For Quick Alerts
ALLOW NOTIFICATIONS  
For Daily Alerts

ವರ್ಷವಾದರೂ ಸರಿ, ಅಷ್ಟು ಸುಲಭವಾಗಿ ಕೆಡದ ಆಹಾರಗಳಿವು!

By Arshad
|

ಆಹಾರವಸ್ತುಗಳ ಒಂದು ತೊಂದರೆ ಎಂದರೆ ಇವುಗಳನ್ನು ಶೀಘ್ರವೇ ಬಳಸಬೇಕು. ಹೆಚ್ಚು ಕಾಲ ಇಟ್ಟರೆ ಹಾಳಾಗುತ್ತದೆ. ಫ್ರಿಜ್ ನಲ್ಲಿಟ್ಟರೂ ತಾಜಾತನ ಅಷ್ಟೊಂದು ಇರುವುದಿಲ್ಲ. ಹಾಗಾಗಿ ಆರೋಗ್ಯಕರ ಆಹಾರಗಳೇ ಬೇಕೆಂದರೆ ಮಾರುಕಟ್ಟೆಗೆ ಪದೇ ಪದೇ ತಿರುಗಾಡುತ್ತಿರಬೇಕಾಗುತ್ತದೆ. ಸಮಯವಿದ್ದವರಿಗೆ ಈ ತಿರುಗಾಟ ಸಮಯ ಕಳೆಯಲು ಒಂದು ಅವಕಾಶವಾಗಿರಬಹುದು. ಆದರೆ ಉಳಿದವರಿಗೆ? ಅದರಲ್ಲೂ ಮನೆಯಲ್ಲಿ ಫ್ರಿಜ್ ಇಲ್ಲದವರಿಗೆ? ಸುಮಾರಾಗಿ ಮನೆಯಿಂದ ಹೊರಗೇ ಇರುವ ಉದ್ಯೋಗಸ್ಥರಿಗೆ? ಹೋಟೆಲುಗಳಿವೆ ಎಂದ ಕುಹಕದ ಉತ್ತರ ಬೇಡ. ಏಕೆಂದರೆ ಹೋಟೆಲಿನ ಊಟ ಎಂದಿಗೂ ಮನೆಯ ಊಟಕ್ಕೆ ಸಮನಾಗಲಾರದು.

ಈ ಪರಿಸ್ಥಿತಿಯಲ್ಲಿ ಸುಲಭವಾಗಿ ಕೆಡದ, ಹೆಚ್ಚು ಕಾಲ ಸಂಗ್ರಹಿಸಿಟ್ಟುಕೊಳ್ಳಬಹುದಾದ ಮತ್ತು ಮುಖ್ಯವಾಗಿ ಆರೋಗ್ಯಕರವಾದ ಆಹಾರಗಳನ್ನು ಆಯ್ಕೆ ಮಾಡುವುದು ಜಾಣತನ. ಜಾಣರಾಗಲು ಕೆಳಗಿನ ಸ್ಲೈಡ್ ಶೋನಲ್ಲಿ ನೀಡಿರುವ ಆಹಾರಗಳು ನಿಮಗೆ ನೆರವಾಗುತ್ತವೆ. ಪರಿಸರದಲ್ಲಿ ಸೂಕ್ತ ಆರ್ದ್ರತೆ ಮತ್ತು ತಾಪಮಾನ ಇದ್ದರೆ ಈ ಆಹಾರಗಳು ಹೆಚ್ಚು ಕಾಲ ಕೆಡದೇ ಇರುತ್ತವೆ. ಬನ್ನಿ ಈಗ ಸ್ಲೈಡ್ ಶೋ ನೋಡಿ ಜಾಣರಾಗೋಣ...

ಜೇನು

ಜೇನು

ಎಂದೂ ಕೆಡದ ಆಹಾರ ಎಂದು ಪವಿತ್ರ ಕುರಾನ್ ನಲ್ಲಿ ಹೇಳಲ್ಪಟ್ಟ ಆಹಾರವೆಂದರೆ ಜೇನು. ಇದರಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿರುವ ಸಕ್ಕರೆ ಮತ್ತು ಅತಿ ಕಡಿಮೆ ಪ್ರಮಾಣದಲ್ಲಿರುವ ನೀರು ಒಂದು ಅದ್ಭುತ ಸಂತುಲನೆಯಾಗಿದೆ. ಜೇನನ್ನು ಗಾಳಿಯಾಡದ ಜಾಡಿಯಲ್ಲಿ ಭದ್ರವಾಗಿ ಮುಚ್ಚಿಟ್ಟರೆ ನೂರಾರು ವರ್ಷ ಕೆಡದೇ ಇರುತ್ತದೆ. ಸಕ್ಕರೆಯ ಬದಲಿಗೆ ಈ ಜೇನನ್ನು ಉಪಯೋಗಿಸಬಹುದಾದರೂ ಅಲ್ಪ ಪ್ರಮಾಣದಲ್ಲಿ ಉಪಯೋಗಿಸುವುದು ಅಗತ್ಯವಾಗಿದೆ.

ಕೊಬ್ಬರಿ ಎಣ್ಣೆ

ಕೊಬ್ಬರಿ ಎಣ್ಣೆ

ತುಪ್ಪದಂತೆಯೇ ಕೊಬ್ಬರಿ ಎಣ್ಣೆಯೂ ಸಂತೃಪ್ತ ಕೊಬ್ಬು ಆಗಿದ್ದು ಸಾಮಾನ್ಯ ತಾಪಮಾನದಲ್ಲಿ ವರ್ಷಗಳವರೆಗೆ ಕೆಡದೇ ಇರುತ್ತದೆ. ಆದರೆ ಇದನ್ನು ಶೇಖರಿಸಿಡುವ ಡಬ್ಬಿ ಒಳಗಿನಿಂದ ತುಕ್ಕು ಹಿಡಿಯುವಂತಹದ್ದಾಗಿದ್ದರೆ ಶೀಘ್ರವೇ ಕೆಡುತ್ತದೆ.

ತಾಜಾ ಆಲಿವ್ ಎಣ್ಣೆ

ತಾಜಾ ಆಲಿವ್ ಎಣ್ಣೆ

ಕೊಬ್ಬರಿ ಎಣ್ಣೆಯಂತೆಯೇ ಆಲಿವ್ ಎಣ್ಣೆಯನ್ನೂ ತಂಪಾದ ಸ್ಥಳದಲ್ಲಿ ಬಹುಕಾಲದವರೆಗೆ ಶೇಖರಿಸಿಡಬಹುದು. ಆದರೆ ಈ ಎಣ್ಣೆ ಸೂರ್ಯನ ಕಿರಣಗಳಿಗೆ ಒಡ್ಡಿದರೆ ಬೇಗನೇ ಕೆಡುವ ಕಾರಣ ಗಾಳಿ ಮತ್ತು ಬಿಸಿಲು ಬೀಳದಂತೆ ಎಚ್ಚರಿಕೆ ವಹಿಸಬೇಕು. ಆಲಿವ್ ಎಣ್ಣೆಯೂ ಉತ್ತಮ ಪೋಷಕಾಂಶಗಳ ಆಗರವಾಗಿದ್ದು ಸಂರಕ್ಷಿತವಾಗಿದ್ದರೂ ತನ್ನ ಮೂಲ ಗುಣಗಳನ್ನು ಹಲವು ವರ್ಷಗಳವರೆಗೆ ಉಳಿಸಿಕೊಳ್ಳುತ್ತದೆ.

ಒಣಧಾನ್ಯಗಳು

ಒಣಧಾನ್ಯಗಳು

ಧಾನ್ಯಗಳನ್ನು ಒಣಗಿಸಿ ಶೇಖರಿಸಿಡುವ ಪದ್ದತಿ ಭಾರತದಲ್ಲಿ ನೂರಾರು ವರ್ಷಗಳಿಂದ ನಡೆದುಬಂದಿದೆ. ಭತ್ತವನ್ನು ಇಂದಿಗೂ ಹುಲ್ಲಿನ ಮೂಡೆ ಕಟ್ಟುವ ಮೂಲಕ ನಾಲ್ಕಾರು ವರ್ಷ ಕೆಡದಂತೆ ಸಂಗ್ರಹಿಸಬಹುದು. ಒಂದು ವೇಳೆ ನಿಮಗೆ ಗ್ಲುಟೆನ್ ಹಿತವಲ್ಲದಿದ್ದರೆ ಅಕ್ಕಿ, ಗೋಧಿ ಮತ್ತು ಗ್ಲುಟೆನ್ ರಹಿತ ಓಟ್ಸ್ ಗಳನ್ನು ಆಯ್ದುಕೊಳ್ಳಿ.

ಕ್ಯಾನ್‌ನಲ್ಲಿ ಪ್ಯಾಕ್ ಮಾಡಿದ ಮಾಂಸ ಮತ್ತು ಸಾಗರೋತ್ಪನ್ನಗಳು

ಕ್ಯಾನ್‌ನಲ್ಲಿ ಪ್ಯಾಕ್ ಮಾಡಿದ ಮಾಂಸ ಮತ್ತು ಸಾಗರೋತ್ಪನ್ನಗಳು

ಈಗ ಬಹುತೇಕ ಎಲ್ಲಾ ಅಂಗಡಿಗಳಲ್ಲಿ ಕ್ಯಾನ್ ನಲ್ಲಿ ಪ್ಯಾಕ್ ಮಾಡಿದ ಮಾಂಸ, ಮೀನು ಮತ್ತಿತರ ಸಾಗರ ಉತ್ಪನ್ನಗಳು ಲಭ್ಯವಿದೆ. ಇವುಗಳನ್ನು ಸಂಸ್ಕರಿಸಿ ಒಂದಿನಿತೂ ಗಾಳಿಯಾಡದಂತೆ ನೀರು ಅಥವಾ ಎಣ್ಣೆಯಲ್ಲಿ ಮುಳುಗಿರುವಂತೆ ಮಾಡಿ ಶೇಖಡಾ ನೂರರಷ್ಟು ಬ್ಯಾಕ್ಟೀರಿಯಾರಹಿತ ಸ್ಥಿತಿಯಲ್ಲಿ ಪ್ಯಾಕ್ ಮಾಡಿರುವ ಕಾರಣ ಇವುಗಳು ಎರಡರಿಂದ ಐದು ವರ್ಷಗಳವರೆಗೂ ಕೆಡದೇ ಇರುತ್ತವೆ. ಆದರೆ ತೆರೆದ ಬಳಿಕ ತಕ್ಷಣ ಉಪಯೋಗಿಸಬೇಕು. ಒಂದು ದಿನವೂ ಇಡಬಾರದು. ಇವುಗಳಲ್ಲಿ ಮಾಂಸದಲ್ಲಿರುವ ಪ್ರೋಟೀನ್ ಸಹಿತ ಎಲ್ಲಾ ಗುಣಗಳಿರುತ್ತವೆ. ಮೀನು ಆದರೆ ಉತ್ತಮ ಪ್ರಮಾಣದ ಒಮೆಗಾ ೩ ಕೊಬ್ಬಿನ ಆಮ್ಲವೂ ದೊರಕುತ್ತದೆ.

ಕ್ಯಾನ್‌ನಲ್ಲಿ ಪ್ಯಾಕ್ ಮಾಡಿದ ಹಣ್ಣು-ತರಕಾರಿಗಳು

ಕ್ಯಾನ್‌ನಲ್ಲಿ ಪ್ಯಾಕ್ ಮಾಡಿದ ಹಣ್ಣು-ತರಕಾರಿಗಳು

ಈಗ ಕ್ಯಾನ್ ನಲ್ಲಿ ಹಣ್ಣು ಮತ್ತು ತರಕಾರಿಗಳೂ ಲಭ್ಯವಿವೆ. ಆದರೆ ತಾಜಾ ರೂಪದಲ್ಲಲ್ಲ, ಉಪ್ಪು ನೀರಿನಲ್ಲಿ ಹಾಕಿ ಗಾಳಿಯಾಡದ ಜಾಡಿಯಲ್ಲಿ ಶೇಖರಿಸಿಟ್ಟ ರೂಪದಲ್ಲಿ ಲಭ್ಯವಿವೆ. ತಾಜಾ ಅಲ್ಲ ಎಂಬ ಕೊರತೆ ಬಿಟ್ಟರೆ ಈ ತರಕಾರಿಗಳು ಆರೋಗ್ಯಕರವಾಗಿದ್ದು ಕೆಲವಾರು ವರ್ಷಗಳವರೆಗೆ ಕೆಡದೇ ಇರುತ್ತವೆ.

ಕಪ್ಪು ಚಾಕಲೇಟು

ಕಪ್ಪು ಚಾಕಲೇಟು

ಒಂದು ವೇಳೆ ತಂಪಾದ ಸ್ಥಳದಲ್ಲಿ ಬಿಸಿಲು ಅಥವಾ ಪ್ರಖರ ಬೆಳಕು ಬೀಳದಂತೆ ಗಟ್ಟಿಯಾದ ಮುಚ್ಚಳ ಹಾಕಿರುವ ಜಾಡಿಯಲ್ಲಿ ಹಾಕಿಟ್ಟರೆ ಕಪ್ಪು ಚಾಕಲೇಟು ಆರು ತಿಂಗಳಾದರೂ ಕೆಡದೇ ಇರುತ್ತದೆ. ಇದರಲ್ಲಿ ಉತ್ತಮ ಪ್ರಮಾಣದ ಮೆಗ್ನೀಶಿಯಂ, ಕರಗುವ ನಾರು ಮತ್ತಿತರ ಪೋಷಕಾಂಶಗಳಿವೆ. ಪ್ರತಿ ಚಾಕಲೇಟನ್ನು ಅಲ್ಯೂಮಿನಿಯಂ ಫಾಲಿಲ್ ನಲ್ಲಿ ಸುತ್ತಿಟ್ಟರೆ ಗರಿಷ್ಠ ದಿನಾಂಕದ ಬಳಿಕ ಆರು ತಿಂಗಳಾದರೂ ಕೆಡದೇ ಇರುತ್ತದೆ.

English summary

Healthy Foods That Don’t Spoil Easily

One problem with healthy, natural foods, is that they tend to spoil easily. For this reason, eating healthy is associated with frequent trips to the grocery store. It can also be a challenge when travelling without access to a refrigerator. have a look
Story first published: Saturday, February 20, 2016, 20:09 [IST]
X
Desktop Bottom Promotion