For Quick Alerts
ALLOW NOTIFICATIONS  
For Daily Alerts

ಮಂತ್ರ ಯೋಗದ ಹಿನ್ನೆಲೆ ಹಾಗೂ ಆರೋಗ್ಯದ ಮಹಾತ್ಮೆ

By Manjula Balaraj
|

ಮನುಷ್ಯ ತನ್ನ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಲು ವ್ಯಾಯಾಮದಂತೆ, ಯೋಗವೂ ಒಂದು. ಇತ್ತೀಚಿನ ದಿನಗಳಲ್ಲಿ ಯೋಗದತ್ತ ಹೆಚ್ಚಿನ ಜನರು ತಮ್ಮ ಒಲವನ್ನು ತೋರುತ್ತಿರುವುದು ವಿಶೇಷ. ಅದರಲ್ಲಿ ಒಂದು ವಿಧಾನ ಮಂತ್ರಯೋಗ. ನೀವು ಮಂತ್ರ ಯೋಗದ ಬಗ್ಗೆ ಮತ್ತು ಅದರಿಂದಾಗುವ ಪ್ರಯೋಜನವನ್ನು ಕೇಳಿರುತ್ತೀರಿ. ಆದರೆ ಈ ಮಂತ್ರಗಳು ಯಾವ ರೀತಿಯಲ್ಲಿ ವರ್ಕೌಟ್ ಆಗುತ್ತದೆ, ಇದನ್ನು ಯಾವ ರೀತಿಯಲ್ಲಿ ಬಳಸಿಕೊಳ್ಳಬೇಕು ಎನ್ನುವುದರ ಬಗ್ಗೆ ಗೊತ್ತಿದೆಯೇ? ಇಲ್ಲವಾದರೆ ಈ ಕೆಳಗಿನ ಲೇಖನವನ್ನು ಓದಿ, ಮಂತ್ರ ಯೋಗದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಿ.

ಮಂತ್ರಯೋಗದ ಬಗ್ಗೆ
ಮಂತ್ರ ಯೋಗ ಎಂದರೆ ವಿಜ್ಞಾನದ ರಹಸ್ಯ ಮತ್ತು ಅದರ ಕಂಪನದ ಬಗ್ಗೆ ವಿವರಿಸುವಂತದ್ದು. ತಂತ್ರದ ವಿನೂತನ ಕೊಂಡಿಯಂತಿರುವ ಇದು ಪ್ರಪಂಚವನ್ನು ಚೆನ್ನಾಗಿ ಮತ್ತು ವಾಸ್ತವವಾಗಿ ಅರ್ಥ ಮಾಡಿಕೊಳ್ಳಲು ಮತ್ತು ಅದರ ಅದ್ಭುತ ಪ್ರಯೋಜವನ್ನು ತಿಳಿಸುತ್ತದೆ. ಇದು ವಿಜ್ಞಾನದ ರಹಸ್ಯ ಮತ್ತು ಅದರ ಕಂಪನದ ಒಳ ಮತ್ತು ಹೊರಗಿನ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದನ್ನು ನಾವು ಬಳಸಿಕೊಂಡರೆ ಅದರ ಲಾಭವನ್ನು ನಾವು ಪಡೆದುಕೊಳ್ಳಬಹುದು ಮತ್ತು ಅಗಾಧ ಏಕಾಗ್ರತೆಯನ್ನು ಪಡೆದುಕೊಳ್ಳಲೂ ಸಹಾಯವಾಗುತ್ತದೆ.

Mantra Yoga – About, How to Practice and Advantages

ಮಂತ್ರಯೋಗವನ್ನು ಅಭ್ಯಾಸವನ್ನು ಮಾಡುವುದು ಹೇಗೆ?
ಮಂತ್ರಯೋಗವನ್ನು ಅಭ್ಯಾಸ ಮಾಡುವುದೆಂದರೆ ಸ್ವಾಧೀನ ಮತ್ತು ದೇಹಸ್ಥಿತಿಯನ್ನು ಸಾಂಪ್ರದಾಯಿಕವಾಗಿ ಇಡುವಂತದ್ದು. ಮಂತ್ರ ಅಥವಾ ಭೀತಿ ಪದಗಳು ನಮ್ಮ ಪುರಾತನ ಯೋಗದ ಪ್ರಮುಖಾಂಶ ಮತ್ತು ಇದನ್ನು ಸರಿಯಾದ ರೀತಿಯಲ್ಲಿ ನಡೆಸುವುದು, ಇದರ ಲಾಭವನ್ನು ನಿಜವಾಗಿಯೂ ಪಡೆದುಕೊಳ್ಳಬೇಕಾದರೆ. ಮಂತ್ರಯೋಗವನ್ನು ಸರಿಯಾದ ರೀತಿಯಲ್ಲಿ ನಡೆಸಲು ಕೆಲವೊಂದು ಮಾಹಿತಿಗಳು ಕೆಳಗಿನಂತಿದೆ, ಅದನ್ನು ಪಾಲಿಸಬೇಕಾಗುತ್ತದೆ.

ಮಂತ್ರವನ್ನು ಪಠಿಸುವ ಬಗ್ಗೆ ಹೇಳುವುದಾದರೆ, ಒಂದಕ್ಕೊಂದು ತದ್ವಿರುದ್ಧವಾದ ಪ್ರಯೋಗವು ಉಪಯುಕ್ತವಾಗುತ್ತದೆ. ಸೂಕ್ಷಬುದ್ಧಿಯಿಂದ ಇದನ್ನು ಆರಂಭಿಸಬಹುದು ಮತ್ತು ನೈಸರ್ಗಿಕದತ್ತವಾಗಿ ಪಠಿಸುವುದರಿಂದ ಇದನ್ನು ಮುಂದುವರಿಸಬಹುದು. ಎರಡು ರೀತಿಯ ಮಂತ್ರವನ್ನು ಅಭ್ಯಾಸ ಮಾಡುವುದು ಸ್ಕೇಲಿನ ಎರಡು ಭಾಗದಂತೆ. ಎರಡೂ ಪ್ರಕಾರವೂ ಜೀವನದ ಕೆಲವೊಂದು ಕಾಲಘಟ್ಟದಲ್ಲಿ ಬಹಳ ಉಪಯೋಗಕ್ಕೆ ಬರುತ್ತದೆ. ಈ ಮೂಲಕ ಇದರ ಮಹತ್ವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬಹುದು.

ಮಂತ್ರಯೋಗ ಸಾರ್ವತ್ರಿಕ ಬೀಜ ಮಂತ್ರ ಅಥವಾ ' ಬೀಜ ಓರ್ಬಿಜಾ ಕಂಪನ' ವನ್ನು ಅವಲಂಬಿಸಿದೆ, ಇದು ಮುಖ್ಯವಾಗಿ ಪ್ರಾಥಮಿಕವಾದ ಶಬ್ಧ ಕಂಪನವನ್ನು ಅವಲಂಬಿಸಿದೆ, ಪ್ರಮುಖವಾಗಿ ಓಂ, ಸೋ ಅಹಂ, ಆಹ್ ಹೀಗೆ ಸಾಗುತ್ತದೆ. ಇದನ್ನು ಉಚ್ಚಾರಿಸಿದಾಗ, ನಿಮ್ಮ ಉಸಿರಾಟವನ್ನು ಮತ್ತು ಹೊರಬಿಡುವಿಕೆಯನ್ನು ಹತೋಟಿಯಲ್ಲಿ ಇಡಬೇಕಾಗುತ್ತದೆ.

ಇದಲ್ಲದೇ, ಪ್ರಾಥಮಿಕ ಶಬ್ಧ ಕಂಪನ, ಕೆಲವೊಂದು ದೀರ್ಘ ಪಠಿಸುವಂತಹ ಮಂತ್ರಗಳು ಯೋಗ ಅಭ್ಯಾಸ ಮಾಡುವ ಸಮಯದಲ್ಲಿ ಇದನ್ನು ಪಠಿಸಬೇಕಾಗುತ್ತದೆ, ಇದು ಆಯಾಯ ಜಾತಿ ಅಥವಾ ಕೋಮಿಗೆ ಸಂಬಂಧ ಪಟ್ಟಂತಿರುತ್ತದೆ ಮತ್ತು ಉಪಯೋಗವಾಗುವಂತದ್ದು. ಇದನ್ನು ಶಿಸ್ತುಬದ್ಧವಾಗಿ ಪ್ರಯೋಗಿಸಿದರೆ ಉತ್ತಮ. ಕೆಲವೊಂದು ಮಂತ್ರಗಳು, ಸಾಂದ್ರವಾದ ಬಿಗಿಯಾದ ಪ್ರಾರ್ಥನೆ ಎಂದೂ ಕರೆಯಬಹುದು. ಇದನ್ನು ಕೆಲವೊಂದು ಪ್ರಮುಖವಾದ ವಾಕ್ಯ ಅಥವಾ ಭಾಗವನ್ನು ಆಯ್ದುಕೊಂಡು ಮತ್ತು ದೀರ್ಘವಾದ ವಾಕ್ಯದ ಮೂಲಕ ಅಭ್ಯಾಸ ಮಾಡಿಕೊಳ್ಳಬಹುದು.

ಮಂತ್ರಯೋಗವನ್ನು ಅಭ್ಯಾಸ ಮಾಡುವುದರಿಂದಾಗುವ ಲಾಭಗಳು
ಮಂತ್ರಯೋಗವನ್ನು ಅಭ್ಯಾಸ ಮಾಡುವುದರಿಂದಾಗುವ ಅತ್ಯುತ್ತಮ ಲಾಭವೆಂದರೆ ನರ್ವಸ್ ಸಿಸ್ಟಂ ನಿಂದ ನೀವು ಹೊರಬರಬಹುದು ಮತ್ತು ಇದರಿಂದ ನಮ್ಮ ಮನಸ್ಥಿತಿ ಹತೋಟಿಗೆ ಬರುತ್ತದೆ, ಇದರಿಂದ ಹೆಚ್ಚಿನ ಫೋಕಸ್ ನೀಡಲು ಅನುಕೂಕಲವಾಗುತ್ತದೆ. ಮಂತ್ರಯೋಗವನ್ನು ಸರಿಯಾದ ರೀತಿಯಲ್ಲಿ ಅಭ್ಯಾಸ ಮಾಡುವುದರಿಂದ ಆಗುವ ಕೆಲವೊಂದು ಲಾಭಗಳು ಕೆಳಗಿನಂತಿವೆ:


1. ರಸಗ್ರಂಥಿ ಪದ್ಧತಿಯನ್ನು ಸರಿಯಾದ ರೀತಿಯಲ್ಲಿ ಬ್ಯಾಲನ್ಸ್ ಮಾಡಿದರೆ, ತಾಳ್ಮೆ, ಒತ್ತಡ, ಆತಂಕದಿಂದ ದೂರವಾಗಿ ನಮ್ಮ ಮೂಡ್ ಅನ್ನು ಹತೋಟಿಗೆ ತರಬಹುದು.
2. ಮಂತ್ರಯೋಗವನ್ನು ಸರಿಯಾಗಿ ಪಠಿಸಿದರೆ ಆರೋಗ್ಯವನ್ನು ಸುಧೃಢವಾಗಿ ಇಟ್ಟುಕೊಳ್ಳಬಹುದು.
3. ಮಂತ್ರಯೋಗದಿಂದ ಬೋರ್ಲು ಬಿದ್ದ ಕಾಯಿಲೆಯನ್ನು ದೂರಮಾಡಬಹುದು.
4. ಮಂತ್ರಯೋಗದಿಂದ ಏಕಾಗ್ರತೆ ಮತ್ತು ಚುರುಕುತನವನ್ನು ವೃದ್ಧಿ ಪಡಿಸಿಕೊಳ್ಳಬಹುದು.
5. ನರ್ವಸ್ ಹೊಂದುವುದು ಮಂತ್ರಯೋಗದಿಂದ ದೂರ ಮಾಡಬಹುದು, ಜೊತೆಗೆ ಎಲ್ಲಾ ದುರಾಭ್ಯಾಸವನ್ನು ದೂರ ಮಾಡಬಹುದು.
6. ಮಂತ್ರಯೋಗದಿಂದ ಮಾನಸಿಕ ಕಾಯಿಲೆಯಿಂದ ಮುಕ್ತಗೊಳ್ಳಲು ಸಹಾಯವಾಗುತ್ತದೆ.
English summary

Mantra Yoga – About, How to Practice and Advantages

You might have already heard about mantra yoga and its benefits. But do you really have any idea about how to practice mantras for enhancing our complete well-being and how do they actually work? If not, then dig into this article and find out all useful information about mantra yoga.
X
Desktop Bottom Promotion