For Quick Alerts
ALLOW NOTIFICATIONS  
For Daily Alerts

ಕಿವಿ ನೋವಿಗೆ ಅಂತ್ಯಹಾಡುವ ಸರಳ ಮನೆಮದ್ದುಗಳು

By Jaya subramanya
|

ದೇಹದಲ್ಲಿ ಎಲ್ಲಿ ನೋವುಂಟಾದರೂ ಅದನ್ನು ತಡೆದುಕೊಳ್ಳುವುದು ಕಷ್ಟಾಸಾಧ್ಯವಾಗುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಕುಂದಿದಾಗ ನಮ್ಮಲ್ಲಿ ಸಹಿಸುವ ಶಕ್ತಿ ನಷ್ಟವಾಗುತ್ತದೆ ಮತ್ತು ಈ ನೋವುಗಳದ್ದೇ ಜಯವಾಗಿರುತ್ತದೆ. ದೇಹದಲ್ಲಿ ಉಂಟಾಗುವ ನೋವುಗಳಿಗೆ ಬರಿಯ ಸೋಂಕುಗಳು ಮಾತ್ರ ಕಾರಣವಾಗಿಲ್ಲದೆ ಪ್ರದೂಷಿತ ವಾತಾವರಣ ನಮ್ಮ ಜೀವನ ಶೈಲಿ, ಆಹಾರ ಕೂಡ ಪರಿಣಾಮವನ್ನು ಬೀರುತ್ತದೆ. ಕಿವಿನೋವಿಗೆ ಹಳ್ಳಿ ಕಡೆಯ ಮನೆಮದ್ದು

ದೇಹಕ್ಕೆ ಬರುವ ನೋವುಗಳಲ್ಲಿ ಕಿವಿ ನೋವು ಕೂಡ ಒಂದಾಗಿದ್ದು ದೊಡ್ಡವರು ಮತ್ತು ಮಕ್ಕಳು ಎಂಬ ತಾರತಮ್ಯವಿಲ್ಲದೆ ಇದು ಕಾಡುತ್ತದೆ. ನೋವು ಹೆಚ್ಚಿದ್ದರೆ ಆಲಿಸುವ ತೊಂದರೆಯನ್ನು ಇದು ಉಂಟುಮಾಡುತ್ತದೆ, ಅಂತೆಯೇ ಆರೋಗ್ಯಕರ ಜೀವನವನ್ನು ಇದು ಹಾಳುಮಾಡುತ್ತದೆ. ಕಿವಿನೋವು ಬರಲು ಹಲವು ಕಾರಣಗಳಿದ್ದು ಇದರಲ್ಲಿ ದೀರ್ಘ ಮತ್ತು ಅಲ್ಪ ಕಾಲದ ಕಿವಿ ಸೋಂಕು, ದವಡೆಯ ಸಂಧಿವಾತ, ಕಿವಿಯ ಮೇಣ, ಕಿವಿಯಲ್ಲಿ ಏನಾದರೂ ಸಿಕ್ಕಿಹಾಕಿಕೊಂಡಿರುವುದು, ಒತ್ತಡ ಬದಲಾವಣೆ, ಕಿವಿಯಲ್ಲಿ ಗಾಯ, ಕಿವಿಯ ತಮಟೆಯಲ್ಲಿ ತೂತು, ನೋಯುತ್ತಿರುವ ಗಂಟಲು ಮತ್ತು ಸೈನಸ್ ಸೋಂಕು ಕಾರಣವಾಗಿರುತ್ತದೆ. ಕಿವಿ ನೋವು ಆರಂಭದಲ್ಲಿ ಅಲ್ಪವಾಗಿದ್ದರೆ ಮನೆಮದ್ದುಗಳ ಚಿಕಿತ್ಸೆಯನ್ನು ಮಾಡಿಕೊಳ್ಳಬಹುದಾಗಿದೆ. ಈ ನೋವು ತೀವ್ರವಾಗಿದೆ ಎಂದಾದಲ್ಲಿ ವೈದ್ಯರನ್ನು ನೀವು ಹೋಗಿ ಕಾಣಬೇಕಾಗುತ್ತದೆ. ಕಿವಿ ನೋವನ್ನು ತಡೆಗಟ್ಟಲು ಅನುಸರಿಸಬೇಕಾದ ವಿಧಾನಗಳೇನು?

ಕಿವಿ ನೋವು ತೀವ್ರವಾಗಿ ಉಂಟಾದಾಗ ಕೆಲವೊಂದು ರೋಗಲಕ್ಷಣಗಳನ್ನು ಇದು ತೋರ್ಪಡಿಸುತ್ತದೆ. ಬಾಹ್ಯ ಕಿವಿ ಕಾಲುವೆಯಲ್ಲಿ ನೋವು, ಕಿವಿಯಲ್ಲಿ ತುರಿಸುವಿಕೆ, ಕಿವಿಯಲ್ಲಿ ಝೇಂಕರಿಸುವ ಶಬ್ಧ, ಊದಿಕೊಂಡ ಕಿವಿ, ಕಿವಿ ಬಂದ್ ಆಗಿರುವುದು, ಕಿವಿಯಲ್ಲಿ ನೋವು, ಕಿವಿಯಿಂದ ದ್ರವ ವಿಸರ್ಜನೆ ಇತ್ಯಾದಿ ಲಕ್ಷಣಗಳಾಗಿವೆ. ಹಾಗಿದ್ದರೆ ತಾತ್ಕಾಲಿಕ ಪರಿಹಾರವನ್ನು ನೀಡುವ ಕಿವಿ ನೋವಿನ ಮದ್ದುಗಳನ್ನು ಇಂದಿನ ಲೇಖನದಲ್ಲಿ ನಾವು ನೀಡುತ್ತಿದ್ದು ನೋವು ತೀವ್ರವಾಗಿದ್ದಲ್ಲಿ ವೈದ್ಯರ ಉಪಚಾರ ಮಾಡಬೇಕಾಗುತ್ತದೆ...

ತುಳಸಿ ಎಲೆಗಳು

ತುಳಸಿ ಎಲೆಗಳು

ತುಳಸಿ ಎಲೆಗಳು ಬೀಟಾ ಕ್ಯಾರೊಟಿನ್ ಅನ್ನು ಒಳಗೊಂಡಿದ್ದು ವಿಟಮಿನ್ ಸಿ ಇದರಲ್ಲಿದೆ. ಇಯುಜೊನಲ್, ಬೋರ್ನಲ್ ಅಂಶಗಳನ್ನು ಇದು ಪಡೆದಿದೆ. ಇದೊಂದು ಅದ್ಭುತ ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿಸೆಪ್ಟಿಕ್ ಅಂಶಗಳನ್ನು ಒಳಗೊಂಡಿದ್ದು ಕಿವಿ ನೋವಿಗೆ ಉತ್ತಮ ಪರಿಹಾರವನ್ನು ಒದಗಿಸುತ್ತದೆ. ತುಳಸಿಯ ಎಲೆಯಿಂದ ರಸವನ್ನು ಪಡೆದು 2 ಹನಿಗಳಷ್ಟು ನೋವಿರುವ ಕಿವಿಗೆ ಬಿಡಿ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಉತ್ಕರ್ಷಣ ನಿರೋಧಿ ಅಂಶಗಳನ್ನು ಬೆಳ್ಳುಳ್ಳಿಯು ಒಳಗೊಂಡಿದ್ದು ಕಿವಿ ನೋವಿಗೆ ಉತ್ತಮ ಪರಿಹಾರವನ್ನು ಇದು ಒದಗಿಸುತ್ತದೆ. ಬೇಯಿಸಿದ ಬೆಳ್ಳುಳ್ಳಿಯನ್ನು (3-4) ಚೆನ್ನಾಗಿ ಜಜ್ಜಿಕೊಂಡು ಸ್ವಲ್ಪ ನೀರಿಗೆ ಹಾಕಿ ಮತ್ತು ಚಿಟಿಕೆ ಉಪ್ಪನ್ನು ನೀರಿಗೆ ಸೇರಿಸಿಕೊಳ್ಳಿ. ನಂತರ ಇದನ್ನು ಹತ್ತಿಯ ಬಟ್ಟೆಯಲ್ಲಿ ಕಟ್ಟಿ ನೋಯುತ್ತಿರುವ ಕಿವಿಯ ಮೇಲಿಡಿ.

ಸಾಸಿವೆ ಎಣ್ಣೆ

ಸಾಸಿವೆ ಎಣ್ಣೆ

ಆಂಟಿಬ್ಯಾಕ್ಟೀರಿಯಲ್ ಅಂಶಗಳನ್ನು ಸಾಸಿವೆ ಎಣ್ಣೆ ಒಳಗೊಂಡಿದ್ದು ಕವಿ ನೋವಿಗೆ ಇದು ಉತ್ತಮ ಪರಿಹಾರವನ್ನು ಒದಗಿಸುತ್ತದೆ. ತುಸು ಬೆಚ್ಚಗಿನ ಸಾಸಿವೆ ಎಣ್ಣೆಯನ್ನು (2-3 ಹನಿಗಳು) ನೋವಿರುವ ಕಿವಿಗೆ ಹಾಕಿ ಮತ್ತು ಹಾಗೆಯೇ ಸ್ವಲ್ಪ ಹೊತ್ತು ಬಿಡಿ.

ಕಿವಿಗೆ ಬೆಚ್ಚಗಿನ ಶಾಖ

ಕಿವಿಗೆ ಬೆಚ್ಚಗಿನ ಶಾಖ

ಕಿವಿ ನೋವನ್ನು ಕಡಿಮೆ ಮಾಡಲು ಸ್ವಚ್ಛವಾದ ಟವೆಲ್ ಅನ್ನು ಬಿಸಿ ನೀರಿಗೆ ಅದ್ದಿ ನಂತರ ಅದನ್ನು 20 ನಿಮಿಷಗಳ ಕಾಲ ನೋವಿರುವ ಕಿವಿಗೆ ಮೃದುವಾಗಿ ಒತ್ತಿಡಿ.

ಎಕ್ಯುಲಿಪ್ಟಸ್ ಎಣ್ಣೆ, ವಿಕ್ಸ್ ಮತ್ತು ನೀರಿನ ಮಿಶ್ರಣ‎

ಎಕ್ಯುಲಿಪ್ಟಸ್ ಎಣ್ಣೆ, ವಿಕ್ಸ್ ಮತ್ತು ನೀರಿನ ಮಿಶ್ರಣ‎

ಬೇಕಾದಷ್ಟು ಎಕ್ಯುಲಿಪ್ಟಸ್ ಎಣ್ಣೆಯನ್ನು ತೆಗೆದುಕೊಂಡು ಇದಕ್ಕೆ ಒಂದು ಸ್ಪೂನ್‎ನಷ್ಟು ವಿಕ್ಸ್ ಅನ್ನು ಬೆರೆಸಿ ಬಿಸಿಯಾದ ನೀರಿಗೆ ಹಾಕಿ. ನಂತರ ಮೂಗಿನಿಂದ ಆವಿಯನ್ನು ತೆಗೆದುಕೊಳ್ಳಿ ನೋವು ಕಡಿಮೆಯಾಗುವರೆಗೂ ಈ ಪ್ರಕ್ರಿಯೆಯನ್ನು ಮಾಡಿ ಇದು ನೋವನ್ನು ನಿವಾರಿಸಿ ಕಿವಿಯಿಂದ ಸೋರುವ ದ್ರವವನ್ನು ತಡೆಯುತ್ತದೆ.

ಈರುಳ್ಳಿ ರಸ

ಈರುಳ್ಳಿ ರಸ

ಈರುಳ್ಳಿಯಿಂದ ಬೇರ್ಪಡಿಸಿದ ರಸವನ್ನು ಹತ್ತಿಯಲ್ಲಿ ಮುಳುಗಿಸಿ ಕಿವಿಯ ಮೇಲೆ ಒತ್ತಿಡಿ. ಇದು ನೋವನ್ನು ಕಡಿಮೆ ಮಾಡುತ್ತದೆ ಮತ್ತು ನೋವನ್ನು ಉಂಟುಮಾಡುವ ಬ್ಯಾಕ್ಟೀರಿಯಾವನ್ನು ನಿವಾರಿಸುತ್ತದೆ, ಅಂತೆಯೇ ಕೆಂಪಗಾದ ಕಿವಿ ಹಾಗೂ ತುರಿಕೆಯನ್ನು ದೂರಮಾಡುತ್ತದೆ.

ವಿಟಮಿನ್ ಸಿ ಮತ್ತು ಜಿಂಕ್ ಇರುವ ಆಹಾರಗಳು

ವಿಟಮಿನ್ ಸಿ ಮತ್ತು ಜಿಂಕ್ ಇರುವ ಆಹಾರಗಳು

ವಿಟಮಿನ್ ಸಿ ಮತ್ತು ಜಿಂಕ್ ಅಂಶ ಇರುವ ಆಹಾರಗಳನ್ನು ಸೇವಿಸಿ. ಲಿಂಬೆ, ಕಿತ್ತಳೆ, ಗುವಾ, ಸ್ಟ್ರಾಬೆರ್ರಿ, ಪಪ್ಪಾಯ, ಗೋಡಂಬಿ, ಗೋಧಿ ನೋವಿಗೆ ಕಾರಣವಾಗಿರು ಸೂಕ್ಷ್ಮಾಣುಗಳನ್ನು ಕೊಂದು ನೋವು ನಿವಾರಿಸುತ್ತದೆ.

ಚ್ಯುಯಿಂಗ್ ಗಮ್

ಚ್ಯುಯಿಂಗ್ ಗಮ್

ಕ್ಯಾಂಡಿ ಅಥವಾ ಗಮ್ ಅನ್ನು ಜಗಿಯುವುದು ವಿಮಾನ ಅಥವಾ ಟ್ರಕ್ಕಿಂಗ್ ಮಾಡುವಾಗ ಎತ್ತರಕ್ಕೆ ಹತ್ತುವಾಗ ಕಿವಿಯಲ್ಲಿ ಗಾಳಿ ತುಂಬಿ ಬಂದ್ ಆಗುವ ಅನುಭವವನ್ನು ನಿವಾರಿಸಿ ಕಿವಿ ನೋವನ್ನು ಕಡಿಮೆ ಮಾಡುತ್ತದೆ.

ಮಿನರಲ್ ಆಯಿಲ್

ಮಿನರಲ್ ಆಯಿಲ್

ಈಜುವಾಗ, ಕಿವಿಯಲ್ಲಿ ನೋವು ಉಂಟಾಗುವ ಅನುಭವ ಜನರಿಗಾಗುತ್ತದೆ. ಇದನ್ನು ತಡೆಗಟ್ಟಲು, ಈಜುವ ಮುನ್ನ ಕಿವಿಗೆ ಮಿನರಲ್ ಎಣ್ಣೆಯನ್ನು ಹಾಕಿಕೊಳ್ಳುವುದರಿಂದ ನೋವು ಉಂಟಾಗುವುದಿಲ್ಲ. ಹೀಗೆ ಮನೆಮದ್ದುಗಳನ್ನು ಬಳಸಿ ಕಿವಿನೋವಿಗೆ ತಾತ್ಕಾಲಿಕ ಉಪಶಮವನ್ನು ಕಂಡುಕೊಳ್ಳಬಹುದು. ನೋವು ತೀವ್ರವಾಗಿದ್ದಲ್ಲಿ ವೈದ್ಯರನ್ನು ಕಾಣಲೇಬೇಕಾಗುತ್ತದೆ.

English summary

Home Remedies To Cure Ear Pain

Is your ear pain causing problems in following your teacher’s/boss’s instructions or in paying attention to what your loved ones are saying? Ear pain is a common medical condition that can affect both children as well as adults. Excessive ear pain can lead to difficulty in hearing, which in turn can create a problem in living a healthy life. Hear here” for some of the effective home remedies to cure ear pain. have a look
Story first published: Thursday, May 5, 2016, 17:59 [IST]
X
Desktop Bottom Promotion