ಮನೆ ಔಷಧಿ: ಲವಂಗ-ಕರಿಮೆಣಸು ಬೆರೆಸಿದ ಹಾಲು....

ಚಿಕ್ಕ ಜಾರ್‌ನಲ್ಲಿ ಮೂರು ಅಥವಾ ನಾಲ್ಕು ಲವಂಗ -ನಾಲ್ಕು ಕಾಳುಮೆಣಸುಗಳನ್ನು (ಕರಿಮೆಣಸು) ಚಿಕ್ಕದಾಗಿ ಅರೆದು ಪುಡಿಮಾಡಿ. ಈ ಪುಡಿಯನ್ನು ಒಂದು ಲೋಟ ಹಾಲಿಗೆ ಬೆರೆಸಿ ಬಿಸಿಮಾಡಿ, ಪ್ರತಿದಿನ ಊಟದ ಬಳಿಕ ರಾತ್ರಿ ಮಲಗುವ ಮುನ್ನ ಕುಡಿಯಿರಿ.

By: manu
Subscribe to Boldsky

ಆರೋಗ್ಯದ ಏರುಪೇರಿಗೆ ನೈಸರ್ಗಿಕ ಸಾಮಾಗ್ರಿಗಳನ್ನೇ ಬಳಸಲು ಒಲವು ತೋರುವ ವ್ಯಕ್ತಿ ನೀವಾಗಿದ್ದರೆ ನಿಮಗೆ ಒಂದು ಒಳ್ಳೆಯ ಸಮಾಚಾರವಿದೆ. ಇಂದಿನ ಲೇಖನದಲ್ಲಿ ಪ್ರಸ್ತುತಪಡಿಸಲಾಗುತ್ತಿರುವ ಈ ಅದ್ಭುತ ಪೇಯದ ಸೇವನೆಯಿಂದ ಹಲವು ರೀತಿಯ ಪ್ರಯೋಜನಗಳಿವೆ. ಇದೇನೂ ಇಂದು ನಿನ್ನೆ ಬಳಕೆಗೆ ಬಂದಿದ್ದಲ್ಲ, ಬದಲಿಗೆ ನೂರಾರು ವರ್ಷಗಳಿಂದ ನಮ್ಮ ಹಿರಿಯರು ಆಚರಿಸಿಕೊಂಡು ಬರುತ್ತಿದ್ದಾರೆ. ಚಿಕ್ಕಂದಿನಲ್ಲಿ ಅಜ್ಜಿ ಲವಂಗ ದಾಲ್ಚಿನ್ನಿ ಬೆರೆಸಿದ್ದ ಹಾಲನ್ನು ಬಲವಂತವಾಗಿ ಕುಡಿಸಿದ್ದ ನೆನಪಿದೆಯೇ? ಹಾಲಿಗೆ ಜೀರಿಗೆ-ಕರಿಮೆಣಸಿನ ಪುಡಿ ಸೇರಿಸಿ ಕುಡಿದು ನೋಡಿ...

ಹೌದು, ಅಜ್ಜಿಯ ಈ ಆರೈಕೆ ಸರಿಯಾದುದು ಎಂದು ಇಂದಿನ ಸಂಶೋಧನೆಗಳೂ ದೃಢೀಕರಿಸಿವೆ. ಇದರೊಂದಿಗೆ ಇನ್ನೂ ಕೊಂಚ ಇತರ ಸಾಮಾಗ್ರಿಗಳನ್ನು ಬೆರೆಸಿದರಂತೂ ಇದರ ಗುಣಗಳು ಹತ್ತಾರು ಪಟ್ಟು ಹೆಚ್ಚುತ್ತವೆ. ಇವುಗಳಲ್ಲಿ ಪ್ರಮುಖವಾದವುಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ. ಬನ್ನಿ, ಮೊದಲು ಈ ಪೇಯವನ್ನು ತಯಾರಿಸುವುದು ಹೇಗೆ ಎಂಬುದನ್ನು ನೋಡೋಣ.......


ತಯಾರಿಸುವ ವಿಧಾನ

ಮಿಕ್ಸಿಯ ಚಿಕ್ಕ ಜಾರ್‌ನಲ್ಲಿ ಮೂರು ಅಥವಾ ನಾಲ್ಕು ಲವಂಗ -ನಾಲ್ಕು ಕಾಳುಮೆಣಸುಗಳನ್ನು (ಕರಿಮೆಣಸು) ಚಿಕ್ಕದಾಗಿ ಅರೆದು ಪುಡಿಮಾಡಿ. ಈ ಪುಡಿಯನ್ನು ಒಂದು ಲೋಟ ಹಾಲಿಗೆ ಬೆರೆಸಿ ಬಿಸಿಮಾಡಿ, ಪ್ರತಿದಿನ ಊಟದ ಬಳಿಕ ರಾತ್ರಿ ಮಲಗುವ ಮುನ್ನ ಕುಡಿಯಿರಿ.

ಮೈಗ್ರೇನ್ ತಲೆನೋವನ್ನು ಕಡಿಮೆಗೊಳಿಸುತ್ತದೆ

ಈ ಪೇಯದ ಸೇವನೆಯಿಂದ ಮೆದುಳಿಗೆ ಹರಿಯುವ ರಕ್ತದ ಪ್ರಮಾಣ ಹೆಚ್ಚುತ್ತದೆ. ಇದರಿಂದ ಮೆದುಳಿನ ನರಗಳ ಉರಿಯೂತ ಇಲ್ಲವಾಗುತ್ತದೆ. ಮೈಗ್ರೇನ್ ತಲೆನೋವಿಗೆ ಈ ಸೋಂಕು ಪ್ರಮುಖ ಕಾರಣವಾಗಿದ್ದು ತಲೆನೋವು ಮತ್ತು ಸಂಬಂಧಿತ ಇತರ ತೊಂದರೆಗಳನ್ನು ನಿವಾರಿಸಲು ಸಾಧ್ಯವಾಗುತ್ತದೆ.

ಶೀತ ಕಡಿಮೆ ಮಾಡುತ್ತದೆ

ಬಿಸಿ ಹಾಲು, ದಾಲ್ಚಿನ್ನಿ, ಕಾಳುಮೆಣಸು ಎಲ್ಲವೂ ಶೀತದ ವೈರಸ್ಸುಗಳನ್ನು ಕೊಲ್ಲಲು ಶಕ್ತವಾಗಿವೆ. ವಿಶೇಷವಾಗಿ ಈ ಪೇಯದ ಸೇವನೆಯಿಂದ ಮೂಗಿನಲ್ಲಿ ಗಟ್ಟಿಯಾಗಿದ್ದ ಸೋಂಕು ಕರಗಿ ಕಟ್ಟಿಕೊಂಡಿದ್ದ ಮೂಗು ತೆರೆಯುತ್ತದೆ. ಪರಿಣಾಮವಾಗಿ ಸೋಂಕಿನಿಂದ ಕೂಡಿದ್ದ ದ್ರವ ಹೊರಹರಿದು ಶೀತ ಶೀಘ್ರವಾಗಿ ವಾಸಿಯಾಗುತ್ತದೆ.

ಗಂಟಲ ಬೇನೆ ತಗ್ಗಿಸುತ್ತದೆ

ಗಂಟಲ ಬೇನೆ, ನೋವಿನಿಂದ ಕೂಡಿದ ಕೆಮ್ಮು ಇದ್ದರೆ ಈ ಅಧ್ಬುತ ಪೇಯದ ಸೇವನೆ ಉತ್ತಮ ಪರಿಹಾರ ಒದಗಿಸುತ್ತದೆ. ಇದರಲ್ಲಿರುವ ಪೋಷಕಾಂಶಗಳು ಗಂಟಲ ಒಳಭಾಗದ ಸೋಂಕನ್ನು ನಿವಾರಿಸುವ ಮೂಲಕ ಬೇನೆಯನ್ನು ಇಲ್ಲವಾಗಿಸುತ್ತವೆ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಈ ಅದ್ಭುತ ಪೇಯದ ಸೇವನೆಯಿಂದ ನಮ್ಮ ದೇಹದ ಪ್ರತಿ ಜೀವಕೋಶವೂ ಹೆಚ್ಚಿನ ಶಕ್ತಿ ಪಡೆಯುತ್ತದೆ ಹಾಗೂ ಇದರ ಪರಿಣಾಮವಾಗಿ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ.

ಸೋಂಕುಗಳನ್ನು ಕಡಿಮೆ ಮಾಡುತ್ತವೆ

ಈ ಅದ್ಭುತ ಪೇಯದಲ್ಲಿರುವ ಬ್ಯಾಕ್ಟೀರಿಯಾ ನಿವಾರಕ ಗುಣ ದೇಹದಲ್ಲಿ ಆಶ್ರಯ ಪಡೆದಿದ್ದ ಬ್ಯಾಕ್ಟೀರಿಯಾಗಳನ್ನು ಬುಡಸಹಿತ ಕಿತ್ತು ವಿಸರ್ಜಿಸಲು ನೆರವಾಗುವ ಮೂಲಕ ವಿವಿಧ ಬ್ಯಾಕ್ಟೀರಿಯಾಗಳಿಂದ ಎದುರಾಗಿದ್ದ ಸೋಂಕು ಸಹಾ ಇಲ್ಲವಾಗುತ್ತದೆ.

ಮೂಳೆಗಳು ಟೊಳ್ಳಾಗುವುದರಿಂದ ರಕ್ಷಿಸುತ್ತದೆ

Osteoporosis ಅಥವಾ ಮೂಳೆಗಳಲ್ಲಿ ಗಾಳಿಗುಳ್ಳೆಗಳು ತುಂಬಿ ಟೊಳ್ಳಾಗುವ ಸ್ಥಿತಿಗೆ ಕ್ಯಾಲ್ಸಿಯಂ ಕೊರತೆಯೇ ಕಾರಣ. ಆದರೆ ಹಾಲಿನಲ್ಲಿರುವ ಕ್ಯಾಲ್ಸಿಯಂ ಅನ್ನು ದೇಹ ನೇರವಾಗಿ ಹೀರಿಕೊಳ್ಳಲಾರದು. ಇದಕ್ಕೆ ಜೇನು ಬೆರೆಸಿದ ಹಾಲು ಉತ್ತಮ. ಇದರ ಜೊತೆಗೆ ಲವಂಗ ಮತ್ತು ಕಾಳುಮೆಣಸು ಬೆರೆಸುವ ಮೂಲಕವೂ ಕ್ಯಾಲ್ಸಿಯಂ ಅನ್ನು ದೇಹ ಹೀರಿಕೊಳ್ಳುವಂತೆ ಮಾಡಬಹುದು. ಪರಿಣಾಮವಾಗಿ ಮೂಳೆಗಳು ದೃಢವಾಗಿರುತ್ತವೆ.

 

ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

Story first published: Friday, November 11, 2016, 12:25 [IST]
English summary

Health benefits of clove milk and pepper drink

If you are someone who believes in natural remedies for disorders, then you must definitely try this natural health drink that we are going to tell you all about in this article. Do you remember when your grandmother used to make you drink a glass of warm milk every night before bed, when you were a kid?
Please Wait while comments are loading...
Subscribe Newsletter