For Quick Alerts
ALLOW NOTIFICATIONS  
For Daily Alerts

ಮೀನು ತಿಂದರೆ ಕಣ್ಣಿನ ದೃಷ್ಟಿ ದೋಷದಿಂದ ದೂರವಿರಬಹುದು!

By Manu
|

ದೇಹದ ಪ್ರತಿಯೊಂದು ಆವಯವಗಳು ಸರಿಯಾಗಿದ್ದರೆ ಮಾತ್ರ ವ್ಯಕ್ತಿ ಆರೋಗ್ಯವಾಗಿದ್ದಾನೆಂದು ಹೇಳಬಹುದು. ಅದರಲ್ಲೂ ದೇಹದಲ್ಲಿ ಪ್ರಮುಖವಾಗಿರುವ ಅಂಗವೆಂದರೆ ಕಣ್ಣುಗಳು. ಕಣ್ಣುಗಳು ಸರಿಯಾಗಿ ಕಾರ್ಯನಿರ್ವಹಿಸದೆ ಇದ್ದರೆ ದೇಹದ ಇತರ ಭಾಗಗಳಿಗೂ ಅದರ ಪರಿಣಾಮ ಉಂಟಾಗುತ್ತದೆ. ಇಂತಹ ಕಣ್ಣುಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯ. ಇಂದಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ಮತ್ತು ಲ್ಯಾಪ್ ಟಾಪ್‌ನಲ್ಲಿ ಅತಿಯಾಗಿ ಕೆಲಸ ಮಾಡುವಾಗ ಕಣ್ಣುಗಳು ತುಂಬಾ ಆಯಾಸಗೊಳ್ಳುತ್ತದೆ.

How Does Eating A Fish Improve Your Eyesight?

ಆದರೆ ಇದು ಅನಿವಾರ್ಯ. ಇದನ್ನು ಕಡೆಗಣಿಸಲು ಸಾಧ್ಯವೇ ಇಲ್ಲ. ಇಂದಿನ ದಿನಗಳಲ್ಲಿ ಲ್ಯಾಪ್ ಟಾಪ್ ಮತ್ತು ಸ್ಮಾರ್ಟ್ ಫೋನ್ ನಮ್ಮ ಜೀವನಕ್ಕೆ ಅಗತ್ಯವಾಗಿರುವ ಕಾರಣ ಇದು ನಮ್ಮ ಕಣ್ಣುಗಳಿಗೆ ಆಯಾಸವನ್ನು ಉಂಟು ಮಾಡುವುದು. ದೈನಂದಿನ ಜೀವನದಲ್ಲಿ ಟಿವಿ, ಪುಸ್ತಕ ಓದುವಾಗ ಮತ್ತು ಲ್ಯಾಪ್ ಟಾಪ್ ನಲ್ಲಿ ಕೆಲಸ ಮಾಡುವಾಗ ಕಣ್ಣುಗಳು ತುಂಬಾ ಶ್ರಮವಹಿಸಬೇಕಾಗುತ್ತದೆ. ಇಂತಹ ಸಮಯದಲ್ಲಿ ನೀವು ವೈದ್ಯರನ್ನು ಭೇಟಿಯಾಗುವುದು ತುಂಬಾ ಮುಖ್ಯ ಮತ್ತು ಕಣ್ಣುಗಳ ಆರೋಗ್ಯ ಕಾಪಾಡಬೇಕಾಗುತ್ತದೆ.

ಸ್ಮಾರ್ಟ್ ಫೋನ್‌ಗಳಿಂದ ಬರುವಂತಹ ನೀಲಿ ಬಣ್ಣ(ಎಚ್ ಇವಿ ಲೈಟ್) ಕಣ್ಣುಗಳ ದೃಷ್ಟಿಗೆ ತುಂಬಾ ಹಾನಿಯನ್ನು ಉಂಟುಮಾಡುತ್ತದೆ. ಹಿಂದೆ ವಯಸ್ಸಾಗುತ್ತಿದ್ದಂತೆ ಕಣ್ಣಿನ ದೃಷ್ಟಿ ಮಂದವಾಗುತ್ತಾ ಇತ್ತು. ಆದರೆ ಆಧುನಿಕ ಸಾಧನಗಳಿಂದ ಕಣ್ಣುಗಳ ದೃಷ್ಟಿ ಮಂದಾವಾಗುತ್ತದೆ. ಲ್ಯಾಪ್ ಟಾಪ್, ಸ್ಮಾರ್ಟ್ ಫೋನ್‌ಗಳನ್ನು ಬಳಸುವುದರಿಂದ ಕಣ್ಣಿಗೆ ಆಗುವ ಆಯಾಸವನ್ನು ಕೆಲವೊಂದು ಆರೋಗ್ಯಕಾರಿ ಆಹಾರಗಳಿಂದ ನೀಗಿಸಬಹುದಾಗಿದೆ. ಕಣ್ಣಿನ ಆರೋಗ್ಯಕ್ಕೆ ಬೇಕು, ಸ್ವಲ್ಪ ಸ್ಪೆಷಲ್ ಆರೈಕೆ!

ಕೆಲವೊಂದು ಆರೋಗ್ಯಕಾರಿ ಆಹಾರಗಳನ್ನು ಬಳಸಿಕೊಂಡು ಕಣ್ಣಿನ ಆರೋಗ್ಯವನ್ನು ಕಾಪಾಡಬಹುದಾಗಿದೆ. ಕಣ್ಣುಗಳು ಒಣಗುವುದು, ಕಣ್ಣಿನ ಪೊರೆಯನ್ನು ತಡೆಯಬಹುದಾಗಿದೆ. ಮೀನು ತಿನ್ನುವುದರಿಂದ ನಾವು ಕಣ್ಣುಗಳ ದೃಷ್ಟಿಯನ್ನು ಹೆಚ್ಚಿಸಬಹುದು. ಕಣ್ಣುಗಳ ಆರೋಗ್ಯವನ್ನು ಕಾಪಾಡಿ ರೋಗಗಳು ಬರದಂತೆ ಹೇಗೆ ಕಾಪಾಡಬಹುದು ಎಂದು ನಾವು ಇಲ್ಲಿ ತಿಳಿದುಕೊಳ್ಳಬಹುದು.

ಕಣ್ಣುಗಳು ಒಣಗುವುದನ್ನು ತಡೆಯುವುದು
ಮೀನು ತಿನ್ನುವುದರಿಂದ ಕಣ್ಣುಗಳು ಒಣಗುವ ರೋಗದಿಂದ ಪರಿಹಾರ ಸಿಗುತ್ತದೆ. ಕಣ್ಣುಗಳು ಸರಿಯಾಗಿ ನೀರನ್ನುಉತ್ಪತ್ತಿ ಮಾಡದೆ ಇರುವಾಗ ಕಣ್ಣುಗಳು ಒಣಗಿ ಕಿರಿಕಿರಿ ಉಂಟಾಗುತ್ತದೆ. ಕಣ್ಣುಗಳು ಒಣಗುವುದರಿಂದ ಕಣ್ಣುಗಳು ಕೆಂಪಗಾಗಬಹುದು. ಇದರಿಂದ ಕಣ್ಣುನೋವು ಶುರುವಾಗುವ ಸಾಧ್ಯತೆಗಳಿವೆ. ಮೀನಿನಲ್ಲಿರುವ ಒಮೆಗಾ-3 ಕೊಬ್ಬಿನ ಆಮ್ಲವು ನಿಮ್ಮ ಕಣ್ಣುಗಳನ್ನು ಒಣಗದಂತೆ ಕಾಪಾಡುವುದು ಮತ್ತು ಇದರಿಂದ ಕಣ್ಣುಗಳು ಆರೋಗ್ಯ ಹೆಚ್ಚುವುದು.

ಕಣ್ಣಿನ ಪೊರೆ ತಡೆಯುವುದು
ಟುನಾ ಮತ್ತು ಸಾಲ್ಮನ್ ಮೀನುಗಳ ಸೇವನೆಯಿಂದ ನಿಮ್ಮ ಕಣ್ಣುಗಳ ಆರೋಗ್ಯ ಮತ್ತು ದೃಷ್ಟಿ ಉತ್ತಮವಾಗುತ್ತದೆ. ಈ ಮೀನುಗಳಲ್ಲಿ ಇರುವಂತಹ ಒಮೆಗಾ-3 ಕಣ್ಣುಗಳನ್ನು ಕಣ್ಣಿನ ಪೊರೆಯಿಂದ ರಕ್ಷಿಸುತ್ತದೆ. ಕಣ್ಣಿನ ದೃಷ್ಟಿಯೇ ಜೀವನದ ಬಹು ದೊಡ್ಡ ಆಸ್ತಿ

ಗರ್ಭದಲ್ಲಿರುವ ಶಿಶುವಿನ ದೃಷ್ಟಿ ಬೆಳವಣಿಗೆಗೆ
ಗರ್ಭಿಣಿ ಮಹಿಳೆಯರು ತಮ್ಮ ಆಹಾರದಲ್ಲಿ ಒಮೆಗಾ-3ಯನ್ನು ಹೆಚ್ಚಿಗೆ ಸೇವನೆ ಮಾಡುವುದರಿಂದ ಗರ್ಭದಲ್ಲಿರುವ ಮಗುವಿನ ಕಣ್ಣುಗಳ ಬೆಳವಣಿಗೆಗೆ ತುಂಬಾ ಸಹಕಾರಿಯಾಗಲಿದೆ. ಸರಿಯಾದ ಕ್ರಮದಲ್ಲಿ ಒಮೆಗಾ-3 ಸೇವನೆ ಮಾಡಿದರೆ ಆಗ ಕೇವಲ ಎರಡು ತಿಂಗಳ ಒಳಗಡೆ ಮಗುವಿಗೆ ದೃಷ್ಟಿಯನ್ನು ಪಡೆಯಬಹುದಾಗಿದೆ. ಮೀನು ಸೇವಿಸದೆ ಇರುವ ಗರ್ಭಿಣಿ ಮಹಿಳೆಯರ ಮಗುವಿನ ದೃಷ್ಟಿ ಪಡೆಯಲು ಎರಡು ತಿಂಗಳಿಗಿಂತ ಹೆಚ್ಚಿನ ಸಮಯ ಬೇಕಾಗಬಹುದು. ಕಣ್ಣುಗಳ ದೃಷ್ಟಿಯ ಆರೋಗ್ಯಕ್ಕೆ ಮೀನಿನಲ್ಲಿರುವ ಒಮೆಗಾ-3 ಆ್ಯಸಿಡ್ ತುಂಬಾ ಸಹಕಾರಿ.

ರೆಟಿನಾಗೆ ಆಗುವ ಲಾಭಗಳು
ಸಾಲ್ಮನ್, ಸಾರ್ಡಿನ್, ಟ್ಯೂನಾ ಮತ್ತು ಕೊಡ್ ನಂತಹ ಕೊಬ್ಬಿನಾಮ್ಲವಿರುವ ಮೀನುಗಳಲ್ಲಿ ಉನ್ನತ ಮಟ್ಟದ ಕೊಬ್ಬುಯುಕ್ತ ಪೋಷಕಾಂಶಗಳಿವೆ. ಇದು ಮೆದುಳು ಹಾಗೂ ಕಣ್ಣಿನ ದೃಷ್ಟಿಗೆ ತುಂಬಾ ಪ್ರಯೋಜನಕಾರಿ. ಮೀನನ್ನು ತಿನ್ನುವುದರಿಂದ ರೆಟಿನಾದ ರಕ್ಷಣೆಯೊಂದಿಗೆ ಹಲವಾರು ರೀತಿಯ ಅಲರ್ಜಿಗಳಿಂದ ಅದು ನಿಮ್ಮನ್ನು ಕಾಪಾಡುತ್ತದೆ.

ವಯೋ ಸಂಬಂಧಿ ಕಾಯಿಲೆ
ಮೀನನ್ನು ಅತಿಯಾಗಿ ಸೇವನೆ ಮಾಡುವಂತಹ ವ್ಯಕ್ತಿಗಳಲ್ಲಿ ವಯೋ ಸಹಜ ಕಣ್ಣು ದೃಷ್ಟಿ ಕಳಕೊಳ್ಳುವ ಸಮಸ್ಯೆ ಕಾಡದು ಎಂದು ಕೆಲವೊಂದು ಅಧ್ಯಯನಗಳು ಹೇಳಿವೆ. ನಿಯಮಿತವಾಗಿ ಮೀನು ತಿನ್ನುತ್ತಾ ಇದ್ದರೆ ಶೇ.40ರಷ್ಟು ವಯೋ ಸಹಜ ದೃಷ್ಟಿ ಸಮಸ್ಯೆ ಕಾಡುವುದಿಲ್ಲ ಎಂದು ಹೇಳಲಾಗುತ್ತಿದೆ. ಕಣ್ಣಿನ ರಕ್ಷಣೆಗಾಗಿ 10 ಆರೋಗ್ಯಕಾರಿ ಆಹಾರಗಳು

ಗ್ಲೂಕೋಮಾ ಸಮಸ್ಯೆ ಕಾಡಿದಾಗ
ಮೀನಿನಲ್ಲಿರುವ ಕೆಲವೊಂದು ಪೋಷಕಾಂಶಗಳು ಕಣ್ಣುಗಳನ್ನು ಗ್ಲೂಕೋಮಾ ಮತ್ತು ಅತಿಯಾದ ಒತ್ತಡದಿಂದ ಕಾಪಾಡುತ್ತದೆ. ಮೀನಿನಲ್ಲಿರುವ ಕೊಬ್ಬುಯುಕ್ತ ಆಮ್ಲವು ಕಣ್ಣುಗಳಲ್ಲಿ ಸರಿಯಾಗಿ ನೀರಿನಾಂಶವನ್ನು ಕಾಪಾಡಿ ಗ್ಲೂಕೋಮಾ ಬರದಂತೆ ಕಾಪಾಡುತ್ತದೆ. ಇದು ಮೀನಿನಿಂದ ಕಣ್ಣುಗಳಿಗೆ ಆಗುವಂತಹ ಕೆಲವೊಂದು ಲಾಭಗಳು. ಇದರಿಂದ ನಿಮ್ಮ ಕಣ್ಣುಗಳ ಆರೋಗ್ಯ ಉತ್ತಮಗೊಂಡು ಕೆಲವೊಂದು ಸಮಸ್ಯೆಗಳು ಬರದಂತೆ ಕಾಪಾಡುವುದು.

English summary

How Does Eating A Fish Improve Your Eyesight?

Eyesight is the most important of our five senses, yet not many are aware of how to protect it. Our eyes are working all the time and we need to prevent it from various diseases.People are always using their eyes either by working on the laptop or gazing at their smartphones, more than before, and this does have serious repercussions and can impact our vision. It is a proven fact that eating fish regularly can improve our eyesight to a considerable extent. So, let's find out how fish can improve our eyesight when different eye disorders can affect us? Read on.
X
Desktop Bottom Promotion