For Quick Alerts
ALLOW NOTIFICATIONS  
For Daily Alerts

ಕಿಡ್ನಿ ವೈಫಲ್ಯ: ಪ್ರತಿಯೊಬ್ಬರೂ ತಿಳಿಯಬೇಕಾದ ಸತ್ಯಾಸತ್ಯತೆ

By Arshad
|

ನಮ್ಮ ದೇಹದ ಕೆಲವು ಅಂಗಗಳು ಸದಾ ಸುಸ್ಥಿತಿಯಲ್ಲಿರಲೇಬೇಕು ಮತ್ತು ಸತತವಾಗಿ ಕೆಲಸ ಮಾಡುತ್ತಲೇ ಇರಬೇಕು. ಹೃದಯ, ಮೆದುಳು, ರಕ್ತಪರಿಲನೆ, ಮೂತ್ರಪಿಂಡಗಳು ಇತ್ಯಾದಿ. ಇದರಲ್ಲಿ ಮೂತ್ರಪಿಂಡಗಳ ಕರ್ತವ್ಯವೇನೆಂದರೆ ದೇಹದ ಎಲ್ಲಾ ಕಡೆಗಳಿಂದ ಕಲ್ಮಶಗಳನ್ನು ಹೊತ್ತು ತಂದ ರಕ್ತವನ್ನು ಸೋಸಿ ರಕ್ತವನ್ನು ಶುದ್ಧೀಕರಿಸಿ ಕಲ್ಮಶಗಳನ್ನು ಮೂತ್ರದ ರೂಪದಲ್ಲಿ ಹೊರಹಾಕುವುದು. ಮೂತ್ರಪಿಂಡಗಳ ಕ್ಷಮತೆ ಉಡುಗುತ್ತಿದ್ದಂತೆಯೇ ಇತರ ಅಂಗಗಳೂ ಶಿಥಿಲವಾಗುತ್ತಾ ಹೋಗುತ್ತವೆ.

 Kidney Failure: Facts You Should Know

ಒಂದು ಹಂತದಲ್ಲಿ ಅಗತ್ಯವಿರುವ ಕನಿಷ್ಟಮಟ್ಟದ ಸೋಸುವಿಕೆಯನ್ನೂ ಸೋಸಲು ಅಸಮರ್ಥವಾದಾಗ ಇದನ್ನು ಮೂತ್ರಪಿಂಡಗಳ ವೈಫಲ್ಯವೆಂದು ಕರೆಯುತ್ತೇವೆ. ಇದಕ್ಕೆ ಹಲವಾರು ಕಾರಣಗಳಿವೆ. ನಿರ್ಜಲೀಕರಣ, ಇತರ ಔಷಧಿಗಳ ಅಡ್ಡಪರಿಣಾಮಗಳು, ಕೆಲವು ಸಂದರ್ಭಗಳಲ್ಲಿ ದೇಹದ ಒಳಗಿನ ಗಡ್ಡೆಗಳು ಪ್ರಮುಖ ಕಾರಣಗಳಾಗಿವೆ.

ಸಾಕಷ್ಟು ನೀರು ಕುಡಿಯದಿರುವುದು ನೇರವಾಗಿ ಮೂತ್ರಪಿಂಡಗಳ ವೈಫಲ್ಯಕ್ಕೆ ಕಾರಣವಾಗಬಹುದು. ಇತರ ಕಾರಣಗಳಿಂದ ಅತಿ ಹೆಚ್ಚಿನ ವಾಂತಿ ಅಥವಾ ಬೇಧಿಯಾದರೂ ವಿಫಲಗೊಳ್ಳಬಹುದು. Nephrotic syndrome, ಅಂದರೆ ಮೂತ್ರಪಿಂಡಗಳ ಮೂಲಕ ಪ್ರೋಟೀನುಗಳು ಸೋರುವ ತೊಂದರೆಯೂ ವೈಫಲ್ಯಕ್ಕೆ ಕಾರಣವಾಗಬಹುದು. ನೀವು ತಿಳಿದಿರಬೇಕಾದ ಕಿಡ್ನಿ ರೋಗಗಳ 12 ಲಕ್ಷಣಗಳು

ನಮ್ಮ ಮೂತ್ರಪಿಂಡಗಳ ಸಹಿತ ಪ್ರಮುಖ ಅಂಗಗಳಲ್ಲೊಂದು ವಿಶೇಷತೆ ಇದೆ. ಅದೆಂದರೆ ತನ್ನ ಕ್ಷಮತೆ ಅತಿ ಕಡಿಮೆಯಾಗುವವರೆಗೂ ಗುಟ್ಟುಬಿಟ್ಟುಕೊಡದೇ ವಿಫಲವಾಗುವ ಹಂತದಲ್ಲಿ ಧಿಡೀರನೇ ಕುಸಿಯುವುದು. ಎಷ್ಟೋ ಸಂದರ್ಭಗಳಲ್ಲಿ ಚಿಕ್ಕಪುಟ್ಟ ನೋವುಗಳನ್ನು ಅಲಕ್ಷಿಸಿದವರಿಗೆ ತಮ್ಮ ದೇಹದ ಅಂಗಗಳಲ್ಲಿ ದೊಡ್ಡ ತೊಂದರೆ ಈಗಾಗಲೇ ಪ್ರಾರಂಭವಾಗಿದ್ದುದು ಗೊತ್ತೇ ಇರುವುದಿಲ್ಲ. ಇದೇ ಕಾರಣಕ್ಕೆ ಮಧ್ಯವಯಸ್ಸು ದಾಟಿದ ಬಳಿಕ ನಿಯಮಿತವಾಗಿ ತಪಾಸಣೆಗೊಳಪಡಲು ವೈದ್ಯರು ಸಲಹೆ ಮಾಡುತ್ತಾರೆ.

ಇದರಿಂದ ಈಗಾಗಲೇ ಪ್ರಾರಂಭವಾಗಿದ್ದು ಅರಿವಿಗೆ ಬಾರದೇ ಇರುವ ತೊಂದರೆಗಳು ಪರೀಕ್ಷೆಗಳ ಮೂಲಕ ಬೆಳಕಿಗೆ ಬರುತ್ತವೆ. ಮೂತ್ರಪಿಂಡಗಳ ವೈಫಲ್ಯಕ್ಕೂ ಇದೇ ಕಾರಣ. ವಿಶೇಷವಾಗಿ ಮೂತ್ರಪಿಂಡಗಳ ಒಳಗಣ ಕಲ್ಲುಗಳು, ಈ ಕಲ್ಲುಗಳು ನಮ್ಮೆಲ್ಲರಲ್ಲಿಯೂ ಇದೆ. ಆದರೆ ಇದರ ಗಾತ್ರ ಚಿಕ್ಕದಾಗಿದ್ದರೆ ಇವು ಅರಿವಿಗೇ ಬರುವುದಿಲ್ಲ.

ಇವು ಬರುವುದು ಏನಿದ್ದರೂ ಒಂದು ಹಂತದಷ್ಟು ಬೆಳೆದು ಮೂತ್ರಪಿಂಡಗಳ ಒಳಗಣ ಗೋಡೆಗಳ ಮೇಲೆ ಒತ್ತಡ ಬಿದ್ದ ಬಳಿಕವೇ. ಈ ಸ್ಥಿತಿಗಳನ್ನು ಪರೀಕ್ಷಿಸಿ ಕೇವಲ ತಜ್ಞ ವೈದ್ಯರು ಮಾತ್ರ ಸೂಕ್ತ ಔಷಧಿ ಮತ್ತು ಸೂಕ್ತ ಚಿಕಿತ್ಸೆಗಳನ್ನು ನೀಡಬಲ್ಲರು. ಕೆಲವು ಬಾರಿ ಸ್ಟೆರಾಯ್ಡುಗಳನ್ನೂ ನೀಡಬೇಕಾಗಿ ಬರಬಹುದು. ಕಿಡ್ನಿ ಕಾಳಜಿ: ಸ್ವಲ್ಪ ಯಾಮಾರಿದರೂ, ಜೀವಕ್ಕೆ ಸಂಚಕಾರ!

ಒಂದು ವೇಳೆ ಸೂಕ್ತ ಸಮಯದಲ್ಲಿ ಸೂಕ್ತ ಚಿಕಿತ್ಸೆ ದೊರಕದೇ ಹೋದಲ್ಲಿ renal artery stenosis ಎಂಬ ತೊಂದರೆ ಎದುರಾಗುತ್ತದೆ. ಅಂದರೆ ನಮ್ಮ ಮೂತ್ರಪಿಂಡಗಳಿಗೆ ರಕ್ತವನ್ನು ಕೊಂಡೊಯ್ಯುವ ರಕ್ತನಾಳಗಳು ಅತಿಯಾಗಿ ಸಂಕುಚಿತಗೊಂಡು ಸಪೂರವಾಗಿಬಿಡುತ್ತವೆ. ಆಗ ರಕ್ತದ ಮೂಲಕ ಔಷಧಿಯೂ ತಲುಪಲಾಗದೇ ಚಿಕಿತ್ಸೆಯೂ ಫಲ ನೀಡುವುದಿಲ್ಲ. ಆಗ ಶಸ್ತ್ರಚಿಕಿತ್ಸೆಯೇ ಅನಿವಾರ್ಯ ಆಯ್ಕೆಯಾಗುತ್ತದೆ. ಈ ಸ್ಥಿತಿ ಮುಂದುವರೆದರೆ ಮೂತ್ರಪಿಂಡ ವಿಫಲಗೊಳ್ಳುವುದು ಖಚಿತ.

ಆದ್ದರಿಂದ ಮೂತ್ರಪಿಂಡಗಳು ವೈಫಲ್ಯಕ್ಕೆ ಜಾರುವ ಮುನ್ನವೇ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದೇ ಜಾಣತನದ ಕ್ರಮ. ಇದಕ್ಕೂ ಮುನ್ನ ಡಯಾಲಿಸಿಸ್ ಅ ನಂತಹ ಚಿಕಿತ್ಸಾ ಕ್ರಮಗಳಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. Chronic renal failure ಎಂಬ ಸ್ಥಿತಿ ಅಂದರೆ ನಿಧಾನವಾಗಿ ವೈಫಲ್ಯದತ್ತ ಜಾರುತ್ತಿರುವ ಮೂತ್ರಪಿಂಡಗಳು ಸಹಾ ವೈಫಲ್ಯಕ್ಕೆ ಕಾರಣವಾಗಬಹುದು. ಈ ಸ್ಥಿತಿಯನ್ನು ವೈದ್ಯರು ಐದು ಹಂತಗಳಲ್ಲಿ ಗುರುತಿಸುತ್ತಾರೆ.

ಪ್ರಾರಂಭಿಕ ಹಂತದಲ್ಲಿ ಮೂತ್ರಪಿಂಡಗಳು ಅಗತ್ಯಕ್ಕೆ ತಕ್ಕಷ್ಟು ಪ್ರಮಾಣದಲ್ಲಿ ಸೋಸುವ ಕ್ಷಮತೆಯನ್ನು ನಿಧಾನವಾಗಿ ಕಳೆದುಕೊಳ್ಳುತ್ತಾ ಬರುತ್ತದೆ. ಹೀಗೇ ಐದನೆಯ ಹಂತಕ್ಕೆ ಬಂದಾಗ ಕನಿಷ್ಠ ಪ್ರಮಾಣದ ಸೋಸುವಿಕೆಯ ಕ್ಷಮತೆಯನ್ನೂ ಕಳೆದುಕೊಂಡು ತೀರಾ ದುರ್ಬಲವಾಗಿರುತ್ತವೆ. ಈ ಹಂತವನ್ನು ಮೂತ್ರಪಿಂಡಗಳ ವೈಫಲ್ಯ ಎಂದು ಕರೆಯುತ್ತಾರೆ. ಕಿಡ್ನಿ ಆರೋಗ್ಯವಾಗಿರಬೇಕೆಂದು ಬಯಸುತ್ತೀರಾ?

ಈ ತೊಂದರೆ ಇದ್ದವರಿಗೆ ಇತರ ಕಾಯಿಲೆಗಳಿಗೆ ನೀಡಲಾಗುವ ಔಷಧಿಗಳೇ ವಿಷವಾಗಿ ಪರಿಣಮಿಸಬಹುದು. ಆಗ ವೈದ್ಯರು ಅನಿವಾರ್ಯವಾಗಿ ಇತರ ಔಷಧಿಗಳನ್ನು ನಿಲ್ಲಿಸಿ ಆಹಾರದಲ್ಲಿ ಸೇವಿಸುವ ಪ್ರೋಟೀನು, ಗಂಧಕ, ಪೊಟಾಶಿಯಂ ಪ್ರಮಾಣಗಳನ್ನೂ ಅತಿ ಕಡಿಮೆ ಮಾಡಲಿಕ್ಕೆ ಶಿಫಾರಸ್ಸು ಮಾಡಬಹುದು. ಈಗ ಆಹಾರ ಪರಿಣಿತರೇ ರೋಗಿ ಯಾವ ಬಗೆಯ ಆಹಾರಗಳನ್ನು ಸೇವಿಸಬಹುದು ಎಂದು ರೋಗಿಯ ಸ್ಥಿತಿಗತಿ ಮತ್ತು ವೈದ್ಯರ ಶಿಫಾರಸ್ಸನ್ನು ಪರಿಗಣಿಸಿ ಸಲಹೆ ಮಾಡುತ್ತಾರೆ. ಎಚ್ಚರ: ನಿಮ್ಮ ಕಿಡ್ನಿ ಕೂಡ ಅಪಾಯದಲ್ಲಿ ಸಿಲುಕಿರಬಹುದು!

ನಾಲ್ಕನೆಯ ಹಂತ ದಾಟುವವರೆಗೂ ಮೂತ್ರಪಿಂಡಗಳನ್ನು ಸೂಕ್ತ ಚಿಕಿತ್ಸೆ ಮತ್ತು ಆಹಾರ ಕ್ರಮದ ಮೂಲಕ ಮತ್ತೆ ಒಂದನೆಯ ಹಂತ, ಆ ಬಳಿಕ ಆರೋಗ್ಯಕರ ಹಂತಕ್ಕೆ ತರಬಹುದು. ಆದರೆ ಐದನೆಯ ಹಂತ ದಾಟಿದ ಬಳಿಕ ಮೂತ್ರಪಿಂಡಗಳನ್ನು ಮತ್ತೆ ರಿಪೇರಿಗೊಳಿಸಲೂ ಅಥವಾ ಹಿಂದಿನ ಹಂತಕ್ಕೆ ತರಲು ಸಾಧ್ಯವಿಲ್ಲ. ಆಗ ಸತತ ಡಯಾಲಿಸಿಸ್ ಅಥವಾ ದಾನಿಯಿಂದ ಮೂತ್ರಪಿಂಡವನ್ನು ಪಡೆದು ಕಸಿ ಮಾಡುವುದೊಂದೇ ಉಳಿದ ಮಾರ್ಗವಾಗುತ್ತದೆ.

English summary

Kidney Failure: Facts You Should Know

The kidneys are one of the most crucial organs of the body. They work to filter the blood and regulate the fluids along with other substances in the blood. When the kidneys stop functioning, the other organs also start failing. Kidney failure might occur due to dehydration, contamination or due to harm from medication. In several cases tumours and cysts may also cause kidney failure.
Story first published: Monday, July 11, 2016, 19:47 [IST]
X
Desktop Bottom Promotion