For Quick Alerts
ALLOW NOTIFICATIONS  
For Daily Alerts

ಆ ದಿನಗಳಲ್ಲಿ ಕಾಡುವ ನೋವಿಗೆ ಫಲಪ್ರದ ಮನೆಮದ್ದು

By Deepu
|

ಮುಟ್ಟಿನ ದಿನಗಳಲ್ಲಿ ಹೆಣ್ಣು ಅನುಭವಿಸುವ ನೋವು ಅದನ್ನು ಬಣ್ಣಿಸಲು ಅಸಾಧ್ಯವಾದುದಾಗಿದೆ. ಪ್ರಾಕೃತಿಕ ನಿಯಮಕ್ಕೆ ಅನುಸಾರವಾಗಿಯೇ ಆಕೆಯ ಈ ಚಟುವಟಿಕೆ ನಡೆಯುತ್ತಿದ್ದರೂ ಆ ದಿನಗಳಲ್ಲಿ ಉಂಟಾಗುವ ತೀವ್ರ ಋತುಸ್ರಾವ, ಸೆಳೆತ, ಕಿಬ್ಬೊಟ್ಟೆಯಲ್ಲಿ ಕಂಡುಬರುವ ನೋವು ಸೊಂಟ ಭಾಗದಲ್ಲಿನ ಬಾಧೆ, ಕಾಲುಗಳಲ್ಲಿನ ನೋವು ಹೀಗೆ ದೇಹದ ಅಂಗಾಂಗಳನ್ನು ಹಿಂಡಿ ಹಿಪ್ಪೆ ಮಾಡಿದ ಸಂಕಟವನ್ನು ಆಕೆ ಅನುಭವಿಸುತ್ತಾಳೆ.

ಮನೆಯಲ್ಲೇ ಇರುವ ಹೆಂಗಳೆಯರಿಗೆ ಕೊಂಚ ವಿರಾಮವನ್ನು ಈ ದಿನಗಳಲ್ಲಿ ಪಡೆದುಕೊಳ್ಳಲೂ ಸಾಧ್ಯವಾಗುತ್ತದೆ ಆದರೆ ಕಚೇರಿ ಕೆಲಸಕ್ಕೆ ಹೋಗುವ ಮಹಿಳೆಯರು ತಮ್ಮ ಕೆಲಸಕ್ಕೆ ಈ ವಿಷಯವನ್ನು ಹೇಳಿ ಗೈರು ಹಾಜರಾಗುವಂತಿಲ್ಲ. ಇನ್ನು ರಜೆ ತೆಗೆದುಕೊಂಡರೂ ಒಂದು ದಿನಕ್ಕೆ ಮಾತ್ರ ಅದು ಸೀಮಿತವಾಗಿರುತ್ತದೆ. ಹೀಗೆ ಮುಟ್ಟಿನ ದಿನಗಳು ಹೆಣ್ಣಿಗೆ ಯಮಯಾತನೆಯನ್ನು ನೀಡುವುದಂತೂ ಖಂಡಿತ. ಕೆಲವರಿಗೆ ಇಂತಹ ಸಮಸ್ಯೆಗಳು ಅಷ್ಟೊಂದು ಬಾಧಿಸದೇ ಇದ್ದರೂ ಇನ್ನು ಕೆಲವರಿಗೆ ಈ ನೋವು ತೀವ್ರ ತೆರನಾಗಿರುತ್ತದೆ.

ರಕ್ತ ಸ್ರಾವವಾದಂತೆಲ್ಲಾ ಹೊಟ್ಟೆಯ ಕೆಳಭಾಗದಲ್ಲಿ ನೋವು ತೀವ್ರ ಮಟ್ಟದಲ್ಲಿ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಹೆದರುವ ಕಾರಣ ಇಲ್ಲದೇ ಹೋದರೂ ಅನುಭವಿಸುವ ಸಂಕಷ್ಟವನ್ನು ಹೆಣ್ಣು ಹೊರಲೇಬೇಕು. ಈ ನೋವು ಆಕೆಗೆ ಸಂತಾನೋತ್ಪತ್ತಿಗೆ ಶಕ್ತಿಯನ್ನು ನೀಡುವ ಮೂಲವಾಗಿದ್ದರೂ ಈ ಸೆಳೆತವನ್ನು ಅನುಭವಿಸುವುದು ಕೊಂಚ ಪ್ರಾಸದಾಯಕವೇ.

ಈ ದಿನಗಳಲ್ಲಿ ಸಿಟ್ಟು, ಬಳಲಿಕೆ, ಆಯಾಸ, ಹೆಚ್ಚು ಹಸಿವಾಗುವುದು ಉಂಟಾಗುತ್ತದೆ. ಆದಷ್ಟು ದೇಹಕ್ಕೆ ವಿರಾಮವನ್ನು ನೀಡುವುದು ಈ ದಿನಗಳಲ್ಲಿ ಸ್ತ್ರೀಯು ಮಾಡಬೇಕಾದ ಪರಿಹಾರವಾಗಿದೆ. ಇಂದಿನ ಲೇಖನದಲ್ಲಿ ಕೆಳಹೊಟ್ಟೆಯ ನೋವು ಮತ್ತು ಬಳಲಿಕೆಯನ್ನು ನಿವಾರಿಸುವ ಕೆಲವೊಂದು ಮನೆಮದ್ದುಗಳೊಂದಿಗೆ ನಾವು ಬಂದಿದ್ದು ಇವುಗಳ ಸೇವನೆ ಸ್ವಲ್ಪವಾದರೂ ಆರಾಮವನ್ನು ಮುಟ್ಟಿನ ದಿನಗಳಲ್ಲಿ ನಿಮಗೆ ನೀಡಬಹುದು. ಹಾಗಿದ್ದರೆ ಆ ಪರಿಹಾರಗಳೇನು ಎಂಬುದನ್ನು ಅರಿತುಕೊಳ್ಳೋಣ....

ಶುಂಠಿ

ಶುಂಠಿ

ಅನಿಯಮಿತ ಮುಟ್ಟು ಹಾಗೂ ಮುಟ್ಟಿನ ಸೆಳೆತಕ್ಕೆ ಶುಂಠಿ ಅತ್ಯುತ್ತಮ ಔಷಧವಾಗಿದೆ. ಶುಂಠಿಯ ಬೇರಿನ ಸಣ್ಣ ತುಂಡನ್ನು ತೆಗೆದುಕೊಳ್ಳಿ ಅದನ್ನು ಕಪ್‎ನಷ್ಟು ನೀರಿನಲ್ಲಿ ಕುದಿಸಿಕೊಳ್ಳಿ. ನೀರು ಅರ್ಧ ಕಪ್‎ಗೆ ಮುಟ್ಟುತ್ತಿದ್ದಂತೆ ಕುದಿಸುವುದನ್ನು ನಿಲ್ಲಿಸಿ ನಂತರ ಒಂದು ಚಮಚದಷ್ಟು ಜೇನನ್ನು ಇದಕ್ಕೆ ಸೇರಿಸಿ. ಗರ್ಭಕೋಶವನ್ನು ಕುಗ್ಗುವಂತೆ ಮಾಡುವ ಮತ್ತು ಮುಟ್ಟಿನ ಸೆಳೆತಕ್ಕೆ ಕಾರಣವಾಗಿರುವ ಪ್ರೋಸ್ಟಾಗ್ಲಾಂಡಿನ್ ಹಂತಗಳನ್ನು ಕುಗ್ಗುವಂತೆ ಶುಂಠಿ ಮಾಡುತ್ತದೆ. ಶುಂಠಿ ಚಹಾ- ಸ್ವಾದದ ಜೊತೆಗೆ ಆರೋಗ್ಯದ ಭಾಗ್ಯ!

ಜೀರಿಗೆ

ಜೀರಿಗೆ

ಅನಿಯಮಿತ ಮುಟ್ಟಿನ ದಿನಗಳನ್ನು ಸೂಕ್ತ ಪರಿಹಾರವನ್ನು ನೀಡುವ ಜೀರಿಗೆ ಮುಟ್ಟಿನ ನೋವನ್ನು ಉಪಶಮನಗೊಳಿಸುವಲ್ಲಿ ಎತ್ತಿದ ಕೈಯಾಗಿದೆ. ಒಂದು ಕಪ್ ನೀರಿಗೆ ಸ್ವಲ್ಪ ಜೀರಿಗೆಯನ್ನು ಹಾಕಿ ಚೆನ್ನಾಗಿ ಕುದಿಸಿಕೊಂಡು ಅದನ್ನು ಕುಡಿಯುವುದರಿಂದ ಮುಟ್ಟಿನ ಸೆಳೆತ, ಆಯಾಸ ಕಡಿಮೆಯಾಗುತ್ತದೆ. ಈ ನೀರನ್ನು ಐದು ನಿಮಷಗಳ ಕಾಲ ಕುದಿಸಿ ತಣಿಸಿದ ನಂತರ ಸೇವಿಸಿ. ಮನೆ ಮದ್ದು ಜೀರಿಗೆಯ ಚಿಕಿತ್ಸಾತ್ಮಕ ಪ್ರಯೋಜನಗಳೇನು?

ಕ್ಯಾಮೊಮೈಲ್ ಚಹಾ

ಕ್ಯಾಮೊಮೈಲ್ ಚಹಾ

ಆಂಟಿಸ್ಪಾಸ್ಮೊಡಿಕ್ ಅಗಿರುವ ಕ್ಯಾಮೊಮೈಲ್ ಚಹಾ ನೋವಿಗೆ ಉಪಶಮನವನ್ನು ನೀಡುತ್ತದೆ ಅಂತೆಯೇ ಮುಟ್ಟಿನ ಸೆಳೆತಕ್ಕೆ ಉತ್ತಮ ಪರಿಹಾರಕವಾಗಿದೆ. ಒಂದು ಕಪ್‎ನಷ್ಟು ಕ್ಯಾಮೊಮೈಲ್ ಚಹಾವನ್ನು ಸೇವಿಸಿ ಆರಾಮ ಮಾಡಿ, ಇದು ನಿಮಗೆ ಸೆಳೆತದಿಂದ ಆರಾಮವನ್ನು ನೀಡಿ ಕೆಳಹೊಟ್ಟೆಯ ಸಂಕಟವನ್ನು ಕಡಿಮೆ ಮಾಡುತ್ತದೆ.

ಕ್ಯಾಮೊಮೈಲ್ ಚಹಾ ಮಾಡುವ ವಿಧಾನ

ಒಂದು ಕಪ್ ನೀರನ್ನು ಚೆನ್ನಾಗಿ ಕುದಿಸಿಕೊಳ್ಳಿ. ಅದಕ್ಕೆ ಎರಡು-ಮೂರು ಟೀ ಸ್ಪೂನ್ ಕ್ಯಾಮೊಮೈಲ್ ಟೀ ಪುಡಿಯನ್ನು ಬೆರೆಸಿಕೊಳ್ಳಿ. ಇದು ಮೂರು ನಿಮಿಷ ಬೇಯಲಿ. ಈ ಟೀಯನ್ನು ಶೋಧಿಸಿಕೊಂಡು ಲೋಟಕ್ಕೆ ಸುರಿದುಕೊಳ್ಳಿ. ನಿಮಗೆ ಅಗತ್ಯವಾದಲ್ಲಿ ಜೇನು ತುಪ್ಪ ಅಥವಾ ಸ್ವಲ್ಪ ಲಿಂಬೆರಸವನ್ನು ಬೆರೆಸಿಕೊಂಡು ಸೇವಿಸಿ. ಮುಟ್ಟಿನ ನೋವಿನಿಂದ ಮುಕ್ತರಾಗಿ.

ಪಪ್ಪಾಯಿ ಹಣ್ಣು

ಪಪ್ಪಾಯಿ ಹಣ್ಣು

ವಿಶೇಷವಾಗಿ ಮುಟ್ಟಿಗಿಂತ ಮೊದಲು ಪಪ್ಪಾಯಿಯನ್ನು ಸೇವಿಸುವುದು ಒಳ್ಳೆಯದು. ಪಪ್ಪಾಯಿ ಮುಟ್ಟಿನ ನೋವಿನ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುವ ಕಿಣ್ವ, (ಪಪಿಯನ್) ಗಳನ್ನು ಒಳಗೊಂಡಿದೆ. ಇದು ಮುಟ್ಟಿನ ಸಂದರ್ಭದಲ್ಲಿ ರಕ್ತದ ಹರಿವನ್ನು ಸಹನೀಯ ಮತ್ತು ಸುಲಭವಾಗಿ ಆಗುವಂತೆ ಮಾಡುತ್ತದೆ.

ತುಳಸಿ

ತುಳಸಿ

ತುಳಸಿ ಪ್ರಬಲ ನೋವುನಿವಾರಕ ಕೆಫಿಕ್ ಆಮ್ಲ ಒಳಗೊಂಡಿರುವುದರಿಂದ ನೀವು ಮುಟ್ಟಿನ ನೋವು ಕಾಣಿಸಿಕೊಂಡ ಸಮಯದಲ್ಲಿ ತುಳಸಿಯನ್ನು ಹೆಚ್ಚಾಗಿ ಸೇವಿಸುವುದು ಒಳ್ಳೆಯದು. ಮಸಾಲೆಗಳಲ್ಲಿ ಅದನ್ನು ಬಳಸಿ ಅಥವಾ ನಿಮ್ಮ ಹರ್ಬಲ್ ಚಹಾದೊಂದಿಗೆ ತುಳಸಿಯನ್ನು ಸೇರಿಸಿ , ಮತ್ತು ಇದು ಹೇಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂಬುದನ್ನು ನೀವೇ ನೋಡಿ!

ಕ್ಯಾರೆಟ್

ಕ್ಯಾರೆಟ್

ಕ್ಯಾರೆಟ್ ಗಳು ಕೇವಲ ನಿಮ್ಮ ಕಣ್ಣುಗಳಿಗೆ ಆನಂದ ನೀಡುವುದು ಮಾತ್ರವಲ್ಲ, ಅವು ನಿಮ್ಮ ಮುಟ್ಟಿನ ಸಮಯದ ನೋವು ನೀವು ನಿವಾರಿಸಬಲ್ಲ ಶಕ್ತಿಯನ್ನೂ ಹೊಂದಿವೆ. ಋತುಚಕ್ರದ ಸಮಯದಲ್ಲಿ ರಕ್ತದ ಹರಿವು ಸುಲಭವಾಗಿ ಆಗಲು ವೈದ್ಯರು ಇಂದು ಲೋಟ ಕ್ಯಾರೆಟ್ ರಸವನ್ನು ಕುಡಿಯಲು ಸಲಹೆ ನೀಡುತ್ತಾರೆ.

ಪಾರ್ಸ್ಲಿ

ಪಾರ್ಸ್ಲಿ

ಭಾರತೀಯ ಖಾದ್ಯಗಳಲ್ಲಿ ಪರಿಮಳ ಮತ್ತು ಸುಗಂಧಕ್ಕಾಗಿ ಇದನ್ನು ಬಳಸುತ್ತಾರೆ. ಮುಟ್ಟಿನ ದಿನಗಳ ಸಮಸ್ಯೆಗೆ ಇದು ಅತ್ಯುತ್ತಮ ಗಿಡಮೂಲಿಕೆ ಎಂದೆನಿಸಿದೆ. ಆಂಟಿಸ್ಪಾಸ್ಮೋಡಿಕ್ ಅಂಶಗಳನ್ನು ಇದು ಒಳಗೊಂಡಿದ್ದು ಮಹಿಳೆಯರು ಮತ್ತು ಹದಿಹರೆಯದವರು ಅನುಭವಿಸುವ ಮುಟ್ಟಿನ ನೋವಿಗೆ ಉಪಶಮವನ್ನು ನೀಡುತ್ತದೆ. ಒಂದು ಕಪ್ ನೀರಿಗೆ ಮುಷ್ಟಿಯಷ್ಟು ಪಾರ್ಸ್ಲಿಯನ್ನು ಹಾಕಿ. ಸ್ವಲ್ಪ ಸಮಯಗಳ ಕಾಲ ಇದನ್ನು ಕುದಿಯಲು ಬಿಡಿ ದಿನಕ್ಕೊಂದು ಬಾರಿಯಂತೆ ಇದನ್ನು ಕುಡಿಯಿರಿ.

ನಾರಿನ ಬೀಜಗಳು

ನಾರಿನ ಬೀಜಗಳು

ನಾರಿನ ಬೀಜಗಳು ಒಮೇಗಾ 3 ಆಸಿಡ್ ಮತ್ತು ಉತ್ಕರ್ಷಣ ನಿರೋಧಿ ಅಂಶಗಳನ್ನು ಒಳಗೊಂಡಿರುವುದರಿಂದ ಹೆಚ್ಚು ಪೋಷಕಾಂಶಭರಿತವಾಗಿದೆ ಮತ್ತು ಮುಟ್ಟಿನ ನೋವನ್ನು ಉಪಶಮನ ಮಾಡಿ ಆರಾಮವನ್ನು ನೀಡುತ್ತದೆ. ಹಾರ್ಮೋನಲ್ ಅಸಮತೋಲನದಲ್ಲೂ ಇದು ಸಹಾಯ ಮಾಡಲಿದೆ. ಒಂದು ಚಮಚದಷ್ಟು ನಾರಿನ ಬೀಜಗಳ ಸೇವನೆ ಮಾಡುವುದರಿಂದ ಮುಟ್ಟಿನ ಸೆಳೆತ ವೇಗವಾಗಿ ಕಡಿಮೆಯಾಗುತ್ತದೆ. ಅಂತೆಯೇ ಇದರ ಹೆಚ್ಚು ಸೇವನೆಯಿಂದ ವಾಕರಿಕೆ, ಅತಿಸಾರ ಉಂಟಾಗುವ ಸಾಧ್ಯತೆಗಳೂ ಇದೆ.



English summary

Home remedies for menstrual cramps and pain

Menstruation cramps (dysmenorrhea) or pain in the lower abdomen is common and not to be worried for. Menstruation is a normal and most important part of a woman which leads her to the power to procreation but quite often women feel the sharp pain and cramps during the periods or when they are menstruating. Here are the few home remedies for menstruation cramps have a look
Story first published: Friday, March 11, 2016, 16:19 [IST]
X
Desktop Bottom Promotion