For Quick Alerts
ALLOW NOTIFICATIONS  
For Daily Alerts

ಆರೋಗ್ಯ ಟಿಪ್ಸ್: ಸಾಸಿವೆ ಎಣ್ಣೆಯ ತಾಕತ್ತಿಗೆ, ತಲೆಬಾಗಲೇಬೇಕು!

By Manu
|

ಸುಮಾರು ವರುಷಗಳ ಹಿಂದೆ, ನಮ್ಮ ಕರಾವಳಿಯ ಹಳ್ಳಿಯ ಕಡೆಯಲ್ಲಿ, ಅಡುಗೆಗೆ ಎಳ್ಳೆಣ್ಣೆ, ತಲೆಗೆ ಕೊಬ್ರಿ ಎಣ್ಣೆ (ತೆಂಗಿನ ಎಣ್ಣೆ), ಇನ್ನೂ ಕೊಂಚ ಕಡಿಮೆ ಬೆಲೆಯ ಎಣ್ಣೆ ಎಂದರೆ ಅದು, ಹರಳೆಣ್ಣೆ... ಇಷ್ಟೇ ಆಯ್ಕೆ ಇದ್ದಿತ್ತು. ಒಳ್ಳೆಯ ಎಣ್ಣೆ ಎಂದರೆ ಹೆಚ್ಚಾಗಿ ಸೂರ್ಯಕಾಂತಿ ಎಣ್ಣೆಯೇ ಆಗಿತ್ತು.

ಕಾಲಕ್ರಮೇಣ ಡಾಲ್ಡಾ ಎಂಬ ವನಸ್ಪತಿಗೆ ಹೆಚ್ಚಿನ ಬೇಡಿಕೆ ಬರಲಾರಂಭಿಸಿತು, ಅಗ್ಗ ಎಂಬ ಒಂದೇ ಕಾರಣಕ್ಕೆ ಹೋಟೆಲುಗಳಿಂದ ಹಿಡಿದು ಮನೆಮನೆಗಳಲ್ಲಿ ಇದರ ಬಳಕೆಯಾಗುತ್ತಿತ್ತು. ಆದರೆ ಇತ್ತೀಚೆಗೆ ನಡೆಸಿದ ಸಂಶೋಧನೆಯಲ್ಲಿ ಈ ವನಸ್ಪತಿ ದೇಹಕ್ಕೆ ಎಷ್ಟು ಮಾರಕ ಎಂದು ಖಚಿತಪಡಿಸಿದ ಬಳಿಕ ಮಾರುಕಟ್ಟೆಯಿಂದ ಅದೃಶ್ಯವಾಗಿದೆ, ಆದರೂ ಕೆಲವೊಂದು ಅಂಗಡಿಯಲ್ಲಿ ಈಗಲೂ ಮಾರಾಟ ಮಾಡಲಾಗುತ್ತಿದೆ! ಸಾಸಿವೆ ಎಣ್ಣೆ: ಕೂದಲಿನ ಸಮಸ್ಯೆಗಳಿಗೆ ಹೇಳಿ ಮಾಡಿಸಿದ ಮನೆಮದ್ದು

ಆಹಾರತಜ್ಞರ ಪ್ರಕಾರ ಆಲಿವ್, ಮೆಕ್ಕೆಜೋಳ, ಸೂರ್ಯಕಾಂತಿ, ಕ್ಯಾನೋಲಾ, ಸಾಸಿವೆ ಎಣ್ಣೆಗಳ ಆಯ್ಕೆ ಉತ್ತಮ. ಆದರೆ ವೆಜಿಟೇಬಲ್, ಪಾಮ್, ವನಸ್ಪತಿ, ಡಾಲ್ಡಾ ಮೊದಲಾದವುಗಳು ಆರೋಗ್ಯಕ್ಕೆ ಮಾರಕವಾಗಿರುವುದರಿಂದ ಅವುಗಳ ತಂಟೆಗೆ ಹೋಗದಿರುವುದೇ ವಾಸಿ. ಆದರೆ ಇವೆಲ್ಲಕ್ಕಿಂತಲೂ ಒಂದು ಹೆಜ್ಜೆ ಮುಂದೆ, ಎಂಬಂತೆ ಸಾಸಿವೆ ಎಣ್ಣೆಯಲ್ಲಿ ಅಪಾರವಾದ ಆರೋಗ್ಯಕಾರಿ ಲಾಭಗಳಿವೆ, ಅವು ಯಾವುದು ಎಂಬುದನ್ನು ಮುಂದೆ ಓದಿ... ಅಬ್ಬಾ..! ಪುಟ್ಟ ಸಾಸಿವೆಯಲ್ಲೂ ಇಷ್ಟೆಲ್ಲಾ ಪ್ರಯೋಜನಗಳಿವೆಯೇ?

ಪುಟ್ಟ ಹೃದಯಕ್ಕೆ ಅತ್ಯುತ್ತಮ...

ಪುಟ್ಟ ಹೃದಯಕ್ಕೆ ಅತ್ಯುತ್ತಮ...

ಹೃದಯಕ್ಕೆ ಅತ್ಯುತ್ತಮವಾದ ಎಣ್ಣೆಗಳ ಪಟ್ಟಿಯಲ್ಲಿ ಸಾಸಿವೆ ಎಣ್ಣೆ ಮೇಲಿನ ಸ್ಥಾನದಲ್ಲಿ ನಿಲ್ಲುತ್ತದೆ. ಇದರಲ್ಲಿರುವ mono-saturated oil ಎಂಬ ಎಣ್ಣೆಕಣಗಳು ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಕಣಗಳನ್ನು ನಿವಾರಿಸಿ ಉತ್ತಮ ಕೊಲೆಸ್ಟ್ರಾಲ್ ಪ್ರಮಾಣವನ್ನು ಆರೋಗ್ಯಕರ ಮಟ್ಟದಲ್ಲಿರಿಸುವ ಮೂಲಕ ಹೃದಯಕ್ಕೆ ಹೆಚ್ಚಿನ ಒತ್ತಡ ಬೀಳದಂತೆ ಸಹಕರಿಸುತ್ತದೆ. ಇದು ಹೃದಯಕ್ಕೆ ಎದುರಾಗುವ ಹಲವು ತೊಂದರೆಗಳಿಂದ ಕಾಪಾಡುತ್ತದೆ.

ದಿನನಿತ್ಯ ಅಡುಗೆಗಳಲ್ಲಿ ಬಳಸಿ...

ದಿನನಿತ್ಯ ಅಡುಗೆಗಳಲ್ಲಿ ಬಳಸಿ...

ಕೆಲವೊಮ್ಮೆ ವಾತಾವರಣದ ಏರುಪೇರಿನಿಂದಾಗಿ, ಶೀತ, ಕೆಮ್ಮು, ಕಫ, ತಲೆನೋವು, ತಲೆಸಿಡಿತ, ಜ್ವರ ಮೊದಲಾದ ಹಲವು ತೊಂದರೆಗಳು ಸಡನ್ ಆಗಿ ಕಾಡುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ದಿನನಿತ್ಯ ಅಡುಗೆಗಳಲ್ಲಿ ಬಳಸಿ...

ದಿನನಿತ್ಯ ಅಡುಗೆಗಳಲ್ಲಿ ಬಳಸಿ...

ಇಂತಹ ಸಮಯದಲ್ಲಿ ಸಾಸಿವೆ ಎಣ್ಣೆಯನ್ನು ಅಡುಗೆಯ ಮೂಲಕ ನಿತ್ಯವೂ ಸೇವಿಸುತ್ತಾ ಬಂದರೆ, ಇವೆಲ್ಲಾ ತೊಂದರೆಗಳಿಂದ ಆದಷ್ಟು ಮುಕ್ತಿ ಹೊಂದಬಹುದು

ಬ್ಯಾಕ್ಟೀರಿಯಾ ನಿವಾರಕ ಗುಣ

ಬ್ಯಾಕ್ಟೀರಿಯಾ ನಿವಾರಕ ಗುಣ

ಸಾಸಿವೆ ಎಣ್ಣೆಯಲ್ಲಿರುವ ಬ್ಯಾಕ್ಟೀರಿಯಾ ನಿವಾರಕ ಗುಣ ದೇಹಕ್ಕೆ ಮಾರಕವಾದ ಬಹಳಷ್ಟು ಬ್ಯಾಕ್ಟೀರಿಯಾಗಳನ್ನು ತೊಲಗಿಸುತ್ತದೆ. ವಿಶೇಷವಾಗಿ ಹೊಟ್ಟೆ, ಮೂತ್ರಕೋಶ, ಮೂತ್ರನಾಳಗಳಲ್ಲಿ ಸೋಂಕು ಉಂಟುಮಾಡುವ ಬ್ಯಾಕ್ಟೀರಿಯಾಗಳಿಗೆ ಸಾಸಿವೆ ಎಣ್ಣೆ ಸಿಂಹಸ್ವಪ್ನವಾಗಿದೆ.

ಕೂದಲಿನ ಪೋಷಣೆಗೆ ಸಹಕಾರಿ

ಕೂದಲಿನ ಪೋಷಣೆಗೆ ಸಹಕಾರಿ

ಸಾಸಿವೆ ಎಣ್ಣೆಯ ನಿಯಮಿತ ಬಳಕೆಯಿಂದ ಕೂದಲ ಬುಡಗಳಿಗೆ ಉತ್ತಮ ಪೋಷಣೆ ದೊರಕುವುದು ಮಾತ್ರವಲ್ಲ, ಹೊಸ ಕೂದಲು ಬೆಳೆಯಲೂ ಸಹಕಾರ ದೊರಕುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕೂದಲಿನ ಪೋಷಣೆಗೆ ಸಹಕಾರಿ

ಕೂದಲಿನ ಪೋಷಣೆಗೆ ಸಹಕಾರಿ

ಹಾಗಾಗಿ ಸಾಸಿವೆ ಎಣ್ಣೆಯನ್ನು ದಿನನಿತ್ಯ ಅಡುಗೆಯಲ್ಲಿ ಬಳಸುವ ಮೂಲಕ ಮತ್ತೆ ತಲೆಗೆ ಹಚ್ಚಿಕೊಳ್ಳುವ ಮೂಲಕ ಹೊರಗಿನಿಂದಲೂ ಒಳಗಿನಿಂದಲೂ ಹೆಚ್ಚಿನ ಪೋಷಣೆ ಪಡೆಯುವಂತಾಗುತ್ತದೆ.

ಬಿಳಿ ಕೂದಲಿನ ಸಮಸ್ಯೆಗೆ

ಬಿಳಿ ಕೂದಲಿನ ಸಮಸ್ಯೆಗೆ

ಸಾಸಿವೆ ಎಣ್ಣೆಯಲ್ಲಿ ವಿಟಮಿನ್, ಖನಿಜಗಳು ಮತ್ತು ವಿವಿಧ ಪೋಷಕಾಂಶಗಳು ಕೂದಲು ನೆರೆಯುವ ಗತಿಯನ್ನು ನಿಧಾನಗೊಳಿಸುತ್ತದೆ. ಆದರೆ ಇದರ ಬಳಕೆಯನ್ನು ನಿಮ್ಮ ಕೂದಲ ಬಗೆಯನ್ನು ಅನುಸರಿಸಿಯೇ ಉಪಯೋಗಿಸಬೇಕಾಗಿದೆ.

ಬಿಳಿ ಕೂದಲಿನ ಸಮಸ್ಯೆಗೆ

ಬಿಳಿ ಕೂದಲಿನ ಸಮಸ್ಯೆಗೆ

ಕೂದಲು ಕಡಿಮೆ ಇದ್ದರೆ ಅಥವಾ ಗಿಡ್ಡವಾಗಿದ್ದರೆ ಕಡಿಮೆ ಪ್ರಮಾಣದಲ್ಲಿ ಹಚ್ಚಬೇಕು ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸಿದರೆ ಚರ್ಮ ಘಾಸಿಗೊಳ್ಳಬಹುದು...!


English summary

Health benefits of mustard oil, you must know

Mustard oil is considered to be an oil that has low saturated fat as compared to other cooking oils. It basically consists of fatty acid, oleic acid, erucic acid and linoleic acid. It has antioxidant and cholesterol reducing properties. It is also loaded with essential vitamins. Though this oil is nutty tasting it is good for heart and also has many other benefits. have a look
X
Desktop Bottom Promotion