For Quick Alerts
ALLOW NOTIFICATIONS  
For Daily Alerts

ಇದು ನೆನಪಿನ ಶಕ್ತಿಯನ್ನೇ ಕುಗ್ಗಿಸುವ ಖತರ್ನಾಕ್ ಕಾಯಿಲೆ!

By Manu
|

ವಯಸ್ಸಾಗುತ್ತಾ ಹೋಗುತ್ತಿದ್ದಂತೆ ನೆನಪಿನ ಶಕ್ತಿಯು ಕಡಿಮೆಯಾಗುತ್ತಾ ಹೋಗುತ್ತದೆ. ವಯಸ್ಸಿಗೆ ಅನುಗುಣವಾಗಿ ಇದು ಸಹಜ. ಆದರೆ ಕೆಲವು ಸಲ ಸಣ್ಣ ವಯಸ್ಸಿನಲ್ಲೂ ಇದು ಕಾಣಿಸಿಕೊಳ್ಳುತ್ತದೆ. ವಯಸ್ಸಾದವರಲ್ಲಿ ಹಾಗೂ ಸಣ್ಣ ವಯಸ್ಸಿನವರಲ್ಲಿ ಕಾಣಿಸಿಕೊಳ್ಳುವ ನೆನಪು ಶಕ್ತಿ ಕಡಿಮೆಯಾಗುವ ಇಂತಹ ರೋಗವನ್ನು ಆಲ್‌ಝೈಮರ್‌‌ ಅಥವಾ ಅಲ್ಜೀಮರ್‌ ಎನ್ನುತ್ತಾರೆ.

ಕೆಲವು ಸಲ ನಮಗೆ ದಿನ, ಹೆಸರು ಮತ್ತು ಜನರ ನೆನಪು ಇಲ್ಲದೆ ಇರಬಹುದು. ಆದರೆ ಇದನ್ನು ಕಡೆಗಣಿಸಬಾರದು. ಯಾಕೆಂದರೆ ಇದು ಅಲ್ಜೀಮರ್‌ನ ಲಕ್ಷಣಗಳಾಗಿರಬಹದು. ನಿಮಗೆ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತಾ ಇದ್ದರೆ ಈ ಲೇಖನದಲ್ಲಿ ತಿಳಿಸಲಾಗಿರುವ ಆರೋಗ್ಯಕರ ಆಹಾರ ಕ್ರಮವನ್ನು ಪಾಲಿಸಿಕೊಂಡು ಹೋಗಿ ಸಮಸ್ಯೆಯನ್ನು ನಿವಾರಿಸಬಹುದು. ಮರೆವಿನ ಕಾಯಿಲೆ: ಮೈಮರೆತರೆ ಆಪತ್ತು ಕಟ್ಟಿಟ್ಟ ಬುತ್ತಿ

ಈ ಖತರ್ನಾಕ್ ಕಾಯಿಲೆ ಮೆದುಳಿಗೆ ಕಾಡುವಂತಹ ಅತ್ಯಂತ ಕೆಟ್ಟ ರೋಗವಾಗಿದೆ. ಇದು ನೆನಪಿನ ಶಕ್ತಿಯನ್ನೇ ಕಸಿದುಕೊಳ್ಳುತ್ತದೆ. ಕೆಲವು ಮಂದಿಗೆ ಇದು ಅನುವಂಶೀಯವಾಗಿ ಬರಬಹುದು. ಅತಿಯಾದ ಒತ್ತಡ ಹಾಗೂ ತಲೆಗೆ ಏಟು ಬೀಳುವ ಕಾರಣದಿಂದಲೂ ಅಲ್ಜೀಮರ್‌ ಬರಬಹುದು. ಮರೆವು ರೋಗಿಗಳಿಗೆ ಬೇಕಿರುವುದು ಪ್ರೀತಿ, ಕಾಳಜಿ

ಅಲ್ಜೀಮರ್‌ಗೆ ಹಲವಾರು ರೀತಿಯ ಚಿಕಿತ್ಸೆಗಳು ಮತ್ತು ಮದ್ದುಗಳು ಲಭ್ಯವಿದೆ. ಆದರೆ ಆರೋಗ್ಯಕರವಾದ ಆಹಾರಕ್ರಮವನ್ನು ಪಾಲಿಸಿಕೊಂಡು ಹೋಗುವುದರಿಂದ ನೈಸರ್ಗಿಕವಾಗಿ ಅಲ್ಜೀಮರ್‌ ಅನ್ನು ನಿಯಂತ್ರಿಸಬಹುದು. ಅಲ್ಜೀಮರ್‌ ನಿವಾರಣೆ ಮಾಡಲು ಪಾಲಿಸಬೇಕಾದ ಆಹಾರ ಕ್ರಮಗಳನ್ನು ಇಲ್ಲಿ ತಿಳಿಯಿರಿ.....

ಹಸಿರು ತರಕಾರಿಗಳನ್ನು ಹೆಚ್ಚಾಗಿ ಸೇವಿಸಿ....

ಹಸಿರು ತರಕಾರಿಗಳನ್ನು ಹೆಚ್ಚಾಗಿ ಸೇವಿಸಿ....

ಮೆದುಳಿನ ಆರೋಗ್ಯಕ್ಕೆ ಹಸಿರು ತರಕಾರಿಗಳನ್ನು ತಿನ್ನುವುದು ಒಳ್ಳೆಯದು. ಹಸಿರುತರಕಾರಿಗಳಲ್ಲಿ ವಿಟಮಿನ್ ಎ, ಸಿ ಮತ್ತು ಇತರ ಹಲವಾರು ರೀತಿಯ ಪೋಷಕಾಂಶಗಳು ಇವೆ. ಬಸಳೆ, ಕೋಸುಗಡ್ಡೆ ಮತ್ತು ಬೀನ್ಸ್ ನಂತಹ ಹಸಿರು ತರಕಾರಿಗಳನ್ನು ದೈನಂದಿನ ಆಹಾರ ಕ್ರಮದಲ್ಲಿ ಅಳವಡಿಸಿಕೊಳ್ಳಿ.

ಅಗಸೆ ಬೀಜಗಳು

ಅಗಸೆ ಬೀಜಗಳು

ಅಗಸೆ ಬೀಜಗಳಲ್ಲಿ ಒಮೆಗಾ3 ಕೊಬ್ಬಿನಾಮ್ಲವು ಸಮೃದ್ಧವಾಗಿದೆ. ಕೆಲವೊಂದು ಅಧ್ಯಯನಗಳ ಪ್ರಕಾರ ಅಗಸೆ ಬೀಜವು ಬೆಟಾ ಅಮ್ಯಲೊಯ್ಡ್ ಪದರಗಳ ಬೆಳವಣಿಗೆಯನ್ನು ಕಡಿಮೆ ಮಾಡಿ ಅಲ್ಜೀಮರ್‌ ಕಾಯಿಲೆಯನ್ನು ತಡೆಯುವುದು.

ಸಕ್ಕರೆ ಕಡಿಮೆ ತಿನ್ನಿ

ಸಕ್ಕರೆ ಕಡಿಮೆ ತಿನ್ನಿ

ಅತಿಯಾಗಿ ಸಕ್ಕರೆ ತಿನ್ನುವುದರಿಂದ ಮೆದುಳಿನಲ್ಲಿ ಉರಿಯೂತ ನಿರ್ಮಾಣವಾಗುತ್ತದೆ. ಸಕ್ಕರೆಯಲ್ಲಿರುವ ಅಧಿಕ ಪ್ರಮಾಣದ ಕಾರ್ಬ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಿ ಜ್ಞಾನಗ್ರಹಣ ಕೌಶಲ್ಯ ದುರ್ಬಲತೆಗೆ ಕಾರಣವಾಗುತ್ತದೆ. ಅಲ್ಜೀಮರ್‌ ಕಾಯಿಲೆಯನ್ನು ನಿವಾರಣೆ ಮಾಡಲು ಸಕ್ಕರೆ ಸೇವನೆಯನ್ನು ಕಡಿಮೆ ಮಾಡುವುದು ಮುಖ್ಯ.

ಹಣ್ಣುಗಳನ್ನು ತಿನ್ನಿ

ಹಣ್ಣುಗಳನ್ನು ತಿನ್ನಿ

ಹಣ್ಣುಗಳು ಉರಿಯೂತ ಶಮನಕಾರಿ ಗುಣವನ್ನು ಹೊಂದಿದೆ ಮತ್ತು ಇದರಲ್ಲಿ ವಿಟಮಿನ್, ಕ್ಯಾಲ್ಸಿಯಂ, ಕಬ್ಬಿನಾಂಶ, ಸತು ಇತ್ಯಾದಿಗಳು ಇವೆ. ಇದು ಮೆದುಳಿನ ಶಕ್ತಿಯನ್ನು ಹೆಚ್ಚು ಮಾಡಿ ಆರೋಗ್ಯವನ್ನು ಕಾಪಾಡುತ್ತದೆ. ಇದರಿಂದ ವ್ಯಕ್ತಿಯೊಬ್ಬ ವಯಸ್ಸಾದಾಗ ಎದುರಿಸುವ ಅಲ್ಜೀಮರ್‌ ಕಾಯಿಲೆ ಬರದಂತೆ ತಡೆಯುವುದು.

ಒಮೆಗಾ3 ಕೊಬ್ಬಿನಾಮ್ಲ

ಒಮೆಗಾ3 ಕೊಬ್ಬಿನಾಮ್ಲ

ಮೀನುಗಳಾದ ಸಾಲ್ಮನ್, ಟುನಾ ಮತ್ತು ಇತರ ಕೆಲವೊಂದು ಮೀನುಗಳಲ್ಲಿ ಒಮೆಗಾ3 ಕೊಬ್ಬಿನಾಮ್ಲವು ಸಮೃದ್ಧವಾಗಿದೆ. ಇದನ್ನು ದೈನಂದಿನ ಆಹಾರ ಕ್ರಮದಲ್ಲಿ ಸೇರಿಸುವ ಕಾರಣದಿಂದ ಬೆಟಾ ಅಮ್ಯಲೊಯ್ಡ್ ಪದರಗಳ ಬೆಳವಣಿಗೆಯನ್ನು ಕಡಿಮೆ ಮಾಡಿ ಅಲ್ಜೀಮರ್‌ ಕಾಯಿಲೆಯನ್ನು ತಡೆಯುವುದು.

English summary

Healthy Food Habits That Help Prevent Alzheimer's

If you are finding difficulty in remembering dates, names and people, then you need to watch it out carefully. It could be the initial signs of Alzheimer's. Well, for a condition like this, there are certain food habits which people could follow before the symptoms get worse.
Story first published: Wednesday, September 21, 2016, 20:06 [IST]
X
Desktop Bottom Promotion