For Quick Alerts
ALLOW NOTIFICATIONS  
For Daily Alerts

ಮೆಂತೆ: ಅಡುಗೆಮನೆಗೆ ರಾಣಿ-ಆರೋಗ್ಯಕ್ಕೆ ಸಂಜೀವಿನಿ!

ಹೆಚ್ಚಿನವರಿಗೆ ಮೆಂತೆಯ ಆರೋಗ್ಯಕರ ಗುಣಗಳ ಬಗ್ಗೆ ತಿಳಿದಿರಲಾರದು. ಮೆಂತೆಯನ್ನು ನಿಯಮಿತವಾಗಿ ಸೇವಿಸುವ ಮೂಲಕ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ಈಗ ನೋಡೋಣ....

By Arshad
|

ಕೆಲವು ಸೊಪ್ಪುಗಳು ಮತ್ತು ಅದರ ಬೀಜಗಳು ಸೇವನೆಗೆ ಸೂಕ್ತವಾಗಿದ್ದು ಆರೋಗ್ಯಕರವೂ ಆಗಿದೆ. ಕೊತ್ತಂಬರಿ, ಮೆಂತೆ, ನುಗ್ಗೆ ಮೊದಲಾದವು ಈ ಗುಂಪಿಗೆ ಸೇರಿವೆ. ಮೆಂತೆ ಕಾಳುಗಳು ಮತ್ತು ಸೊಪ್ಪು ಬಳಸಿ ತಯಾರಿಸಿದ ಖಾದ್ಯಗಳು ಪ್ರತಿ ಭಾರತೀಯ ಮನೆಯ ಅಡುಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅಡುಗೆಮನೆಯ ಮೆಂತೆ- ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು!

fenugreek leaves

ಮೆಂತೆ ಸೊಪ್ಪಿನ ಸಾಂಬಾರ್, ಮೆಂತೆ ದೋಸೆ, ಪಲ್ಯ ಇತ್ಯಾದಿಗಳು ಅನ್ನದೊಡನೆ ಹೇಗೆ ಚೆನ್ನವೂ ಹಾಗೇ ಚಪಾತಿ ರೊಟ್ಟಿಗಳೊಡನೆ ಸೇವಿಸಲೂ ರುಚಿಕರವಾಗಿವೆ. ಹೆಚ್ಚಿನವರಿಗೆ ಮೆಂತೆಯ ಆರೋಗ್ಯಕರ ಗುಣಗಳ ಬಗ್ಗೆ ತಿಳಿದಿರಲಾರದು. ಮೆಂತೆಯನ್ನು ನಿಯಮಿತವಾಗಿ ಸೇವಿಸುವ ಮೂಲಕ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ಈಗ ನೋಡೋಣ: ಒಮ್ಮೆ ಸವಿದು ನೋಡಿ, ಮೆಂತೆ-ಪಾಲಕ್ ಸೊಪ್ಪಿನ ಅಕ್ಕಿರೊಟ್ಟಿ!

ರಕ್ತದ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುತ್ತದೆ
ಆಹಾರದಲ್ಲಿ ಮೆಂತೆಯ ಪ್ರಮಾಣ ತಕ್ಕ ಮಟ್ಟಿಗಿದ್ದು ನಿಯಮಿತವಾಗಿ ಸೇವಿಸುತ್ತಾ ಬಂದರೆ ರಕ್ತದಲ್ಲಿನ ಕೊಲೆಸ್ಟಾಲ್ ಮಟ್ಟ ನಿಯಂತ್ರಣಕ್ಕೆ ಬರುತ್ತದೆ. ವಿಶೇಷವಾಗಿ ಕೆಟ್ಟ ಕೊಲೆಸ್ಟ್ರಾಲ್ ಅಥವಾ low density lipoprotein (LDL) ಪ್ರಮಾಣವನ್ನು ನಿಯಂತ್ರಿಸಲು ಮೆಂತೆಯಲ್ಲಿರುವ ಸಾಪೋನಿನ್ ಎಂಬ ಸ್ಟ್ರೆರಾಯ್ಡುಗಳು ನೆರವಾಗುತ್ತವೆ. ಅಲ್ಲದೇ ಟ್ರೈಗ್ಲಿಸರಾಯ್ಡುಗಳ ಮಟ್ಟವನ್ನೂ ನಿಯಂತ್ರಣದಲ್ಲಿರಿಸಿ ರಕ್ತದ ಒಟ್ಟಾರೆ ಕೊಲೆಸ್ಟ್ರಾಲ್ ಮಟ್ಟವನ್ನು ಆರೋಗ್ಯಕರ ಮಟ್ಟದಲ್ಲಿರಿಸಲು ನೆರವಾಗುತ್ತದೆ.

ಜೀರ್ಣಕ್ರಿಯೆ ಉತ್ತಮಗೊಳಿಸುತ್ತದೆ
ಮೆಂತೆಕಾಳಿನಲ್ಲಿಯೂ, ಸೊಪ್ಪಿನಲ್ಲಿಯೂ ಉತ್ತಮ ಪ್ರಮಾಣದ ಕರಗದ ನಾರು ಹಾಗೂ ಆಂಟಿ ಆಕ್ಸಿಡೆಂಟುಗಳಿದ್ದು ದೇಹದಿಂದ ವಿಷಕಾರಿ ವಸ್ತುಗಳನ್ನು ಹೊರಹಾಕಲು ನೆರವಾಗುತ್ತವೆ. ಅಲ್ಲದೇ ಆಹಾರವನ್ನು ಅರಗಿಸಿಕೊಳ್ಳಲೂ ನೆರವಾಗುತ್ತವೆ.

ಮೆಂತೆ ಕಾಳುಗಳನ್ನು ಬೇಯಿಸಿ ತಯಾರಿಸಿದ ಟೀ ಕುಡಿಯುವ ಮೂಲಕ ಅಜೀರ್ಣತೆ ಮತ್ತು ಇದರ ಮೂಲಕ ಉಂಟಾಗುವ ಹೊಟ್ಟೆನೋವು ಕಡಿಮೆಯಾಗುತ್ತದೆ. ಮಲಬದ್ದತೆಯ ತೊಂದರೆ ಇದ್ದರೆ ದಿನವೂ ಬೆಳಿಗ್ಗೆ ಪ್ರಥಮ ಆಹಾರವಾಗಿ ಕೊಂಚ ಮೆಂತೆಕಾಳುಗಳನ್ನು ಕುದಿಸಿ ತಣಿಸಿ ಸೋಸಿದ ನೀರನ್ನು ಕುಡಿಯುವ ಮೂಲಕ ಮಲಬದ್ದತೆ ಇಲ್ಲವಾಗುತ್ತದೆ. ವ್ಯಾಯಾಮವಿಲ್ಲದೆ ಬೊಜ್ಜು ಕರಗಿಸುವ ಮೆಂತೆ

ತೂಕ ಕಳೆದುಕೊಳ್ಳಲು ನೆರವಾಗುತ್ತದೆ
ನಿತ್ಯವೂ ಮೆಂತೆಯನ್ನು ನಿಮ್ಮ ಆಹಾರದ ಒಂದು ಭಾಗವಾಗಿಸಿದರೆ ತೂಕ ಇಳಿಸುವ ನಿಮ್ಮ ಎಲ್ಲಾ ಕ್ರಿಯೆಗಳಿಗೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತದೆ. ವಿಶೇಷವಾಗಿ ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಈ ಕಾಳುಗಳನ್ನು ಜಗಿದು ನುಂಗುವ ಮೂಲಕ ಅತ್ಯುತ್ತಮ ಪರಿಣಾಮ ಪಡೆಯಬಹುದು.

ಇದರಲ್ಲಿರುವ ಕರಗುವ ನಾರು ಹೊಟ್ಟೆಗೆ ಹೋದ ಬಳಿಕ ನೀರನ್ನು ಹೀರಿಕೊಂಡು ಉಬ್ಬುತ್ತವೆ. ಇದರಿಂದ ಹೊಟ್ಟೆ ತುಂಬಿದಂತಿದ್ದು ಬಲುಹೊತ್ತಿನವರೆಗೆ ಹಸಿವಾಗದೇ ಇರುವ ಮೂಲಕ ಅನಾವಶ್ಯಕವಾಗಿ ಹೊಟ್ಟೆಗೆ ಸೇರುತ್ತಿದ್ದ ಹೆಚ್ಚುವರಿ ಆಹಾರವನ್ನು ತಡೆಯುವ ಮೂಲಕ ತೂಕ ಇಳಿಸಲು ಸಾಧ್ಯವಾಗುತ್ತದೆ. ನಿಜಕ್ಕೂ ಆಶ್ಚರ್ಯ! ಮೆಂತೆ ಕಾಳು ಕೂದಲುದುರುವ ಸಮಸ್ಯೆಗೆ ಪರಿಹಾರವೇ?

ಜ್ವರ ಮತ್ತು ಗಂಟಲ ಬೇನೆ ಇಲ್ಲವಾಗುತ್ತದೆ
ಒಂದು ಚಿಕ್ಕ ಚಮಚ ಲಿಂಬೆರಸ ಮತ್ತು ಜೇನನ್ನು ಮಿಶ್ರಣ ಮಾಡಿ ಇದಕ್ಕೆ ಕೊಂಚ ಮೆಂತೆಕಾಳುಗಳನ್ನು ಕುಟ್ಟಿ ಪುಡಿಮಾಡಿ ಸೇವಿಸುವ ಮೂಲಕ ಜ್ವರವನ್ನು ಕಡಿಮೆಗೊಳಿಸಲು ಸಾಧ್ಯವಾಗುತ್ತದೆ. ಅಲ್ಲದೇ ಈ ಮಿಶ್ರಣ ಗಂಟಲ ಒಳಭಾಗದಲ್ಲಿ ಅಂಟಿಕೊಂಡಿದ್ದ ಕಫವನ್ನು ಸಡಿಲಿಸಿ ಹೊರಹಾಕುವ ಮೂಲಕ ಗಂಟಲ ಬೇನೆ, ಕೆಮ್ಮು, ಗಂಟಲ ಕಿರಿಕಿರಿಯನ್ನು ಇಲ್ಲವಾಗಿಸುತ್ತದೆ.

ತಾಯಿಯ ಹಾಲಿನ ಉತ್ಪಾದನೆಯನ್ನು ಹೆಚ್ಚಿಸುತ್ತದೆ
ಬಾಣಂತಿಯರಿಗೆ ಮೆಂತೆ ಒಂದು ಅತ್ಯುತ್ತಮ ಆಹಾರವಾಗಿದ್ದು ಮಗುವಿಗೆ ಅವಶ್ಯವಾಗಿರುವ ಹಾಲಿನ ಉತ್ಪಾದನೆ ಹೆಚ್ಚಿಸಲು ನೆರವಾಗುತ್ತದೆ. ಇರಲ್ಲಿರುವ ಡಯೋಸ್ಜೆನಿನ್ (diosgenin) ಎಂಬ ಪೋಷಕಾಂಶ ತಾಯಿಯ ದೇಹದಲ್ಲಿ ಹೆಚ್ಚು ಹಾಲು ಉತ್ಪತ್ತಿಯಾಗಲು ನೆರವಾಗುತ್ತದೆ.

English summary

Health benefits of methi or fenugreek seeds and leaves

An Indian household cannot do without methi or fenugreek seeds and leaves. It is used in almost every Indian preparation be it dal, paratha or curry. But what you might not know is that methi or fenugreek is a rich reservoir of medicinal properties that imparts many health benefits. Here are reasons why you should include methi in your diet more often.
Story first published: Thursday, November 24, 2016, 10:13 [IST]
X
Desktop Bottom Promotion