For Quick Alerts
ALLOW NOTIFICATIONS  
For Daily Alerts

ಕಾಲು ನೋವು: ಸ್ಟೆಪ್ ಬೈ ಸ್ಟೆಪ್ ಟಿಪ್ಸ್, ಪ್ರಯತ್ನಿಸಿ ನೋಡಿ...

By Hemanth
|

ಪ್ರತಿಯೊಬ್ಬರಿಗೂ ಏನಾದರೊಂದು ಆರೋಗ್ಯ ಸಮಸ್ಯೆಗಳು ಇದ್ದೇ ಇರುತ್ತದೆ. ಸಂಪೂರ್ಣವಾಗಿ ಆರೋಗ್ಯವಾಗಿರುವವರು ತುಂಬಾ ಕಡಿಮೆ ಎನ್ನಬಹುದು. ಕೆಲವೊಂದು ಸಮಸ್ಯೆಗಳು ದೇಹವನ್ನು ಕಾಡುತ್ತಾ ಇರುತ್ತದೆ. ಇಂತಹ ಸಮಸ್ಯೆಗಳಲ್ಲಿ ಕಾಲು ನೋವು ಕೂಡ ಒಂದಾಗಿದೆ.

ಇಂದು ಪ್ರತಿಯೊಬ್ಬರಲ್ಲೂ ಇದು ಕಾಣಿಸಿಕೊಳ್ಳುತ್ತದೆ. ಕಾಲು ನೋವಿನಿಂದ ನಮ್ಮ ಕೆಲಸಕಾರ್ಯಗಳ ಮೇಲೆ ಪರಿಣಾಮ ಬೀರಬಹುದು ಮತ್ತು ಚುರುಕಾಗಿರಲು ಇದನ್ನು ಸಮಸ್ಯೆಯಾಗಬಹುದು. ಕಾಲು ನೋವಿಗೆ ಹಲವಾರು ಕಾರಣಗಳು ಇವೆ. ನಿದ್ದೆ ಕೆಡಿಸುವ ಕಾಲುಗಳ ಸ್ನಾಯು ಸೆಳೆತಕ್ಕೆ ಸೂಕ್ತ ಮನೆಮದ್ದು

ಸ್ನಾಯುಗಳ ಮೇಲೆ ಬಿದ್ದ ಒತ್ತಡ, ಗಾಯಾಳು ಸಮಸ್ಯೆ, ಎಲುಬಿನ ದುರ್ಬಲತೆ, ಕ್ಯಾಲ್ಸಿಯಂ ಕೊರತೆ ಇತ್ಯಾದಿ. ಆದರೆ ಕೆಲವೊಂದು ಸಲ ಇಂತಹ ನೋವು ಕಾಲಿನ ದೊಡ್ಡ ರೋಗವಾಗಿ ಕಾಡಬಹುದು. ಇದರಿಂದ ನೋವು ಕಾಣಿಸಿಕೊಂಡ ತಕ್ಷಣದಿಂದ ಇದರ ಆರೈಕೆ ಮಾಡಬೇಕು. ಕಾಲು ನೋವಿಗೆ ಕೆಲವೊಂದು ಮನೆಮದ್ದನ್ನು ಇಲ್ಲಿ ನೀಡಲಾಗಿದೆ.....


ಸಾಸಿವೆ ಎಣ್ಣೆ

ಸಾಸಿವೆ ಎಣ್ಣೆ

ಕಾಲುಗಳಿಗೆ ಸಾಸಿವೆ ಎಣ್ಣೆಯನ್ನು ನಿಯಮಿತವಾಗಿ ಉಜ್ಜಿಕೊಳ್ಳಿ. ರಾತ್ರಿ ವೇಳೆ ಹೀಗೆ ಮಾಡಿ. ಸುಮಾರು 20 ನಿಮಿಷ ಕಾಲ ಮಸಾಜ್ ಮಾಡಿಕೊಂಡ ಬಳಿಕ ಕಾಲಿಗೆ ಹತ್ತಿ ಬಟ್ಟೆಯನ್ನು ಸುತ್ತಿಕೊಳ್ಳಿ. ಕೆಲವೇ ನಿಮಿಷಗಳಲ್ಲಿ ನೋವು ನಿವಾರಣೆಯಾಗುವುದು. ನಿಯಮಿತವಾಗಿ ಹೀಗೆ ಮಾಡಿದರೆ ನೋವು ಸಂಪೂರ್ಣವಾಗಿ ಮಾಯವಾಗುವುದು.ಆರೋಗ್ಯ ಟಿಪ್ಸ್: ಸಾಸಿವೆ ಎಣ್ಣೆಯ ತಾಕತ್ತಿಗೆ, ತಲೆಬಾಗಲೇಬೇಕು!

ವಿನೇಗರ್‌....

ವಿನೇಗರ್‌....

ಬಟ್ಟೆಯ ಸಣ್ಣ ತುಂಡಿಗೆ ಇಸ್ತ್ರಿ ಹಾಕಿದ ಬಳಿಕ ಆ ಬಟ್ಟೆಯನ್ನು ವಿನೇಗರ್‌ನಲ್ಲಿ ಅದ್ದಿಡಿ. ಬಳಿಕ ಇದನ್ನು ಕಾಲು ಹಾಗೂ ಗಂಟಿನ ಮೇಲೆ ಹಾಕಿಕೊಳ್ಳಿ.

ಮೆಂತೆಯ ಸೊಪ್ಪು...

ಮೆಂತೆಯ ಸೊಪ್ಪು...

ಮೆಂತೆಯ ಸೊಪ್ಪನ್ನು ಬಿಸಿಲಿನಲ್ಲಿ ಸರಿಯಾಗಿ ಒಣಗಿಸಿ. ಸರಿಯಾಗಿ ಒಣಗಿದ ಬಳಿಕ ಹುಡಿ ಮಾಡಿಡಿ. ಪ್ರತೀ ದಿನ ಬೆಳಿಗ್ಗೆ ಒಂದು ಲೋಟ ನೀರಿಗೆ ಒಂದು ಚಮಚ ಹುಡಿಯನ್ನು ಹಾಕಿ ನಿಯಮಿತವಾಗಿ ಕುಡಿಯಿರಿ.

ಆಲಿವ್ ತೈಲ.....

ಆಲಿವ್ ತೈಲ.....

ನಿಯಮಿತವಾಗಿ ಆಲಿವ್ ತೈಲ ಆಹಾರದೊಂದಿಗೆ ಸೇವನೆ ಮಾಡುವುದು ನೋವಿಗೆ ಒಳ್ಳೆಯದು.

ಬಿಸಿ ನೀರಿಗೆ ಸ್ವಲ್ಪ ಕೇಸರಿ....

ಬಿಸಿ ನೀರಿಗೆ ಸ್ವಲ್ಪ ಕೇಸರಿ....

ಒಂದು ಲೋಟ ಬಿಸಿ ನೀರಿಗೆ ಸ್ವಲ್ಪ ಕೇಸರಿ ಹಾಕಿಕೊಂಡು ಕುದಿಸಿ. ಈ ನೀರನ್ನುಮೂರು ಭಾಗವನ್ನಾಗಿ ಮಾಡಿ ದಿನದಲ್ಲಿ ಮೂರು ಸಲ ಕುಡಿಯಿರಿ.

ಅಕ್ರೋಟ್....

ಅಕ್ರೋಟ್....

ಪ್ರತೀದಿನ ಖಾಲಿ ಹೊಟ್ಟೆಯಲ್ಲಿ ಅಕ್ರೋಟ್ ಅನ್ನು ತಿನ್ನಿ.

ಗಿಣ್ಣು, ಸೋಯಾ ಬೀನ್, ಹಾಲು, ಧಾನ್ಯಗಳು.....

ಗಿಣ್ಣು, ಸೋಯಾ ಬೀನ್, ಹಾಲು, ಧಾನ್ಯಗಳು.....

ಗಿಣ್ಣು, ಸೋಯಾ ಬೀನ್, ಹಾಲು, ಧಾನ್ಯಗಳು, ಹಸಿರು ತರಕಾರಿ, ಮೊಟ್ಟೆ, ಬಾಳೆಹಣ್ಣು ಮತ್ತು ಮೊಳಕೆ ಬರಿಸಿದ ಧಾನ್ಯಗಳನ್ನು ತಿನ್ನಿ. ಇದನ್ನು ನಿಯಮಿತವಾಗಿ ಬಳಸುವುದರಿಂದ ಕಾಲು ನೋವಿಗೆ ಪರಿಹಾರ ಸಿಗುವುದು. ಆಹಾರ ಪಥ್ಯ ತುಂಬಾ ಮುಖ್ಯ. ನರದ ಸಮಸ್ಯೆಯಿದ್ದರೆ ಟೊಮೆಟೋ ಸೇವನೆ ಮಾಡಬೇಡಿ.

English summary

Leg Pain And Easy Home Remedies

Sometimes a regular pain can be the start of one of the major leg diseases. Thus, it's important to take care from the time you experience pain. Here are few easy home remedies for leg pain
X
Desktop Bottom Promotion