For Quick Alerts
ALLOW NOTIFICATIONS  
For Daily Alerts

ಚಳಿಗಾಲದ ಸಂಜೀವಿನಿ-ಹುಳಿ ಸಿಹಿ ರುಚಿಯ 'ಕಿತ್ತಳೆ ಹಣ್ಣು'

ಹೆಚ್ಚು ಸಿಹಿಯೂ ಅಲ್ಲದ ಹೆಚ್ಚು ಹುಳಿಯೂ ಅಲ್ಲದ ಕಿತ್ತಳೆ ಕಡಿಮೆ ಬೆಲೆಯಲ್ಲಿ ಹಣ್ಣು ಪ್ರೇಮಿಗಳ ಮಡಿಲಿಗೆ ಬಂದು ಸೇರುವಂಥವುಗಳಾಗಿವೆ. ಕಡಿಮೆ ಪ್ರಮಾಣದಲ್ಲಿ ಕ್ಯಾಲರಿಗಳನ್ನು ಹೊಂದಿರುವ ಕಿತ್ತಳೆ ಯಥೇಚ್ಛವಾದ ದ್ರವವನ್ನು ತನ್ನಲ್ಲಿ ಹೊಂದಿದೆ.

By Jaya Subramanya
|

ಹಣ್ಣುಗಳನ್ನು ತಿಂದು ನಿಮ್ಮ ಆರೋಗ್ಯವನ್ನು ವರ್ಧಿಸಿಕೊಳ್ಳಿ ಎಂಬುದು ಚಲಾವಣೆಯಲ್ಲಿರುವ ನಾಣ್ಣಡಿಯಾಗಿದೆ. ಎಲ್ಲಾ ಹಣ್ಣುಗಳೂ ಕೂಡ ನಮ್ಮ ಆರೋಗ್ಯಕ್ಕೆ ಸಂಜೀವಿನಿ ಎಂದೆನಿಸಿದ್ದು ಆಯಾಯ ಋತುಮಾನಕ್ಕೆ ಅನುಸಾರವಾಗಿ ದೊರೆಯುವ ಹಣ್ಣುಗಳ ಸೇವನೆಯನ್ನು ನಾವು ಮಾಡಬೇಕಾಗುತ್ತದೆ. ಕಿತ್ತಳೆ ಹಾಗೂ ಬೆಣ್ಣೆ ಹಣ್ಣಿನಲ್ಲಿದೆ, ಬೆಣ್ಣೆಯಂತಹ ಸೌಂದರ್ಯ!

ಇಂದಿನ ಲೇಖನದಲ್ಲಿ ಕಿತ್ತಳೆ ಹಣ್ಣಿನ ಪ್ರಯೋಜನಕಾರಿ ಗುಣಗಳ ಬಗ್ಗೆ ಮಾಹಿತಿ ಪಡೆದುಕೊಳ್ಳೋಣ. ಚಳಿಗಾಲದಲ್ಲಿ ಕಿತ್ತಳೆ ಹಣ್ಣಿಗೆ ಬೇಡಿಕೆ ಇದ್ದು ಕಡಿಮೆ ದರದಲ್ಲಿ ಯಥೇಚ್ಛ ಆರೋಗ್ಯ ಅಂಶಗಳನ್ನು ಹೊಂದಿರುವ ಹಣ್ಣು ಇದಾಗಿದೆ. ಸಿಟ್ರಸ್ ಅಂಶವನ್ನು ಕಿತ್ತಳೆ ಪಡೆದುಕೊಂಡಿದ್ದು ಫೈಟೊನ್ಯೂಟ್ರಿಯೆಂಟ್ ಅಂಶಗಳನ್ನು ಈ ಹಣ್ಣು ಪಡೆದುಕೊಂಡಿದೆ. ಕರುಳಿನ ಕ್ಯಾನ್ಸರ್ ಅನ್ನು ಹೋಗಲಾಡಿಸುವ ಸಂಜೀವಿನಿ ಕಿತ್ತಳೆಯಾಗಿದೆ. ಕಿತ್ತಳೆ ಹಣ್ಣು, ಗರ್ಭಿಣಿಯರ ಪಾಲಿಗೆ ಇದು ಚಿನ್ನದಂತಹ ಹಣ್ಣು

ಅಸ್ತಮಾ ಮತ್ತು ಸಂಧಿವಾತದಂತಹ ಸಮಸ್ಯೆಗಳನ್ನು ಕಿತ್ತಳೆ ದೂರಮಾಡಲಿದ್ದು ಶೀತ ಮತ್ತು ಕಿವಿಯ ಸೋಂಕನ್ನು ಕಿತ್ತಳೆ ನಿವಾರಿಸಲಿದೆ. ಹೃದಯ ಸಂಬಂಧಿ ರೋಗಗಳನ್ನು ಕಿತ್ತಳೆ ನಿವಾರಿಸಿ ಕ್ಯಾನ್ಸರ್ ಅನ್ನು ಮಟ್ಟ ಹಾಕುವ ತಾಕತ್ತನ್ನು ಹೊಂದಿದೆ. ಉತ್ತಮ ಗುಣಮಟ್ಟದ ಫೈಬರ್ ಅಂಶವನ್ನು ಕಿತ್ತಳೆ ಪಡೆದಿದ್ದು ಕೊಲೆಸ್ಟ್ರಾಲ್ ಅನ್ನು ಇಳಿಸಲೂ ಸಹಕಾರಿಯಾಗಿದೆ. ಹಾಗಿದ್ದರೆ ಇಂದಿಲ್ಲಿ ಕಿತ್ತಳೆಯ ಇನ್ನಷ್ಟು ಆರೋಗ್ಯ ಪ್ರಯೋಜನಗಳನ್ನು ಅರಿತುಕೊಳ್ಳೋಣ.....


ಕ್ಯಾನ್ಸರ್ ವಿರುದ್ಧ ಸಂರಕ್ಷಣೆ

ಕ್ಯಾನ್ಸರ್ ವಿರುದ್ಧ ಸಂರಕ್ಷಣೆ

ಸಿಟ್ರಸ್ ಲಿಮನಾಯ್ಡ್‌ಸ್‌ಗಳನ್ನು ಕಿತ್ತಳೆಯು ಪಡೆದುಕೊಂಡಿದ್ದು ಕ್ಯಾನ್ಸರ್ ವಿರುದ್ಧ ಹೋರಾಡುವ ಸಂಜೀವಿನಿ ಇದಾಗಿದೆ. ತ್ವಚೆ, ಶ್ವಾಸಕೋಶ, ಸ್ತನ, ಹೊಟ್ಟೆ ಮತ್ತು ಕರುಳಿನ ಕ್ಯಾನ್ಸರ್‌ಗೂ ಇದು ಪರಿಣಾಮಕಾರಿ ಮದ್ದಾಗಿದೆ.

ಕಿಡ್ನಿ ರೋಗಗಳನ್ನು ನಿವಾರಿಸುತ್ತದೆ

ಕಿಡ್ನಿ ರೋಗಗಳನ್ನು ನಿವಾರಿಸುತ್ತದೆ

ಕಿತ್ತಳೆ ರಸವನ್ನು ನಿಯಮಿತವಾಗಿ ಸೇವಿಸುವುದು ಕಿಡ್ನಿ ರೋಗಗಳನ್ನು ದೂರಮಾಡಲಿದ್ದು ಕಿಡ್ನಿ ಕಲ್ಲುಗಳನ್ನು ಹೋಗಲಾಡಿಸಲಿದೆ.

ಕಡಿಮೆ ಕೊಲೆಸ್ಟ್ರಾಲ್

ಕಡಿಮೆ ಕೊಲೆಸ್ಟ್ರಾಲ್

ಕರಗುವ ಫೈಬರ್ ಅನ್ನು ಕಿತ್ತಳೆಯು ಪಡೆದುಕೊಂಡಿದ್ದು ಇದು ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಇಳಿಸಲಿದೆ.

ಹೃದಯದ ಆರೋಗ್ಯವನ್ನು ವೃದ್ಧಿಸುತ್ತದೆ

ಹೃದಯದ ಆರೋಗ್ಯವನ್ನು ವೃದ್ಧಿಸುತ್ತದೆ

ಕಿತ್ತಳೆಯಲ್ಲಿರುವ ಪೊಟ್ಯಾಶಿಯಮ್ ಅಂಶವು ಹೃದಯದ ಆರೋಗ್ಯಕ್ಕೆ ಅತ್ಯುತ್ತಮವಾಗಿದೆ. ಪೊಟ್ಯಾಶಿಯಮ್ ಮಟ್ಟವು ಕಡಿಮೆಯಾದಾಗ ಇದು ಅಸಹಜ ಹೃದಯ ಲಯಕ್ಕೆ ಕಾರಣ ಎಂದೆನಿಸಿದ್ದು, ಎರಿತ್ಮಿಯಾ ಎಂಬುದಾಗಿ ಇದನ್ನು ಕರೆಯಲಾಗಿದೆ. ಇದು ಅಭಿವೃದ್ಧಿಯಾಗುವ ಸಾಧ್ಯತೆ ಇರುತ್ತದೆ.

ರೋಗಗಳ ಅಪಾಯಗಳನ್ನು ಕಡಿಮೆ ಮಾಡುತ್ತದೆ

ರೋಗಗಳ ಅಪಾಯಗಳನ್ನು ಕಡಿಮೆ ಮಾಡುತ್ತದೆ

ವಿಟಮಿನ್ ಸಿ ಅಂಶವು ಕಿತ್ತಳೆಯಲ್ಲಿದ್ದು ಮುಕ್ತ ರಾಡಿಕಲ್‌ಗಳನ್ನು ದುರ್ಬಲಗೊಳಿಸುವುದರ ಮೂಲಕ ಇದು ಜೀವಕೋಶಗಳನ್ನು ಸಂರಕ್ಷಿಸುತ್ತದೆ. ಮುಕ್ತ ರಾಡಿಕಲ್‌ಗಳು ದೀರ್ಘಕಾಲದ ರೋಗಗಳಾದ ಕ್ಯಾನ್ಸರ್ ಮತ್ತು ಹೃದಯ ರೋಗಕ್ಕೆ ಕಾರಣವಾಗಿದೆ.

ಮಲಬದ್ಧತೆ ಸಮಸ್ಯೆ ನಿವಾರಣೆ

ಮಲಬದ್ಧತೆ ಸಮಸ್ಯೆ ನಿವಾರಣೆ

ಜೀರ್ಣವಾಗುವ ಫೈಬರ್ ಅನ್ನು ಕಿತ್ತಳೆಯು ಹೊಂದಿದ್ದು ಇದು ಜೀರ್ಣದ್ರವಗಳನ್ನು ಪ್ರಚೋದಿಸುತ್ತದೆ ಮತ್ತು ಮಲಬದ್ಧತೆ ಸಮಸ್ಯೆಯನ್ನು ನೀಗಿಸುತ್ತದೆ.

ಹೆಚ್ಚು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ

ಹೆಚ್ಚು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ

ಹೆಸ್ಪರಿಡನ್ ಎಂದು ಕರೆಯಲಾದ ಫ್ಲೇವನಾಯ್ಡ್ ಅನ್ನು ಕಿತ್ತಳೆಯು ಹೊಂದಿದ್ದು ಇದು ಹೆಚ್ಚುವರಿ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಇದು ಮೆಗ್ನೇಷಿಯಮ್ ಅಂಶವನ್ನು ಹೊಂದಿದ್ದು ಇದು ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಸಹಕಾರಿಯಾಗಿದೆ.

ತ್ವಚೆಯ ಸಂರಕ್ಷಣೆ

ತ್ವಚೆಯ ಸಂರಕ್ಷಣೆ

ಇದು ಬೀಟಾ - ಕ್ಯಾರೊಟಿನ್ ಅಂಶವನ್ನು ಹೊಂದಿದ್ದು, ಒಂದು ಶಕ್ತಿಯುತ ಉತ್ಕರ್ಷಣ

ನಿರೋಧಿಯಾಗಿದ್ದುಕೊಂಡು ತ್ವಚೆಯ ಕೋಶಗಳನ್ನು ಹಾನಿಯಾಗುವಲ್ಲಿಂದ ರಕ್ಷಿಸುತ್ತದೆ. ಕಿತ್ತಳೆಯ ಅತ್ಯಮೂಲ್ಯ ಆರೊಗ್ಯ ಪ್ರಯೋಜನಗಳಲ್ಲಿ ಇದೂ ಒಂದಾಗಿದೆ. ಚಳಿಗಾಲದಲ್ಲಿ ಮರೆಯದೇ ಕಿತ್ತಳೆ ಹಣ್ಣನ್ನು ಸೇವನೆ ಮಾಡಿ.

English summary

its season for oranges see its top health benefits

The winter has set in and it's the time for juicy oranges to ripe. They are enriched with Vitamin C and can be considered as a healthy snack to relish at anytime. In this article we will discuss about the health benefits of oranges. These citrus fruits are associated with a large variety of phytonutrient compounds.
X
Desktop Bottom Promotion