For Quick Alerts
ALLOW NOTIFICATIONS  
For Daily Alerts

ತೂಕ ಇಳಿಸಿಕೊಳ್ಳಲು ನೈಸರ್ಗಿಕ ಮದ್ದು-ಅದೇ 'ಪಪ್ಪಾಯಿ ಹಣ್ಣು'

By Manu
|

ಬೇಡವೆಂದರೂ ದೇಹವನ್ನು ವಕ್ಕರಿಸಿಕೊಳ್ಳುವುದೇ ಅತಿಯಾದ ತೂಕ. ನಮ್ಮ ಆಹಾರ ಕ್ರಮದಿಂದ ಇದು ದೇಹವನ್ನು ಆವರಿಸಿದರೆ ಇನ್ನು ಕೆಲವೊಮ್ಮೆ ದೇಹದಲ್ಲಿನ ಆರೋಗ್ಯ ಏರುಪೇರಿನಿಂದಾಗಿ ತೂಕ ಹೆಚ್ಚಾಗುತ್ತದೆ. ತೂಕ ಕಡಿಮೆ ಮಾಡಿಕೊಳ್ಳಲು ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಔಷಧಿಗಳು ಲಭ್ಯವಿದೆ. ಆದರೆ ಇದರಿಂದ ಆಗುವಂತಹ ಅಡ್ಡಪರಿಣಾಮಗಳು ಅನೇಕ. ಇನ್ನು ಕೆಲವರು ತೂಕ ಕಳೆದುಕೊಳ್ಳಲು ಉಪವಾಸ ಮಾಡುವುದರ ಜೊತೆಗೆ, ಕಡಿಮೆ ಆಹಾರ ಸೇವಿಸಿ ಆರೋಗ್ಯವನ್ನು ಇನ್ನಷ್ಟು ಬಿಗಡಾಯಿಸಿಕೊಳ್ಳುತ್ತಾರೆ. ಆರೋಗ್ಯಕಾರಿ ಟಿಪ್ಸ್: ಪಪ್ಪಾಯಿ ಹಣ್ಣಿನ ಬಗ್ಗೆ ತಪ್ಪು ತಿಳಿಯಬೇಡಿ!

ಇದರಿಂದಲೂ ಅಡ್ಡಪರಿಣಾಮಗಳು ಇದ್ದೇ ಇದೆ. ಇದಕ್ಕಾಗಿಯೇ ಮನೆ ಹಾಗೂ ಪ್ರಕೃತಿಯಲ್ಲಿ ಸಿಗುವಂತಹ ಸಾಮಗ್ರಿಗಳನ್ನು ಬಳಸಿಕೊಂಡು ತೂಕ ಕಡಿಮೆ ಮಾಡಿಕೊಳ್ಳಬಹುದು. ಪಪ್ಪಾಯಿಯನ್ನು (ಪರಂಗಿ ಹಣ್ಣು) ಬಳಸಿಕೊಂಡು ತೂಕ ಕಡಿಮೆ ಮಾಡಿಕೊಂಡರೆ ಯಾವುದೇ ಅಡ್ಡಪರಿಣಾಮಗಳು ಇಲ್ಲ. ಅದರಲ್ಲೂ ಪಪ್ಪಾಯಿ ವರ್ಷದ ಹೆಚ್ಚಿನ ಸಮಯದಲ್ಲಿ ನಮಗೆ ಲಭ್ಯವಿರುತ್ತದೆ.

ಕೇವಲ ತೂಕ ಕಡಿಮೆ ಮಾಡಿಕೊಳ್ಳುವುದು ಮಾತ್ರವಲ್ಲದೆ ಪಪ್ಪಾಯಿ ತಿಂದರೆ ಇನ್ನು ಹಲವಾರು ರೀತಿಯ ಆರೋಗ್ಯ ಲಾಭಗಳಿವೆ. ಪಪ್ಪಾಯಿಯು ಹೃದಯನಾಳದ ವ್ಯವಸ್ಥೆ ರಕ್ಷಣೆ, ಜೀರ್ಣಶಕ್ತಿಗೆ ನೆರವಾಗುತ್ತದೆ ಮತ್ತು ಕೆಲವೊಂದು ರೀತಿಯ ಕ್ಯಾನ್ಸರ್ ಅನ್ನು ತಡೆಗಟ್ಟುತ್ತದೆ. ಪಪ್ಪಾಯಿಯನ್ನು ಯಾವ ರೀತಿಯಿಂದ ತಿನ್ನಬೇಕು ಎಂದು ಮುಂದೆ ಓದುತ್ತಾ ತಿಳಿದುಕೊಳ್ಳಿ. ಊಹೆಗೂ ನಿಲುಕದ ಪಪ್ಪಾಯಿಯ ಪವರ್‌ಗೆ ಬೆರಗಾಗಲೇಬೇಕು!

ಹಸಿ ಪಪ್ಪಾಯಿ

ಹಸಿ ಪಪ್ಪಾಯಿ

ಹಸಿ ಪಪ್ಪಾಯಿ ಸಿಪ್ಪೆ ತೆಗೆದು ತುಂಡು ಮಾಡಿಕೊಂಡು ಬೆಳಗ್ಗೆ ಉಪಹಾರಕ್ಕೆ ಇತರ ಹಣ್ಣುಗಳೊಂದಿಗೆ ತಿನ್ನಿ. ಇದು ತೂಕ ಕಳೆದುಕೊಳ್ಳಲು ನೆರವಾಗುವುದು. ಬೊಜ್ಜನ್ನು ಕಡಿಮೆ ಮಾಡುವಲ್ಲಿ ಹಸಿ ಪಪ್ಪಾಯಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಸುಗಮ ಜೀರ್ಣಕ್ರಿಯೆಗೆ ಹಸಿ ಪಪ್ಪಾಯಿ ಹಣ್ಣು ಉಪಯುಕ್ತ

ಪಪ್ಪಾಯಿ ಸಲಾಡ್

ಪಪ್ಪಾಯಿ ಸಲಾಡ್

ಪಪ್ಪಾಯಿಯನ್ನು ಸಲಾಡ್ ಆಗಿ ಬಳಸಿಕೊಂಡು ತಿನ್ನಬಹುದು. ಇದು ನಿಮ್ಮ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ.

ಪಪ್ಪಾಯಿ ಬೀಜ

ಪಪ್ಪಾಯಿ ಬೀಜ

ಪಪ್ಪಾಯಿ ಹಣ್ಣು ಮಾತ್ರವಲ್ಲದೆ ಪಪ್ಪಾಯಿ ಬೀಜಗಳಲ್ಲಿ ಕೂಡ ತೂಕ ಕಡಿಮೆ ಮಾಡುವ ಶಕ್ತಿಯಿದೆ. ಪಪ್ಪಾಯಿ ಬೀಜಗಳಲ್ಲಿ ಅಮಿನೋ ಆ್ಯಸಿಡ್ ಹೆಚ್ಚಾಗಿದೆ. ಈ ಅಮಿನೋ ಆ್ಯಸಿಡ್ ದೇಹದಲ್ಲಿ ಹೆಚ್ಚಾಗಿರುವ ಕೊಬ್ಬನ್ನು ತೆಗೆದು ಜೀರ್ಣಕ್ರಿಯೆಗೆ ನೆರವಾಗುವುದು. ಸರ್ವಗುಣ ಸಂಪನ್ನ- ಪಪ್ಪಾಯಿ ಹಣ್ಣಿನ ಬೀಜ

ಪಪ್ಪಾಯಿ ಜ್ಯೂಸ್

ಪಪ್ಪಾಯಿ ಜ್ಯೂಸ್

ಪ್ರತಿದಿನ ಪಪ್ಪಾಯಿ ಹಣ್ಣಿನ ಜ್ಯೂಸ್ ಮಾಡಿ ಕುಡಿದರೆ, ದೇಹದ ತೂಕ ಇಳಿಸಿಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ನೆನಪಿಡಿ ಪಪ್ಪಾಯಿ ಹಣ್ಣಿನ ಜ್ಯೂಸ್ ಮಾಡುವಾಗ ಸಕ್ಕರೆಯನ್ನು ಬಳಸಬೇಡಿ. ಪಪ್ಪಾಯಿ ಹಣ್ಣಿನಲ್ಲಿ ನೈಸರ್ಗಿಕವಾಗಿ ಸಿಹಿ ಅಂಶವು ಒಳಗೊಂಡಿರುತ್ತದೆ.

ಪಪ್ಪಾಯಿ ಸ್ಮೂಥಿ

ಪಪ್ಪಾಯಿ ಸ್ಮೂಥಿ

ಪಪ್ಪಾಯಿ ತಿನ್ನುವ ಮತ್ತೊಂದು ವಿಧಾನವೆಂದರೆ ಪಪ್ಪಾಯಿಯ ಸ್ಮೂಥಿ ಮಾಡಿಕೊಳ್ಳಬೇಕು. ಆದರೆ ಇದಕ್ಕೆ ಕೊಬ್ಬು ರಹಿತ ಹಾಲನ್ನು ಸೇರಿಸಬೇಕು. ಸ್ಮೂಥಿ ನಿಮ್ಮ ಹಸಿವನ್ನು ಆರೋಗ್ಯಕರ ರೀತಿಯಲ್ಲಿ ನಿಯಂತ್ರಿಸುವುದು ಮತ್ತು ದೇಹದಲ್ಲಿ ಹೆಚ್ಚುವರಿಯಾಗಿ ಕೊಬ್ಬು ಶೇಖರಣೆಯಾಗದಂತೆ ತಡೆಯುವುದು.

English summary

How Papaya Helps You To Lose Weight, Check It Out!

Are you on the look out for a healthy way to lose weight? Having a slim, trim figure is what every female desires. But in most cases they take the wrong way to lose that extra flab. They cut down on their food intake and a few of them literally starve themselves in the name of losing weight. So if you want to lose weight and at the same time remain healthy, then you should definitely consider consuming papaya. Have a look:
X
Desktop Bottom Promotion