For Quick Alerts
ALLOW NOTIFICATIONS  
For Daily Alerts

ಅಸಿಡಿಟಿಗೆ ಮಾತ್ರೆ ನುಂಗುವುದನ್ನು ನಿಲ್ಲಿಸಿ-ಮನೆಮದ್ದು ಪ್ರಯತ್ನಿಸಿ

ಅಸಿಡಿಟಿ ಅಥವಾ ಹೊಟ್ಟೆಯಲ್ಲಿ ಹುಳಿ ಹುಳಿಯಾದಂತಾಗುವ ಅನುಭವವು ಪ್ರತಿಯೊಬ್ಬ ಮನುಷ್ಯನಿಗೂ ಒಂದಲ್ಲ ಒಂದು ಬಾರಿ ಕಾಟ ನೀಡಿರುತ್ತದೆ. ಸಾಮಾನ್ಯವಾಗಿ ಮಿತಿ ಮೀರಿ ತಿಂದಾಗ ಈ ಸಮಸ್ಯೆ ಕಾಡುವುದು ಸಹಜ.

By Manu
|

ಏನೇ ತಿಂದರೂ ಆಗದು. ಬಾಯಿಯಲ್ಲಿ ತೇಗು ಬಂದಂತೆ ಆಗುತ್ತದೆ. ಹುಳಿ, ಖಾರ ತಿಂದರೆ ಇದು ಜಾಸ್ತಿ ಎಂದು ಹೆಚ್ಚಿನವರು ಹೇಳುವುದುಂಟು. ಇನ್ನು ಕೆಲವರು ಇದನ್ನು ನೇರವಾಗಿ ಅಸಿಡಿಟಿ ಎಂದು ಕರೆಯುತ್ತಾರೆ. ಅದರಲ್ಲೂ ಇತ್ತೀಚಿನ ಪ್ರತಿಯೊಬ್ಬರಲ್ಲೂ ಅಸಿಡಿಟಿ ಎನ್ನುವುದು ಸಾಮಾನ್ಯವಾಗುತ್ತಾ ಇದೆ. ಯಾಕೆಂದರೆ ಇಂದಿನ ಜೀವನಶೈಲಿಯೇ ಇದಕ್ಕೆ ಕಾರಣವಾಗಿಬಿಟ್ಟಿದೆ. ಅಸಿಡಿಟಿ ಕಡಿಮೆ ಮಾಡಲು ಗ್ರೀನ್ ಜ್ಯೂಸ್

ಒತ್ತಡದ ಜೀವನದಲ್ಲಿ ಹೊತ್ತಲ್ಲದ ಹೊತ್ತಿನಲ್ಲಿ ಊಟ ಮಾಡುವುದು, ಅದು ಕೂಡ ಫಾಸ್ಟ್ ಫುಡ್ ಸೇವಿಸುವುದರಿಂದ ಅಸಿಡಿಟಿ ಸಾಮಾನ್ಯವಾಗುತ್ತದೆ. ಜೀರ್ಣಕ್ರಿಯೆಯ ಆಮ್ಲದ ಅಸಮತೋಲನದಿಂದಾಗಿ ಅಸಿಡಿಟಿ ಉಂಟಾಗುತ್ತದೆ. ಜೀರ್ಣಕ್ರಿಯೆಯ ವ್ಯವಸ್ಥೆಯಲ್ಲಿ ಆಮ್ಲವು ಹಿಮ್ಮುಖ ಹರಿವನ್ನು ಉಂಟು ಮಾಡಿದರೆ ಹೊಟ್ಟೆ ಉರಿಯಂತಹ ಅಸಿಡಿಟಿ ಸಮಸ್ಯೆಗಳು ಕಾಣಿಸುತ್ತದೆ. ಅಸಿಡಿಟಿ ಸಮಸ್ಯೆಯ ಹೆಡೆಮುರಿ ಕಟ್ಟಿಹಾಕುವ ಮನೆಮದ್ದು

ಹೊಟ್ಟೆಯಲ್ಲಿ ನೋವು, ಅತಿಯಾದ ವಾಯು, ಕೆಟ್ಟ ಉಸಿರು, ವಾಕರಿಕೆ, ಬಾಯಿ ರುಚಿಸದೆ ಇರುವುದು, ಹೊಟ್ಟೆಉಬ್ಬರ, ಬಿಕ್ಕಳಿಕೆ, ಉದಾಸೀನ ಇದು ಅಸಿಡಿಟಿಯ ಇನ್ನಿತರ ಲಕ್ಷಣಗಳಾಗಿವೆ. ಅಸಿಡಿಟಿಯನ್ನು ಮನೆಮದ್ದಿನ ಮೂಲಕವೇ ನಿವಾರಣೆ ಮಾಡುವುದು ಸುಲಭ. ಈ ಲೇಖನದಲ್ಲಿ ಮನೆಮದ್ದಿನ ಮೂಲಕ ಅಸಿಡಿಟಿ ನಿವಾರಣೆ ಮಾಡುವುದು ಹೇಗೆ ಎಂದು ತಿಳಿದುಕೊಳ್ಳುವ.....

ಉಗುರುಬೆಚ್ಚಗಿನ ನೀರು

ಉಗುರುಬೆಚ್ಚಗಿನ ನೀರು

ನೀವು ಯಾವಾಗಲೂ ಅಸಿಡಿಟಿಯಿಂದ ಬಳಲುತ್ತಾ ಇದ್ದರೆ ಪ್ರತೀ ದಿನ ಮಲಗುವ ಮೊದಲು ಹಾಗೂ ಬೆಳಿಗ್ಗೆ ಎದ್ದ ಕೂಡಲೇ ಉಗುರುಬೆಚ್ಚಗಿನ ನೀರು ಕುಡಿಯಿರಿ.

ಕಳಿತ ಬಾಳೆಹಣ್ಣು

ಕಳಿತ ಬಾಳೆಹಣ್ಣು

ಒಳ್ಳೆಯ ಕಳಿತ ಬಾಳೆಹಣ್ಣನ್ನು ತಿನ್ನುವುದರಿಂದ ಅಸಿಡಿಟಿಯನ್ನು ನಿವಾರಣೆ ಮಾಡಬಹುದು. ಯಾಕೆಂದರೆ ಇದರಲ್ಲಿರುವ ಪೊಟಾಶಿಯಂ ಪ್ರತಿವಿಷವನ್ನು ಉಂಟು ಮಾಡುತ್ತದೆ.

ತಣ್ಣಗಿನ ಹಾಲನ್ನು ಕುಡಿಯಿರಿ

ತಣ್ಣಗಿನ ಹಾಲನ್ನು ಕುಡಿಯಿರಿ

ಸಕ್ಕರೆ ಅಥವಾ ಇನ್ನಿತರ ಸಿಹಿಯನ್ನು ಸೇರಿಸದೆ ತಣ್ಣಗಿನ ಹಾಲನ್ನು ಕುಡಿಯಿರಿ. ಒಂದು ಚಮಚ ಬೆಣ್ಣೆಯೊಂದಿಗೆ ಇದನ್ನು ಸೇವಿಸಿದರೆ ಅದು ಅಸಿಡಿಟಿಗೆ ಮತ್ತಷ್ಟು ಒಳ್ಳೆಯದು.

ಜೀರಿಗೆ

ಜೀರಿಗೆ

ಜೀರಿಗೆ ಆರ್ಯುರ್ವೇದದ ಪ್ರಕಾರ ಅಸಿಡಿಟಿಯನ್ನು ನಿವಾರಿಸಲು ಹಲವಾರು ಪದಾರ್ಥಗಳು ನೆರವಿಗೆ ಬರುತ್ತವೆ. ಜೀರಿಗೆ ಸಹ ಅವುಗಳಲ್ಲಿ ಒಂದು. ಇದು ನಮ್ಮ ಜೀರ್ಣಕ್ರಿಯೆಗೆ ಅಗತ್ಯವಾದ ಲಾಲಾ ರಸವನ್ನು ಹೆಚ್ಚು ಉತ್ಪತ್ತಿಸುವಂತೆ ಮಾಡುತ್ತದೆ. ಜೀರಿಗೆಯನ್ನು ಬೆರೆಸಿ ನೀರನ್ನು ಕುದಿಸಿ, ಅದನ್ನು ಕುಡಿಯುವುದರಿಂದ ಯನ್ನು ನಿವಾರಿಸಿಕೊಳ್ಳಬಹುದು.ಜೀರಿಗೆ ನೀರು: ಸಣ್ಣ-ಪುಟ್ಟ ಕಾಯಿಲೆಗೆ ದಿವ್ಯೌಷಧ

ತುಳಸಿ ಎಲೆ

ತುಳಸಿ ಎಲೆ

ತುಳಸಿ ಎಲೆಗಳಲ್ಲಿ ಇರುವಂತಹ ಶಮನಕಾರಿ ಗುಣವು ಅಸಿಡಿಟಿ, ಹೊಟ್ಟೆಯ ಗ್ಯಾಸ್ ಮತ್ತು ವಾಕರಿಕೆಯಿಂದ ಮುಕ್ತಿಯನ್ನು ನೀಡುವುದು. ತುಳಸಿಯ ಕೆಲವು ಎಲೆಗಳನ್ನು ಜಗಿದು ಬಳಿಕ ಉಗುರು ಬೆಚ್ಚಗಿನ ನೀರನ್ನು ಕುಡಿಯಿರಿ. ದಿನದಲ್ಲಿ ಹಲವಾರು ಬಾರಿ ಹೀಗೆ ಮಾಡಿದರೆ ಅಸಿಡಿಟಿಯಿಂದ ಮುಕ್ತಿ ಸಿಗುವುದು.

English summary

Home remedies to deal with acidity

Acidity can be caused by an imbalance of the digestive acids produced by the stomach. Acidity is a common problem that affects people of all ages. It is caused by acid reflux and is characterised by uncontrolled burning sensation in the GI tract. The symptoms of acidity include stomach ache, excessive gas, nausea, bad breath, bitter taste, bloating, hiccups, dizziness and burping.
X
Desktop Bottom Promotion