ತಮಾಗಳಿಗೂ ಬೆಲ್ಲ ಉತ್ತಮವಾಗಿದೆ. ದಣಿವಾಗಿದ್ದಾಗ ಹಳ್ಳಿಯವರ ಕ್ರಮವನ್ನು ಅಲ್ಲಗಳೆಯುವ ಮೊದಲು ಒಂದು ತುಂಡು ಬೆಲ್ಲದ ಜೊತೆ ತಣ್ಣೀರು ಕುಡಿದು ಪರಾಮರ್ಶಿಸಿದರೇ ಇದರ ಪ್ರಯೋಜನ ಅನುಭವಕ್ಕೆ ಬರುತ್ತದೆ. ಬೆಲ್ಲದಲ್ಲಿರುವ ಅದ್ಭುತ ಆರೋಗ್ಯಕರ ಗುಣಗಳು

ಬೆಲ್ಲವನ್ನು ನೀರಿನೊಂದಿಗೆ ಸೇವಿಸುವ ಬದಲು ಹಾಲಿನೊಂದಿಗೆ ಸೇವಿಸಿದರೆ ಇನ್ನಷ್ಟು ಉತ್ತಮ ಎಂದು ಆಯುರ್ವೇದ ತಿಳಿಸುತ್ತದೆ. ಸಕ್ಕರೆಯ ಸೇವೆನೆಯಿಂದ ತೂಕ ಹೆಚ್ಚುವುದು ಖಚಿತ. ಆದರೆ ಬೆಲ್ಲದ ಸೇವನೆಯಿಂದ ತೂಕ ಹೆಚ್ಚುವುದಿಲ್ಲ. ಅಲ್ಲದೇ ಹಾಲಿನ ಮತ್ತು ಬೆಲ್ಲದ ಉತ್ತಮ ಗುಣಗಳು ಜೊತೆಯಾಗಿ ದೇಹಕ್ಕೆ ಹಲವು ರೀತಿಯಿಂದ ಉತ್ತಮವಾಗಿವೆ. ಇದಕ್ಕೆ ಪ್ರತಿದಿನ ಒಂದು ತುಂಡು ಬೆಲ್ಲವನ್ನು ಕುಟ್ಟಿ ಪುಡಿಮಾಡಿ ಒಂದು ಲೋಟ ಹಾಲಿನಲ್ಲಿ ಬೆರೆಸಿ ಕುಡಿದರೆ ಸಾಕು. ದೇಹದ ಒಳಗಿನಿಂದಲೂ ಮತ್ತು ವಿಶೇಷವಾಗಿ ಚರ್ಮದ ಕಾಂತಿಯನ್ನು ಹೆಚ್ಚಿಸುವ ಮೂಲಕ ಇದೊಂದು ಉತ್ತಮ ಸೌಂದರ್ಯವರ್ಧಕವೂ ಆಗಿದೆ. ಗರ್ಭಿಣಿಯರ ಆರೋಗ್ಯಕ್ಕೆ ಬೇಕು, ಒಂದು ತುಂಡು ಬೆಲ್ಲ..!

ನೋಡಲು ಕಂದು ಅಥವಾ ಕಪ್ಪಗಿರುವ ಕಾರಣ ಇದನ್ನು ತಿನ್ನಲು ಯುವಜನತೆ ಹಿಂದೇಟು ಹಾಕುತ್ತಾರೆ. ಆದರೆ ಸುಂದರವಾಗಿ ಬೆಳ್ಳಗೆ ಕಾಣುವ ಸಕ್ಕರೆಗಿಂತಲೂ ಬೆಲ್ಲವೇ ಅತ್ಯುತ್ತಮ ಎಂಬ ಹಿರಿಯರ ಅಭಿಪ್ರಾಯವನ್ನು ಕೆಳಗಿನ ಸ್ಲೈಡ್ ಶೋ ಖಚಿತಪಡಿಸುತ್ತದೆ. ಆದ್ದರಿಂದ ನಿಮ್ಮ ಆಹಾರದಲ್ಲಿ ಸಿಹಿಯಾಗಿಸುವ ಯಾವುದೇ ಪಾಕದಲ್ಲಿ ಬೆಲ್ಲ ಉಪಯೋಗಿಸಲು ಈ ವಿವರಗಳು ನೆರವಾಗಲಿವೆ....

ರಕ್ತ ಶುದ್ಧೀಕರಿಸುತ್ತದೆ

ರಕ್ತ ಶುದ್ಧೀಕರಿಸುತ್ತದೆ

ರಕ್ತದ ಶುದ್ಧೀಕರಣಕ್ಕೆ ಬೆಲ್ಲ ಸೇರಿಸಿದ ಹಾಲಿನ ಸೇವನೆ ಉತ್ತಮವಾಗಿದೆ. ಇದಕ್ಕೆ ಪ್ರತಿದಿನ ಒಂದು ಲೋಟ ಕುಡಿಯುವುದು ಅಗತ್ಯ.

ಜೀರ್ಣಕ್ರಿಯೆ ಉತ್ತಮಗೊಳಿಸುತ್ತದೆ

ಜೀರ್ಣಕ್ರಿಯೆ ಉತ್ತಮಗೊಳಿಸುತ್ತದೆ

ಬೆಲ್ಲ ಸೇರಿಸಿದ ಹಾಲಿನ ಸೇವನೆಯಿಂದ ಜೀರ್ಣಕ್ರೆಯೆಯೂ ಉತ್ತಮಗೊಳ್ಳುತ್ತದೆ. ಕೆಲವೊಮ್ಮೆ ಸಿಹಿತಿಂಡಿಗಳನ್ನು ನೋಡಿದಾಗಲೆಲ್ಲಾ ಅವನ್ನು ತಿನ್ನುವ ಬಯಕೆ ಭುಗಿಲೇಳುತ್ತದೆ. ಆದರೆ ಇದನ್ನು ತಿನ್ನುವ ಬದಲು ಒಂದು ಚಿಕ್ಕ ತುಂಡು ಬೆಲ್ಲವನ್ನು ತಿಂದರೆ ಆ ಬಯಕೆ ಹಾಗೇ ಇಳಿದುಬಿಡುತ್ತದೆ.

ಸಂಧಿವಾತ ಕಡಿಮೆಗೊಳಿಸುತ್ತದೆ

ಸಂಧಿವಾತ ಕಡಿಮೆಗೊಳಿಸುತ್ತದೆ

ಮೂಳೆಗಳ ಸಂದುಗಳಲ್ಲಿ ಆಗುವ ನೋವನ್ನು ಕಡಿಮೆಗೊಳಿಸಲು ನಿತ್ಯವೂ ಬೆಲ್ಲ ಸೇರಿಸಿದ ಹಾಲಿನಲ್ಲಿ ಒಂದು ಚಿಕ್ಕ ತುಂಡು ಶುಂಠಿಯನ್ನು ಸೇರಿಸಿ ಸೇವಿಸಿದರೆ ಕ್ರಮೇಣ ಕಡಿಮೆಯಾಗುತ್ತಾ ಹೋಗುತ್ತದೆ.

ಸೌಂದರ್ಯ ವೃದ್ಧಿಸುತ್ತದೆ

ಸೌಂದರ್ಯ ವೃದ್ಧಿಸುತ್ತದೆ

ಬೆಲ್ಲ ಸೇರಿಸಿದ ಹಾಲಿನ ಸೇವನೆಯಿಂದ ಚರ್ಮದ ಕಾಂತಿ ಮತ್ತು ಸೆಳೆತ ಹೆಚ್ಚುತ್ತದೆ. ನಿತ್ಯವೂ ಚಿಕ್ಕ ತುಂಡು ಬೆಲ್ಲವನ್ನು ಆಹಾರದೊಂದಿಗೆ ಸೇರಿಸುವ ಮೂಲಕ ಮುಖದಲ್ಲಿ ಮೊಡವೆಗಳಾಗದಂತೆ ನೋಡಿಕೊಳ್ಳುತ್ತದೆ.

ಮಾಸಿಕ ದಿನಗಳ ನೋವನ್ನು ಕಡಿಮೆಗೊಳಿಸುತ್ತದೆ

ಮಾಸಿಕ ದಿನಗಳ ನೋವನ್ನು ಕಡಿಮೆಗೊಳಿಸುತ್ತದೆ

ಮಾಸಿಕ ದಿನಗಳ ಹಿಂದಿನ ಮತ್ತು ನಂತರದ ದಿನಗಳಲ್ಲಿ ಎದುರಾಗುವ ಕೆಳಹೊಟ್ಟೆಯ ನೋವಿನಿಂದ ಪಾರಾಗಲು ಒಂದು ಚಿಕ್ಕಚಮಚದಷ್ಟು ಬೆಲ್ಲದ ಪುಡಿಯನ್ನು ಹಾಲಿನೊಂದಿಗೆ ಬೆರೆಸಿ ದಿನಕ್ಕೆರಡು ಬಾರಿ ಕುಡಿಯಬೇಕು.

ಗರ್ಭಿಣಿಯ ರಕ್ತಹೀನತೆಯಿಂದ ರಕ್ಷಿಸುತ್ತದೆ

ಗರ್ಭಿಣಿಯ ರಕ್ತಹೀನತೆಯಿಂದ ರಕ್ಷಿಸುತ್ತದೆ

ಗರ್ಭಾವಸ್ಥೆಯಲ್ಲಿ ರಕ್ತಹೀನತೆಯಿಂದ ಹೆಚ್ಚಿನ ಗರ್ಭಿಣಿಯರು ಬಳಲುತ್ತಾರೆ. ನಿತ್ಯವೂ ಬೆಲ್ಲ ಸೇರಿಸಿದ ಹಾಲನ್ನು ಕುಡಿಯುವ ಮೂಲಕ ಈ ಕೊರತೆಯಾಗದಿರಲು ಸಾಧ್ಯವಾಗುತ್ತದೆ.

ಬೆಲ್ಲದ ಉಪಯೋಗಗಳು

ಬೆಲ್ಲದ ಉಪಯೋಗಗಳು

ಬೆಲ್ಲ ನೋಡಲು ಸುಂದರವಾಗಿಲ್ಲದ ಕಾರಣದಿಂದ ಕೆಲವರು ಇದನ್ನು ನೇರವಾಗಿ ತಿನ್ನಲು ಇಷ್ಟಪಡುವುದಿಲ್ಲ. ಆದರೆ ಬೆಲ್ಲ ಸೇರಿಸಿದ ಹಾಲನ್ನು ಕುಡಿಯಲು ತೊಂದರೆಯಾಗಲಾರದು. ಬನ್ನಿ, ಈ ಬೆಲ್ಲ ಸೇರಿಸಿದ ಹಾಲಿನ ಉಪಯೋಗಗಳ ಬಗ್ಗೆ ಅರಿಯೋಣ:

1) ಅಸ್ತಮಾ ಮತ್ತು ಬ್ರಾಂಕೈಟಿಸ್ ರೋಗಗಳಿಗೆ: ಕರಿ ಎಳ್ಳು ಮತ್ತು ಬೆಲ್ಲದ ಉಂಡೆ ಮಾಡಿ ನಿತ್ಯವೂ ಸೇವಿಸಿ

2) ನಿಃಶಕ್ತಿಗೆ: ಒಂದು ಚಮಚ ಬೆಲ್ಲದ ಪುಡಿ ಮತ್ತು ಹಾಲನ್ನು ಬೆರೆಸಿ ನಿತ್ಯವೂ ಎರಡು ಬಾರಿ ಒಂದು ಚಿಕ್ಕ ಚಮಚದಷ್ಟು ಸೇವಿಸಿ

ಬೆಲ್ಲದ ಉಪಯೋಗಗಳು

ಬೆಲ್ಲದ ಉಪಯೋಗಗಳು

2)ಸ್ನಾಯುಗಳ ಶಕ್ತಿ ಹೆಚ್ಚಲು: ನಿತ್ಯವೂ ಬೆಲ್ಲ ಸೇರಿಸಿದ ಹಾಲನ್ನು ಬೆಳಿಗ್ಗೆ ಮತ್ತು ರಾತ್ರಿ ಕುಡಿಯಿರಿ.

4) ಸುಸ್ತು ನಿವಾರಿಸಲು: ನಿತ್ಯವೂ ದಿನಕ್ಕೆ ಮೂರು ಹೊತ್ತಿನಲ್ಲಿ ಒಂದೊಂದು ಚಿಕ್ಕ ಚಮಚ ಬೆಲ್ಲದ ಪುಡಿ ನೇರವಾಗಿ ಸೇವಿಸಿ

5) ಮಾಸಿಕ ದಿನಗಳ ಏರುಪೇರು ತಪ್ಪಿಸಲುನಿತ್ಯವೂ ಒಂದು ಚಿಕ್ಕ ಚಮಚ ಬೆಲ್ಲವನ್ನು ನೇರವಾಗಿ ರಾತ್ರಿ ಮಲಗುವ ಮುನ್ನ ಸೇವಿಸಿ.

English summary

Marvelous Benefits Of drinking milk with jaggery

Many of us have seen our elders eating jaggery after lunch or dinner. They also keep telling us to eat jaggery. The reson why they tell us is because of the innumerable health benefits of jaggery. In the same way there are also few benefits of drinking jagger milk. have a look
X
Desktop Bottom Promotion