ಉಪ್ಪುನೀರಿನಿಂದ ಗಳಗಳ ಮಾಡಿದರೆ ಕೆಮ್ಮು-ಶೀತ ಮಾಯ!

By: Arshad
Subscribe to Boldsky

ಮಕ್ಕಳು ಕೆಮ್ಮಿದರೆ, ಗರಗರ ಶಬ್ಧ ಮಾಡಿದರೆ ತಕ್ಷಣ ಹಿರಿಯರು 'ಉಪ್ಪುನೀರಿನಿಂದ ಬಾಯಿಯನ್ನು ಮುಕ್ಕಳಿಸಿ ಚೆನ್ನಾಗಿ ಗಳಗಳ ಮಾಡು' ಎಂದು ತಕ್ಷಣ ಸಲಹೆ ನೀಡುತ್ತಾರೆ. ಏಕೆಂದರೆ ಶೀತ ಕೆಮ್ಮಿಗೆ ಇದರಿಂದ ತಕ್ಷಣದ ಪರಿಣಾಮ ಬೀರಲು ಸಾಧ್ಯ ಎಂಬುದನ್ನು ಅವರು ಅನುಭವದಿಂದ ಕಂಡುಕೊಂಡಿದ್ದಾರೆ. ಆದರೆ ವಾಸ್ತವವಾಗಿ ಈ ವಿಧಾನ ಎಷ್ಟು ಪರಿಣಾಮಕಾರಿ?

salt water
 

ಗಂಟಲ ಬೇನೆ ಇದ್ದರೆ ಇದಕ್ಕೆ ಗಂಟಲಿನ ಒಳಭಾಗದ ಉರಿಯೂತ ಕಾರಣವಾಗಿರಬಹುದು. ಇದರ ಪರಿಣಾಮವಾಗಿ ಒಳಭಾಗದಲ್ಲಿ ಕೊಂಚ ಊದಿಕೊಂಡಿದ್ದು ಒಳಗೆ ದ್ರವರೂಪದ ಸೋಂಕು ಸಂಗ್ರಹವಾಗಿರುತ್ತದೆ. ಈ ಸ್ಥಿತಿಗೆ edema ಎಂದು ಕರೆಯುತ್ತಾರೆ.

ಈ ಕಾರಣದಿಂದ ಕೆಮ್ಮು ಉಂಟಾಗಿದ್ದರೆ ಉಪ್ಪುನೀರಿನ ಗಳಗಳ ಕೆಲಸಕ್ಕೆ ಬರುತ್ತದೆ. ಉಪ್ಪುನೀರು ಬಾಯಿಯ ಒಳಗಣ ಮತ್ತು ಮೇಲ್ಭಾಗ, ಕಿರುನಾಲಿಗೆ ಮೊದಲಾದ ಕಡೆ ಅಂಟಿಕೊಂಡಿದ್ದ ಬ್ಯಾಕ್ಟೀರಿಯಾಗಳನ್ನು ನಿವಾರಿಸಬಲ್ಲುದು. ಅಲ್ಲದೇ ಸೋಂಕಿಗೊಳಗಾದ ಚರ್ಮದ ಮೇಲೆ ಉಪ್ಪುನೀರಿನಿಂದ ಗಳಗಳ ಮಾಡಿದಾಗ ಇದು ಸೋಂಕು ಉಂಟಾಗಿದ್ದ ಚರ್ಮದ ಹೊರಗೂ ಪ್ರಚೋದನೆ ನೀಡಿ ಇಲ್ಲಿಂದ ಒಳಗಣ ಸೋಂಕು ಹೊರಬರುವಂತೆ ಮಾಡುತ್ತದೆ.    ಉಪ್ಪು ಬೆರೆಸಿದ ಬೆಚ್ಚನೆಯ ನೀರು, ಆಯಸ್ಸು ನೂರು!   

salt water
 

ಇದಕ್ಕಾಗಿ ನೀರಿನಲ್ಲಿ ಉಪ್ಪಿನ ಅಂಶ ಹೆಚ್ಚಿರುವುದು ಅಗತ್ಯ. ಏಕೆಂದರೆ ಉಪ್ಪು ಹೆಚ್ಚಾಗಿದ್ದಷ್ಟೂ ಸೋಂಕಿರುವ ಚರ್ಮದ ಈ ಭಾಗದಲ್ಲಿ ಉಪ್ಪಿನ ಸಾಂದ್ರತೆ ಹೆಚ್ಚಾಗಿ ಒಳಗಡೆ ಇರುವ ಕಡಿಮೆ ಸಾಂದ್ರತೆಯ ಸೋಂಕು ಚರ್ಮದ ಸೂಕ್ಷ್ಮರಂಧ್ರದಿಂದ ಹೊರಬರಲು ಸಾಧ್ಯವಾಗುತ್ತದೆ. ತನ್ಮೂಲಕ ಸೋಂಕನ್ನು ಕಡಿಮೆಯಾಗಲು ಮತ್ತು ತಾತ್ಕಾಲಿಕವಾಗಿ ನೋವಿನಿಂದ ಶಮನ ಪಡೆಯಲು ಸಾಧ್ಯವಾಗುತ್ತದೆ.

ಅಲ್ಲದೇ ಉಪ್ಪುನೀರು ಒಂದು ಉತ್ತಮ ಬ್ಯಾಕ್ಟೀರಿಯಾ ನಿವಾರಕ ಹಾಗೂ ಚರ್ಮಪ್ರಚೋದಕವಾಗಿದ್ದು ಚರ್ಮದ ಮೇಲೆ ಅಂಟಿಕೊಂಡಿರುವ ತೆಳುವಾದ ಪದರವನ್ನು ಸಡಿಲಿಸಿ ನಿವಾರಿಸಲು ನೆರವಾಗುತ್ತದೆ. ಇದರಿಂದ ಈ ಪದರದಲ್ಲಿ ಅಂಟಿಕೊಂಡಿದ್ದ ಬ್ಯಾಕ್ಟೀರಿಯಾ, ವೈರಸ್ಸುಗಳೂ ನಿವಾರಣೆಯಾಗಿ ಇವುಗಳ ಮೂಲಕ ಹರಡಬಹುದಾಗಿದ್ದ ಸೋಂಕು ಸಹಾ ಇಲ್ಲವಾಗುತ್ತದೆ. 

salt water
 

ಅಲ್ಲದೇ ಉಪ್ಪುನೀರಿನಲ್ಲಿ ಬ್ಯಾಕ್ಟೀರಿಯಾಗಳು ಮತ್ತು ವೈರಸ್ಸುಗಳು ಉಸಿರಾಡಲಾರವು. ಇದೇ ಕಾರಣದಿಂದ ಉಪ್ಪು ನೀರಿದ್ದೆಡೆ ಕೀಟಾಣುಗಳಿರುವುದಿಲ್ಲ. ನಿಯಮಿತವಾಗಿ ಉಪ್ಪುನೀರಿನಿಂದ ಬಾಯಿಯನ್ನು ಮುಕ್ಕಳಿಸಿಕೊಳ್ಳುತ್ತಿದ್ದರೆ ಬ್ಯಾಕ್ಟೀರಿಯಾ ವೈರಸ್ಸುಗಳ ಧಾಳಿಯಿಂದ ಸಾಕಷ್ಟು ರಕ್ಷಣೆ ಪಡೆಯಬಹುದು.   ಉಪ್ಪು ತಿಂದವರು ನೀರು ಕುಡಿಲೇಬೇಕಾ...?

ಆದರೆ ಈ ವಿಧಾನದಲ್ಲಿಯೂ ಕೆಲವು ಋಣಾತ್ಮಕ ಅಂಶವಿದೆ. ಉಪ್ಪುನೀರಿನಿಂದ ಮುಕ್ಕಳಿಸಿಕೊಂಡ ಬಳಿಕ ಇಲ್ಲಿ ಬ್ಯಾಕ್ಟೀರಿಯಾಗಳು ಇಲ್ಲವಾಗುವ ಜೊತೆಗೇ ಬಾಯಿಯ ಒಳಗಣ ನೀರಿನ ಅಂಶವೂ ಇಲ್ಲವಾಗುತ್ತದೆ. ಇದು ಬಾಯಿಯನ್ನು ಒಣಗಿಸುತ್ತದೆ.

ಉಪ್ಪು ತಿಂದವರು ನೀರು ಕುಡಿಲೇಬೇಕಾ...? ಒಂದು ವೇಳೆ ಗಂಟಲ ಒಳಭಾಗದಲ್ಲಿ ಸೋಂಕು ಇದ್ದರೆ ಅತಿ ಹೆಚ್ಚಿನ ಸಾಂದ್ರತೆಯ ಉಪ್ಪು ಇದನ್ನು ತೀರಾ ಒಣಗಿಸಿ ಮತ್ತೊಮ್ಮೆ ಈ ಸೋಂಕನ್ನು ಹೆಚ್ಚಿಸಬಹುದು.   ಬೆಳ್ಳಂ ಬೆಳಿಗ್ಗೆ ಕುಡಿಯಿರಿ, ಉಪ್ಪು ಬೆರೆಸಿದ ಬೆಚ್ಚನೆಯ ನೀರು  

salt water
 

ಆದ್ದರಿಂದ ಅತಿ ಹೆಚ್ಚಿನ ಉಪ್ಪು ಬಳಸಬಾರದು. ತಜ್ಞರು ಈ ಬಗ್ಗೆ ನೀಡಿರುವ ವಿವರಗಳ ಪ್ರಕಾರ ಒಂದು ಕಪ್ (250 ml) ಉಗುರು ಬೆಚ್ಚನೆಯ ನೀರಿಗೆ ಐದು ಗ್ರಾಂ ಉಪ್ಪು ಸಾಕು.

ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

English summary

How does warm salt water gargling help with cough and cold?

‘Gargle with warm salt water!’ An advice given to us by our mothers at the slightest hint of a sore throat. But how effective is it? In case of a sore throat, the tissues of the throat get swollen or inflamed with the accumulation of fluids in them, causing a condition called edema.
Please Wait while comments are loading...
Subscribe Newsletter