For Quick Alerts
ALLOW NOTIFICATIONS  
For Daily Alerts

ರಕ್ತದ ಶುದ್ಧತೆಗೆ ಸೇವಿಸಿ, ಒಂದು ಗ್ಲಾಸ್ ಸಿಹಿಗುಂಬಳ ಜ್ಯೂಸ್

By manu
|

ನಿಮಗೆ ಮಧ್ಯವಯಸ್ಸು ದಾಟಿದೆಯೇ? ಹಾಗಿದ್ದರೆ ರಕ್ತತಪಾಸಣೆಗೆ ವೈದ್ಯರ ಬಳಿ ಈಗಾಗಲೇ ಹೋಗಿರಬಹುದು. ವಯೋನಿಮಿತ್ತ ಆರೋಗ್ಯದ ಏರುಪೇರುಗಳ ಕಾರಣ ರಕ್ತದ ಪರೀಕ್ಷೆಯ ಫಲಿತಾಂಶದಲ್ಲಿ ಹಲವು ಅಂಶಗಳ ಬಗ್ಗೆ ವಿವರ ನೀಡಿರುತ್ತಾರೆ. ಇದರಲ್ಲಿ ಲಿಪಿಡ್, ರಕ್ತದಲ್ಲಿರುವ ಸಕ್ಕರೆಯ ಪ್ರಮಾಣ, ಒಳ್ಳೆಯ ಮತು ಕೆಟ್ಟ ಕೊಲೆಸ್ಟ್ರಾಲ್, ಟ್ರೈಗ್ಲಿಸರೈಡ್ ಮೊದಲಾದವುಗಳ ಮಟ್ಟದ ಬಗ್ಗೆ ವಿವರಿಸಲಾಗಿರುತ್ತದೆ. ಸರಿಸುಮಾರಾಗಿ ಎಲ್ಲರಲ್ಲಿ ಇದು ಕೊಂಚ ಏರುಪೇರು ಆಗಿರುತ್ತದೆ. ಕುಂಬಳಕಾಯಿ ಜ್ಯೂಸ್‌ನಲ್ಲಿ ಅಡಗಿದೆ ಸಕಲ ಸೌಂದರ್ಯದ ರಹಸ್ಯ

ಈ ಅಂಕಿಅಂಶಗಳನ್ನು ಅವಲೋಕಿಸಿ ವೈದ್ಯರು ನಿಮಗೆ ಕೆಲವು ಔಷಧಿಗಳನ್ನು ಸೂಚಿಸುತ್ತಾರೆ. ಕೆಲದಿನಗಳ ಬಳಿಕ ಮತ್ತೊಮ್ಮೆ ರಕ್ತಪರೀಕ್ಷೆ ಮಾಡಿ ನೋಡಿದಾಗ ಈ ಅಂಕಿಅಂಶಗಳು ಏರುಪೇರಾಗಿದ್ದರೂ ಆರೋಗ್ಯಕರ ಮಿತಿಯೊಳಗೆ ಇರುವುದೇ ಭಾಗ್ಯ ಎಂದು ನಾವು ಪರಿಗಣಿಸಿಬಿಡುತ್ತೇವೆ. ಆದರೆ ಈ ತೊಂದರೆಯನ್ನು ಸರಿಪಡಿಸಲು ಇನ್ನೊಂದು ಸುಲಭ ವಿಧಾನವಿದೆ. ಇದರಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆಯಾಗುವುದು, ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚುವುದು ಮತ್ತು ಸಕ್ಕರೆ ಹಾಗೂ ಟ್ರೈಗ್ಲಿಸರೈಡ್ ಅಂಶಗಳು ನಡುವಿನ ಮಟ್ಟದಲ್ಲಿರುವಂತೆ ನೋಡಿಕೊಳ್ಳಬಹುದು, ಅದೂ ಕೇವಲ ಒಂದು ತಿಂಗಳಲ್ಲಿ. ಇದಕ್ಕಾಗಿ ಏನು ಮಾಡಬೇಕೆಂದರೆ:

ಮೊದಲು ಒಂದು ಚಿಕ್ಕ ತುಂಡು, ಅಂದರೆ ಸುಮಾರು ಇನ್ನೂರು ಗ್ರಾಂ ನಷ್ಟು ಕೆಂಪಗಿನ ಸಿಹಿಗುಂಬಳಕಾಯಿಯ ಸಿಪ್ಪೆಯನ್ನು ಸುಲಿದು ಚಿಕ್ಕ ತುಂಡುಗಳನ್ನಾಗಿಸಿ ಮಿಕ್ಸಿಯ ದೊಡ್ಡ ಜಾರ್‌ನಲ್ಲಿ ಹಾಕಿ ಕೊಂಚ ನೀರು ಸೇರಿಸಿ ನಯವಾಗಿ ಅರೆಯಿರಿ. ಈ ಜ್ಯೂಸ್‌ಗೆ ಬೇರೇನನ್ನೂ ಸೇರಿಸದೇ ಬೆಳಗ್ಗಿನ ಪ್ರಥಮ ಆಹಾರವಾಗಿ ಗಟಗಟ ಕುಡಿಯಿರಿ. ಬಳಿಕ ಸುಮಾರು ಮುಕ್ಕಾಲು ಗಂಟೆಯಿಂದ ಒಂದು ಗಂಟೆಯವರೆಗೆ ಬೇರೇನನ್ನೂ ಸೇವಿಸಬೇಡಿ. ಇದನ್ನು ಸತತವಾಗಿ ಮೂವತ್ತು ದಿನ ಆಚರಿಸಿ. ಪ್ರತಿ ಬಾರಿಯೂ ತಾಜಾ ಜ್ಯೂಸ್ ತಯಾರಿಸಿಯೇ ಕುಡಿಯಬೇಕು. ಒಂದು ದಿನ ಜ್ಯೂಸ್ ಮಾಡಿ ಸಂಗ್ರಹಿಸಿ ಮರುದಿನ ಬಳಸುವಂತಿಲ್ಲ. ಮೂವತ್ತು ದಿನ ಕಳೆದ ಬಳಿಕ ಮತ್ತೊಮ್ಮೆ ರಕ್ತಪರೀಕ್ಷೆ ಮಾಡಿಸಿಕೊಳ್ಳಿ. ಈಗ ಹಿಂದಿನ ಅಂಕಿಅಂಶಗಳಿಗೆ ಹೋಲಿಸಿ ನೋಡಿ, ಇವೆಲ್ಲವೂ ಅತ್ಯಂತ ಆರೋಗ್ಯಕರ ಮಟ್ಟದಲ್ಲಿರುವುದನ್ನು ನೋಡಿ ದಂಗಾಗುತ್ತೀರಿ. ಆರೋಗ್ಯದ ಪಾಲಿನ ಸಂಜೀವಿನಿ-ಸಿಹಿ ಕುಂಬಳಕಾಯಿ

ನಂತದ ದಿನಗಳಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಿ. ಉತ್ತಮ ವ್ಯಾಯಮ, ಧೂಮಪಾನ ಮಧ್ಯಪಾನಗಳಿಂದ ದೂರವಿರಿ. ಸಾಧ್ಯವಾದಷ್ಟು ಹಸಿ ಆಹಾರಗಳನ್ನು ಸೇವಿಸಿ. ಕೆಲ ತಿಂಗಳುಗಳ ಬಳಿಕ ರಕ್ತಪರೀಕ್ಷೆ ನಡೆಸಿ. ಒಂದು ವೇಳೆ ಬೇರಾವುದೋ ಕಾರಣದಿಂದ ರಕ್ತದ ಅಂಕಿಅಂಶಗಳು ಮತ್ತೊಮ್ಮೆ ಏರುಪೇರಾಗಿದ್ದರೆ ಮತ್ತೊಂದು ತಿಂಗಳ ಕಾಲ ಸಿಹಿಗುಂಬಳದ ಜ್ಯೂಸ್ ಕುಡಿಯಿರಿ. ಇದರಿಂದ ಆರೋಗ್ಯ ವೃದ್ಧಿಸುವುದು ಮಾತ್ರವಲ್ಲದೇ ಹಲವಾರು ರೋಗಗಳಿಂದ ರಕ್ಷಣೆಯನ್ನೂ ಪಡೆದಂತಾಗುತ್ತದೆ. ಬನ್ನಿ ಸಿಹಿಗುಂಬಳದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯೋಣ....

ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ

ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ

ಕುಂಬಳದ ಬೀಜದ ತೈಲದಲ್ಲಿ ಫೈಟೋಈಸ್ಟ್ರೋಜೆನ್ ಎಂಬ ರಸದೂತವಿದೆ. ಇದು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುವಲ್ಲಿ ನೆರವಾಗುತ್ತದೆ. ಅಲ್ಲದೇ ಈ ತೈಲ ಹೃದಯದ ಸಂಕುಚನ ಮತ್ತು ವ್ಯಾಕೋಚನದ ಒತ್ತಡಗಳನ್ನೂ ಕೆಲವೇ ತಿಂಗಳುಗಳಲ್ಲಿ ಸುಸ್ಥಿತಿಗೆ ತರಲು ಸಕ್ಷಮವಾಗಿವೆ.

ಉತ್ತಮ ಪ್ರಮಾಣದ ಕರಗದ ನಾರು ಇದೆ

ಉತ್ತಮ ಪ್ರಮಾಣದ ಕರಗದ ನಾರು ಇದೆ

ಇದರಲ್ಲಿ ಉತ್ತಮ ಪ್ರಮಾಣದ ಕರಗದ ನಾರು ಇದ್ದು ಮಲಬದ್ಧತೆಯಿಂದ ರಕ್ಷಿಸುತ್ತದೆ. ಅಲ್ಲದೇ ಇದು ನಿಧಾನವಾಗಿ ಆಹಾರದಿಂದ ಸಕ್ಕರೆಯನ್ನು ರಕ್ತಕ್ಕೆ ಬಿಡುಗಡೆ ಮಾಡುವ ಮೂಲಕ ಹೊಟ್ಟೆ ಹೆಚ್ಚು ಹೊತ್ತು ತುಂಬಿರುವಂತೆ ಮಾಡಿ ಅನಗತ್ಯವಾಗಿ ಸಿದ್ಧ ಆಹಾರಗಳನ್ನು ಸೇವಿಸದಿರುವಂತೆ ನೋಡಿಕೊಳ್ಳುತ್ತದೆ.

ವಿವಿಧ ವಿಟಮಿನ್ ಮತ್ತು ಖನಿಜಗಳ ಆಗರವಾಗಿದೆ

ವಿವಿಧ ವಿಟಮಿನ್ ಮತ್ತು ಖನಿಜಗಳ ಆಗರವಾಗಿದೆ

ಸಿಹಿಗುಂಬಳದಲ್ಲಿ ಉತ್ತಮ ಪ್ರಮಾಣದ ಬಿ ಕಾಂಪ್ಲೆಕ್ಸ್ ವಿಟಮಿನ್ (ನಿಯಾಸಿನ್, ಫೋಲೇಟ್, ಪೈರಿಡಾಕ್ಸಿನ್, ಪ್ಯಾಂಟೋಥೆನಿಕ್ ಆಮ್ಲ ಮತ್ತು ಥಿಯಾಮಿನ್) ಗಳು ಲಭ್ಯವಿದ್ದು ಆರೋಗ್ಯವನ್ನು ವೃದ್ದಿಸಲು ನೆರವಾಗುತ್ತವೆ. ಅಲ್ಲದೇ ಇದರಲ್ಲಿ ಖನಿಜಗಳಾದ ಕ್ಯಾಲ್ಸಿಯಂ, ತಾಮ್ರ, ಫಾಸ್ಪರಸ್ ಮತ್ತು ಪೊಟ್ಯಾಶಿಯಂಗಳೂ ಉತ್ತಮ ಪ್ರಮಾಣದಲ್ಲಿವೆ.

ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುತ್ತದೆ

ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುತ್ತದೆ

ಸಿಹಿಗುಂಬಳದಲ್ಲಿ ಉತ್ತಮ ಪ್ರಮಾಣದ ವಿಟಮಿನ್ A ಇದೆ, ಈ ಪೋಷಕಾಂಶ ಕಣ್ಣಿನ ಆರೋಗ್ಯಕ್ಕೆ ಉತ್ತಮವಾಗಿದ್ದು ದೃಷ್ಟಿಯನ್ನು ಹೆಚ್ಚಿಸಲು ನೆರವಾಗುತ್ತದೆ. ನಿತ್ಯದ ಸೇವನೆಯಿಂದ ಕಣ್ಣಿನ ದೃಷ್ಟಿ ಉತ್ತಮಗೊಳ್ಳುತ್ತಾ ಹೋಗುತ್ತದೆ. ಅಲ್ಲದೇ ಕಣ್ಣಿನ ತೊಂದರೆ ಎದುರಾಗುವ ಸಾಧ್ಯತೆಗಳನ್ನೂ ಕಡಿಮೆಗೊಳಿಸುತ್ತದೆ.

ನಿದ್ದೆಯನ್ನು ಉತ್ತಮಗೊಳಿಸುತ್ತದೆ

ನಿದ್ದೆಯನ್ನು ಉತ್ತಮಗೊಳಿಸುತ್ತದೆ

ಇದರಲ್ಲಿ ಉತ್ತಮ ಪ್ರಮಾಣದ ಟ್ರಿಪ್ಟೋಫಾನ್ ಎಂಅ ಪೋಷಕಾಂಶವಿದ್ದು ಇದು ದೇಹದಲ್ಲಿ ಆರಾಮವನ್ನು ಪ್ರಚೋದಿಸುವ ಇತರ ರಸದೂತಗಳನ್ನು ಸ್ರವಿಸಲು ನೆರವಾಗುತ್ತದೆ. ಇದರಿಂದಾಗಿ ಉತ್ತಮ ಗುಣಮಟ್ಟದ ನಿದ್ದೆ ಪಡೆಯಲು ಸಾಧ್ಯವಾಗುತ್ತದೆ.

ಇತರ ಸಂಯುಕ್ತಗಳು

ಇತರ ಸಂಯುಕ್ತಗಳು

ಸಿಹಿಗುಂಬಳದಲ್ಲಿ ಬೀಟಾ ಕ್ಯಾರೋಟೀನ್, ಲ್ಯೂಟಿನ್, ಕ್ರಿಪ್ಟೋಕ್ಸಾಂಥಿನ್, ಜ಼ೀಟಾ-ಕ್ಸಾಂಥಿನ್ ಮೊದಲಾದ ಸಂಯುಕ್ತ ಫಿನಾಲಿಕ್ ಫ಼್ಲೇವನಾಯ್ಡುಗಳಿವೆ. ಅಲ್ಲದೇ ವಿಟಮಿನ್ ಎ, ಸಿ, ಮತ್ತು ಇ ಸಹಾ ಇವೆ.

ಪುರುಷರಿಗೆ ಉತ್ತಮ

ಪುರುಷರಿಗೆ ಉತ್ತಮ

ಸಿಹಿಗುಂಬಳದಲ್ಲಿರುವ ಕೆಲವು ಪೋಷಕಾಂಶಗಳು ಪುರುಷರಲ್ಲಿ ವಿಶೇಷವಾಗಿ ಕ್ಯಾನ್ಸರ್ ಬರುವುದನ್ನು ತಡೆಗಟ್ಟುತ್ತದೆ ಹಾಗೂ ಪ್ರಾಸ್ಟೇಟ್ ಗ್ರಂಥಿಯ ಬೆಳವಣಿಗೆಯನ್ನು ತಡೆಯುತ್ತದೆ. ಅಲ್ಲದೇ ಪುರುಷರಲ್ಲಿ ನಿಮಿರು ತೊಂದರೆಯನ್ನು ಕಡಿಮೆಗೊಳಿಸುವಲ್ಲಿ ನೆರವಾಗುತ್ತದೆ.

English summary

If Your Blood Isn't Healthy, Try This!

Health tips in kannada, Health Facts Of Pumpkin, health benefits of pumpkin, how to purify your blood, ಕನ್ನಡದಲ್ಲಿ ಆರೋಗ್ಯಕಾರಿ ಸಲಹೆ, ಸಿಹಿಗುಂಬಳದ ಆರೋಗ್ಯಕಾರಿ ಪ್ರಯೋಜನಗಳು, ಕುಂಬಳ ಕಾಯಿಯ ಪ್ರಯೋಜನಗಳು
X
Desktop Bottom Promotion