ಒಂದು ಸಣ್ಣ ತುಂಡು 'ಬೆಲ್ಲದಲ್ಲಿ' ಇಷ್ಟೆಲ್ಲಾ ಪ್ರಯೋಜನಗಳಿವೆಯೇ?

ಕೆಲವೊಂದು ಕಡೆ ನೀರು ಕುಡಿಯಲು ಕೇಳಿದರೆ ನೀರಿನ ಜೊತೆ ಬೆಲ್ಲದ ತುಂಡುಗಳನ್ನು ಕೂಡ ತಂದಿಡುತ್ತಾರೆ. ಅದೊಂದು ಸಂಪ್ರದಾಯ, ಆದರೆ ಬೆಲ್ಲ ತಿಂದರೆ ಅದ್ಭುತವಾದ ಆರೋಗ್ಯಕರ ಗುಣಗಳನ್ನು ಪಡೆಯಬಹುದೆಂದು ಹೆಚ್ಚಿನ ಜನರಿಗೆ ಗೊತ್ತಿರುವುದಿಲ್ಲ....

By: Jaya subramanya
Subscribe to Boldsky

ಇಂದಿನ ಯುಗದಲ್ಲಿ ಡಯಟ್ ಎಂಬುದು ಪ್ರತಿಯೊಬ್ಬರ ಬಾಯಲ್ಲೂ ಕೇಳಿಬರುತ್ತಿದೆ. ದಿನನಿತ್ಯದ ಕಾಯಿಲೆಗಳಿಂದ ಬಳಲುವವರು ತಮ್ಮ ಆಹಾರದಲ್ಲಿ ಕೆಲವೊಂದು ಅಭಿವೃದ್ಧಿಯನ್ನು ಮಾಡಿಕೊಳ್ಳುತ್ತಾ ಅಧಿಕ ಕೊಬ್ಬಿನ ಸಮಸ್ಯೆಯಿಂದ ದೂರಾಗಲು ಹೊರಟಿದ್ದಾರೆ. ಇಂದು ಸ್ಥೂಲಕಾಯವು ಜನರಿಗೆ ಶಾಪವಾಗಿ ಮಾರ್ಪಟ್ಟಿದೆ. ನಿಮ್ಮ ದೇಹದಲ್ಲಿ ಸ್ಥೂಲತೆಗೆ ನೀವು ಅವಕಾಶವನ್ನು ಮಾಡಿಕೊಟ್ಟಿರಿ ಎಂದಾದಲ್ಲಿ ರೋಗಗಳನ್ನು ನೀವೇ ಆಮಂತ್ರಿಸದಂತೆ. ಹಾಲಿಗೆ ಬೆಲ್ಲ ಹಾಕಿ ಕುಡಿಯಿರಿ, ಆರೋಗ್ಯ ಪಡೆಯಿರಿ

ನಾಲಗೆ ಚಪಲವೆಂದು ಸಿಕ್ಕಸಿಕ್ಕದ್ದನ್ನೆಲ್ಲಾ ತಿಂದು ಅದನ್ನು ಅರಗಿಸುವುದಕ್ಕಾಗಿ ನಾವು ಪರಿಪಾಟಲು ಪಡುತ್ತೇವೆ. ತೂಕವನ್ನು ಇಳಿಸಿಕೊಳ್ಳಲು ಡಯೆಟ್, ಜಿಮ್, ಯೋಗ ತರಗತಿಗಳನ್ನು ಸೇರಿಕೊಳ್ಳುತ್ತೇವೆ. ಈ ಅಂಶಗಳು ಒಳ್ಳೆಯದೇ ಆಗಿದ್ದರೂ ಹೆಚ್ಚಿನ ಕಟ್ಟುನಿಟ್ಟಿನ ಡಯೆಟ್ ಆರೋಗ್ಯದ ಮೇಲೆ ಕೆಟ್ಟ ಪ್ರಭಾವವನ್ನು ಬೀರಬಹುದು.  ಬೆಲ್ಲದಲ್ಲಿರುವ ಅದ್ಭುತ ಆರೋಗ್ಯಕರ ಗುಣಗಳು

ಇಂದಿನ ಲೇಖನದಲ್ಲಿ ನಿಮ್ಮ ಡಯಟ್‎ನ ಭಾಗವಾಗಿರುವ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಿ ಅಲ್ಲಿ ಬೆಲ್ಲದ ಬಳಕೆಯನ್ನು ಮಾಡುವುದು ಹೇಗೆ ಎಂಬುದನ್ನು ತಿಳಿಸಿಕೊಡಲಿದ್ದೇವೆ.....  


ತೂಕ ಇಳಿಕೆ

ತೂಕವನ್ನು ಇಳಿಸುವಲ್ಲಿ ಬೆಲ್ಲ ಅದ್ವಿತೀಯ ಎಂದೆನಿಸಿದೆ. ಬೆಲ್ಲದಲ್ಲಿರುವ ಪೊಟಾಶಿಯಮ್ ಅಂಶವು ನೀರಿನ ಧಾರಣೆಯನ್ನು ಕಡಿಮೆ ಮಾಡಿ, ತೂಕವನ್ನು ನಿಯಂತ್ರಿಸುತ್ತದೆ. ನಿಮ್ಮ ಆಹಾರದಲ್ಲಿ ಬೆಲ್ಲವನ್ನು ಸೇರಿಸಿ ಮತ್ತು ಸಿಹಿಯ ಸೇವನೆಯಿಂದ ತೂಕ ಏರುತ್ತಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. 

ಶಕ್ತಿಯ ಮೂಲ

ಸಿಹಿಯನ್ನು ರಕ್ತನಾಳಗಳು ಹೀರಿಕೊಂಡಾಗ ತ್ವರಿತ ಸಾಮರ್ಥ್ಯವನ್ನು ನಾವು ಪಡೆದುಕೊಳ್ಳುತ್ತೇವೆ. ಬೆಲ್ಲವು ದೀರ್ಘ ಸಮಯದವರೆಗೆ ಶಕ್ತಿಯನ್ನು ನೀಡುತ್ತದೆ. ರಕ್ತದಲ್ಲಿರುವ ಸಕ್ಕರೆ ಪ್ರಮಾಣ ತ್ವರಿತವಾಗಿ ಏರುವುದಿಲ್ಲ.

ಶೀತ ಮತ್ತು ಕೆಮ್ಮು ನಿವಾರಣೆ

ನೀವು ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿದ್ದೀರಿ ಎಂದಾದಲ್ಲಿ, ಬಿಸಿ ನೀರು ಅಥವಾ ಚಹಾದಲ್ಲಿ ಬೆಲ್ಲವನ್ನು ಸೇರಿಸಿ ಸೇವಿಸಿ.

ಮಲಬದ್ಧತೆ ನಿವಾರಣೆ

ದೇಹದ ಕಿಣ್ವಗಳನ್ನು ಸಕ್ರಿಯಗೊಳಿಸಿ ಕರುಳಿನ ಚಲನೆಗಳನ್ನು ಸುಧಾರಿಸುತ್ತದೆ, ಈ ರೀತಿಯಾಗಿ ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುತ್ತದೆ.

ಯಕೃತ್ತಿನ ಸ್ನೇಹಿತ

ಇತರ ಸಿಹಿ ಪದಾರ್ಥಗಳು ಮತ್ತು ಕೊಬ್ಬಿನ ಆಹಾರಗಳಿಗಿಂತಲೂ ಭಿನ್ನವಾಗಿ ಬೆಲ್ಲವು, ದೇಹದಿಂದ ವಿಷಕಾರಿ ಅಂಶಗಳನ್ನು ಹೊರದೂಡಿ ಯಕೃತ್ತನ್ನು ಸ್ವಚ್ಛಮಾಡುತ್ತದೆ. ಬಲಿಷ್ಟವಾದ ಯಕೃತ್ತನ್ನು ಪಡೆದುಕೊಳ್ಳಲು ನಿತ್ಯವೂ ಸೇವಿಸಿ

ಋತುಚಕ್ರದ ನೋವು ನಿವಾರಕ

ಇದರಲ್ಲಿರುವ ಶ್ರೀಮಂತ ಅಂಶಗಳು ಮತ್ತು ಸಾಕಷ್ಟು ನ್ಯೂಟ್ರೀನ್ ಗುಣಗಳು ಋತುಚಕ್ರದ ಸಮಸ್ಯೆಗಳನ್ನು ನಿವಾರಿಸಿ, ಕಿಬ್ಬೊಟ್ಟೆಯ ನೋವು ನಿವಾರಣೆ ಮಾಡುತ್ತದೆ.

ತಂಪಿನ ಗುಣ

ಬೇಸಿಗೆ ಸಮಯದಲ್ಲಿ ಇದು ಅತ್ಯುತ್ತಮ ಎಂದೆನಿಸಿದೆ. ದೇಹದ ತಾಪಮಾನವನ್ನು ನಿರ್ವಹಿಸಲು ಇಸು ಸಹಕಾರಿಯಾಗಿದ್ದು ಹೊಟ್ಟೆಯನ್ನು ತಣ್ಣಗಿರಿಸುತ್ತದೆ ಮತ್ತು ಕಾಯಿಲೆಗಳಿಂದ ದೂರವಿರಿಸುತ್ತದೆ.

ರಕ್ತಹೀನತೆಯನ್ನು ತಡೆಗಟ್ಟುತ್ತದೆ

ಕೆಂಪು ರಕ್ತಕಣಗಳ ಕೋಶಗಳ ಮಟ್ಟವನ್ನು ಸಾಮಾನ್ಯವಾಗಿ ಇರಿಸುವುದರ ಮೂಲಕ ರಕ್ತಹೀನತೆಯನ್ನು ನಿವಾರಿಸುತ್ತದೆ.

ರಕ್ತವನ್ನು ಶುದ್ಧೀಕರಿಸುತ್ತದೆ

ನಿತ್ಯವೂ ಬೆಲ್ಲವನ್ನು ಸೇವಿಸುವುದು ರಕ್ತವನ್ನು ಶುದ್ಧೀಕರಿಸಿ ನಮ್ಮ ಆರೋಗ್ಯವನ್ನು ಉತ್ತಮವಾಗಿರಿಸುತ್ತದೆ.

ರೋಗನಿರೋಧಕ ಶಕ್ತಿಯ ಸುಧಾರಣೆ

ಬೆಲ್ಲದಲ್ಲಿರುವ ಉತ್ಕರ್ಷಣ ನಿರೋಧಿ ಅಂಶಗಳು ಮತ್ತು ಮಿನರಲ್‎ಗಳು ಮುಕ್ತ ರಾಡಿಕಲ್‎ಗಳಿಂದ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ರಕ್ತದಲ್ಲಿರುವ ಹಿಮೋಗ್ಲೋಬೀನ್ ಎಣಿಕೆಯನ್ನು ಬೆಲ್ಲ ಹೆಚ್ಚಿಸುತ್ತದೆ.

ಕ್ಯಾನ್ಸರ್ ನಿವಾರಣೆ

ಬೆಲ್ಲದಲ್ಲಿರುವ ಹೆಚ್ಚಿನ ಮೆಗ್ನೇಷಿಯಂ ಅಂಶವು ಕರುಳನಲ್ಲಿರುವುದನ್ನು ಒಳಗೊಂಡಂತೆ ಕ್ಯಾನ್ಸರ್ ತಡೆಗಟ್ಟುವಲ್ಲಿ ಸಹಕಾರಿ.

ರಕ್ತದೊತ್ತಡ ನಿಯಂತ್ರಣದಲ್ಲಿರಿಸುತ್ತದೆ

ಬೆಲ್ಲದಲ್ಲಿರುವ ಪೊಟಾಶಿಯಮ್ ಮತ್ತು ಸೋಡಿಯಮ್ ಅಂಶವು ದೇಹದಲ್ಲಿರುವ ಆಸಿಡ್ ಮಟ್ಟವನ್ನು ನಿರ್ವಹಿಸಲು ಸಹಕಾರಿ, ಮತ್ತು ರಕ್ತದೊತ್ತಡವನ್ನು ಸಾಮಾನ್ಯ ಸ್ಥಿತಿಯಲ್ಲಿರಿಸುತ್ತದೆ.

 

ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

English summary

health benefits of jaggary

Jaggery, which is known by different names in various parts of India, is prepared from sugarcane and date palm.Here are 12 benefits that jaggery, the natural sweet which is full of several nutrients and vitamins, offers to our health, take a look:
Please Wait while comments are loading...
Subscribe Newsletter