For Quick Alerts
ALLOW NOTIFICATIONS  
For Daily Alerts

ಸರಳ ಟ್ರಿಕ್ಸ್ ಅನುಸರಿಸಿ, ಸೊಳ್ಳೆ ಕಾಟ ತಪ್ಪಿಸಿ

By Arshad
|

ಬೇಸಿಗೆಯಲ್ಲಿ ಸುರಿಯುವ ಬೆವರು, ಧೂಳು, ಸೆಖೆ ಎಂದು ಗಾಳಿಯಾಡಲು ಕಿಟಕಿ ತೆರೆದರೆ ಹೊರಗಿನಿಂದ ಒಳ ಧಾವಿಸುವ ಸೊಳ್ಳೆಗಳು ಬೇಸಿಗೆಯ ಬೇಗೆಯನ್ನು ಇನ್ನಷ್ಟು ಉಲ್ಬಣಿಸುತ್ತವೆ. ಇದಕ್ಕೆ ಸರಿಯಾಗಿ ಪವರ್ ಕಟ್ ಪರಿಣಾಮವಾಗಿ ವಿದ್ಯುತ್ ಪೂರೈಕೆ ಇಲ್ಲದೇ ಫ್ಯಾನ್ ಕೂಡ ಸರಿಯಾಗಿ ತಿರುಗದೇ ಸೊಳ್ಳೆಗಳಿಗೆ ಕಚ್ಚಲು ಬಹಳ ಅನುಕೂಲವಾಗುತ್ತದೆ. ವಿದ್ಯುತ್ ಪೂರೈಕೆ ತೊಂದರೆಗೆ ಮದ್ದು ಇಲ್ಲವಾದರೂ ಕಡಿಯುವ ಸೊಳ್ಳೆಗಳಿಗೆ ಮಾತ್ರ ಖಂಡಿತಾ ಇದೆ. ಬನ್ನಿ, ಈ ಉಪಾಯಗಳನ್ನು ಅನುಸರಿಸಿ ಸೊಳ್ಳೆಗಳಿಂದ ದೂರವಿರೋಣ:

ಬೇವಿನ ಎಣ್ಣೆ ಮತ್ತು ಕೊಬ್ಬರಿ ಎಣ್ಣೆ
ಸಮಪ್ರಮಾಣದಲ್ಲಿ ಕೊಂಚ ಬೇವಿನ ಎಣ್ಣೆ ಮತ್ತು ಕೊಬ್ಬರಿ ಎಣ್ಣೆಯನ್ನು ಮಿಶ್ರಣ ಮಾಡಿ ತೆಳುವಾಗಿ ತೆರೆದ ಭಾಗದ ಚರ್ಮದ ಮೇಲೆ, ಅಂದರೆ ಮೊಣಕೈ, ಪಾದ, ಮೊಣಕಾಲು ಇತ್ಯಾದಿ. ಈ ವಾಸನೆಗೆ ಸೊಳ್ಳೆಗಳು ಸುಮಾರು ಎಂಟು ಗಂಟೆಗಳವರೆಗೆ ಬರುವುದಿಲ್ಲವಾದುದರಿಂದ ಸುಖನಿದ್ದೆಗೂ ಅನುಕೂಲಕರವಾಗಿದೆ.

How to ward off mosquitoes this summer

ಕರ್ಪೂರ
ಒಂದು ಕೋಣೆಯಲ್ಲಿ ಕರ್ಪೂರದ ತುಂಡೊಂದನ್ನು ಉರಿಸಿ ತಕ್ಷಣ ಕಿಟಕಿ ಬಾಗಿಲುಗಳನ್ನು ಗಟ್ಟಿಯಾಗಿ ಮುಚ್ಚಿ ಇಪ್ಪತ್ತು ನಿಮಿಷ ಹಾಗೇ ಬಿಡುವ ಮೂಲಕ ಒಳಗಿದ್ದ ಅಷ್ಟೂ ಸೊಳ್ಳೆಗಳು ಪರಾರಿಯಾಗಿರುತ್ತವೆ. ಬಳಿಕ ಇಲ್ಲಿ ಸೂಕ್ತ ಸೊಳ್ಳೆಪರದೆಯಿಂದ ಕಿಟಕಿ ಬಾಗಿಲುಗಳನ್ನು ಮುಚ್ಚಿ ಸೊಳ್ಳೆ ಕಾಟದಿಂದ ಮುಕ್ತರಾಗಬಹುದು.

ತುಳಸಿ
ಮನೆಯ ಕಿಟಕಿಗಳ ಹತ್ತಿರ ತುಳಸಿ ಗಿಡವನ್ನು ನೆಟ್ಟರೆ ಆ ಸ್ಥಳದಲ್ಲಿ ಸೊಳ್ಳೆಗಳು ಮರಿಯಾಗುವುದಿಲ್ಲ, ಮತ್ತು ಈ ದಾರಿಯಿಂದ ಸೊಳ್ಳೆಗಳು ಒಳಬರುವುದೂ ಇಲ್ಲ.

ಬೆಳ್ಳುಳ್ಳಿ
ಕೊಂಚ ನೀರಿನಲ್ಲಿ ಬೆಳ್ಳುಳ್ಳಿಯ ಕೆಲವು ಎಸಳುಗಳನ್ನು ಜಜ್ಜಿ ಹಾಕಿ ಕುದಿಸಿ. ಬಳಿಕ ಈ ನೀರನ್ನು ಇಡಿಯ ಕೋಣೆಯಲ್ಲಿ ಸಿಂಪಡಿಸಿ. ಕೊಂಚ ಘಾಟನ್ನು ಸ್ವಲ್ಪಹೊತ್ತು ತಡೆದುಕೊಂಡರೆ ಮುಂದಿನ ಕೆಲವು ಗಂಟೆಗಳ ಕಾಲ ಇಲ್ಲಿ ಸೊಳ್ಳೆಗಳು ಸುಳಿಯುವುದಿಲ್ಲ.

ಟೀ ಟ್ರೀ ಎಣ್ಣೆ
ಈ ಎಣ್ಣೆಯನ್ನು ಆವೀಕರಿಸುವ ಮೂಲಕವೂ ಕೋಣೆಯಲ್ಲಿ ಸೊಳ್ಳೆಗಳು ಬರದಂತೆ ತಡೆಯಬಹುದು.

ಲ್ಯಾವೆಂಡರ್ ಎಣ್ಣೆ

ಈ ಎಣ್ಣೆ ಕೊಂಚ ದುಬಾರಿ ಎಂಬ ಒಂದು ಕಾರಣ ಬಿಟ್ಟರೆ ಸೊಳ್ಳೆಗಳನ್ನು ಓಡಿಸಲು ಮತ್ತು ಕೋಣೆಯಲ್ಲಿ ಸುವಾಸನೆ ಕೂಡಿರಲು ಇದು ಸೂಕ್ತವಾಗಿದೆ. ಇದನ್ನು ತೆಳ್ಳಗೆ ಇಡಿಯ ಕೋಣೆಯಲ್ಲಿ ಸಿಂಪಡಿಸಬಹುದು. ಬದಲಿಗೆ ಕೊಂಚ ಎಣ್ಣೆ ಅಥವಾ ಚರ್ಮಕ್ಕೆ ಹಚ್ಚುವ ಕ್ರೀಂ ನೊಂದಿಗೂ ಬೆರೆಸಿ ಮೈಕೈಗೆ ತೆಳುವಾಗಿ ಹಚ್ಚಿಕೊಂಡರೂ ಸೊಳ್ಳೆಗಳು ಹತ್ತಿರ ಬರುವುದಿಲ್ಲ.
English summary

How to ward off mosquitoes this summer

Summers have set in and so have mosquitoes — small bite, big threat from these winged creatures which spread dengue and malaria. Here are some ways to keep mosquitoes at bay.
X
Desktop Bottom Promotion