For Quick Alerts
ALLOW NOTIFICATIONS  
For Daily Alerts

ಕೇಳಿ ಇಲ್ಲಿ, ಅಡುಗೆ ಎಣ್ಣೆಯ ವಿಚಾರದಲ್ಲಿ ಮೋಸ ಹೋಗದಿರಿ!

By Manu
|

ಸುಮಾರು ಹತ್ತಿಪ್ಪತ್ತು ವರುಷಗಳ ಹಿಂದೆ, ನಮ್ಮ ಕರಾವಳಿಯ ಯಾವುದೇ ಹಳ್ಳಿಯ ಅಂಗಡಿಗಳಲ್ಲಿ ಎಣ್ಣೆ ಮಾರಾಟಕ್ಕೆ ಇದ್ದರೆ ಅದು ಅಡುಗೆಗೆ ಎಳ್ಳೆಣ್ಣೆ, ತಲೆಗೆ ಕೊಬ್ರಿ ಎಣ್ಣೆ, ಬಡವರಿಗೆ ಹರಳೆಣ್ಣೆ. ಇಷ್ಟೇ ಆಯ್ಕೆ ಇದ್ದಿತ್ತು. ಸ್ವಲ್ಪ ಒಳ್ಳೆಯ ಎಣ್ಣೆ ಕೊಡಿ ಎಂದು ಕೇಳಿದವರಿಗೆ ಕೊಂಚ ದುಬಾರಿಯಾದ ಶೇಂಗಾ ಎಣ್ಣೆ ಇರುತ್ತಿದ್ದು. ಇಷ್ಟು ಬಿಟ್ಟರೆ ಬೇರೆ ಆಯ್ಕೆಯೇ ಇರಲಿಲ್ಲ. ಎಣ್ಣೆಯಲ್ಲಿ ಏನಿದೆ ಎಂಬುವುದರ ಬಗ್ಗೆ ಅಂತೂ ಆ ಟಿನ್ನುಗಳಲ್ಲಿ ಯಾವುದೇ ಮಾಹಿತಿ ಇರುತ್ತಿರಲಿಲ್ಲ...! ದೇಹದ ಸ್ವಾಸ್ಥ್ಯಕ್ಕಾಗಿ ಆರೋಗ್ಯಕರವಾದ ಅಡುಗೆ ಎಣ್ಣೆ ಯಾವುದು?

ಆದರೆ, ಇಂದು ಅಡುಗೆ ಎಣ್ಣೆಯ ಬಗ್ಗೆ ವೈದ್ಯರು ನೀಡಿರುವ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಎಣ್ಣೆ ತಯಾರಿಕಾ ಸಂಸ್ಥೆಗಳು ತಮ್ಮ ಉತ್ಪನ್ನಗಳನ್ನು ಆರೋಗ್ಯಕ್ಕೆ ಹೊರೆಯಾಗದಂತೆ, ಅಂದರೆ ಕೊಲೆಸ್ಟ್ರಾಲ್ ರಹಿತವಾಗಿಸಿ, ಹಾಗೂ ಹೃದಯವನ್ನು ಸುಸ್ಥಿತಿಯಲ್ಲಿಡುವ ಮೂಲಕ ಗ್ರಾಹಕರ ಆರೋಗ್ಯವನ್ನು ಪರಿಗಣಿಸಿ, ಸೂಕ್ತವಾದ ಎಣ್ಣೆಯನ್ನು ಪರಿಚಯಿಸುತ್ತಿದೆ. ಆದರೂ ಅಡುಗೆ ಎಣ್ಣೆಯನ್ನು ಆಯ್ಕೆ ಮಾಡುವ ವಿಚಾರದಲ್ಲಿ ಉದಾಸೀನ ಮಾಡುವಂತಿಲ್ಲ ಅಲ್ಲವೇ? ಚಿಂತಿಸದಿರಿ ಅದಕ್ಕೆಂದೇ ನಾವಿಂದು ನಿಮ್ಮ ಜೊತೆ ಕೈ ಜೋಡಿಸುತ್ತಿದ್ದೇವೆ ಮುಂದೆ ಓದಿ.... ಮೂರು ತಿಂಗಳಿಗೊಮ್ಮೆ ಅಡುಗೆ ಎಣ್ಣೆ, ಬದಲಿಸಲು ಮರೆಯದಿರಿ

Health Tips: Which oils are best to cook?

ಆಲಿವ್ ಎಣ್ಣೆ
ದಿನನಿತ್ಯ ಅಡುಗೆಗಳಲ್ಲಿ ಆಲಿವ್ ಎಣ್ಣೆಯನ್ನು ಬಳಸುವುದರಿಂದ, ರಕ್ತದಲ್ಲಿ ಈಗಾಗಲೇ ಶೇಖರಗೊಂಡಿರುವ ಕೆಟ್ಟ ಕೊಲೆಸ್ಟ್ರಾಲ್ ನಿಧಾನವಾಗಿ ಕಡಿಮೆಯಾಗುತ್ತಾ ಬರುತ್ತದೆ. ಆಲಿವ್ ಎಣ್ಣೆಯಲ್ಲಿ phenolic antioxidant ಎಂಬ ಪೋಷಕಾಂಶವು ರಕ್ತದಲ್ಲಿ ಮಿಳಿತಗೊಂಡಾಗ ನರಗಳ ಒಳಗೆ ಅಲ್ಲಲ್ಲಿ ಜಿಡ್ಡುಗಟ್ಟಿ ರಕ್ತಸಂಚಾರಕ್ಕೆ ತಡೆಯೊಡ್ಡುತ್ತಿದ್ದ (LDL-Low density lipoprotien) ಎಂಬ ಕೆಟ್ಟ ಕೊಲೆಸ್ಟ್ರಾಲ್ ನೊಂದಿಗೆ ಮಿಶ್ರಗೊಂಡು ಜಿಡ್ಡನ್ನು ಸಡಿಲಗೊಳಿಸುತ್ತದೆ.

ಅಗಸೆ ಬೀಜದ ಎಣ್ಣೆದ ಎಣ್ಣೆ
ಸಾಮಾನ್ಯವಾಗಿ ಅಗಸೆ ಬೀಜದ ಎಣ್ಣೆಯ ಬಗ್ಗೆ ಹಚ್ಚಿನವರು ಕೇಳಿಯೇ ಇರುವುದಿಲ್ಲ, ಆದರೆ ಒಮೆಗಾ 3 ಕೊಬ್ಬಿನ ತೈಲದ ಪ್ರಮಾಣ ಹೆಚ್ಚಾಗಿರುವ ಈ ಎಣ್ಣೆಯಲ್ಲಿ ಮಧುಮೇಹಿಗಳ ಆರೋಗ್ಯಕ್ಕೆ ವರದಾನವಾಗಿದೆ

ಬಾದಾಮಿ ಎಣ್ಣೆ
ಬಾದಾಮಿ ಎಣ್ಣೆ ಬೆಲೆಯಲ್ಲಿ ಕೊಂಚ ದುಬಾರಿಯಾದರೂ, ಆರೋಗ್ಯದ ಪಾಲಿಗೆ ಶ್ರೀಮಂತವಾಗಿದೆ. ಇದರಲ್ಲಿ ವಿಟಮಿನ್ ಇ, ಡಿ ಮತ್ತು ಪೊಟ್ಯಾಶಿಯಂ, ಮೆಗ್ನೀಶಿಯಂ ಮತ್ತು ಕ್ಯಾಲ್ಸಿಯಂ ನಂತಹ ಖನಿಜಗಳು ಹೇರಳವಾಗಿವೆ. ನಿಮ್ಮ ಅಡುಗೆಗಳಲ್ಲಿ ಕಡೆಯದಾಗಿ ಒಂದೆರಡು ತೊಟ್ಟು ಬಾದಾಮಿ ಎಣ್ಣೆ ಸೇರಿಸಿದರೆ ಅಡುಗೆಯ ಸ್ವಾದದ ಜೊತೆಗೆ ಪೌಷ್ಟಿಕತೆಯೂ ಹೆಚ್ಚುತ್ತದೆ. ಬಾದಾಮಿ ಎಣ್ಣೆಯಲ್ಲಿ ಅಡಗಿದೆ ಸರ್ವರೋಗ ನಿವಾರಕ ಶಕ್ತಿ!

ತೆಂಗಿನ ಎಣ್ಣೆ
ಚಳಿಗಾಲದಲ್ಲಿ ಗಟ್ಟಿಯಾಗುತ್ತದೆ ಎಂಬ ಒಂದೇ ಕಾರಣವನ್ನು ನೀಡಿ ಕೆಟ್ಟ ಎಣ್ಣೆ ಎಂದು ಅಪಪ್ರಚಾರ ಮಾಡಿದರೂ ಶತಮಾನಗಳಿಂದ ಭಾರತೀಯರ ನೆಚ್ಚಿನ ಅಡುಗೆ ಎಣ್ಣೆಯಾದ ಕೊಬ್ಬರಿ ಎಣ್ಣೆ ಆರೋಗ್ಯಕರ ಎಣ್ಣೆ ಎಂಬುದು ಈಗಾಗಲೇ ಖಚಿತಪಡಿಸಲಾಗಿದೆ. ಈ ಎಣ್ಣೆಯನ್ನು ನಿಯಮಿತವಾಗಿ ನಿಮ್ಮ ಅಡುಗೆಗಳಿಗೆ ಬಳಸುವುದರಿಂದ, ರೋಗ ನಿರೋಧಕ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ ಹಾಗೂ ಜೀವರಾಸಾಯನಿಕ ಕ್ರಿಯೆಯನ್ನು ಹೆಚ್ಚಿಸುತ್ತದೆ. ಅಲ್ಲದೆ ಕೊಬ್ಬರಿ ಎಣ್ಣೆಯಲ್ಲಿ ಆರೋಗ್ಯಕರ ಸಂತುಲಿತ ಕೊಬ್ಬು (saturated fat) ಇರುವ ಕಾರಣ ರಕ್ತಪರಿಚಲನೆ ಉತ್ತಮಗೊಳ್ಳುತ್ತದೆ.

ಸಾಸಿವೆ ಎಣ್ಣೆ
ಸಾಮಾನ್ಯವಾಗಿ ಸಾಸಿವೆ ಎಣ್ಣೆ ಉತ್ತರಭಾರತ, ಪಂಜಾಬ್, ರಾಜಸ್ಥಾನಗಳಲ್ಲಿ ಅತಿ ಹೆಚ್ಚು ಬಳಕೆಯಲ್ಲಿದೆ. ಇದು ಹಸಿವನ್ನು ಹೆಚ್ಚಿಸುತ್ತದೆ ಹಾಗೂ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ನಿಯಮಿತ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಮತ್ತು ಕೆಮ್ಮು ಶೀತ ನೆಗಡಿ ಮೊದಲಾದ ತೊಂದರೆಗಳಿಂದಲೂ ರಕ್ಷಣೆ ನೀಡುತ್ತದೆ.

English summary

Health Tips: Which oils are best to cook?

When we cook, we choose the best ingredients for our health. Choosing the best healthy oil is one of the keys for good health. Did you know that good amount of fats and oils play a great role in slowing down ageing? Yes, studies prove that using the right oil for cooking plays a vital role in our health. We here at Boldsky, bring you the best 6 cooking oils that heal your body.
X
Desktop Bottom Promotion