For Quick Alerts
ALLOW NOTIFICATIONS  
For Daily Alerts

ಹಾರ್ಲಿಕ್ಸ್, ಬೋರ್ನ್‌ವಿಟಾ ಹಿಂದಿರುವ ಭಯಾನಕ ಸತ್ಯ ಬಯಲು...

By Super
|

ಆರೋಗ್ಯದ ವಿಷಯ ಬಂದಾಗ ಯಾರೂ ಹಣದ ಮುಖ ನೋಡುವುದಿಲ್ಲ ಎಂದು ವ್ಯಾಪಾರಿಗಳಿಗೆ ಚೆನ್ನಾಗಿ ಗೊತ್ತು. ಅದೂ ಮಕ್ಕಳ ಆರೋಗ್ಯ ವಿಷಯ ಬಂದಾಗ ಹಣ ಎಷ್ಟು ಎಂದೂ ಹೆಚ್ಚಿನವರು ಕೇಳುವುದಿಲ್ಲ. ಈ ಅಗತ್ಯವನ್ನು ಮನಗಂಡ ಬಹುರಾಷ್ಟ್ರೀಯ ಸಂಸ್ಥೆಗಳು ಮಾರುಕಟ್ಟೆಯಲ್ಲಿ ಮಕ್ಕಳಿಗೆ ಮತ್ತು ಹಿರಿಯರಿಗಾಗಿ ವಿವಿಧ 'ಆರೋಗ್ಯ ಪೇಯ'ಗಳನ್ನು ಬಿಡುಗಡೆ ಮಾಡಿವೆ. ಅಷ್ಟೇ ಅಲ್ಲ, ಇದಕ್ಕೆ ಪ್ರಚಾರ ನೀಡಲು ಖ್ಯಾತ ಕ್ರಿಕೆಟ್, ಸಿನೆಮಾ ತಾರೆಯರಿಗೇ ಕೋಟ್ಯಂತರ ಹಣ ನೀಡಿ ತಮ್ಮ ಆರೋಗ್ಯದ ಗುಟ್ಟು ಇದೇ ಎಂದು ಬೊಬ್ಬಿರಿಯುತ್ತಾರೆ.

ಇದರ ಪರಿಣಾಮವಾಗಿ ಭಾರತದ ಮಾರುಕಟ್ಟೆಯಲ್ಲಿ ಈ ಆರೋಗ್ಯ ಪೇಯಗಳು ಭಾರೀ ಬೇಡಿಕೆ ಪಡೆದುಕೊಂಡಿರುವುದು ಮಾತ್ರವಲ್ಲ, ದಿನೇ ದಿನೇ ಬೇಡಿಕೆ ಏರುತ್ತಲೇ ಇದೆ. ಮಕ್ಕಳಿಗಾಗಿ ಇರುವ ಪೇಯಗಳನ್ನು ಮೊದಲು ಹಾಲಿನಲ್ಲಿ ಬೆರೆಸಿ ಕುಡಿಸಬೇಕಿತ್ತು. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹಾಲಿನ ಪುಡಿಯನ್ನೇ ಈ ಪೇಯಗಳಲ್ಲಿ ಮಿಶ್ರಣ ಮಾಡಿ ಕೇವಲ ಬಿಸಿನೀರು ಸೇರಿಸಿದರೆ ಸಾಕು ಎನ್ನುವಲ್ಲಿಗೆ ತಲುಪಿದೆ.

ಹೆಚ್ಚಿನ ಆರೋಗ್ಯ ಪೇಯಗಳು ಮಾಲ್ಟ್ ಅಥವಾ ನೆನೆಸಿದ ಕಾಳುಗಳನ್ನು ಆಧರಿಸಿದ್ದು ಇದಕ್ಕೆ ಅಗತ್ಯವಾದ ಇತರ ಪೋಷಕಾಂಶಗಳನ್ನು ಅಗತ್ಯಕ್ಕೆ ತಕ್ಕಂತೆ ಮಿಶ್ರಣಗೊಳಿಸಿ ವಿವಿಧ ಹೆಸರಿನಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗುತ್ತದೆ. ಪ್ರಮುಖ ಬ್ರಾಂಡ್ ಗಳೆಂದರೆ ಕೋಂಪ್ಲಾನ್, ಬೂಸ್ಟ್, ಹಾರ್ಲಿಕ್ಸ್, ಪ್ರೋಟೀನೆಕ್ಸ್, ಪೀಡಿಯಾಶ್ಯೂರ್ ಮತ್ತು ಬೋರ್ನ್ ವಿಟಾ.

ಇಂದು ಇವುಗಳಲ್ಲಿ ಕನಿಷ್ಠ ಒಂದಾದರೂ ಉತ್ಪನ್ನವನ್ನು ಪ್ರತಿ ಮನೆಯಲ್ಲಿಯೂ ಕಾಣಬಹುದು. ಇವು ಏನು ಎಂದು ಕೇಳಿದರೆ ಪ್ರತಿ ಮನೆಯ ಒಡತಿಯೂ 'ಇದು ಪೌಷ್ಟಿಕ ಆಹಾರ' ಎಂದೇ ಉತ್ತರ ನೀಡಬಹುದು. ಮಕ್ಕಳ ಬೆಳವಣಿಗೆಗೆ ಈ ಆಹಾರ ಪೂರಕವಾಗಿದ್ದು ಇವುಗಳನ್ನು ಕುಡಿಯುವ ಮೂಲಕ ಬೇಗಬೇಗನೇ ಬೆಳೆಯುತ್ತಾರೆ, ಮೆದುಳಿನ ಕ್ಷಮತೆಯೂ ಹೆಚ್ಚುತ್ತದೆ ಎಂದೆಲ್ಲಾ ಇವುಗಳ ಜಾಹೀರಾತುಗಳಲ್ಲಿ ಭರ್ಜರಿಯಾಗಿ ಪ್ರಚಾರ ಮಾಡಿರಲಾಗುತ್ತದೆ.

ಜಾಹೀರಾತಿನಲ್ಲಿ ಬರುವುದೆಲ್ಲಾ ಸತ್ಯವಲ್ಲ ಎಂದು ನಮಗೆ ಗೊತ್ತಿದ್ದರೂ ನಾವೆಲ್ಲರೂ ಇದರ ಸತ್ಯಾಸತ್ಯತೆಯನ್ನು ಅರಿಯಲು ಯತ್ನಿಸದೇ ನೇರವಾಗಿ ಕೊಂಡುತಂದು ನಮ್ಮ ಮಕ್ಕಳಿಗೆ ಕುಡಿಸುತ್ತಿದ್ದೇವೆ. ಈ ಆರೋಗ್ಯಪೇಯಗಳ ನಿಜವಾದ ಹುರುಳೇನು ಎಂಬುದನ್ನು ಕೆಳಗಿನ ಸ್ಲೈಡ್ ಶೋ ಮೂಲಕ ಅರಿಯೋಣ...

ಇವುಗಳಲ್ಲಿ ಸಕ್ಕರೆ ಅತಿಯಾಗಿದೆ

ಇವುಗಳಲ್ಲಿ ಸಕ್ಕರೆ ಅತಿಯಾಗಿದೆ

ಅತಿಯಾದ ಸಕ್ಕರೆ ಒಳ್ಳೆಯದಲ್ಲ ಎಂದು ವೈದ್ಯರು ತಿಳಿಸುತ್ತಾರೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಈ ಪೇಯಗಳಲ್ಲಿ ಭಾರೀ ಪ್ರಮಾಣದ ಸಕ್ಕರೆ ಇದೆ. ಹೆಚ್ಚಿನ ಪೇಯಗಳಲ್ಲಿ ಅಗತ್ಯಕ್ಕೂ ಹೆಚ್ಚಿನ ಚಾಕಲೇಟು ಇದೆ. ಇವುಗಳು ನಮ್ಮ ದೇಹದ ಮೇಲೆ ನಮಗೆ ಅರಿವಿಲ್ಲದಂತೆ ಹೆಚ್ಚಿನ ಹಾನಿಯುಂಟುಮಾಡಬಹುದು.

ಬಾಯಿಯ ಆರೋಗ್ಯ ಕೆಡುವ ಸಂಭವ

ಬಾಯಿಯ ಆರೋಗ್ಯ ಕೆಡುವ ಸಂಭವ

ಸಕ್ಕರೆಯ ಪ್ರಮಾಣ ಹೆಚ್ಚಿದ್ದಷ್ಟೂ ಬಾಯಿಯ ಆರೋಗ್ಯ ಹಾಳಾಗುವ ಸಂಭವ ಹೆಚ್ಚು. ಏಕೆಂದರೆ ಬಾಯಿಯ ಜೊಲ್ಲಿನಲ್ಲಿ ಕೊಂಚವಾದರೂ ಉಳಿಯುವ ಪೇಯ ಬ್ಯಾಕ್ಟೀರಿಯಾಗಳಿಗೆ ಮೃಷ್ಟಾನ್ನ ಭೋಜನದಂತಿದ್ದು ಒಂದು ವೇಳೆ ಸಕಾಲದಲ್ಲಿ ಸ್ವಚ್ಛಗೊಳಿಸದೇ ಇದ್ದರೆ ಹಲ್ಲು ಹುಳುಕಾಗುವುದು, ಒಸಡು ಕೊಳೆಯುವುದು, ಹಲ್ಲುಗಳಲ್ಲಿ ಕುಳಿ ಮೊದಲಾದ ತೊಂದರೆಗಳು ಎದುರಾಗಬಹುದು.

ಅತಿ ಹೆಚ್ಚಿನ ಶಕ್ತಿ ಹೌದು ಆದರೆ ಆಲಸಿಕಾರಕವೂ ಹೌದು

ಅತಿ ಹೆಚ್ಚಿನ ಶಕ್ತಿ ಹೌದು ಆದರೆ ಆಲಸಿಕಾರಕವೂ ಹೌದು

ಈ ಪೇಯಗಳನ್ನು ಕುಡಿಯುವುದರಿಂದ ಭಾರೀ ಶಕ್ತಿ ದೊರಕುತ್ತದೆ ಎಂದು ಪ್ರಚಾರ ನೀಡಿರುವ ಪ್ರಕಾರ ಶಕ್ತಿ ದೊರಕುವುದೇನೋ ಸರಿ. ಇದಕ್ಕೆ ಕಾರಣ ಇದರಲ್ಲಿರುವ ಹೆಚ್ಚಿನ ಪ್ರಮಾಣದ ಸಕ್ಕರೆ. ಈ ಶಕ್ತಿಯ ದುಷ್ಪರಿಣಾಮವೇನೆಂದರೆ ಈ ಶಕ್ತಿ ಕೊಂಚ ಕಾಲದಲ್ಲಿ ಖಾಲಿಯಾಗಿ ತಕ್ಷಣವೇ ಸುಸ್ತು, ಆಲಸಿತನ ಆವರಿಸುವುದು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಅತಿ ಹೆಚ್ಚಿನ ಶಕ್ತಿ ಹೌದು ಆದರೆ ಆಲಸಿಕಾರಕವೂ ಹೌದು

ಅತಿ ಹೆಚ್ಚಿನ ಶಕ್ತಿ ಹೌದು ಆದರೆ ಆಲಸಿಕಾರಕವೂ ಹೌದು

ಇದು ದೇಹಕ್ಕೆ ಅಪಾಯಕಾರಿಯಾದ ಶಕ್ತಿಯಾಗಿದೆ. ಇದರ ಬದಲಿಗೆ ನೈಸರ್ಗಿಕ ಪೌಷ್ಟಿಕ ಆಹಾರವನ್ನು ಸೇವಿಸಿ ಥಟ್ ಅಂತ ಅಲ್ಲದಿದ್ದರೂ ನಿಧಾನವಾಗಿ ಆದರೆ ಇಡಿಯ ದಿನ ಸುಸ್ತು, ಆಲಸಿತನ ಆವರಿಸದಂತೆ ಶಕ್ತಿಯನ್ನು ಪಡೆಯುವುದೇ ನಿಜವಾದ ಆರೋಗ್ಯವಾಗಿದೆ.

ಅಪಾಯಕಾರಿಯಾದ ಸಂರಕ್ಷಕಗಳು

ಅಪಾಯಕಾರಿಯಾದ ಸಂರಕ್ಷಕಗಳು

ಯಾವುದೇ ಸಿದ್ಧ ಆಹಾರದಲ್ಲಿ ಕೊಂಚ ಪ್ರಮಾಣದಲ್ಲಿ ಸಂರಕ್ಷಕ (preservatives)ಗಳನ್ನು ಸೇರಿಸಲೇ ಬೇಕಾಗುತ್ತದೆ. ಇಲ್ಲದಿದ್ದರೆ ಈ ಆಹಾರ ಮಾರುಕಟ್ಟೆಯಿಂದ ಗ್ರಾಹಕನ ಮನೆಗೆ ಬರುವ ಮುನ್ನವೇ ಹಾಳಾಗಿಬಿಡುತ್ತವೆ. ಆದರೆ ಈ ಸಂರಕ್ಷಕಗಳು ಆರೋಗ್ಯಕ್ಕೆ ಉತ್ತಮ ಎಂದು ಹೇಳಲಾಗುವುದಿಲ್ಲ. ಕೊಂಚ ಪ್ರಮಾಣದಲ್ಲಿಯೇ ಸರಿ, ಇವು ಅಪಾಯಕಾರಿಯೇ ಆಗಿವೆ. ಸುಂದರವಾಗಿ ಕಾಣಲು ಸೇರಿಸಿರುವ ಕೆಲವು ಕೃತಕ ಬಣ್ಣಗಳು ಸಹಾ ಅನಾರೋಗ್ಯಕರವಾಗಿವೆ.

ಕೃತಕ ಬಣ್ಣದಿಂದ ಸ್ಮರಣಶಕ್ತಿಗೆ ತೊಂದರೆ

ಕೃತಕ ಬಣ್ಣದಿಂದ ಸ್ಮರಣಶಕ್ತಿಗೆ ತೊಂದರೆ

ಕೃತಕ ಬಣ್ಣಗಳ ಬಗ್ಗೆ ನಡೆಸಿದ ಸಂಶೋಧನೆಗಳ ಪ್ರಕಾರ ಇವುಗಳ ಸೇವನೆಯಿಂದ ಮಕ್ಕಳಲ್ಲಿ ತೀವ್ರವಾಗಿ ಸ್ಮರಣಶಕ್ತಿ ಕುಂಠಿತಗೊಳ್ಳುತ್ತದೆ. ಕೆಲವು ಸಂರಕ್ಷಕಗಳೂ ಸ್ಮರಣ ಶಕ್ತಿಯ ಮೇಲೆ ಪ್ರಭಾವ ಬೀರುತ್ತವೆ. ಅಲ್ಲದೇ ಮಕ್ಕಳ ನಡವಳಿಕೆಯ ಮೇಲೂ ಋಣಾತ್ಮಕ ಪರಿಣಾಮಗಳಾಗಿರುವುದನ್ನು ಕಂಡುಕೊಳ್ಳಲಾಗಿದೆ. ಏಕಾಗ್ರತೆ, ಜಾಗರೂಕತೆ ಮೊದಲಾದ ಗುಣಗಳೂ ಕಡಿಮೆಯಾಗುತ್ತವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕೃತಕ ಬಣ್ಣದಿಂದ ಸ್ಮರಣಶಕ್ತಿಗೆ ತೊಂದರೆ

ಕೃತಕ ಬಣ್ಣದಿಂದ ಸ್ಮರಣಶಕ್ತಿಗೆ ತೊಂದರೆ

ಇನ್ನೊಂದು ಅತ್ಯಂತ ಅಪಾಯಕಾರಿಯಾದ ಪರೋಕ್ಷ ಗುಣವೆಂದರೆ ಈ ಪೇಯಗಳನ್ನು ಕುಡಿದಾಕ್ಷಣ ಲಭ್ಯವಾದ ಅಪಾರ ಶಕ್ತಿಯನ್ನು ತಕ್ಷಣ ಖಾಲಿಮಾಡಲು ಮಕ್ಕಳು ಉತ್ಸುಕರಾಗಿ ಅಪಾಯಕಾರಿಯಾದ ಕಾರ್ಯಗಳಿಗೆ ಮುಂದಾಗುವುದು. ಇದರ ಪರಿಣಾಮಗಳನ್ನು ಊಹಿಸಲೂ ಸಾಧ್ಯವಿಲ್ಲ.

ಸಕ್ಕರೆ ತರವಲ್ಲದವರಿಗೆ ಈ ಪೇಯಗಳೂ ತರವಲ್ಲ

ಸಕ್ಕರೆ ತರವಲ್ಲದವರಿಗೆ ಈ ಪೇಯಗಳೂ ತರವಲ್ಲ

ಸಕ್ಕರೆ ಕರಗಿದ ಬಳಿಕ ಲಭ್ಯವಾಗುವ ಶಕ್ತಿ ಪಿಷ್ಟರೂಪದಲ್ಲಿದ್ದು ಗಾಳಿಗುಳ್ಳೆಯಂತಿರುತ್ತದೆ. ಕೊಂಚ ಬಳಸಿದಾಕ್ಷಣ ಪಿಟ್ ಎಂದು ಒಡೆದು ಖಾಲಿಯಾಗುತ್ತದೆ. ವೈದ್ಯಕೀಯ ಭಾಷೆಯಲ್ಲಿ ಇವುಗಳಿಗೆ ಖಾಲಿ ಕ್ಯಾಲೋರಿ (‘empty calories') ಎಂದು ಕರೆಯುತ್ತಾರೆ. ಅಂದರೆ ಈ ಕ್ಯಾಲೋರಿಗಳು ನೋಡಲಿಕ್ಕೆ ಅಪಾರಪ್ರಮಾಣದಲ್ಲಿರುವಂತೆ ಕಂಡುಬಂದರೂ ಇದರ ಉಪಯೋಗ ಕೆಲವೇ ಕ್ಷಣಗಳಿಗಾಗಿ ಸೀಮಿತವಾಗಿದೆ. ಒಂದರ್ಥದಲ್ಲಿ ನೊರೆಇರುವ ಕ್ಯಾಪುಚಿನೋ ಕಾಫಿ ಇದ್ದಂತೆ.

ಸಕ್ಕರೆ ತರವಲ್ಲದವರಿಗೆ ಈ ಪೇಯಗಳೂ ತರವಲ್ಲ

ಸಕ್ಕರೆ ತರವಲ್ಲದವರಿಗೆ ಈ ಪೇಯಗಳೂ ತರವಲ್ಲ

ಲೋಟ ತುಂಬಿದಂತೆ ಕಂಡುಬಂದರೂ ಮುಕ್ಕಾಲಿಗಿಂತಲೂ ಹೆಚ್ಚು ಇರುವುದು

ನೊರೆಯೇ. ಸಕ್ಕರೆಯ ಈ ಪರಿಯ ಶಕ್ತಿ ಯಾವುದೇ ಉಪಯೋಗಕ್ಕೆ ಇಲ್ಲವಾಗುತ್ತದೆ. ಸಕ್ಕರೆ ತರವಲ್ಲದವರಾದ ಮಧುಮೇಹಿಗಳು, ಸ್ಥೂಲದೇಹಿಗಳು, ಹೆಚ್ಚು ಟೈಗ್ಲಿಸರೈಡ್ ಇರುವವರು, ಮತ್ತು ಜೀವರಾಸಾಯನಿಕ ಕ್ರಿಯೆ ನಿಧಾನಗತಿಯಲ್ಲಿ ಸಾಗುವ ರೋಗಿಗಳು ಮೊದಲಾದವರಿಗೆ ಇವು ತಕ್ಕುದಲ್ಲ.

 ಜೀವನಶೈಲಿ ಬದಲಾದ ಪರಿಣಾಮಗಳು

ಜೀವನಶೈಲಿ ಬದಲಾದ ಪರಿಣಾಮಗಳು

ಜೀವನಶೈಲಿ ಬದಲಾದ ಪರಿಣಾಮವಾಗಿ ದೈಹಿಕ ಕಸರತ್ತು ಕಡಿಮೆಯಾಗಿ ದೇಹ ಸ್ಥೂಲಕಾಯದತ್ತ ಹೊರಳಲು ಸುಲಭವಾಗಿರುತ್ತದೆ.ಈ ಪರಿಸ್ಥಿತಿಯಲ್ಲಿ ಆರೋಗ್ಯಕರ ಪೇಯಗಳನ್ನು ಕುಡಿದಾಗ ಸ್ಥೂಲಕಾಯದತ್ತ ಹೊರಳುವ ವೇಗ ಇನ್ನಷ್ಟು ಹೆಚ್ಚುತ್ತದೆ. ಇದರ ಪರೋಕ್ಷ ಪರಿಣಾಮಗಳೂ ಬೇಗನೇ ಆವರಿಸುತ್ತವೆ.

ಹಾಗಾದರೆ ಈ ಪೇಯಗಳ ಬದಲಿಗೆ ಏನು ಕೊಡಬೇಕು?

ಹಾಗಾದರೆ ಈ ಪೇಯಗಳ ಬದಲಿಗೆ ಏನು ಕೊಡಬೇಕು?

* ಹಾಲಿಗೆ ನಿಜವಾದ ಹಣ್ಣುಗಳ ತುಂಡುಗಳನ್ನೇ ಹಾಕಿ ಜಗಿಯಲು ನೀಡಿ. ಇದು ಹೆಚ್ಚು ಉತ್ತಮ. ಇದು ಸಾಧ್ಯವಾಗದಿದ್ದರೆ ಹಣ್ಣುಗಳ ರಸವನ್ನು ಹಿಂಡಿ ಹಾಲಿಗೆ ಬೆರೆಸಿ ಕುಡಿಯಲು ನೀಡಿ. ಮಕ್ಕಳಿಗೇ ಹಣ್ಣನ್ನು ಆಯ್ದುಕೊಳ್ಳಲು ಹೇಳುವ ಮೂಲಕ ಹಾಲನ್ನು ಕುಡಿಯದೇ ಇರುವ ಸಂಭವ ಅಪಾರವಾಗಿ ಕಡಿಮೆಯಾಗುತ್ತದೆ.

* ಹಾಲಿನೊಂದಿಗೆ ನಿಮ್ಮ ಅಥವಾ ಮಕ್ಕಳಿಗೆ ಇಷ್ಟವಾದ ಹಣ್ಣುಗಳನ್ನು ಬೆರೆಸಿ ಮಿಕ್ಸಿಯಲ್ಲಿ ಗೊಟಾಯಿಸಿ ಮಿಲ್ಕ್ ಶೇಕ್ ಮಾಡಿ ಕೊಡಿ. ಮಕ್ಕಳು ಇದನ್ನು ಹೆಚ್ಚು ಇಷ್ಟಪಡುತ್ತಾರೆ.

ಹಾಗಾದರೆ ಈ ಪೇಯಗಳ ಬದಲಿಗೆ ಏನು ಕೊಡಬೇಕು?

ಹಾಗಾದರೆ ಈ ಪೇಯಗಳ ಬದಲಿಗೆ ಏನು ಕೊಡಬೇಕು?

*ಹಾಲಿನ ಮೇಲ್ಪದರದಲ್ಲಿ ಕೆಲವು ಎಸಳು ಕೇಸರಿಯನ್ನು ಹಾಕಿದರೆ ನೋಡಲೂ ಸುಂದರ, ಆರೋಗ್ಯಕ್ಕೂ ಉತ್ತಮ.

*ಮಾಲ್ಟ್ ಪೇಯಗಳ ಬದಲಿಗೆ ದಾಲ್ಚಿನ್ನಿ ಪುಡಿಯನ್ನು ಬಳಸಿ. ಹಾಲಿನಲ್ಲಿ ಕೊಂಚವೇ ದಾಲ್ಚಿನ್ನಿ ಪುಡಿ ಸೇರಿಸಿ ಕುಡಿಯುವ ಮೂಲಕ ದುಬಾರಿ ಬೆಲೆಯ ಪೇಯಕ್ಕಿಂತಲೂ ಉತ್ತಮ ರುಚಿ ಮತ್ತು ಆರೋಗ್ಯಕರ ಪೇಯವನ್ನು ಪಡೆಯಬಹುದು.

ಹಾಗಾದರೆ ಈ ಪೇಯಗಳ ಬದಲಿಗೆ ಏನು ಕೊಡಬೇಕು?

ಹಾಗಾದರೆ ಈ ಪೇಯಗಳ ಬದಲಿಗೆ ಏನು ಕೊಡಬೇಕು?

ತಾಜಾ ಹಣ್ಣುಗಳ ಬದಲಿಗೆ ಒಣಹಣ್ಣುಗಳಾದ ಒಣಖರ್ಜೂರ, ಒಣ ಅಂಜೂರ, ಒಣದ್ರಾಕ್ಷಿ ಮೊದಲಾದವುಗಳನ್ನು ಕೊಂಚ ನೆನೆಸಿಟ್ಟು ಬಳಿಕ ಮಿಕ್ಸಿಯಲ್ಲಿ ಗೊಟಾಯಿಸಿ ಕುಡಿಯಿರಿ. ಇದರಿಂದ ಹೆಚ್ಚಿನ ವೈವಿಧ್ಯ ಮತ್ತು ರುಚಿಗಳನ್ನು ಪಡೆಯಬಹುದು.

English summary

Horlicks, Bournvita-The Truth Behind these Health Drinks

Malt beverages, health drinks and supplements are gaining tremendous popularity day by day. These malt drinks are positioned as ‘nutritious drinks’ in India. They are added to milk to enhance the taste and to encourage the growing children to drink milk. Some of the malt-based drinks and supplements include Complan, Boost, Horlicks, Proteinex, Pediasure and Bournvita. Today, these drinks are commonly found in most of the houses. But the main question is- are these drinks really healthy? Let’s throw some light at the dangers of malt drinks and supplements
X
Desktop Bottom Promotion