ಸಂಶಯವೇ ಬೇಡ! ಮೊಳಕೆ ಕಟ್ಟಿದ ಕಾಳುಗಳು ಆರೋಗ್ಯದ ಖಜಾನೆ

ಮೊಳಕೆ ಬರಿಸಿದ ಕಾಳುಗಳಲ್ಲಿ ಪೌಷ್ಟಿಕಾಂಶ ಅಧಿಕವಿರುತ್ತದೆ ಅನ್ನುವುದು ವೈಜ್ಞಾನಿಕವಾದ ಸತ್ಯವಾಗಿದೆ. ಕಾಳುಗಳನ್ನು ಹಾಗೇ ತಿನ್ನುವ ಬದಲು ಮೊಳಕೆ ಬರಿಸಿ ತಿನ್ನುವುದು ಒಳ್ಳೆಯದು. ಇದರಿಂದ ಹೆಚ್ಚಿನ ಆರೋಗ್ಯಕರ ಲಾಭ ಪಡೆಯಬಹುದು.

By: manu
Subscribe to Boldsky

ಧಾನ್ಯಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ನಮಗೆ ಹಿಂದಿನಿಂದಲೂ ಹೇಳಿಕೊಡಲಾಗುತ್ತಿದೆ. ಅದರಲ್ಲೂ ಮೊಳಕೆ ಭರಿಸಿದ ಧಾನ್ಯಗಳನ್ನು ಅಥವಾ ಮೊಳಕೆ ಕಟ್ಟಿದ ಕಾಳುಗಳು ತಿಂದರೆ ಅದರಲ್ಲಿರುವ ಹೆಚ್ಚಿನ ಮಟ್ಟದ ಪೋಷಕಾಂಶಗಳು ನಮ್ಮ ದೇಹವನ್ನು ಸೇರಿ ದೇಹವು ಆರೋಗ್ಯವಾಗಿರುತ್ತದೆ ಎನ್ನಲಾಗುತ್ತದೆ. ನಿಜವಾಗಿಯೂ ಮೊಳಕೆ ಕಾಳುಗಳಲ್ಲಿ ಇಂತಹ ಆರೋಗ್ಯ ಗುಣಗಳು ಇವೆಯಾ? ಅಥವಾ ಇದು ಕೇವಲ ಕಟ್ಟುಕತೆಯಾ ಎನ್ನುವುದು ನಮಗೆ ತಿಳಿದಿಲ್ಲ. ಆರೋಗ್ಯದ ಖಜಾನೆ ಮೊಳಕೆ ಕಟ್ಟಿದ ಕಾಳುಗಳು  

Sprouted Food
 

ನಾವು ಬೆಳೆಯುತ್ತಿರುವಂತೆ ನಮ್ಮ ಜ್ಞಾನ ಕೂಡ ಹೆಚ್ಚುತ್ತಾ ಹೋಗುತ್ತದೆ. ನಾವು ತಿನ್ನುವಂತಹ ಆಹಾರದ ಬಗ್ಗೆ ಕೂಡ ಕಾಳಜಿ ವಹಿಸುತ್ತೇವೆ. ಯಾವುದು ಆರೋಗ್ಯಕರ ಮತ್ತು ಯಾವುದು ಅಲ್ಲ ಎನ್ನುವುದನ್ನು ತಿಳಿಯಲು ಪ್ರಯತ್ನಿಸುತ್ತಿರುವಾಗ ನಾವು ತಿನ್ನುವಂತಹ ಕೆಲವು ಆಹಾರದ ಮೇಲೆ ನಮಗೆ ಸಂಶಯ ಉಂಟಾಗುವುದು ಸಹಜ. 

ಆರೋಗ್ಯಕರವೆಂದು ಭಾವಿಸಿ ನಾವು ತಿನ್ನುತ್ತಿರುವ ಕೆಲವೊಂದು ಆಹಾರಗಳಲ್ಲಿ ಆ ಮಟ್ಟದ ಪೋಷಕಾಂಶಗಳು ಇದೆಯಾ? ಅದರಿಂದ ದೇಹಕ್ಕೆ ಲಾಭವಿದೆಯಾ ಎಂದು ನಮಗೆ ತಿಳಿದಿಲ್ಲ. ಈ ವಿಷಯದ ಬಗ್ಗೆ ನಾವು ಆಳವಾಗಿ ಅಧ್ಯಯನ ನಡೆಸಬೇಕಾಗಿದೆ.

Sprouted Food
 

ಉದಾಹರಣೆಗೆ ಹೇಳುವುದಾದರೆ ಅವಕಾಡೊ ಅಥವಾ ಬೆಣ್ಣೆಹಣ್ಣು ತುಂಬಾ ಆರೋಗ್ಯಕಾರಿ ಹಾಗೂ ಅದರಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇದೆ ಎಂದು ಒಂದು ವರ್ಗವು ಹೇಳುತ್ತದೆ. ಆದರೆ ಅದರಲ್ಲಿ ಅಷ್ಟು ಮಟ್ಟದ ಪೋಷಕಾಂಶಗಳು ಇಲ್ಲ ಎಂದು ಇನ್ನೊಂದು ವರ್ಗವು ಹೇಳುತ್ತದೆ. ಈ ಎರಡೂ ವಾದಗಳಿಗೆ ವೈಜ್ಞಾನಿಕ ಬೆಂಬಲವೂ ಇದೆ.

Sprouted Food
 

ಮೊಳಕೆ ಭರಿಸಿದ ಹೆಸರು ಕಾಳು, ಕಡಲೆ ಮತ್ತು ಇತರ ಕೆಲವೊಂದು ಧಾನ್ಯಗಳನ್ನು ವಿಶ್ವದೆಲ್ಲೆಡೆಯಲ್ಲಿ ಸಲಾಡ್ ಹಾಗೂ ಇತರ ಕೆಲವೊಂದು ಪದಾರ್ಥಗಳನ್ನು ತಯಾರಿಸಲು ಬಳಸಲಾಗುತ್ತದೆ. ಪೋಷಕರು ಮತ್ತು ಪೋಷಕಾಂಶ ತಜ್ಞರು ಮೊಳಕೆ ಭರಿಸಿದ ಕಾಳುಗಳ ಸೇವನೆ ಮಾಡಬೇಕೆಂದು ಹೇಳುತ್ತಾ ಬಂದಿದ್ದಾರೆ. ಮೊಳಕೆ ಕಟ್ಟಿದ ಕಾಳುಗಳು ಆರೋಗ್ಯಕ್ಕೆ ಉತ್ತಮ

ಸ್ಮೂಥಿ ಹಾಗೂ ಸ್ಯಾಂಡ್‌ವಿಚ್‌ನಲ್ಲಿ ಮೊಳಕೆ ಕಾಳುಗಳನ್ನು ಬಳಕೆ ಮಾಡಿ ಅದರಿಂದ ಮಕ್ಕಳನ್ನು ಸೆಳೆಯಲು ಪ್ರಯತ್ನಿಸಲಾಗುತ್ತಿದೆ. ಮೊಳಕೆ ಕಾಳುಗಳು ಎಷ್ಟು ಆರೋಗ್ಯಕಾರಿ ಎನ್ನುವ ಪ್ರಶ್ನೆ ಕಾಡುತ್ತದೆ. ಮೊಳಕೆ ಕಾಳುಗಳು ಗಿಡವಾಗುವಂತಹ ಆರಂಭದ ಹಂತವಾಗಿದೆ ಎಂದು ಎಲ್ಲರಿಗೂ ತಿಳಿದಿರುವ ವಿಚಾರ.

ಈ ಪ್ರಕ್ರಿಯೆ ವೇಳೆ ಒಂದು ಆರೋಗ್ಯಕಾರಿ ಗಿಡವಾಗಿ ಬೆಳೆಯಲು ಹಲವಾರು ರೀತಿಯ ಕಿಣ್ವಗಳು ಗಿಡದೊಳಗಿರುತ್ತದೆ. ಮೊಳೆಕಗಳಲ್ಲಿ ಈ ಆರೋಗ್ಯಕಾರಿ ಕಿಣ್ವಗಳು ಇರುವ ಕಾರಣದಿಂದ ಇದರಲ್ಲಿ ತುಂಬಾ ಪೋಷಕಾಂಶಗಳು ಇರುತ್ತದೆ ಎನ್ನಲಾಗಿದೆ. ಆಹಾರದಲ್ಲಿ ಇರಲಿ ಮೊಳಕೆ ಕಾಳುಗಳ ಸತ್ವ!   

Sprouted Food
 

ಮೊಳಕೆ ಬರದಿರುವ ಕಾಳುಗಳಿಗೆ ಹೋಲಿಸಿದರೆ ಮೊಳಕೆ ಬಂದಿರುವ ಕಾಳುಗಳು ಮಾನವ ದೇಹದಲ್ಲಿ ಬೇಗನೆ ಜೀರ್ಣವಾಗಲು ಈ ಕಿಣ್ವಗಳು ನೆರವಾಗುತ್ತದೆ. ಮಾನವ ದೇಹಕ್ಕೆ ಬೇಕಾಗುವಂತಹ ಆ್ಯಂಟಿಆಕ್ಸಿಡೆಂಟ್ ಮತ್ತು ಪ್ರಮುಖವಾಗಿರುವ ಪೋಷಕಾಂಶಗಳು ಮೊಳಕೆ ಕಾಳುಗಳಲ್ಲಿ ಇದೆ ಎಂದು ಹಲವಾರು ಸಂಶೋಧನೆಗಳು ಹೇಳಿವೆ. ಇದರಿಂದ ಯಾವುದೇ ಚಿಂತೆ ಮಾಡದೆ ಒಂದು ಪಿಂಗಾಣಿ ಮೊಳಕೆ ಕಾಳುಗಳನ್ನು ಸೇವಿಸಿ ನಿಮ್ಮ ಆರೋಗ್ಯವನ್ನು ಚೆನ್ನಾಗಿಡಿ.

ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

Story first published: Wednesday, November 30, 2016, 16:25 [IST]
English summary

Is Sprouted Food Actually Healthier?

Now, many of us may have been told that consuming sprouted grains or grams, on a regular basis, can make us exceptionally healthy! Is it true? Well, let us find out, here. Sprouted grains are nothing but seeds that have started to grow into plants, when they are exposed to the right amount of moisture.
Please Wait while comments are loading...
Subscribe Newsletter