For Quick Alerts
ALLOW NOTIFICATIONS  
For Daily Alerts

ದಿನಕ್ಕೆ ಮೂರಕ್ಕಿಂತಲೂ ಹೆಚ್ಚು ಬಾರಿ ಶೌಚಕ್ಕೆ ಅವಸರವಾದರೆ.....

By Super Admin
|

ನಮ್ಮ ಆರೋಗ್ಯಕ್ಕೆ ಆಹಾರ ಎಷ್ಟು ಅವಶ್ಯವೋ ಅದೇ ರೀತಿ ತ್ಯಾಜ್ಯಗಳು ದೇಹದಿಂದ ಹೊರಹೋಗುವುದೂ ಅಷ್ಟೇ ಅಗತ್ಯ. ಇದನ್ನೇ ಪ್ರಾತಃವಿಧಿಗಳು ಎಂದು ಹಿರಿಯರು ಕರೆದಿದ್ದಾರೆ. ಆರೋಗ್ಯಕರ ವ್ಯಕ್ತಿ ಪ್ರತಿದಿನ ಒಂದು ಬಾರಿ ಅಥವಾ ಎರಡು ಬಾರಿ ಶೌಚಾಲಯಕ್ಕೆ ಹೋಗಬೇಕಾಗುತ್ತದೆ. ಆಗಾಗ್ಗೆ ಮೂತ್ರ ವಿಸರ್ಜನೆ ಮಾಡಬೇಕಾದ ಅನಿವಾರ್ಯತೆಯೇ?

ಕೆಲವೊಮ್ಮೆ ಅಜೀರ್ಣ ಅಥವಾ ಇತರ ಕಾರಣಗಳಿಂದಾಗಿ ದಿನಕ್ಕೆ ಮೂರು ಬಾರಿ ಹೋಗಬೇಕಾಗಿ ಬರಬಹುದು. ಅದೂ ತಾತ್ಕಾಲಿಕ ಅವಧಿಗೆ ಮಾತ್ರ. ಒಂದು ವೇಳೆ ಈ ಪ್ರಕ್ರಿಯೆ ದಿನಕ್ಕೆ ಮೂರು ಬಾರಿಗೂ ಹೆಚ್ಚಿದ್ದರೆ ಮತ್ತು ಇದು ಸತತವಾಗಿದ್ದರೆ ಮಾತ್ರ ಇದು ಯಾವುದೋ ತೊಂದರೆಯ ಸೂಚನೆಯಾಗಿರಬಹುದು. ರೋಗರುಜಿನಗಳು ಹರಡಲು ಶೌಚಾಲಯಗಳೇ ಮೂಲ ಕಾರಣ!

ಅದರಲ್ಲೂ ಈಗ ತಾನೇ ಶೌಚಾಲಯಕ್ಕೆ ಹೋಗಿ ಬಂದ ಬಳಿಕ ಪ್ರಯಾಣ ಆರಂಭಿಸಿದ ತಕ್ಷಣ ಮತ್ತೊಮ್ಮೆ ಶೌಚಕ್ಕೆ ಅವಸರವಾದರೆ ತುಂಬಾ ಮುಜುಗರವನ್ನು ಎದುರಿಸಬೇಕಾಗಬಹುದು. IBS ಅಥವಾ irritable bowel syndrome ಎಂದು ಕರೆಯಲಾಗುವ ಈ ತೊಂದರೆಯನ್ನು ಅವಗಣಿಸಿದರೆ ಮುಂದೆ ಕ್ಲಿಷ್ಟಕರ ಪರಿಸ್ಥಿತಿಯೂ ಎದುರಾಗಬಹುದು. ಸಾರ್ವಜನಿಕ ಶೌಚಾಲಯ ಬಳಸುವಾಗ ಜಾಗರೂಕರಾಗಿರಿ!

ಮೇಲ್ನೋಟಕ್ಕೆ ಇದು ಬರೆಯ ಅಜೀರ್ಣದ ಪರಿಣಾಮ ಎಂದು ಅಂದಾಜಿಸಬಹುದಾದರೂ ಕೆಲವಾರು ಇತರ ಕಾರಣಗಳೂ ಇರಬಹುದು. ಒಂದು ವೇಳೆ ಇದರೊಂದಿಗೆ ಸುಸ್ತು, ವಿಸರ್ಜನೆಯ ಸಮಯದಲ್ಲಿ ಉರಿ, ವಿಸರ್ಜನೆಗೆ ಹೆಚ್ಚಿನ ಸಮಯ ತೆಗೆದುಕೊಳ್ಳುವುದು ಮೊದಲಾದ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಭೇಟಿಯಾಗುವುದು ಅಗತ್ಯ. ಏಕೆಂದರೆ ಈ ಪರಿಸ್ಥಿತಿಗೆ ಕೆಲವಾರು ಕಾರಣಗಳಿದ್ದು ಇವುಗಳಲ್ಲಿ ಪ್ರಮುಖವಾದುದನ್ನು ಇಲ್ಲಿ ನೀಡಲಾಗಿದೆ ಮುಂದೆ ಓದಿ....

ಮಾಹಿತಿ #1

ಮಾಹಿತಿ #1

ಸಾಮಾನ್ಯವಾಗಿ ಈ ತೊಂದರೆಗೆ ಕಾರಣಗಳನ್ನು ಹುಡುಕುವುದು ಅಷ್ಟು ಸುಲಭವಲ್ಲ. ಸಾಮಾನ್ಯವಾಗಿ ಈ ತೊಂದರೆ ಎಷ್ಟರ ಮಟ್ಟಿಗೆ ಬಾಧಿಸುತ್ತಿದೆ ಎಂಬ ಮಾಹಿತಿಯನ್ನು ಆಧರಿಸಿ ಇದರ ಕಾರಣವನ್ನು ಕಂಡುಕೊಳ್ಳಲಾಗುತ್ತದೆ.

 ಮಾಹಿತಿ #2

ಮಾಹಿತಿ #2

ಬಹುತೇಕ ಸಂದರ್ಭದಲ್ಲಿ ಇದು ನಮ್ಮ ಬದಲಾದ ಜೀವನಶೈಲಿಯ ಕೊಡುಗೆಯಾಗಿದೆ. ಅಂದರೆ ಜೀವನಶೈಲಿಯಲ್ಲಿ ಅನಿವಾರ್ಯವಾಗಿ ಮಾಡಬೇಕಾದ ಮಾರ್ಪಾಡುಗಳು ನಿಸರ್ಗಕ್ಕೆ ವಿರುದ್ದವಾಗಿರುವುದರಿಂದ ದೇಹ ಈ ರೀತಿಯಾಗಿ ಪ್ರತಿಕ್ರಿಯಿಸುತ್ತಿರಬಹುದು.

 ಮಾಹಿತಿ #2

ಮಾಹಿತಿ #2

ಉದಾಹರಣೆಗೆ ಬಸ್ಸು ತಪ್ಪಿ ಹೋಗುವ ದುಗುಡದಿಂದ ಬಲವಂತವಾಗಿ ಶೌಚಕ್ಕೆ ಹೋಗುವುದನ್ನು ತಪ್ಪಿಸಿಕೊಳ್ಳುವುದು ಇತ್ಯಾದಿ. ಇದಕ್ಕೆ ನಮ್ಮ ಜೀವನಶೈಲಿಯನ್ನು ಆರೋಗ್ಯಕರವಾಗಿ ಬದಲಿಸಿಕೊಳ್ಳುವುದೇ ಮಾರ್ಗ.

ಮಾಹಿತಿ #3

ಮಾಹಿತಿ #3

ಈ ತೊಂದರೆಯ ಮುಖ್ಯ ಲಕ್ಷಣಗಳೆಂದರೆ ಕೆಳಹೊಟ್ಟೆಯಲ್ಲಿ ನೋವು, ಹೊಟ್ಟೆಯುಬ್ಬರಿಕೆ, ಆಮಶಂಕೆ ಮತ್ತು ಕೆಲವೊಮ್ಮೆ ಮಲಬದ್ದತೆ ಆಗಿರುತ್ತದೆ.

ಮಾಹಿತಿ #4

ಮಾಹಿತಿ #4

ಸಾಮಾನ್ಯ ಆಮಶಂಕೆಗೂ IBS ತೊಂದರೆಗೂ ಕೊಂಚ ವ್ಯತ್ಯಾಸವಿದೆ. ಈ ತೊಂದರೆ ಇರುವವರಿಗೆ ಪದೇ ಪದೇ ಶೌಚಕ್ಕೆ ಹೋಗುವ ಅವಸರವಾಗುತ್ತದೆ. ಅಮಶಂಕೆ ಒಂದೆರಡು ದಿನಗಳ ನಂತರ ಕಡಿಮೆಯಾದರೆ IBS ದಿನೇ ದಿನೇ ಹೆಚ್ಚುತ್ತಾ ಹೋಗುತ್ತದೆ.

ಮಾಹಿತಿ #5

ಮಾಹಿತಿ #5

IBS ನ ಇನ್ನೊಂದು ಲಕ್ಷಣವೆಂದರೆ ಹೊಟ್ಟೆಗೆ ಏನನ್ನು ತಿಂದರೂ ತಕ್ಷಣ ಶೌಚಕ್ಕೆ ಅವಸರವಾಗುವುದಾಗಿದೆ. ಅಂದರೆ ಶೌಚಾಲಯ ವ್ಯವಸ್ಥೆ ಇರುವೆಡೆಯಲ್ಲಿಯೇ ಇವರು ಊಟ ಮಾಡುವುದು ಅನಿವಾರ್ಯವಾಗುತ್ತದೆ.

ಮಾಹಿತಿ #6

ಮಾಹಿತಿ #6

IBSನ ಇನ್ನೊಂದು ಲಕ್ಷಣವೆಂದರೆ ಪ್ರತಿ ಬಾರಿ ಶೌಚಾಲಯಕ್ಕೆ ಹೋಗಿ ಬಂದ ಬಳಿಕ ಸುಸ್ತಾಗುತ್ತಾರೆ. ಇದರಿಂದ ತ್ರಾಣವನ್ನೇ ಕಳೆದುಕೊಂಡು ನಿತ್ಯದ ಚಟುವಟಿಕೆಗಳೂ ಬಾಧೆಗೊಳಗಾಗುತ್ತವೆ.

ಮಾಹಿತಿ #7

ಮಾಹಿತಿ #7

ಒಂದು ಸಂಶೋಧನೆಯಲ್ಲಿ ಕಂಡುಕೊಂಡ ಪ್ರಕಾರ ಮಾನಸಿಕ ಬೇಗುದಿ, ಒತ್ತಡ, ತಲ್ಲಣ ಮೊದಲಾದವುಗಳಿಂದ ಬಳಲುತ್ತಿರುವವರು ಈ ತೊಂದರೆಯನ್ನು ಹೆಚ್ಚು ಎದುರಿಸುತ್ತಾರೆ.

ಮಾಹಿತಿ #8

ಮಾಹಿತಿ #8

IBS ತೊಂದರೆ ಇರುವವರಲ್ಲಿ ಹೆಚ್ಚಿನವರಿಗೆ ಶೌಚಕ್ಕೆ ಅವಸರವಾದಾಗ ಶೌಚಾಲಯವನ್ನು ತಕ್ಷಣ ತಲುಪಲು ಸಾಧ್ಯವಾಗುವುದಿಲ್ಲ. ಈ ಒತ್ತಡ ಅತೀವ ನೋವನ್ನೂ, ಮುಜುಗರವನ್ನೂ ತಂದೊಡ್ಡುತ್ತದೆ.

ಮಾಹಿತಿ #9

ಮಾಹಿತಿ #9

IBS ತೊಂದರೆಯನ್ನು ಸಂಪೂರ್ಣವಾಗಿ ನಿವಾರಿಸಲು ಅಸಾಧ್ಯ. ಆದರೆ ಸರಿಯಾದ ಆಹಾರಕ್ರಮ, ಜೀವನಶೈಲಿಯಲ್ಲಿ ಕೊಂಚ ಬದಲಾವಣೆ, ಆರೋಗ್ಯಕರ ಆಹಾರಗಳಿಗೆ ಒಲವು ಮೊದಲಾದವುಗಳ ಮೂಲಕ ಈ ತೊಂದರೆಯನ್ನು ಸಾಕಷ್ಟು ಮಟ್ಟಿಗೆ ಹತೋಟಿಯಲ್ಲಿರಿಸಲು ನೆರವಾಗುತ್ತವೆ.

English summary

If You Are Going To The Toilet More Than Thrice A Day, Read This!

Do you pass stools more than twice or thrice in a day, on a daily basis? Do you feel exhausted afterwards? If yes, then you should try to learn about some of the facts on irritable bowel syndrome (IBS). Imagine you are at a friend's party and you get the sudden urge to go to the washroom, even though you have already passed stools before leaving your house! It can be quite frustrating, right?
Story first published: Wednesday, October 5, 2016, 20:13 [IST]
X
Desktop Bottom Promotion